Site icon Vistara News

MSP ವ್ಯವಸ್ಥೆಯನ್ನು ಸುಧಾರಿಸಿ ರೈತರ ಆದಾಯ ಹೆಚ್ಚಿಸಲು ಸಮಿತಿ ರಚನೆ

msp

ನವ ದೆಹಲಿ: ಕನಿಷ್ಠ ಬೆಂಬಲ ಬೆಲೆ (MSP) ವ್ಯವಸ್ಥೆಯನ್ನು ಸುಧಾರಿಸಿ, ರೈತರ ಆದಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ.

ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್‌ ಅಗ್ರವಾಲ್‌ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ನೀತಿ ಆಯೋಗದ ಪ್ರತಿನಿಧಿಗಳು, ಕೃಷಿ ಆರ್ಥಿಕ ತಜ್ಞರು, ಇತರ ರೈತ ಸಂಘಟನೆಗಳು, ಕೃಷಿ ವಿಜ್ಞಾನಿಗಳು, ಪ್ರಶಸ್ತಿ ವಿಜೇತ ಪ್ರಗತಿಪರ ರೈತರು ಸಮಿತಿಯಲ್ಲಿ ಇರಲಿದ್ದಾರೆ.

ಕಳೆದ ವರ್ಷ ಕೃಷಿ ಕಾಯಿದೆಗಳ ವಿರುದ್ಧ ರೈತರ ಪ್ರತಿಭಟನೆ ಆಯೋಜಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾದ ಮೂವರು ಸದಸ್ಯರು ಕೂಡ ಸಮಿತಿಯಲ್ಲಿ ಇರಲಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸುವುದು ಮತ್ತು ಪಾರದರ್ಶಕಗೊಳಿಸುವುದು ಸಮಿತಿಯ ಉದ್ದೇಶವಾಗಿದೆ. ಕೃಷಿ ವೆಚ್ಚ ಮತ್ತು ದರ ನಿಗದಿ ಆಯೋಗಕ್ಕೆ (ಸಿಎಸಿಪಿ) ಹೆಚ್ಚಿನ ಸ್ವಾಯತ್ತತೆ ನೀಡುವ ಬಗ್ಗೆ ಇದು ಸಲಹೆ ನೀಡಲಿದೆ.

ಕಳೆದ ವರ್ಷ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವ ಘೋಷಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಎಂಎಸ್‌ಪಿ ವ್ಯವಸ್ಥೆಯನ್ನು ಬಲಪಡಿಸಲು ಪ್ರತ್ಯೇಕ ಸಮಿತಿ ರಚಿಸುವ ಭರವಸೆ ನೀಡಿದ್ದರು.

Exit mobile version