Site icon Vistara News

ಮುಂಗಾರು ಅವಧಿಯ ಭತ್ತದ ಬೆಳೆ ಬಿತ್ತನೆ ಪ್ರದೇಶದಲ್ಲಿ 17% ಇಳಿಕೆ

paddy

ನವ ದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಅವಧಿಯ ಭತ್ತದ ಬಿತ್ತನೆ ಪ್ರದೇಶದಲ್ಲಿ ೧೭% ಇಳಿಕೆಯಾಗಿದೆ.

ಕಳೆದ ಜೂನ್‌ ಅವಧಿಯಲ್ಲಿ ಮುಂಗಾರು ಮಳೆಯ ಆರಂಭ ವಿಳಂಬವಾಗಿತ್ತು. ಇದರ ಪರಿಣಾಮ ಬಿತ್ತನೆಯ ಪ್ರದೇಶದಲ್ಲೂ ಇಳಿಕೆಯಾಗಿದೆ. ಹೀಗಿದ್ದರೂ, ಇತ್ತೀಚೆಗೆ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಬಿತ್ತನೆ ಪ್ರದೇಶ ಮತ್ತಷ್ಟು ಚೇತರಿಕೆಯಾಗುವ ನಿರೀಕ್ಷೆ ಇದೆ. ಆದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇಳಿಕೆಯಾಗಿದೆ.

ಭತ್ತದ ಬಿತ್ತನೆ ಪ್ರದೇಶದಲ್ಲಿ ಇಳಿಕೆ ಆಗಿದ್ದರೂ, ತೈಲ ಬೀಜಗಳ ಬಿತ್ತನೆಯಲ್ಲಿ ಗಣನೀಯ ಚೇತರಿಕೆ ಉಂಟಾಗಿದೆ. ಕಳೆದ ಜುಲೈ ೮ರಂದು ೨೦% ಇಳಿಕೆಯಾಗಿದ್ದ ತೈಲ ಬೀಜಗಳ ಬಿತ್ತನೆ ಪ್ರದೇಶದಲ್ಲಿ ಜುಲೈ ೧೫ರ ವೇಳೆಗೆ ೭% ಚೇತರಿಕೆ ಉಂಟಾಗಿದೆ. ೨೦೨೧ರ ಇದೇ ಅವಧಿಯನ್ನು ಹೋಲಿಸಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.

ಸರ್ಕಾರ ತೈಲ ಬೀಜಗಳ ಉತ್ಪಾದನೆ ಮತ್ತು ವಿತರಣೆಗೆ ಆದ್ಯತೆ ನೀಡಿದೆ. ಖಾದ್ಯ ತೈಲ ಆಮದನ್ನು ಗಣನೀಯವಾಗಿ ತಗ್ಗಿಸುವುದು ಇದರ ಉದ್ದೇಶವಾಗಿದೆ. ಆಮದು ಕಡಿಮೆಯಾದರೆ, ಅದಕ್ಕೆ ತಗಲುವ ವೆಚ್ಚ ಕೂಡ ಇಳಿಕೆಯಾಗಲಿದೆ.

ಜುಲೈ ೯-೧೫ರ ಅವಧಿಯಲ್ಲಿ ಒಟ್ಟಾರೆಯಾಗಿ ಬಿತ್ತನೆಯಲ್ಲಿ ಸುಧಾರಣೆ ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ವಾಯುವ್ಯ ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಜೂನ್‌ನಲ್ಲಿ ಒಟ್ಟಾರೆ ಮುಂಗಾರು ಮಳೆಯ ೮% ಕೊರತೆಯಾಗಿದೆ.

Exit mobile version