ಇಂದು ಆರೋಗ್ಯಪ್ರೇಮಿ ಜನತೆ ಸಾವಯವ ಉತ್ಪನ್ನಗಳನ್ನು ಹುಡುಕಿ ಹುಡುಕಿ ಹೋಗುತ್ತಾರೆ. ಎಲ್ಲ ನಗರಗಳಲ್ಲೂ ಸಾವಯವ- ಸಹಜ ಕೃಷಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಪರಿಶುದ್ಧ ಸಾವಯವ ಉತ್ಪನ್ನಗಳು ದುರ್ಲಭವೇ. ಯಾಕೆಂದರೆ ಇವುಗಳನ್ನು ಕಟ್ಟೆಚ್ಚರದಲ್ಲಿ ಸಿದ್ಧಪಡಿಸಬೇಕು. ಹಸುವಿನ ತುಪ್ಪ ಸಾವಯವ ಎನಿಸಿಕೊಳ್ಳಬೇಕಿದ್ದರೆ, ಆ ಹಸು ಪ್ರಕೃತಿಯ ನಡುವೆ ಇದ್ದು, ಸಹಜ ಆಹಾರವನ್ನು ಸೇವಿಸಿ, ತಿಳಿಯಾದ ನೀರು ಕುಡಿದಿರಬೇಕು. ಆಗ ಆ ಹಸುವಿನ ತುಪ್ಪವನ್ನು ಪರಿಶುದ್ಧ ಸಾವಯವ ಉತ್ಪನ್ನ ಎನ್ನಬಹುದು.
ಸಾವಯವ ಉತ್ಪನ್ನಗಳ ಬಗ್ಗೆ ಇಷ್ಟು ಎಚ್ಚರಿಕೆ ವಹಿಸುವ, ಗ್ರಾಹಕರ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯದಷ್ಟೇ ಕಾಳಜಿ ವಹಿಸುವ ಸಂಸ್ಥೆ- ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ (Organic Express). ಇದನ್ನು ಸ್ಥಾಪಿಸಿದವರು ಎಚ್.ಎಸ್.ಶೆಟ್ಟಿ. ಮೈಸೂರ್ ಮರ್ಕಂಟೈಲ್ ಕೊ ಲಿಮಿಟೆಡ್ (Mysore Mercantile Co Limited [MMCL) ಎಂಬ ಹೆಸರಿನ ಮಾತೃಸಂಸ್ಥೆಯನ್ನು ಹೊಂದಿರುವ ಆರ್ಗ್ಯಾನಿಕ್ ಎಕ್ಸ್‌ಪ್ರೆಸ್‌ನ ಉತ್ಪನ್ನಗಳು ಶುದ್ಧ ಸುಂದರ ಮಲೆನಾಡಿನ ಮಡಿಲಿನಲ್ಲಿ ತಯಾರಾಗುತ್ತವೆ. ಸ್ಥಳೀಯ ಬೇಡಿಕೆಗಿಂತಲೂ ಹೆಚ್ಚಾಗಿ ರಫ್ತಾಗುತ್ತವೆ. ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸಂಸ್ಥೆಯು ಬಹುತೇಕ ಪ್ರತಿವರ್ಷ ಎಂಬಂತೆ ಈ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತ ಬಂದಿದೆ.
ʻʻನೂರು ಶೇಕಡಾ ಪರಿಶುದ್ಧ ಸಾವಯವ ಉತ್ಪನ್ನಗಳನ್ನು ನೀಡುವ ಮೂಲಕ ಜನತೆಯ ಬದುಕನ್ನು ಇನ್ನಷ್ಟು ಆರೋಗ್ಯಮಯ, ಸಮಗ್ರವಾಗಿಸುವ ಗುರಿ ನಮ್ಮದು. ನಮ್ಮ ಪ್ರತಿಯೊಬ್ಬ ಗ್ರಾಹಕನೂ ಅತ್ಯುನ್ನತ ಗುಣಮಟ್ಟದ ಉತ್ಪನ್ನವನ್ನು ಪಡೆಯುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕುʼʼ ಎಂದು ಈ ಸಂಸ್ಥೆಯ ಮುಖ್ಯಸ್ಥ ಶೆಟ್ಟಿಯವರು ಹೇಳುತ್ತಾರೆ. ಇದು 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದೆ. ವರ್ಷದಿಂದ ವರ್ಷಕ್ಕೆ ತನ್ನ ಉತ್ಪನ್ನಗಳನ್ನು ಹೆಚ್ಚಿಸುತ್ತ ಬಂದಿದೆ. 2013-14ರಲ್ಲಿ ಭಾರತ ಸರ್ಕಾರ, ಎಂಎಂಸಿಎಲ್ ಸಂಸ್ಥೆಯನ್ನು ಕರ್ನಾಟಕದ ಅತ್ಯುನ್ನತ ರಫ್ತು ಸಂಸ್ಥೆ ಎಂದು ಪುರಸ್ಕರಿಸಿದೆ.
“ಪರಿಸರ ಮತ್ತು ನಿಮ್ಮ ಆರೋಗ್ಯಕ್ಕೆ ನಮ್ಮ ಬದ್ಧತೆ. ನಾವು ಹಾನಿಕಾರಕ ರಾಸಾಯನಿಕಗಳ ಅಗತ್ಯವನ್ನು ಕೊನೆಗಾಣಿಸಿದ್ದು, ಮಣ್ಣನ್ನು ಸಮೃದ್ಧಗೊಳಿಸುವ ಹಾಗೂ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಆರೋಗ್ಯಕ್ಕಾಗಿ ಗುಣಮಟ್ಟ ಮತ್ತು ರುಚಿಯನ್ನು ತ್ಯಾಗ ಮಾಡಬೇಕಾಗಿಲ್ಲ. ಆರ್ಗ್ಯಾನಿಕ್ ಎಕ್ಸ್‌ಪ್ರೆಸ್‌ನಲ್ಲಿ ನಾವು ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುವ ಸಾವಯವ, ರಾಸಾಯನಿಕಮುಕ್ತ ಮತ್ತು GMO ಮುಕ್ತ ಉತ್ಪನ್ನಗಳನ್ನು ಒದಗಿಸುತ್ತೇವೆ. ರುಚಿಯೊಂದಿಗೆ ರಾಜಿ ಮಾಡಿಕೊಳ್ಳದೆ ಆರೋಗ್ಯಕರವಾದ ಆಹಾರ ಉತ್ಪನ್ನಗಳನ್ನು ನೀಡುವುದು ನಮ್ಮ ಗುರಿ. ಹೆಸರೇ ಸೂಚಿಸುವಂತೆ ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ವಿವಿಧ ರೀತಿಯ ಉತ್ತಮ-ಗುಣಮಟ್ಟದ ಮತ್ತು ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಂದ ಸಾವಯವವಾಗಿ ತಯಾರಿಸಿದ ಆಹಾರಗಳ ಪೂರೈಕೆದಾರ. ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ತನ್ನ ಸರಕುಗಳನ್ನು 100% ಸುರಕ್ಷಿತ, ಟೇಸ್ಟಿ, ಸಾವಯವ ಮತ್ತು ಕೈಗೆಟುಕುವ ದರದಲ್ಲಿ ಖಾತರಿಪಡಿಸುತ್ತದೆʼʼ ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆ ಕೆಲವು ಮಾದರಿ ಉತ್ಪನ್ನಗಳನ್ನು ಹೊಂದಿದೆ. ಪ್ರಕೃತ ಮಲೆನಾಡಿನ ಸಕಲೇಶಪುರದಲ್ಲಿ ವಿಸ್ತಾರವಾದ ಜಾಗದಲ್ಲಿ ಫಾರ್ಮ್ ಅನ್ನು ಹೊಂದಿರುವ ಈ ಸಂಸ್ಥೆಯು ನೂರಾರು ಗಿರ್ ತಳಿಯ ದೇಶಿ ದನಕರುಗಳನ್ನು ಸಾಕುತ್ತಿದ್ದು, ಇಲ್ಲಿ ಶುದ್ಧ ಹಸುವಿನ ತುಪ್ಪ ತಯಾರಾಗುತ್ತದೆ. ಸಕಲೇಶಪುರದ ಕಾಫಿ ತೋಟಗಳಲ್ಲಿ ಸಾವಯವ ಮಾದರಿಯಲ್ಲಿ ಪಡೆದ ಕಾಫಿ ಹಣ್ಣುಗಳಿಂದ ಗೃಹಕೈಗಾರಿಕೆ ಮಾದರಿಯಲ್ಲಿ ತಯಾರಿಸಿದ ರುಚಿಕರ ಕಾಫಿ ಪುಡಿಯನ್ನು ಪ್ರೀಮಿಯಂ ಪ್ಯಾಕ್ ಮಾಡಲಾಗುತ್ತದೆ. ಮಲೆನಾಡು ಹಾಗೂ ಬಯಲುಸೀಮೆಯ ಪ್ರಾಕೃತಿಕ ಉತ್ತಮ ಗುಣಮಟ್ಟದ ತೆಂಗಿನಕಾಯಿಗಳಿಂದ ತಯಾರಿಸಲಾದ ತೆಂಗಿನೆಣ್ಣೆಯು ಸಂಸ್ಥೆಯ ಉತ್ಕೃಷ್ಟ ಉತ್ಪನ್ನವಾಗಿದೆ. ಇದನ್ನು ಮರದ ಉಪಕರಣಗಳನ್ನು ಉಪಯೋಗಿಸಿ ಒತ್ತಿ ಎಣ್ಣೆಯನ್ನು ತೆಗೆದು ಸಿದ್ಧಪಡಿಸಲಾಗುತ್ತದೆ. ಆಲೆಮನೆ ಬೆಲ್ಲ ಎಂದು ಕರೆಯಲಾಗುವ ಜೋನಿ ಬೆಲ್ಲ ಇಲ್ಲಿ ಸಾಂಪ್ರದಾಯಿಕ ಆಲೆಮನೆಯ ಉತ್ಪನ್ನವಾಗಿ ಲಭ್ಯವಿದೆ. ಹಾಗೇ ರುಚಿಕರ ನೀರಾ ಬೆಲ್ಲ ಅಥವಾ ತಾಳೆಮರದ ಬೆಲ್ಲವೂ ತಯಾರಾಗುತ್ತದೆ. ಮಲೆನಾಡಿನ ಕಾಡುಗಳು ಹಾಗೂ ಕಾಫಿ ತೋಟಗಳಲ್ಲಿ ಅಲೆದಾಡಿ ಬರುವ ಜೇನುಹುಳಗಳಿಂದ ತಯಾರಾಗುವ ಪರಿಶುದ್ಧ ಜೇನುತುಪ್ಪ ಈ ಸಂಸ್ಥೆಯ ಟ್ರೇಡ್‌ಮಾರ್ಕ್. ಈ ಉತ್ಪನ್ನಗಳನ್ನು ರಫ್ತು ಗುಣಮಟ್ಟದ ಪ್ಯಾಕಿಂಗ್ ಮಾಡಲಾಗುತ್ತದೆ.
ಉತ್ತಮ ಸಾವಯವ ಉತ್ಪನ್ನಗಳು ಎಲ್ಲರಿಗೂ ಲಭ್ಯವಾಗಬೇಕು ಎಂದು ಸಂಸ್ಥೆಯು ಬಯಸುತ್ತದೆ. ಇಂದು ಸಾವಯವದ ಹೆಸರಿನಲ್ಲಿ ನೀಡಲಾಗುವ ಉತ್ಪನ್ನಗಳು ದುಬಾರಿಯಾಗಿವೆ ಎಂದು ದೂರಿದೆ. ಎಲ್ಲ ಆಹಾರ ಪದಾರ್ಥಗಳೂ ಕಲುಷಿತವಾಗಿರುವ ಇಂದಿನ ಯುಗದಲ್ಲಿ ಸಾವಯವ ಉತ್ಪನ್ನಗಳ ತಯಾರಿಕೆ ದುಬಾರಿಯಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಸಾವಯವ ಉತ್ಪನ್ನಗಳು ಎಲ್ಲರಿಗೂ ಅಗತ್ಯ. ಇದನ್ನು ಮನಗಂಡಿರುವ ಸಂಸ್ಥೆಯು ತನ್ನ ಉತ್ಪನ್ನಗಳು ಸ್ಥಳೀಯವಾಗಿಯೂ ಲಭ್ಯವಿರುವಂತೆ ನೋಡಿಕೊಂಡಿದೆ.
ಸಾವಯವ ಉತ್ಪನ್ನಗಳು ದೇಹದ ಮೇಲೆ ಮಾಡುವ ಸತ್ಪರಿಣಾಮ ಬಹಳ ಎಂಬುದು ಅಧ್ಯಯನಗಳಿಂದ ರುಜುವಾತಾಗಿದೆ. ಯಾವುದೇ ರಸಗೊಬ್ಬರ ಬಳಸದ, ಕ್ರಿಮಿನಾಶಕ ಸಿಂಪಡಿಸದ, ಕಳೆನಾಶಕ ಹೊಡೆಯದ ಬೆಳೆಗಳಿಂದ ತಯಾರಿಸಲಾದ ಉತ್ಪನ್ನಗಳು ನಿಜಕ್ಕೂ ದೇಹದಲ್ಲಿ ಮ್ಯಾಜಿಕ್ಕನ್ನೇ ಉಂಟುಮಾಡುತ್ತವೆ. ಸಾವಯವ ಉತ್ಪನ್ನಗಳನ್ನು ಸೇವಿಸುವವರಿಂದ ಕ್ಯಾನ್ಸರ್ ಮುಂತಾದ ಮಾರಕ ರೋಗಗಳು ದೂರವಾಗುತ್ತವೆ. ಹೃದಯದ ಸಮಸ್ಯೆ, ಮಧುಮೇಹ ಮುಂತಾದವುಗಳ ಸಾಧ್ಯತೆ ಕುಸಿಯುತ್ತದೆ. ನರದೌರ್ಬಲ್ಯಗಳು ಬಾಧಿಸುವುದಿಲ್ಲ ಎಂಬುದು ಗೊತ್ತಾಗಿದೆ. ಹಾಗೆಯೇ ಸಾವಯವ ಕೃಷಿಯು ನಿಸರ್ಗಕ್ಕೆ ನೀಡುವ ಕೊಡುಗೆಯೂ ಅಪಾರ. ಅದು ಮಣ್ಣು, ನೀರು, ಗಾಳಿಗೆ ವಿಷಕಾರಿ ಸಂಯುಕ್ತಗಳನ್ನು ಸೇರಿಸುವುದಿಲ್ಲ.
ಮರದಿಂದ ಒತ್ತಿ ಸಿದ್ಧಪಡಿಸಲಾದ ತೆಂಗಿನೆಣ್ಣೆಯು ಭಾರಿ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವುದು ಕಂಡುಬಂದಿದ್ದು, ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ. ಈ ತೆಂಗಿನೆಣ್ಣೆ ಹೆಚ್ಚಿನ ಉಷ್ಣತೆಯಲ್ಲಿ ಕುದಿಸಿದರೂ ಇತರ ಎಣ್ಣೆಗಳಂತೆ ವಿಷಕಾರಿ ಸಂಯುಕ್ತಗಳನ್ನು ಹೊರಸೂಸುವುದಿಲ್ಲ. ಇದು ಚರ್ಮದ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಇಲ್ಲಿ ತಯಾರಾಗುವ ಜೇನುತುಪ್ಪವು ತಿಳಿಯಾದ ಬಣ್ಣ ಹಾಗೂ ಸೊಗಸಾದ ರುಚಿಯನ್ನು ಹೊಂದಿದ್ದು, ಯಾವುದೇ ಸೇರಿಸಿದ ಅಂಶಗಳಿಲ್ಲದೆ ಆರೋಗ್ಯಕಾರಿ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.
ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ಉತ್ಪನ್ನಗಳ ಹೆಚ್ಚಿನ ವಿವರ ಹಾಗೂ ಆನ್‌ಲೈನ್ ಮೂಲಕ ತರಿಸಿಕೊಳ್ಳುವ ವಿವರಗಳು https://organicexpress.co.in/ನಲ್ಲಿ ಲಭ್ಯವಿವೆ.
ಇದನ್ನೂ ಓದಿ: Yoga Day 2022 | ಯೋಗ ದಿನ ನಡೆದ ಕರ್ನಾಟಕದ 5 ಪಾರಂಪರಿಕ ತಾಣಗಳು