Organic Express: ಆರೋಗ್ಯವೇ ಭಾಗ್ಯ ಎನ್ನುವ ಸಾವಯವ ಉತ್ಪನ್ನಗಳ ಮಾದರಿ ತಾಣ - Vistara News

ಕೃಷಿ

Organic Express: ಆರೋಗ್ಯವೇ ಭಾಗ್ಯ ಎನ್ನುವ ಸಾವಯವ ಉತ್ಪನ್ನಗಳ ಮಾದರಿ ತಾಣ

ಮಲೆನಾಡಿನ ಹಸಿರು ಪರಿಸರದ ಫಾರಂನಲ್ಲಿ ತಯಾರಾಗುವ ಸಾವಯವ ಉತ್ಪನ್ನಗಳು ಇಂದಿನ ಆಧುನಿಕ ಯುಗದಲ್ಲಿ ವಿಷಮುಕ್ತ ಆಹಾರದ ಹುಡುಕಾಟದಲ್ಲಿ ಇರುವ ಗ್ರಾಹಕನಿಗೆ organic express ಸಂಸ್ಥೆಯ ಕೊಡುಗೆ.

VISTARANEWS.COM


on

organic gir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಆರೋಗ್ಯಪ್ರೇಮಿ ಜನತೆ ಸಾವಯವ ಉತ್ಪನ್ನಗಳನ್ನು ಹುಡುಕಿ ಹುಡುಕಿ ಹೋಗುತ್ತಾರೆ. ಎಲ್ಲ ನಗರಗಳಲ್ಲೂ ಸಾವಯವ- ಸಹಜ ಕೃಷಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಪರಿಶುದ್ಧ ಸಾವಯವ ಉತ್ಪನ್ನಗಳು ದುರ್ಲಭವೇ. ಯಾಕೆಂದರೆ ಇವುಗಳನ್ನು ಕಟ್ಟೆಚ್ಚರದಲ್ಲಿ ಸಿದ್ಧಪಡಿಸಬೇಕು. ಹಸುವಿನ ತುಪ್ಪ ಸಾವಯವ ಎನಿಸಿಕೊಳ್ಳಬೇಕಿದ್ದರೆ, ಆ ಹಸು ಪ್ರಕೃತಿಯ ನಡುವೆ ಇದ್ದು, ಸಹಜ ಆಹಾರವನ್ನು ಸೇವಿಸಿ, ತಿಳಿಯಾದ ನೀರು ಕುಡಿದಿರಬೇಕು. ಆಗ ಆ ಹಸುವಿನ ತುಪ್ಪವನ್ನು ಪರಿಶುದ್ಧ ಸಾವಯವ ಉತ್ಪನ್ನ ಎನ್ನಬಹುದು.

organic
ಗಿರ್‌ ತಳಿಯ ಹಸುಗಳ ಜೊತೆಗೆ organic express ಸಂಸ್ಥೆಯ ಸ್ಥಾಪಕ ಎಚ್‌.ಎಸ್‌.ಶೆಟ್ಟಿ.

ಸಾವಯವ ಉತ್ಪನ್ನಗಳ ಬಗ್ಗೆ ಇಷ್ಟು ಎಚ್ಚರಿಕೆ ವಹಿಸುವ, ಗ್ರಾಹಕರ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯದಷ್ಟೇ ಕಾಳಜಿ ವಹಿಸುವ ಸಂಸ್ಥೆ- ಆರ್ಗ್ಯಾನಿಕ್‌ ಎಕ್ಸ್‌ಪ್ರೆಸ್‌ (Organic Express). ಇದನ್ನು ಸ್ಥಾಪಿಸಿದವರು ಎಚ್‌.ಎಸ್.ಶೆಟ್ಟಿ. ಮೈಸೂರ್‌ ಮರ್ಕಂಟೈಲ್‌ ಕೊ ಲಿಮಿಟೆಡ್‌ (Mysore Mercantile Co Limited [MMCL) ಎಂಬ ಹೆಸರಿನ ಮಾತೃಸಂಸ್ಥೆಯನ್ನು ಹೊಂದಿರುವ ಆರ್ಗ್ಯಾನಿಕ್‌ ಎಕ್ಸ್‌ಪ್ರೆಸ್‌ನ ಉತ್ಪನ್ನಗಳು ಶುದ್ಧ ಸುಂದರ ಮಲೆನಾಡಿನ ಮಡಿಲಿನಲ್ಲಿ ತಯಾರಾಗುತ್ತವೆ. ಸ್ಥಳೀಯ ಬೇಡಿಕೆಗಿಂತಲೂ ಹೆಚ್ಚಾಗಿ ರಫ್ತಾಗುತ್ತವೆ. ಕರ್ನಾಟಕ ಚೇಂಬರ್ಸ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರಿ ಸಂಸ್ಥೆಯು ಬಹುತೇಕ ಪ್ರತಿವರ್ಷ ಎಂಬಂತೆ ಈ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತ ಬಂದಿದೆ.

ʻʻನೂರು ಶೇಕಡಾ ಪರಿಶುದ್ಧ ಸಾವಯವ ಉತ್ಪನ್ನಗಳನ್ನು ನೀಡುವ ಮೂಲಕ ಜನತೆಯ ಬದುಕನ್ನು ಇನ್ನಷ್ಟು ಆರೋಗ್ಯಮಯ, ಸಮಗ್ರವಾಗಿಸುವ ಗುರಿ ನಮ್ಮದು. ನಮ್ಮ ಪ್ರತಿಯೊಬ್ಬ ಗ್ರಾಹಕನೂ ಅತ್ಯುನ್ನತ ಗುಣಮಟ್ಟದ ಉತ್ಪನ್ನವನ್ನು ಪಡೆಯುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕುʼʼ ಎಂದು ಈ ಸಂಸ್ಥೆಯ ಮುಖ್ಯಸ್ಥ ಶೆಟ್ಟಿಯವರು ಹೇಳುತ್ತಾರೆ. ಇದು 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದೆ. ವರ್ಷದಿಂದ ವರ್ಷಕ್ಕೆ ತನ್ನ ಉತ್ಪನ್ನಗಳನ್ನು ಹೆಚ್ಚಿಸುತ್ತ ಬಂದಿದೆ. 2013-14ರಲ್ಲಿ ಭಾರತ ಸರ್ಕಾರ, ಎಂಎಂಸಿಎಲ್‌ ಸಂಸ್ಥೆಯನ್ನು ಕರ್ನಾಟಕದ ಅತ್ಯುನ್ನತ ರಫ್ತು ಸಂಸ್ಥೆ ಎಂದು ಪುರಸ್ಕರಿಸಿದೆ.

organic
organic express ಉತ್ಪನ್ನಗಳು

“ಪರಿಸರ ಮತ್ತು ನಿಮ್ಮ ಆರೋಗ್ಯಕ್ಕೆ ನಮ್ಮ ಬದ್ಧತೆ. ನಾವು ಹಾನಿಕಾರಕ ರಾಸಾಯನಿಕಗಳ ಅಗತ್ಯವನ್ನು ಕೊನೆಗಾಣಿಸಿದ್ದು, ಮಣ್ಣನ್ನು ಸಮೃದ್ಧಗೊಳಿಸುವ ಹಾಗೂ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಆರೋಗ್ಯಕ್ಕಾಗಿ ಗುಣಮಟ್ಟ ಮತ್ತು ರುಚಿಯನ್ನು ತ್ಯಾಗ ಮಾಡಬೇಕಾಗಿಲ್ಲ. ಆರ್ಗ್ಯಾನಿಕ್ ಎಕ್ಸ್‌ಪ್ರೆಸ್‌ನಲ್ಲಿ ನಾವು ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುವ ಸಾವಯವ, ರಾಸಾಯನಿಕಮುಕ್ತ ಮತ್ತು GMO ಮುಕ್ತ ಉತ್ಪನ್ನಗಳನ್ನು ಒದಗಿಸುತ್ತೇವೆ. ರುಚಿಯೊಂದಿಗೆ ರಾಜಿ ಮಾಡಿಕೊಳ್ಳದೆ ಆರೋಗ್ಯಕರವಾದ ಆಹಾರ ಉತ್ಪನ್ನಗಳನ್ನು ನೀಡುವುದು ನಮ್ಮ ಗುರಿ. ಹೆಸರೇ ಸೂಚಿಸುವಂತೆ ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ವಿವಿಧ ರೀತಿಯ ಉತ್ತಮ-ಗುಣಮಟ್ಟದ ಮತ್ತು ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಂದ ಸಾವಯವವಾಗಿ ತಯಾರಿಸಿದ ಆಹಾರಗಳ ಪೂರೈಕೆದಾರ. ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ತನ್ನ ಸರಕುಗಳನ್ನು 100% ಸುರಕ್ಷಿತ, ಟೇಸ್ಟಿ, ಸಾವಯವ ಮತ್ತು ಕೈಗೆಟುಕುವ ದರದಲ್ಲಿ ಖಾತರಿಪಡಿಸುತ್ತದೆʼʼ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆ ಕೆಲವು ಮಾದರಿ ಉತ್ಪನ್ನಗಳನ್ನು ಹೊಂದಿದೆ. ಪ್ರಕೃತ ಮಲೆನಾಡಿನ ಸಕಲೇಶಪುರದಲ್ಲಿ ವಿಸ್ತಾರವಾದ ಜಾಗದಲ್ಲಿ ಫಾರ್ಮ್‌ ಅನ್ನು ಹೊಂದಿರುವ ಈ ಸಂಸ್ಥೆಯು ನೂರಾರು ಗಿರ್‌ ತಳಿಯ ದೇಶಿ ದನಕರುಗಳನ್ನು ಸಾಕುತ್ತಿದ್ದು, ಇಲ್ಲಿ ಶುದ್ಧ ಹಸುವಿನ ತುಪ್ಪ ತಯಾರಾಗುತ್ತದೆ. ಸಕಲೇಶಪುರದ ಕಾಫಿ ತೋಟಗಳಲ್ಲಿ ಸಾವಯವ ಮಾದರಿಯಲ್ಲಿ ಪಡೆದ ಕಾಫಿ ಹಣ್ಣುಗಳಿಂದ ಗೃಹಕೈಗಾರಿಕೆ ಮಾದರಿಯಲ್ಲಿ ತಯಾರಿಸಿದ ರುಚಿಕರ ಕಾಫಿ ಪುಡಿಯನ್ನು ಪ್ರೀಮಿಯಂ ಪ್ಯಾಕ್‌ ಮಾಡಲಾಗುತ್ತದೆ. ಮಲೆನಾಡು ಹಾಗೂ ಬಯಲುಸೀಮೆಯ ಪ್ರಾಕೃತಿಕ ಉತ್ತಮ ಗುಣಮಟ್ಟದ ತೆಂಗಿನಕಾಯಿಗಳಿಂದ ತಯಾರಿಸಲಾದ ತೆಂಗಿನೆಣ್ಣೆಯು ಸಂಸ್ಥೆಯ ಉತ್ಕೃಷ್ಟ ಉತ್ಪನ್ನವಾಗಿದೆ. ಇದನ್ನು ಮರದ ಉಪಕರಣಗಳನ್ನು ಉಪಯೋಗಿಸಿ ಒತ್ತಿ ಎಣ್ಣೆಯನ್ನು ತೆಗೆದು ಸಿದ್ಧಪಡಿಸಲಾಗುತ್ತದೆ. ಆಲೆಮನೆ ಬೆಲ್ಲ ಎಂದು ಕರೆಯಲಾಗುವ ಜೋನಿ ಬೆಲ್ಲ ಇಲ್ಲಿ ಸಾಂಪ್ರದಾಯಿಕ ಆಲೆಮನೆಯ ಉತ್ಪನ್ನವಾಗಿ ಲಭ್ಯವಿದೆ. ಹಾಗೇ ರುಚಿಕರ ನೀರಾ ಬೆಲ್ಲ ಅಥವಾ ತಾಳೆಮರದ ಬೆಲ್ಲವೂ ತಯಾರಾಗುತ್ತದೆ. ಮಲೆನಾಡಿನ ಕಾಡುಗಳು ಹಾಗೂ ಕಾಫಿ ತೋಟಗಳಲ್ಲಿ ಅಲೆದಾಡಿ ಬರುವ ಜೇನುಹುಳಗಳಿಂದ ತಯಾರಾಗುವ ಪರಿಶುದ್ಧ ಜೇನುತುಪ್ಪ ಈ ಸಂಸ್ಥೆಯ ಟ್ರೇಡ್‌ಮಾರ್ಕ್.‌ ಈ ಉತ್ಪನ್ನಗಳನ್ನು ರಫ್ತು ಗುಣಮಟ್ಟದ ಪ್ಯಾಕಿಂಗ್‌ ಮಾಡಲಾಗುತ್ತದೆ.

organic
organic express ಉತ್ಪನ್ನಗಳು

ಉತ್ತಮ ಸಾವಯವ ಉತ್ಪನ್ನಗಳು ಎಲ್ಲರಿಗೂ ಲಭ್ಯವಾಗಬೇಕು ಎಂದು ಸಂಸ್ಥೆಯು ಬಯಸುತ್ತದೆ. ಇಂದು ಸಾವಯವದ ಹೆಸರಿನಲ್ಲಿ ನೀಡಲಾಗುವ ಉತ್ಪನ್ನಗಳು ದುಬಾರಿಯಾಗಿವೆ ಎಂದು ದೂರಿದೆ. ಎಲ್ಲ ಆಹಾರ ಪದಾರ್ಥಗಳೂ ಕಲುಷಿತವಾಗಿರುವ ಇಂದಿನ ಯುಗದಲ್ಲಿ ಸಾವಯವ ಉತ್ಪನ್ನಗಳ ತಯಾರಿಕೆ ದುಬಾರಿಯಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಸಾವಯವ ಉತ್ಪನ್ನಗಳು ಎಲ್ಲರಿಗೂ ಅಗತ್ಯ. ಇದನ್ನು ಮನಗಂಡಿರುವ ಸಂಸ್ಥೆಯು ತನ್ನ ಉತ್ಪನ್ನಗಳು ಸ್ಥಳೀಯವಾಗಿಯೂ ಲಭ್ಯವಿರುವಂತೆ ನೋಡಿಕೊಂಡಿದೆ.

ಸಾವಯವ ಉತ್ಪನ್ನಗಳು ದೇಹದ ಮೇಲೆ ಮಾಡುವ ಸತ್ಪರಿಣಾಮ ಬಹಳ ಎಂಬುದು ಅಧ್ಯಯನಗಳಿಂದ ರುಜುವಾತಾಗಿದೆ. ಯಾವುದೇ ರಸಗೊಬ್ಬರ ಬಳಸದ, ಕ್ರಿಮಿನಾಶಕ ಸಿಂಪಡಿಸದ, ಕಳೆನಾಶಕ ಹೊಡೆಯದ ಬೆಳೆಗಳಿಂದ ತಯಾರಿಸಲಾದ ಉತ್ಪನ್ನಗಳು ನಿಜಕ್ಕೂ ದೇಹದಲ್ಲಿ ಮ್ಯಾಜಿಕ್ಕನ್ನೇ ಉಂಟುಮಾಡುತ್ತವೆ. ಸಾವಯವ ಉತ್ಪನ್ನಗಳನ್ನು ಸೇವಿಸುವವರಿಂದ ಕ್ಯಾನ್ಸರ್‌ ಮುಂತಾದ ಮಾರಕ ರೋಗಗಳು ದೂರವಾಗುತ್ತವೆ. ಹೃದಯದ ಸಮಸ್ಯೆ, ಮಧುಮೇಹ ಮುಂತಾದವುಗಳ ಸಾಧ್ಯತೆ ಕುಸಿಯುತ್ತದೆ. ನರದೌರ್ಬಲ್ಯಗಳು ಬಾಧಿಸುವುದಿಲ್ಲ ಎಂಬುದು ಗೊತ್ತಾಗಿದೆ. ಹಾಗೆಯೇ ಸಾವಯವ ಕೃಷಿಯು ನಿಸರ್ಗಕ್ಕೆ ನೀಡುವ ಕೊಡುಗೆಯೂ ಅಪಾರ. ಅದು ಮಣ್ಣು, ನೀರು, ಗಾಳಿಗೆ ವಿಷಕಾರಿ ಸಂಯುಕ್ತಗಳನ್ನು ಸೇರಿಸುವುದಿಲ್ಲ.

ಮರದಿಂದ ಒತ್ತಿ ಸಿದ್ಧಪಡಿಸಲಾದ ತೆಂಗಿನೆಣ್ಣೆಯು ಭಾರಿ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವುದು ಕಂಡುಬಂದಿದ್ದು, ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ. ಈ ತೆಂಗಿನೆಣ್ಣೆ ಹೆಚ್ಚಿನ ಉಷ್ಣತೆಯಲ್ಲಿ ಕುದಿಸಿದರೂ ಇತರ ಎಣ್ಣೆಗಳಂತೆ ವಿಷಕಾರಿ ಸಂಯುಕ್ತಗಳನ್ನು ಹೊರಸೂಸುವುದಿಲ್ಲ. ಇದು ಚರ್ಮದ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಇಲ್ಲಿ ತಯಾರಾಗುವ ಜೇನುತುಪ್ಪವು ತಿಳಿಯಾದ ಬಣ್ಣ ಹಾಗೂ ಸೊಗಸಾದ ರುಚಿಯನ್ನು ಹೊಂದಿದ್ದು, ಯಾವುದೇ ಸೇರಿಸಿದ ಅಂಶಗಳಿಲ್ಲದೆ ಆರೋಗ್ಯಕಾರಿ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.

ಆರ್ಗ್ಯಾನಿಕ್‌ ಎಕ್ಸ್‌ಪ್ರೆಸ್‌ ಉತ್ಪನ್ನಗಳ ಹೆಚ್ಚಿನ ವಿವರ ಹಾಗೂ ಆನ್‌ಲೈನ್‌ ಮೂಲಕ ತರಿಸಿಕೊಳ್ಳುವ ವಿವರಗಳು https://organicexpress.co.in/ನಲ್ಲಿ ಲಭ್ಯವಿವೆ.

ಇದನ್ನೂ ಓದಿ: Yoga Day 2022 | ಯೋಗ ದಿನ ನಡೆದ ಕರ್ನಾಟಕದ 5 ಪಾರಂಪರಿಕ ತಾಣಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಅಡಿಕೆ ತೋಟಗಳಲ್ಲಿ ಈಗ ಪ್ರೆಸ್‌ಮಡ್ ಗೊಬ್ಬರಗಳದ್ದೇ ದಾಂಗುಡಿ!

ಸರಳವಾಗಿ ಹೇಳುವುದಾದರೆ, ಸಕ್ಕರೆ ಕಾರ್ಖಾನೆಯಿಂದ ಹೊರ ಬೀಳುವ ಅರೆದ ಕಬ್ಬಿನ ಘನತ್ಯಾಜ್ಯ ವಸ್ತುವೇ ಪ್ರೆಸ್‌ಮಡ್. ಸಕ್ಕರೆ ಕಾರ್ಖಾನೆಯಿಂದ ಹೊರಬೀಳುವ ಪ್ರೆಸ್‌ಮಡ್‌ನ್ನು ಸಂಸ್ಕರಿಸಿ, ಕಾಂಪೋಸ್ಟ್ ಮಾಡಿ, ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಇನ್ನು ಕೆಲವು ಕಡೆ ಸೂಕ್ಷ್ಮ ಜೀವಾಣುಗಳನ್ನು ಬಳಸಿ ಬೇಗನೆ ಪ್ರೆಸ್‌ಮಡ್ ಗೊಬ್ಬರ ತಯಾರಿಸಲಾಗುತ್ತದೆಯಂತೆ.

VISTARANEWS.COM


on

vistara grama dani ವಿಸ್ತಾರ ಗ್ರಾಮ ದನಿ
ಮ್ಯಾಮ್‌ಕೋಸ್‌ ಸಂಸ್ಥೆಯ ಗೊಬ್ಬರದ ಚೀಲ
Koo
Aravind Sigadal

| ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ಕಾಲದಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಅಡಿಕೆ ತೋಟಗಳ ಬೇಸಾಯಕ್ಕೆ ಕೊಟ್ಟಿಗೆ ಗೊಬ್ಬರವೇ ಪ್ರಮುಖವಾಗಿತ್ತು. ಸಣ್ಣ ಮಧ್ಯಮ ರೈತರ ಮನೆಗಳಲ್ಲಿ ಹಾಲು, ಗೊಬ್ಬರಕ್ಕೆ ಅಂತ ಕನಿಷ್ಠ ಒಂದೆರಡು ದನಗಳನ್ನಾದರೂ ಸಾಕುತ್ತಿದ್ದರು. ಕಾಲ ಬದಲಾದಂತೆ, ಹಿಂಡಿ, ಮೇವುಗಳ ಬೆಲೆ ದುಬಾರಿಯಾಗಿ ಒಂದೆರಡು ದನ ಸಾಕುವುದು ನಷ್ಟದಾಯಕ ಅಂತಾಯ್ತು. ಗೋಮಾಳದ ಜಾಗಗಳೆಲ್ಲ ಕೃಷಿ ಭೂಮಿಯಾಗಿ ವಿಸ್ತರಿಸಿತು ಅಥವಾ ಮನೆದಳ ಜಾಗವಾಯಿತು. ಕುಟುಂಬ ಚಿಕ್ಕದಾಗಿದ್ದು, ಹೊಸ ತಲೆಮಾರು ಕೊಟ್ಟಿಗೆ ಕೆಲಸಗಳಿಂದ ದೂರವಾದರು. ಉಳುಮೆ ಮಾಡುವುದಕ್ಕೆ ಯಂತ್ರಗಳು ಬಂದವು. ಕೊಟ್ಟಿಗೆಗೆ ಬೇಕಿದ್ದ ಸೊಪ್ಪು, ದರಗು ತರುವುದಕ್ಕೆ ಆಳುಗಳು ಸಿಗದ ಪರಿಸ್ಥಿತಿ ಬಂತು. ಹೀಗೆ ಹಲವಾರು ಕಾರಣಗಳಿಂದ ಹಳ್ಳಿಯ ಪ್ರತೀ ಮನೆಗಳಲ್ಲಿದ್ದ ದನ, ಎತ್ತು, ಎಮ್ಮೆಗಳು ಕ್ರಮೇಣ ಮಾಯವಾದವು. ಪರಿಣಾಮ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಇಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಹೋಯ್ತು.
ಆಗ ಬಂದಿದ್ದು ಕುರಿ ಗೊಬ್ಬರ, ಕೋಳಿ ಗೊಬ್ಬರ ಮತ್ತು ದೊಡ್ಡ ಮಟ್ಟದಲ್ಲಿ 30kg, 40kg, 50kg ಚೀಲಗಳಲ್ಲಿ ಪ್ಯಾಕ್ ಆಗಿ ಬಂದ ‘ಪ್ರಸ್‌ಮಡ್ ಗೊಬ್ಬರ’.

ಏನಿದು ‘ಪ್ರೆಸ್‌ಮಡ್ ಗೊಬ್ಬರ?

ಸರಳವಾಗಿ ಹೇಳುವುದಾದರೆ, ಸಕ್ಕರೆ ಕಾರ್ಖಾನೆಯಿಂದ ಹೊರ ಬೀಳುವ ಅರೆದ ಕಬ್ಬಿನ ಘನತ್ಯಾಜ್ಯ ವಸ್ತುವೇ ಪ್ರೆಸ್‌ಮಡ್. ಸಕ್ಕರೆ ಕಾರ್ಖಾನೆಯಿಂದ ಹೊರಬೀಳುವ ಪ್ರೆಸ್‌ಮಡ್‌ನ್ನು ಸಂಸ್ಕರಿಸಿ, ಕಾಂಪೋಸ್ಟ್ ಮಾಡಿ, ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಸಕ್ಕರೆ ಕಾರ್ಖಾನೆಯ ಹೊರಹೊಮ್ಮುವ ಇನ್ನೊಂದು ಘನತ್ಯಾಜ್ಯ ವಸ್ತು ಮೊಲ್ಯಾಸೆಸ್‌. ಈ ಮೊಲ್ಯಾಸೆಸ್‌ನ್ನು ಬಳಸಿಕೊಂಡು ಸಾರಾಯಿ ತಯಾರಿಸಲಾಗುತ್ತದೆ. ಹಾಗೆ ಸರಾಯಿ ತಯಾರಿಸುವಾಗ ಹೊರಬೀಳುವ ಸ್ಪೆಂಟ್‌ವಾಶ್ ಎಂಬ ನಿರುಪಯುಕ್ತ ನೀರನ್ನು, ಅದೇ ಕಬ್ಬಿನ ತ್ಯಾಜ್ಯದಿಂದ ಉತ್ಪನ್ನವಾದ ಪ್ರೆಸ್‌ಮಡ್ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕಬ್ಬಿನಿಂದ ಬಂದ ತ್ಯಾಜ್ಯ ಪ್ರೆಸ್‌ಮಡ್ ಅನ್ನು ಮೊದಲು ಬಯಲಿನಲ್ಲಿ ರಾಶಿ ಹಾಕಿ, ಒಣಗಿಸಲಾಗುತ್ತದೆ. ಅನೇಕ ಬಾರಿ ಯಂತ್ರಗಳನ್ನು ಬಳಸಿ, ಚನ್ನಾಗಿ ಮಿಶ್ರಣಗೊಳಿಸಲಾಗುತ್ತದೆ. ಸಹಜವಾಗಿ ಪ್ರೆಸ್‌ಮಡ್ ಕಾಂಪೋಸ್ಟ್ ಆಗಿ ಬದಲಾಗಲು 3-4 ತಿಂಗಳುಗಳೇಬೇಕು. ಆದರೆ, 3-4 ತಿಂಗಳುಗಳ ಕಾಲದ, ಪ್ರತಿ ದಿನದ ಕಬ್ಬಿನ ತ್ಯಾಜ್ಯ ಪ್ರೆಸ್‌ಮಡ್‌ನ್ನು ಶೇಖರಿಸುವಷ್ಟು ಸ್ಥಳ ಇಲ್ಲದ ಸಕ್ಕರೆ ಕಾರ್ಖಾನೆಗಳಲ್ಲಿ ಅಥವಾ ಮದ್ಯ ತಯಾರಿಕಾ ಡಿಸ್ಟಿಲರಿಗಳಲ್ಲಿ, ಕೆಲವು ಕೆಮಿಕಲ್‌ಗಳನ್ನೂ, ಇನ್ನು ಕೆಲವು ಕಡೆ ಸೂಕ್ಷ್ಮ ಜೀವಾಣುಗಳನ್ನು ಬಳಸಿ ಬೇಗನೆ ಪ್ರೆಸ್‌ಮಡ್ ಗೊಬ್ಬರ ತಯಾರಿಸಲಾಗುತ್ತದೆಯಂತೆ.

ಬ್ಯಾಕ್ಟೀರಿಯಾ ಮತ್ತು ಆ್ಯಕ್ಟಿನೋ ಮೈಸಿಟಸ್‌ಗಳಂತಹ ಜೀವಾಣು ಕೋಶಗಳನ್ನು ಪ್ರೆಸ್‌ಮಡ್‌ಗೆ ಸೇರಿಸಲಾಗುತ್ತದೆ. ಡಿಸ್ಟಿಲರೀಸ್‌ನಿಂದ ಹೊರಬರುವ ಸ್ಪೆಂಟ್‌ವಾಶ್ ನಿರುಪಯುಕ್ತ ನೀರನ್ನು ಲಾರಿಯ ಸಹಾಯದಿಂದ ಪ್ರೆಸ್‌ಮಡ್‌ಗೆ ಸಿಂಪಡಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸುಮಾರು 3-4 ತಿಂಗಳುಗಳು ನಿರಂತರವಾಗಿ ನಡೆಯುತ್ತದೆ. (ಬೈ ಪಾಸ್ ಸಿಸ್ಟಮ್‌ನಲ್ಲಿ ಕೆಮಿಕಲ್ ಬಳಸಿ, 40-45 ದಿನಗಳಲ್ಲೂ ಪ್ರೆಸ್‌ಮಡ್ ಗೊಬ್ಬರ ತಯಾರಿಸುವ ಸಿಸ್ಟಮ್ ಕೂಡ ಇದೆಯಂತೆ! ನಂತರ ಯಂತ್ರಗಳ ಮೂಲಕ ಈ ಪ್ರೆಸ್‌ಮಡ್ ಗೊಬ್ಬರವನ್ನು ಪುಡಿಮಾಡಿ, ಟ್ರಕೋಡರ್ಮಾ, ಸ್ಯುಡೋಮಾನಸ್‌ನಂತಹ ಕೆಲವು ಅಗತ್ಯ ಸೂಕ್ಷ್ಮ ಜೀವಾಣುಗಳನ್ನು ಬೆರೆಸಿ, ಪ್ಯಾಕ್ ಮಾಡಲಾಗುತ್ತದೆ.

ಸಾವಯವ ಗೊಬ್ಬರ ಮಾರಾಟ ಮಾಡುವ ಕಂಪೆನಿಗಳು ಇದನ್ನು ಖರೀದಿಸಿ ತಮ್ಮ ಕಂಪೆನಿ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡುತ್ತವೆ. ಅಡಿಕೆ ಮಾರುಕಟ್ಟೆಯಲ್ಲಿ ದೊಡ್ಡ ಹೆಸರಿರುವ ಮ್ಯಾಮ್‌ಕೋಸ್, TSS ನಂತಹ ಸಹಕಾರಿ ಸಂಸ್ಥೆಗಳಲ್ಲದೆ ಹತ್ತಾರು ಖಾಸಗಿ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಈ ಪ್ರೆಸ್‌ಮಡ್ ಗೊಬ್ಬರದ ವ್ಯವಹಾರದಲ್ಲಿ ತೊಡಗಿಸಿಕೊಂಡಿವೆ.

ಒಂದು ಕಾಲದಲ್ಲಿ, ಸಕ್ಕರೆ ಕಾರ್ಖಾನೆಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಹೇಗೆ ಅನ್ನುವ ಸಮಸ್ಯೆ ಇತ್ತು.
ಅಡಿಕೆ ತೋಟಗಳಿಗೆ ಕೊಟ್ಟಿಗೆ ಗೊಬ್ಬರ ಅಭಾವ ಸೃಷ್ಟಿಯಾದಾಗ, ಕಬ್ಬಿನ ತ್ಯಾಜ್ಯ ಪ್ರೆಸ್‌ಮಡ್ ಗೊಬ್ಬರವಾಗಿ ಅಡಿಕೆ ತೋಟಗಳಿಗೆ ಬಂದಿಳಿಯುವಂತಾಯ್ತು. ಈಗ ಮಲೆನಾಡು, ಕರಾವಳಿಯ ಅಡಿಕೆ ತೋಟಗಳಲ್ಲಿ ಪ್ರೆಸ್‌ಮಡ್‌ನದೇ ಬೇಸಾಯದ ಮೂಲವಸ್ತು. ಯಾವಾಗ ಪ್ರೆಸ್‌ಮಡ್ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿ, ವ್ಯಾಪಾರ, ಹಣ, ಲಾಭ ದೊಡ್ಡ ಮಟ್ಟದಲ್ಲಿ ಹರಿಯುವುದಕ್ಕೆ ಪ್ರಾರಂಭವಾಯಿತು, ಆಗ ಅನೇಕ ಕಡೆ, ತ್ವರಿತವಾಗಿ ಅವೈಜ್ಞಾನಿಕವಾಗಿ ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯೂ ಪ್ರಾರಂಭವಾಯಿತು.

ಇದರ ಸಮಸ್ಯೆ ಏನು?

ಪ್ರೆಸ್‌ಮಡ್ ಗೊಬ್ಬರ ತಯಾರಾಗಬೇಕಾದರೆ, ಪ್ರೆಸ್‌ಮಡ್ ಕಾಂಪೋಸ್ಟ್ ಆಗಿ ಬದಲಾಗಬೇಕಾದರೆ ಬೇಕಾಗುವ ಸಾಮಾನ್ಯ ಸಹಜ ಲೀಡ್ ಟೈಮ್‌ನ್ನು ಕೆಲವು ಮಧ್ಯವರ್ತಿ ಏಜೆಂಟರು, ಸಂಸ್ಥೆಗಳು ಪರಿಗಣಿಸುತ್ತಿಲ್ಲ ಎಂಬುದು ಪ್ರೆಸ್‌ಮಡ್ ಗೊಬ್ಬರದ ಚೀಲ ತೋಟಕ್ಕೆ ಬಂದು ಬಿದ್ದಾಗ ರೈತರ ಅರಿವಿಗೆ ಬರುತ್ತಿದೆ. ಬರಿಗೈಯಲ್ಲಿ ಮುಟ್ಟಲಾರದಷ್ಟು ಬಿಸಿಯಲ್ಲಿ ಆ ಚೀಲಗಳಿರುತ್ತವೆ. ಕಂಪ್ಲೀಟ್ ಕಾಂಪೋಸ್ಟ್ ಆಗುವ ಮುನ್ನವೇ, ಅದನ್ನು ಚೀಲಕ್ಕೆ ತುಂಬಿ ರೈತರಿಗೆ ಮಾರಲಾಗಿರುತ್ತದೆ!

ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ರೈತರು ಕೇಳುವ ಪ್ರಶ್ನೆಗಳಿಗೆ ಅದರ ವರ್ತಕರಲ್ಲಿ, ವ್ಯಾಪಾರಿ ಸಂಸ್ಥೆಗಳಲ್ಲಿ, ವ್ಯಾಪಾರ ಮಾಡುವ ಸಹಕಾರಿ ಸಂಘಗಳಲ್ಲಿ ಸ್ಪಷ್ಟವಾದ ನಿಖರವಾದ ಅಧಿಕೃತ ಉತ್ತರಗಳು ದೊರೆಯುತ್ತಿಲ್ಲ. (ಅತಿ ಹೆಚ್ಚು ಪ್ರೆಸ್ ಮಡ್ ಗೊಬ್ಬರ ಮಾರಾಟ ಮಾಡುವ ಸಹಕಾರಿ ಸಂಸ್ಥೆ ಮ್ಯಾಮ್‌ಕೋಸ್‌ಗೆ, ಈ ಬರಹದ ಲೇಖಕ ಸ್ಪಷ್ಟವಾದ, ನಿಖರವಾದ, ಅಧಿಕೃತ ಮಾಹಿತಿ ಕೇಳಿ ಡಿಸೆಂಬರ್ 2023 ರಲ್ಲಿ ಕೋರಿಕೆ ಸಲ್ಲಿಸಿದ್ದು, ಉತ್ತರ ನಿರೀಕ್ಷಿಸಲಾಗುತ್ತಿದೆ.)

ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ರೈತರಲ್ಲಿ ಪ್ರಸ್ತುತ ಇರುವ ಅನುಮಾನಗಳು ಹತ್ತಾರು:

  1. ಸಕ್ಕರೆ ಕಾರ್ಖಾನೆಗಳು ಮೂರ್ನಾಲ್ಕು ತಿಂಗಳುಗಳು ಕಬ್ಬಿನ ವೇಸ್ಟನ್ನು ಸಹಜ ಕಾಂಪೋಸ್ಟ್ ಆಗುವ ಹಾಗೆ ಸಂಗ್ರಹಿಸಿ ಇಡುತ್ತಾರಾ?
  2. ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯಲ್ಲಿ, ತಕ್ಷಣ ಕಾಂಪೋಸ್ಟ್ ಆಗುವ ಹಾಗೆ ಕೆಮಿಕಲ್ ಬಳಸುವುದು ನಿಜವಾ?
  3. ಕಾಂಪೋಸ್ಟ್ ತಯಾರಿಸುವಾಗ ಜೀವಾಣುಗಳನ್ನು (ಟ್ರೈಕೋಡರ್ಮಾ, ಸ್ಯುಡೋಮಾನಸ್… ಇತ್ಯಾದಿ) ಯಾವಾಗ ಸೇರಿಸುತ್ತಾರೆ?
  4. ಕೆಲವೊಮ್ಮೆ ಪ್ರೆಸ್‌ಮಡ್ ಗೊಬ್ಬರದ ಚೀಲಗಳನ್ನು ಬರೀ ಕೈಯಿಂದ ಮುಟ್ಟಲಾರದಷ್ಟು ಬಿಸಿ ಇರುತ್ತವೆ. ಇದರರ್ಥ, ಬಹುಶಃ ಆರೇಳು ತಿಂಗಳುಗಳು ಕಾದು, ಕಬ್ಬಿನ ವೇಸ್ಟ್ ಸಹಜ ಕಾಂಪೋಸ್ಟ್ ಆದ ಮೇಲೆ, ಗೊಬ್ಬರ ತಯಾರಿಸಿದಂತೆ ಕಾಣುವುದಿಲ್ಲ. ತಯಾರಿಕೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಲಿಖಿತ ಮಾಹಿತಿಗಳು ಪ್ರಾಡಕ್ಟ್‌ನ ಬ್ಯಾಚ್‌ವೈಸ್ ಡೀಟೈಲ್ಸ್ (ಬ್ಯಾಚ್ ಮಾನುಫ್ಯಾಕ್ಚರಿಂಗ್ ರಿಕಾರ್ಡ್ ಜೊತೆಗೆ ಸರ್ಟಿಫಿಕೇಟ್ ಆಫ್ ಅನಾಲಿಸಿಸ್) ಎಲ್ಲಿ ಸಿಗುತ್ತದೆ?
  5. ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯಲ್ಲಿ ವೇಗಗತಿಯಲ್ಲಿ ಕಾಂಪೋಸ್ಟ್ ಆಗುವುದಕ್ಕೆ ಅನೇಕ ಕೆಮಿಕಲ್‌ಗಳನ್ನು ಬಳಸಲಾಗುತ್ತಿದೆ ಮತ್ತು ಅದರ ಪರಿಣಾಮದಿಂದ ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ರೋಗಗಳು ವಿಸ್ತರಿಸುತ್ತಿರುವುದಕ್ಕೆ ಕಾರಣ ಆಗಿರಬಹುದು ಎಂದು ಕೆಲವು ರೈತರ ಅನುಮಾನ
  6. ಡಿಸ್ಟಿಲರಿ ಸ್ಪೆಂಟ್ ವಾಶ್‌ನ್ನು* (DSW) ಕಬ್ಬಿನ ಕಾಂಪೋಸ್ಟ್ ತಯಾರಿಕೆಯಲ್ಲಿ (ಅಥವಾ ಕಬ್ಬನ್ನು ಅರೆಯುವಿಕೆಯಲ್ಲಿ) ಯಾವ ಪ್ರಮಾಣದಲ್ಲಿ ಬಳಸಲಾಗುತ್ತದೆ? DSWನ್ನು ಸರಿಯಾದ ಪ್ರಮಾಣದ ಬಳಸುವಿಕೆಯಿಂದ ಮಣ್ಣಿನ ಫಲವತ್ತತೆಗೆ ಮತ್ತು ಸಸ್ಯಗಳ ಬೆಳವಣಿಗೆಗೆ ಅನುಕೂಲ ಮತ್ತು ಅಸಮರ್ಪಕ DSW ಬಳಕೆಯಿಂದ ಮಣ್ಣು, ನೀರು, ಸಸ್ಯ, ಜೀವ ಸಂಕುಲಕ್ಕೆ ತೀವ್ರ ಅಪಾಯ ಎಂದು ಜಾಲತಾಣದ ಅಧಿಕೃತ ದಾಖಲೆಗಳಲ್ಲಿ ನಮೂದಾಗಿದೆ. ಸಸ್ಯಗಳ DNA ಗಳನ್ನೂ ಬದಲಿಸಿ, ಶಾಶ್ವತವಾಗಿ ಅದರ ವಂಶವನ್ನೇ ಕುಂಠಿತಗೊಳಿಸುವಷ್ಟು ಅಪಾಯಕಾರಿ ಎಂದು ವರದಿಯಲ್ಲಿ ತಜ್ಞರ ಅಭಿಪ್ರಾಯ ಇದೆ. ಪ್ರಸ್ ಮಡ್ ಗೊಬ್ಬರಗಳ ಬಳಕೆಯ ಬಗ್ಗೆ ಎಲ್ಲ ರೈತರು ಮರು ಚಿಂತನೆ ಮಾಡಬೇಕಾದಷ್ಟು ಭಯಂಕರ ವಿಚಾರಗಳು ಜಾಲತಾಣಗಳಲ್ಲಿ ಈ ಕಬ್ಬಿನ ತ್ಯಾಜ್ಯವನ್ನು ಗೊಬ್ಬರವಾಗಿಸುವಾಗ ಬಳಸುವ DSW ಗಳಲ್ಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ಪ್ರೆಸ್‌ಮಡ್ ಗೊಬ್ಬರಗಳ ತಯಾರಿಕೆಯಲ್ಲಿ ಯಾವ ಪ್ರಮಾಣದ DSW ಬಳಸಲಾಗಿದೆ ಎಂಬ ಸ್ಪಷ್ಟವಾದ ಮತ್ತು ಅಧಿಕೃತ ಮಾಹಿತಿಗಳನ್ನು ಗೊಬ್ಬರ ತಯಾರಿಕಾ ಸಂಸ್ಥೆಗಳು, ಮಾರಾಟ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಗೊಬ್ಬರ ಬಳಸುವ ರೈತರಿಗೆ ನೀಡುತ್ತಿಲ್ಲ ಏಕೆ?
  7. ಕೆಲವು ರೈತರ ಅನುಮಾನ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಗೊಬ್ಬರಗಳಲ್ಲಿ ಪ್ರೆಸ್‌ಮಡ್ ಮಾತ್ರ ಬಳಸಲಾಗುತ್ತದೆಯಾ? ಜೊತೆಗೆ ಸಿಟಿ ವೇಸ್ಟ್ (ಹಸಿ ಕಸ), ಬೇರೆ ಸಸ್ಯ ಜನ್ಯ (ತೆಂಗು ಇತ್ಯಾದಿ) ವೇಸ್ಟ್‌ಗಳನ್ನು ಬಳಸಲಾಗುತ್ತದೆಯಾ? ಎಂದು ಕೇಳುತ್ತಿದ್ದಾರೆ.
  8. ಮೇಲಿನ ವಿಚಾರಗಳಿಗಲ್ಲದೆ, ಸಾವಯವ ಪ್ರೆಸ್ ಮಡ್ ಗೊಬ್ಬರದ ಬಗ್ಗೆ ರೈತರಿಗೆ ಕೊಡಬಹುದಾದ ಇತರ ಮಾಹಿತಿಗಳನ್ನೂ ಸೇರಿಸಿ ಸತ್ಯವಾದ, ಸ್ಪಷ್ಟವಾದ, ನಿಖರವಾದ ಮಾಹಿತಿಗಳನ್ನು, ಬಳಕೆಯ ವಿಧಾನಗಳನ್ನು ಅಧಿಕೃತ ದಾಖಲೆಗಳೊಂದಿಗೆ ಬ್ರೋಷರ್ ರೂಪದಲ್ಲಿ ಕೊಡಬಹುದಲ್ಲ? ಎಂಬುದು. ಆದರೆ, ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತಿಲ್ಲ.

ಆದರೆ, ಮಲೆನಾಡು, ಕರಾವಳಿ, ಬಯಲು ಸೀಮೆಗಳ ತೋಟಗಳಿಗೆ ಪ್ರೆಸ್‌ಮಡ್ ಗೊಬ್ಬರ ಮಸಾಲೆ ದೋಸೆಯಂತೆ ಬಿಕರಿಯಾಗುತ್ತಿದೆ. ಹಸುಗಳ ಕೊಟ್ಟಿಗೆ ಗೊಬ್ಬರ ಕ್ಷೀಣಿಸುತ್ತಿರುವುದರಿಂದ, ಬೇರೆ ದಾರಿ ಇಲ್ಲದೆ ಅಡಿಕೆ ಬೆಳೆಗಾರರು ಪ್ರೆಸ್‌ಮಡ್ ಗೊಬ್ಬರವನ್ನು, ಉತ್ತರ ಸಿಗದ ಪ್ರೆಶ್ನೆಗಳನ್ನೂ ಅಡಿಕೆ ಮರದ ಬುಡಕ್ಕೆ ಹಾಕಿ ಮಣ್ಣು ಮುಚ್ಚಿ ಬೇಸಾಯ ಮಾಡುತ್ತಿದ್ದಾರೆ! ಮಾರ್ಗದರ್ಶನ ನೀಡಬೇಕಾದ ಸರಕಾರದ ತೋಟಗಾರಿಕಾ ಇಲಾಖೆಯೂ ‘ಮೌನ ಬಂಗಾರ’ ಎಂಬಂತಿದೆ!

Continue Reading

ಕೃಷಿ

Plastic Mulching: ವಿಸ್ತಾರ ಗ್ರಾಮ ದನಿ: ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ ಬಳಕೆಯ ಸೈಡ್‌ ಎಫೆಕ್ಟ್‌ ಎಷ್ಟೊಂದು!

ಕೃಷಿ ಭೂಮಿಯಲ್ಲಿ ಇತ್ತೀಚೆಗೆ (plastic mulching) ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್‌ ಹೊದಿಕೆ) ಬಳಕೆ ಹೆಚ್ಚುತ್ತಿದೆ. ಇದರ ಸಾಧಕ ಬಾಧಕಗಳೇನು ಎಂಬ ಬಗ್ಗೆ ಪ್ರಗತಿಪರ ಕೃಷಿಕ, ಲೇಖಕ ಅರವಿಂದ ಸಿಗದಾಳ್ ಅವರು ಇಲ್ಲಿ ಅವಲೋಕನ ನಡೆಸಿದ್ದಾರೆ.

VISTARANEWS.COM


on

Plastic Mulching
Koo
-ಅರವಿಂದ ಸಿಗದಾಳ್, ಮೇಲುಕೊಪ್ಪ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ) ಬಗ್ಗೆ ಚರ್ಚೆ (plastic mulching) ನಡೆಯುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್ ಬಳಕೆಯೂ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಅನುಕೂಲ ಮತ್ತು ತೊಂದರೆ ಎರಡೂ ಇವೆ. ಈ ಹಿನ್ನೆಲೆಯಲ್ಲಿ ಚರ್ಚೆಗೆ ಪೂರಕವಾಗಿ ಒಂದಿಷ್ಟು ಸಂಗ್ರಹಿತ ವಿಷಯಗಳು ಇಲ್ಲಿ ಕೊಟ್ಟಿದ್ದೇನೆ.

ಪ್ಲಾಸ್ಟಿಕ್ ಮಲ್ಚಿಂಗ್ ಅನುಕೂಲಗಳು

  1. ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಅದನ್ನು ಹೆಚ್ಚು ಕಾಲ ಕಾಯ್ದುಕೊಳ್ಳುತ್ತದೆ.
  2. ತೇವಾಂಶ ಮತ್ತು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ.
  3. ಸಸ್ಯ ಪೋಷಕಾಂಶಗಳ ನಷ್ಟವನ್ನು ಮಿತಿಗೊಳಿಸುತ್ತದೆ, ಇಳುವರಿ ಹೆಚ್ಚಾಗುತ್ತದೆ.
  4. ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಅನುಕೂಲ.
  5. ಕಳೆಗಳ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಕಳೆಗಳು ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಸೂರ್ಯನ ಬೆಳಕನ್ನು ಪಡೆಯುವುದನ್ನು ಪ್ಲಾಸ್ಟಿಕ್ ಮಲ್ಚಿಂಗ್ ತಡೆಯುತ್ತದೆ.

ತೊಂದರೆಗಳು ಸಾಕಷ್ಟಿವೆ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಎಷ್ಟು ಅನುಕೂಲಗಳಿವೆಯೋ ಅದಕ್ಕಿಂತ ಹತ್ತು ಪಟ್ಟು, ನೂರು ಪಟ್ಟು ತೊಂದರೆಗಳಿವೆ. ಅನುಕೂಲಗಳು ತಕ್ಷಣಕ್ಕೆ ಸಿಗುವಂತವುಗಳಾದರೆ, ತೊಂದರೆಗಳು ದೀರ್ಘಕಾಲಿಕ.
ಪ್ಲಾಸ್ಟಿಕ್ ಸವಕಳಿಯಾಗುವುದಕ್ಕೆ, ನಾಶವಾಗುವುದಕ್ಕೆ ಶತಮಾನಗಳೇಬೇಕು. ಆದರೆ, ಭೂಮಿಗೆ ತಾಗಿಸಿದ ದಿನದಿಂದಲೇ ನಿಧಾನವಾಗಿ ಸವಕಳಿಯ ಕ್ರಿಯೆ ಆರಂಭವಾಗುತ್ತದೆ. ವಿಭಜನೆಗೊಂಡ ಪ್ಲಾಸ್ಟಿಕ್‌ನ ಕಣಗಳು ಮಣ್ಣಿನ ಫಲವತ್ತತೆಗೆ ಭಯಾನಕ ವಿಷವೇ ಸರಿ. ಸ್ನಾನದ ಮನೆಯಲ್ಲಿ ಸೋಪಿನ ಒಂದು ಸಣ್ಣ ಹನಿ ತೇವವಿದ್ದ ಜಾಗದಲ್ಲಿ ಬಿದ್ದಾಗ ಹೇಗೆ ವಿಸ್ತರಿಸುತ್ತದೋ, ಅದೇ ರೀತಿ ಪ್ಲಾಸ್ಟಿಕ್‌ನ ಕಣಗಳು ಭೂಮಿಯಲ್ಲಿ ಬಿದ್ದಾಗ ಮಣ್ಣಿನಲ್ಲಿ ಅದು ವಿಸ್ತರಿಸುತ್ತಾ… ಮಣ್ಣು ವಿಷವಾಗುತ್ತಾ ಹೋಗುತ್ತದೆ. ಹೌದು, ಈ ಕ್ರಿಯೆ ತುಂಬ ನಿಧಾನವಾದ ಗತಿಯಲ್ಲಿ ನೆಡೆಯುವುದು. ಒಂದು ರೀತಿಯಲ್ಲಿ ಸ್ಲೋ ಪಾಯಿಸನ್. ಕೆಲವು ಸಮಯದವರೆಗೆ ಇರುವೆ, ಏಡಿ, ಎರೆಹುಳುಗಳು ಮತ್ತು ಅನೇಕ ಸೂಕ್ಷ್ಮ ಜೀವಿಗಳು ಈ ಪ್ಲಾಸ್ಟಿಕ್‌ನ್ನು ಆಶ್ರಯವಾಗಿಸಿಕೊಂಡು ಬದುಕಬಹುದು. ಆದರೆ ಯಾವಾಗ ಪ್ಲಾಸ್ಟಿಕ್‌ನ ಸವಕಳಿ ನಿಧಾನವಾಗಿ ಹೆಚ್ಚಾಗುತ್ತದೋ… ಆಗ ಯಾವ ಜೀವ ಜಂತುಗಳೂ, ಸೂಕ್ಷ್ಮ ಜೀವಿಗಳೂ ಅಲ್ಲಿ ಬದುಕಲಾರವು. ಪೆಟ್ರೋಲಿಯಂ ಪ್ರಾಡಕ್ಟ್‌ನ ಉತ್ಪನ್ನವಾದ ಪ್ಲಾಸ್ಟಿಕ್ ರಾಸಾಯನಿಕ ಕಣಗಳು ಮಣ್ಣಿನ ಫಲವತ್ತತೆಯನ್ನು ಶಾಶ್ವತವಾಗಿ ನಾಶಮಾಡುತ್ತದೆ. ಮಣ್ಣನ್ನು ಬರಡಾಗಿಸುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ಮಲ್ಚಿಂಗ್ ತೊಂದರೆಗಳು ಹಲವಾರಿವೆ.

Disadvantages of plastic mulching

ಪ್ಲಾಸ್ಟಿಕ್ ಮಲ್ಚಿಂಗ್ ಅನಾನುಕೂಲಗಳು

ಪ್ಲಾಸ್ಟಿಕ್ ಮಲ್ಚ್ ಮಣ್ಣನ್ನು ಪರಿಣಾಮಕಾರಿಯಾಗಿ ಬೆಚ್ಚಗಾಗಿಸುತ್ತದೆ, ಮಣ್ಣಿನ ತಾಪಮಾನವನ್ನು ಬದಲಾಯಿಸುವುದು ಎಲ್ಲಾ ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಬೆಳೆಗಳು ಮಣ್ಣಿನ ತಾಪಮಾನಕ್ಕೆ ಸಾಕಷ್ಟು ಸಂವೇದನಾಶೀಲವಾಗಿರುತ್ತವೆ ಆದ್ದರಿಂದ ಮಣ್ಣಿನ ಬೆಚ್ಚಗಾಗುವಿಕೆಯೂ ಅನೈಸರ್ಗಿಕವಾದಾಗ ಅದೂ ಅಪಾಯಕಾರಿಯೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಪೆಟ್ರೋಲಿಯಂ-ಆಧಾರಿತ ವಸ್ತುಗಳಿಂದ ಪಡೆಯಲಾಗಿದೆ, ಇದು ಉತ್ಪಾದನೆಗೆ ದುಬಾರಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಕಾರಕವಾಗಿದೆ.

ಸೂರ್ಯನ ಬೆಳಕು-ಶಾಖ, ಗಾಳಿ, ನೀರು ಅಥವಾ ಇನ್ಯಾವುದೋ ಕಾಸ್ಮಿಕ್ ಎನರ್ಜಿಗಳಿಂದ ಮಣ್ಣಿನಲ್ಲಿ ಸಹಜವಾಗಿ ನೆಡೆಯುವ “ವಿಧಿ’ವತ್ತಾದ ರಾಸಾಯನಿಕ ಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದ ಕಡಿಮೆ ಆಗಬಹುದು ಅಥವಾ ತಟಸ್ಥವಾಗಬಹುದು ಮತ್ತು ಪರಿಣಾಮವಾಗಿ ಮಣ್ಣಿನ ಮೇಲೆ ದೀರ್ಘಕಾಲದ ಅಪಾಯ ಉಂಟಾಗಬಹುದು. ಮಣ್ಣಿನ ಸಹಜ ಸಂವೇದನಾಶೀಲತೆ ಅಥವಾ ನೈಸರ್ಗಿಕವಾಗಿ ಮಣ್ಣಿನಲ್ಲಿ ನೆಡೆಯುವ ಸಹಜವಾದ ರಾಸಾಯನಿಕ ಪ್ರಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದಾಗಿ ಅತಿ ವೇಗವನ್ನು ಪಡೆದು ವಿಪರೀತವಾಗಿ ಋಣಾತ್ಮಕ ಪರಿಣಾಮ ಉಂಟಾಗಬಹುದು.

Crops with Plastic Mulch

ಮಲ್ಷಿಂಗ್ ಮಾಡುವ ಪ್ಲಾಸ್ಟಿಕ್ ವೇಸ್ಟ್‌ಗಳು ಮರು ಬಳಕೆ ಮಾಡಲು ಸೂಕ್ತವಲ್ಲದ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ 3-4 ವರ್ಷಗಳ ನಂತರ ಮರುಬಳಕೆಯಾಗದ ಒಂದು ಬೃಹತ್ ತ್ಯಾಜ್ಯವಾಗುವ ಈ ಪ್ಲಾಸ್ಟಿಕ್ ಭೂಮಿಗೆ ಒಂದು ಶಾಶ್ವತ ಅಪಾಯಕಾರಿ ವಸ್ತು. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ನ್ನು ಕೃಷಿಯಲ್ಲಿ ಬಳಸುವುದು ಪ್ರಪಂಚದ-ಪರಿಸರದ ದೃಷ್ಟಿಯಿಂದ ಒಳ್ಳೆಯದಲ್ಲ. ಬಳಸಿ, ತ್ಯಾಜ್ಯವಾದ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡುವುದು ಕಷ್ಟ.

ಮಣ್ಣಿಗೆ ಹೆಚ್ಚಿನ ಆರ್ದ್ರತೆಯು ಯಾವಾಗಲೂ ಉತ್ತಮವಲ್ಲ, ಮತ್ತು ಅತಿಯಾದ ಆರ್ದ್ರತೆಯು ಭಯಾನಕ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ತೇವಾಂಶವು ನೀರು ಮತ್ತು ಬೆಳೆಗಳನ್ನು ಮುಳುಗಿಸಬಹುದು.
ಆರ್ದ್ರ ಬೆಳವಣಿಗೆಯ ಪರಿಸ್ಥಿತಿಗಳು ಮಾಲಿನ್ಯ ಮತ್ತು ರೋಗಕ್ಕೆ ಕಾರಣವಾಗಬಹುದು. ಅಡಿಕೆ ತೋಟದಲ್ಲಿನ ಕೊಳೆ, ಎಲೆಚುಕ್ಕಿ ಇತ್ಯಾದಿಗಳ ಫಂಗಸ್‌ಗಳ ಉತ್ಪತ್ತಿಗೂ ಪ್ಲಾಸ್ಟಿಕ್ ಮಲ್ಚಿಂಗ್ ಕಾರಣವಾಗಬಹುದು.

Plastic mulching cropland

ಮಲ್ಚಿಂಗ್ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣ, ದೀರ್ಘಬಾಳಿಕೆಗಳಿಗಾಗಿ ಬಳಸುವ ಕೆಮಿಕಲ್‌ಗಳು ಮಣ್ಣಿಗೆ ವಿಷಕಾರಿಗಳಾಗಿರಬಹುದು. ಜತೆಗೆ ಗೊಬ್ಬರವಾಗಿ ಬಳಸುತ್ತಿರುವ, ಪೆಸ್ಟಿಸೈಡ್, ಇನ್ಸೆಕ್ಟಿಸೈಡ್, ಫಂಗಿಸೈಡ್ ಕೆಮಿಕಲ್‌ಗಳೊಂದಿಗೆ ಮಲ್ಚಿಂಗ್ ಪ್ಲಾಸ್ಟಿಕ್ ಕೆಮಿಕಲ್‌ಗಳು ಸೇರಿ ಗದ್ದೆ ತೋಟಗಳು ಮತ್ತಷ್ಟು ಮಾಲಿನ್ಯವಾಗಬಹುದು. ಪರೋಕ್ಷವಾಗಿ ತಿನ್ನುವ ಆಹಾರ ಪದಾರ್ಥಗಳು ಮತ್ತಷ್ಟು ವಿಷವಾಗಬಹುದು.

ಪ್ಲಾಸ್ಟಿಕ್ ಮಲ್ಚಿಂಗ್ ಸಾವಯವ ಪದ್ದತಿಗೆ ವಿರುದ್ದವಾದ ಕ್ರಮ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಇರುವೆ, ಚಿಕ್ಳಿಯಿರುವೆ, ಏಡಿ, ಎರೆಹುಳುಗಳಿಗೆ ದೀರ್ಘಾವದಿಯಲ್ಲಿ ಅಪಾಯಕಾರಿ ಆಗಬಹುದು. ಮಣ್ಣಿನ ಅಗತ್ಯ ಸೂಕ್ಷ್ಮ ಜೀವಿಗಳೂ ನಾಶವಾಗಬಹುದು.

ಸಾವಯವ ತ್ಯಾಜ್ಯಗಳು ಮಣ್ಣಿನ ಜೊತೆ ಬೆರೆಯುವುದಕ್ಕೆ, ಗೊಬ್ಬರವಾಗಿ ಮಣ್ಣಿನ ಜೊತೆ ಸಂಯೋಜನೆಗೊಳ್ಳುವುದಕ್ಕೆ, ಸಾವಯವ ತ್ಯಾಜ್ಯಗಳಲ್ಲಿನ ಕಾರ್ಬನ್, ಪೋಶಕಾಂಶಗಳು ಮಣ್ಣಿನಲ್ಲಿ ಮಿಳಿತವಾಗುವುದಕ್ಕೆ ಪ್ಲಾಸ್ಟಿಕ್ ಮಲ್ಚಿಂಗ್‌ನಲ್ಲಿರುವ ಕೆಮಿಕಲ್ ಮತ್ತು ನೀರು, ಗಾಳಿ ಮತ್ತು ಉಷ್ಣತೆಗಳನ್ನು ವ್ಯತ್ಯಾಸಗೊಳಿಸುವ ಶಕ್ತಿ ತಡೆ ಒಡ್ಡಬಹುದು.

Plastic Mulching - Using Plastic Mulches and Drip Irrigation for Vegetable Production

ಪ್ಲಾಸ್ಟಿಕ್‌ ಕಡಿಮೆ ಮಾಡಲೇಬೇಕಿದೆ

ಹಾಗಾಗಿ ಪ್ಲಾಸ್ಟಿಕ್ ಬಗ್ಗೆ ನಾವು ಅಂತರ ಕಾಪಾಡಿಕೊಳ್ಳಬೇಕಾದ, ಜಾಗೃತಿಗೊಳ್ಳಬೇಕಾದ ಒಂದು ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪರಿಸರ, ಹವಾಮಾನ ವೈಪರೀತ್ಯ, ಪ್ರತೀ ಮನೆಯಲ್ಲೂ ಷೋಕೇಸ್‌ನ ಒಂದು ಭಾಗ ಪುಟ್ಟ ಮೆಡಿಕಲ್ ಶಾಪ್ ಆಗುತ್ತಿರುವ ಅನಿವಾರ್ಯತೆಯ ನಮ್ಮ ಅನಾರೋಗ್ಯಗಳನ್ನು ಗಮನಿಸುತ್ತ ಪ್ಲಾಸ್ಟಿಕ್ ಬಗ್ಗೆ, ಅದನ್ನು ನಮ್ಮ ಜೀವನದಲ್ಲಿ ಗ್ರಾಮ್ ಗಳಷ್ಟಾದರೂ ಕಮ್ಮಿ ಮಾಡುವ ಬಗ್ಗೆ ಯೋಚಿಸಬೇಕಾಗಿದೆ.:
ಪ್ಲಾಸ್ಟಿಕ್ ಅತಿ ಬಳಕೆಯಿಂದಾಗಿ ಹವಾಮಾನ ಬಿಕ್ಕಟ್ಟನ್ನು ಹೆಚ್ಚು ತೀವ್ರಗೊಳಿಸುತ್ತಿದ್ದೇವೆ. ಅಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಅವುಗಳ ತ್ಯಾಜ್ಯದಿಂದ ನಮ್ಮ ವಾತಾವರಣದಲ್ಲಿ ವಿಷದ ಸಾಂದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಪರಿಣಾಮ ನಿತ್ಯ ಅನಾರೋಗ್ಯರಾಗುತ್ತಿದ್ದೇವೆ, ಬೇಗನೆ ಸಾವಿನ ಕಡೆಗೆ ವಾಲುತ್ತಿದ್ದೇವೆ.
ಪ್ಲಾಸ್ಟಿಕ್ ಎಂಬ ‘ಭಸ್ಮಾಸುರ”ನ ಸುಡುವ ಕರವನ್ನು ನಮ್ಮ ತಲೆ ಮೇಲೆ ನಾವೇ ಇಟ್ಟುಕೊಳ್ಳುತ್ತಿದ್ದೇವೆ. ಆ ಭಸ್ಮಾಸುರ ಕರಗಳು ಪರಿಸರವನ್ನು, ನಮ್ಮನ್ನೂ ಸೇರಿದಂತೆ ಜೀವ ಸಂಕುಲಗಳ ಆರೋಗ್ಯವನ್ನು, ಆಯಸ್ಸನ್ನು ಸುಡುತ್ತಿವೆ. ಸುಡುವುದನ್ನು ತಡೆಯುವ ಯಾವ ಮಲ್ಚಿಂಗ್ ಹೊದಿಕೆಗಳೂ ನಮ್ಮ ತಲೆ ಮೇಲೆ ಇಲ್ಲ!

Continue Reading

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಅಡಿಕೆ ವಿಚಾರ ಬಂದಾಗ ಜನಪ್ರತಿನಿಧಿಗಳು ಕೈಕಟ್ಟಿಕೊಂಡು ಮೌನವಾಗುವುದೇಕೆ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ?

VISTARANEWS.COM


on

Areca Nut
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳಪೆ ಅಡಿಕೆಯ ಕಳ್ಳ ಆಮದು ವಿರುದ್ಧ ಇತ್ತೀಚೆಗೆ ಕ್ಯಾಂಪ್ಕೋ, ಮ್ಯಾಮ್‌ಕೋಸ್ ಸಹಾಕಾರಿ ಸಂಸ್ಥೆಗಳವರೆಲ್ಲ ಒಟ್ಟಿಗೆ ದಿಲ್ಲಿಗೆ ಹೋಗಿ ಮನವಿ ಸಲ್ಲಿಸಿ ಭರವಸೆ ಪಡೆದು ಬಂದರು.
“ಇರಿ, ನಾವು ಬರ್ತೀವಿ. ಒಟ್ಟಿಗೆ ಹೋಗೋಣ” ಅಂತ ಎಲ್ಲ 17 ಅಡಿಕೆ ಜಿಲ್ಲೆಗಳ ಸಂಸದರು ಜೊತೆಗೂಡಬಹುದಿತ್ತು. “ತಡಿರಿ, ನಾವೂ ಬರ್ತೀವಿ ‘ನಮ್ಮ ಅಡಿಕೆ ನಮ್ಮ ಹಕ್ಕು'” ಅಂತ ಹೇಳಿ ಅದೇ 17 ಅಡಿಕೆ ಬೆಳೆಯುವ ಜಿಲ್ಲೆಯ ಎಲ್ಲ ಶಾಸಕರೂ ಕೈ ಸೇರಿಸಬಹುದಿತ್ತು.
ಉಹೂಂ, ಅದ್ಯಾವದನ್ನೂ ಮಾಡುವ ಮನಸ್ಸನ್ನು ಶಾಸಕರು, ಸಂಸದರು, ಮಂತ್ರಿಗಳು ಮಾಡುತ್ತಿಲ್ಲ. ಅನೇಕ ತಿಂಗಳುಗಳಿಂದ ಈ ಅಡಿಕೆ ಕಳ್ಳ ಆಮದು (Areca Nuts Smuggling) ಆಗುತ್ತಿರುವ ಸುದ್ದಿ ಪ್ರಕಟವಾಗುತ್ತಿದೆ. ಯಾಕೆ ಅಡಿಕೆ ಸಮಸ್ಯೆಗಳ ವಿಚಾರದಲ್ಲಿ ಎಲ್ಲಾ ಜನಪ್ರತಿನಿಧಿಗಳು ನಿಷ್ಕ್ರಿಯರಾಗುತ್ತಿದ್ದಾರೆ? ನಿರ್ಲಕ್ಷ್ಯ ತೋರಿಸುತ್ತಿದ್ದಾರೆ? ಬೇರೆ ವಿಚಾರಗಳಲ್ಲಿ ಗಂಟಲು ಹರಿಯುವಷ್ಟು ಕೂಗಾಡುವ, ಕಿರುಚಾಡುವ ಅನೇಕ ಜನ ಪ್ರತಿನಿಧಿಗಳು ಅಡಿಕೆ ಸಮಸ್ಯೆ ವಿಚಾರ ಬಂದಾಗ ಸತ್ತವರ ಮನೆಯಲ್ಲಿ ಕೈಕಟ್ಟಿಕೊಂಡು ನಿಂತವರ ರೀತಿ ಮೌನವಾಗುವುದೇಕೆ!!?

ಒಂದೋ ಎರಡೋ ಪ್ರಕರಣ ಅಲ್ಲ

ಕಳ್ಳ ದಾರಿಯಲ್ಲಿ ಅಡಿಕೆ ಆಮದು ಆಗಿದ್ದು ಒಂದೋ ಎರಡೋ ಪ್ರಕರಣ ಅಲ್ಲ. ಕೆಲವು ತಿಂಗಳುಗಳಿಂದ ಅನೇಕ ಪ್ರಕರಣಗಳು ಸುದ್ದಿ ಆಗುತ್ತಲೇ ಇದೆ. ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಡಿಕೆ ಭಾರತದ ಒಳಗೆ ಬರ್ತಾ ಇದೆ ಎಂದು ಸುದ್ದಿಗಳು ಆಗುತ್ತಿವೆ. ನೇರ ಬಂದರಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ ಅಂತಲೂ ವರ್ತಮಾನ ಪ್ರಕಟವಾಗುತ್ತ ಇದೆ. ಆಮದು ಆದ ಅಡಿಕೆ ಸೀಜ್ ಆಗುತ್ತೆ. ಅದನ್ನು ಕಡಿಮೆ ಬೆಲೆಯಲ್ಲಿ ಹರಾಜು ಹಾಕಲಾಗುತ್ತಂತೆ!! ಇಲ್ಲಿಯ ವರ್ತಕರು ಅದನ್ನು ಕಡಿಮೆ ಬೆಲೆಗೆ ಹರಾಜು ಹಿಡಿಯುತ್ತಾರಂತೆ. ಇದಲ್ಲದೆ ಈಶಾನ್ಯ ರಾಜ್ಯಗಳ ಗಡಿಯಿಂದಲೂ ರಾಜಾರೋಷವಾಗಿ ಅಡಿಕೆ ಕಳ್ಳಸಾಗಾಣಿಯಾಗಿ ಬರುತ್ತಿದೆ ಅಂತ ಅಲ್ಲಿನ ಮುಖ್ಯ ಮಂತ್ರಿಗಳೇ ಕೇಂದ್ರಕ್ಕೆ ಮಾಹಿತಿ ಕೊಡುತ್ತಿದ್ದಾರೆ.

ಇದನ್ನೂ ಓದಿ | Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

ಜನಪ್ರತಿನಿಧಿಗಳ ಮೌನ ಏಕೆ?

ಇಷ್ಟೆಲ್ಲ ಆಗುತ್ತಿದ್ದರೂ ಅಡಿಕೆ ಬೆಳೆಯುವ ಕರ್ನಾಟಕದ 17 ಜಿಲ್ಲೆಗಳ ಶಾಸಕರು, ಸಂಸದರು ಘನ ಮೌನವಹಿಸುವುದೇಕೆ!!? ಸ್ಪರ್ಧಾತ್ಮಕವಾಗಿ ಅಥವಾ ಎಲೆಕ್ಷನ್ ಸಮಯವಾದ ದಿನ ಮನದಲ್ಲಿ ರಾಜಕೀಯವಾಗಿ ಪಕ್ಷಗಳ ಗೆಲುವಿನ ಹಿತಾಸಕ್ತಿ ಇಟ್ಕೊಂಡಾದರೂ ಸರಿ, ಎಲ್ಲ 17 ಅಡಿಕೆ ಜಿಲ್ಲೆಗಳ ಕೇಂದ್ರ ಸಂಸದರು, ರಾಜ್ಯ ಶಾಸಕರು ಒಟ್ಟಾಗಿ ಧ್ವನಿ ಎತ್ತಬಾರದಾ?

ಮಾಧ್ಯಮಗಳೇ ದನಿ ಎತ್ತಬೇಕಾ?

ಹೋಟೆಲ್‌ನಲ್ಲಿ ಬಾಂಬ್‌ ಚೀಲ ಇಟ್ಟು ಹೋಗುವ ರೀತಿಯಲ್ಲಿ ದೇಶದ ಪೋರ್ಟ್‌ಗೆ ಅಕ್ರಮ ಅಡಿಕೆ ಮೂಟೆಗಳು ಬಂದು ಬೀಳುತ್ತಿವೆ ಅಂತಾದರೆ, ಅದಕ್ಕೂ ಮೀಡಿಯಾದವರೇ ಡಿಬೇಟ್ ಮಾಡಬೇಕಾ? ಪತ್ರಿಕೆಗಳೇ ದಪ್ಪಕ್ಷರದ ಸುದ್ದಿ ಮಾಡಿ ಸರಕಾರಗಳ ಗಮನ ಸೆಳೆಯಬೇಕಾ? ಇಂಪೋರ್ಟ್ ವ್ಯವಸ್ಥೆಯಲ್ಲಿ ಸಿಸಿ ಕ್ಯಾಮೆರಾ, ಫುಟೇಜು, FSL, ಎಕ್ಸಿಮ್ ಪಾಲಿಸಿ, ಕಾನೂನುಗಳು ಇರೋದಿಲ್ವಾ? ಜನಪ್ರತಿನಿಧಿಗಳಿಗೆ, ಶಾಸಕ ಸಚಿವರುಗಳಿಗೆ ಅವುಗಳ ಬಗ್ಗೆ ಗಮನವಿರುವುದಿಲ್ವಾ? ಅರಿವಿರುವುದಿಲ್ಲವಾ? ಇರಬೇಕಾಗಿಲ್ವಾ!!?

ಕ್ರಿಯಾ ಯೋಜನೆಯನ್ನು ರೂಪಿಸಬಾರದಾ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಆ ವಿಚಾರಗಳು ಮೀಡಿಯಾದಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅದೇ ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ? ಕಳ್ಳ ದಾರಿಯಲ್ಲಿನ ಅಡಿಕೆ ಆಮದನ್ನು ತಡೆಯುವ ಒಂದು ಕ್ರಿಯಾ ಯೋಜನೆಯನ್ನು ರೂಪಿಸಬಾರದಾ? ಪಕ್ಷಾತೀತವಾಗಿ ಅಡಿಕೆ ಬೆಳೆಯುವ 17 ಜಿಲ್ಲೆಗಳ ಸಂಸದರು, ಶಾಸಕರು, ಮಂತ್ರಿಗಳು ಒಟ್ಟಾಗಿ ಅಕ್ರಮ ಅಡಿಕೆ ಆಮದನ್ನು ತಡೆಯುವುದಕ್ಕೆ ಏನಾದರು ಮಾಡಬಾರದಾ?

ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ವಾ? ಆಸಕ್ತಿ ಇಲ್ವಾ? ತಡೆಯುವ ಅಧಿಕಾರ ಇಲ್ವಾ? ರೈತರ ಸಮಸ್ಯೆ ಅರ್ಥವೇ ಆಗ್ತಾ ಇಲ್ವಾ? ಅಥವಾ ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಸುಳ್ಳು ಹೇಳುತ್ತಿವೆ ಅಂತ ಜನ ಪ್ರತಿನಿಧಿಗಳು ಭಾವಿಸಿದ್ದಾರಾ? ಇಲ್ಲಾ, “ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಮತ್ತು ಅಡಿಕೆ ಬೆಳೆಗಾರರೇ ಹೋರಾಟ ಮಾಡಿ ಸರಿ ಮಾಡಿಕೊಳ್ಳುತ್ತಾರೆ, ನಮಗ್ಯಾಕೆ?” ಅಂತ ಅಡಿಕೆ ನಾಡಿನ ಜನಪ್ರತಿನಿಧಿಗಳ ಅಂತರಂಗದ ಭಾವನೆಯಾ? ಇದು ಅಡಿಕೆ ಕಳ್ಳ ಆಮದಿನ ವಿಷಯದಲ್ಲಿ ಮಾತ್ರ ಅಲ್ಲ, ಅಡಿಕೆಯ ಎಲ್ಲ ಸಮಸ್ಯೆಗಳ ವಿಚಾರದಲ್ಲೂ ರಾಜಕಾರಣಿಗಳ ಮನಸ್ಥಿತಿ ಹೀಗೆ ಇದೆ ಎಂಬಂತೆ ಕಾಣಿಸುತ್ತಿದೆ!

ಜನಪ್ರತಿನಿಧಿಗಳೇ ಕೇಳಿ

ಆತ್ಮೀಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳೇ, ಅಡಿಕೆ ಬೆಳೆಗಾರರು ಹೆದರುತ್ತಲೇ (ಅಡಿಕೆ ಸಮಸ್ಯೆಗಳಿಂದ ಜರ್ಜರಿತರಾಗಿ ಹೆದರಿ) ಕೇಳುವ ಇದೊಂದು ಧೈರ್ಯದ ಪ್ರಶ್ನೆಗೆ ನಾಡಿದ್ದು ಪ್ರಿಂಟೆಡ್ ಪ್ರಣಾಳಿಕೆ ಹಿಡ್ಕೊಂಡು, ಕೈ ಮುಗಿದು, ಗುಂಪುಗೂಡಿಕೊಂಡು ಬರುವಾಗ ಈ ಅಡಿಕೆ ಸಮಸ್ಯೆಗಳಿಗೆ ಪರಿಹಾರದ ಉತ್ತರಗಳನ್ನು ಅದೇ ಪ್ರಣಾಳಿಕೆಯ ಜೊತೆ ಸೇರಿಸಿ ತನ್ನಿ. ಅದನ್ನು ಮನೆಯಲ್ಲಿ ಕೊಟ್ಟಿರಿ. ಮನೆಯಲ್ಲಿ ಯಾರೂ ಇಲ್ಲದಿದ್ದರೆ… ಬಾಗಿಲು ಚಿಲಕದಲ್ಲಿ ಸಿಕ್ಕಿಸಿಡಿ!
ಬಹುತೇಕ ರೈತರು ಆ ಸಮಯದಲ್ಲಿ ಮನೆಯಲ್ಲಿ ಇಲ್ಲದಿರಬಹುದು! ಗುಮ್ಮೆಯ ತಳದಲ್ಲಿರುವ ಚೊಂಬು ನೀರನ್ನು ನಾಲ್ಕು ಅಡಿಕೆ ಮರಕ್ಕೆ ಹಂಚಿ ಹಾಕಲು ತೋಟಕ್ಕೆ ಹೋಗಿರಬಹುದು! ಅಥವಾ ಫ್ರೂಟ್ ಐಡಿ, ಬೆಳೆಸರ್ವೆ, ಆಧಾರ್-ಪಹಣಿ ಸೀಡಿಂಗ್, NPCI, KYC ಅಪ್‌ಡೇಷನ್, HSRP, ಪದೇಪದೆ ತಿರುಗಬೇಕಾದ ಪೋಡಿ, ಕಾಂಪ್ಲಿಕೇಟೆಡ್ ವಂಶವೃಕ್ಷ, ಇದ್ದಕ್ಕಿದ್ದಂತೆ ಪಹಣಿಯಲ್ಲಿ ಬೆಳೆ ಕಾಲಮ್‌‌ನಲ್ಲಿದ್ದ ಮಾಯವಾದ ಅಡಿಕೆ, ಸಿಗದ ಇಂಟರ್‌ನೆಟ್, ಸತಾಯಿಸುವ ನೆಟ್ವರ್ಕ್….. ನಂತಹ ನಿತ್ಯ ಜಂಜಾಟ ಹಿಡ್ಕೊಂಡು ಪ್ಯಾಟಿಗೆ ಹೋಗಿರಬಹುದು!

ಒಂದಿಷ್ಟು ಪರಿಹಾರಗಳನ್ನು ತನ್ನಿ

ಮತಭಿಕ್ಷೆಗೆ ಬರುವಾಗ, ರೈತರ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರಗಳನ್ನು ತನ್ನಿ. ತೀರ ಬಿಸಿಲು ಹೊತ್ತಲ್ಲಿ ಬರಬೇಡಿ!! ಅನೇಕ ರೈತರ ಮನೆಗಳಲ್ಲಿ ತೋಟಕ್ಕೆ ಬಿಡಿ, ಕುಡಿಯೋದಕ್ಕೂ ನೀರಿನ ಅಭಾವ ಅನ್ನುವ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ. ನೀವು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಹೊತ್ತು ತುಂಬ ಜನ ಒಟ್ಟಿಗೆ ಬಂದಾಗ ಬಾಯಾರಿದ ನಿಮಗೆ ನೀರು ಕೊಡೋದಕ್ಕೂ ಆಗ್ತಾ ಇಲ್ವಲ್ಲ ಅನ್ನುವ ಭಾವ ರೈತರಿಗೆ ಬರೋದು ಬೇಡ! ಇನ್ಮುಂದೆ ಭರವಸೆ, ಗ್ಯಾರಂಟಿ, ಆಶ್ವಾಸನೆ, ಕುಕ್ಕರ್, ನೋಟು, ಪ್ಯಾಕೇಟು ಯಾವುದೂ ಬೇಡ.

ಇದನ್ನೂ ಓದಿ | Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

ಅಡಿಕೆ ಎಲೆ ಚುಕ್ಕಿ ರೋಗ, ಅಡಿಕೆ YLD, ಅಡಿಕೆ ಕಳ್ಳ ಆಮದು, ಅಡಿಕೆ ಹಾನಿಕಾರಕ, ಅಡಿಕೆ ದರ ಇಳಿತ, ಅಡಿಕೆಗೆ ಮಂಗನ ಕಾಟ, ಅಡಿಕೆ ಮರ ಕಡಿಯುವ ಕಾಡುಕೋಣ, ಅಡಿಕೆ ಮೋಟರ್‌ಗೆ ಕರೆಂಟು, ಸಬ್ಸಿಡಿ ಮೋಸ, ಅಡಿಕೆ ತೋಟಕ್ಕೆ ಬಂದ ಬರ… ಇತ್ಯಾದಿಗಳ ಭೀಕರತೆಯ ಸಮಸ್ಯೆಗಳಿಗೆ ನೀವು ಅಧಿಕೃತ ಪರಿಹಾರದ ಉತ್ತರದೊಂದಿಗೆ ಬರ್ತೀರಿ ಎಂಬ ನಂಬಿಕೆಯ ಮನಸ್ಥಿತಿ ಈಗಲೂ ರೈತರಲ್ಲಿ ಸಾಸಿವೆ ಕಾಳಷ್ಟಾದರೂ ಇದೆ!!

ಅಡಿಕೆ ಅಕ್ರಮ ಆಮದು ತಡೆಯಲು ಕೇಂದ್ರ ಸಚಿವರಿಗೆ ಮನವಿ

ಭಾರತಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದರಿಂದ ಅಡಿಕೆ ಬೆಲೆ ಮತ್ತು ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ನವದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವರಾದ ನಿತ್ಯಾನಂದ ರೈ ಅವರನ್ನು ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದಲ್ಲಿ ಭೇಟಿ ಮಾಡಿ ಅಕ್ರಮ ಆಮದನ್ನು ತಡೆಗಟ್ಟಲು ವಿನಂತಿಸಲಾಯಿತು. ನಿಯೋಗದಲ್ಲಿ ಎಚ್.ಎಸ್.ಮಂಜಪ್ಪ, ಹೊಸಬಾಳೆ, ಅಧ್ಯಕ್ಷರು ಕ್ರ್ಯಾಮ್, ಸುಬ್ರಹ್ಮಣ್ಯ ಯಡಗೆರೆ, ನಿರ್ದೇಶಕರು, ಮಾಮ್ ಕೋಸ್/ಅಧ್ಯಕ್ಷರು, ಮಹಾಮಂಡಲ, ಇಂಧೂದರಗೌಡ, ಅಧ್ಯಕ್ಷರು, ಆಪ್ಕೋಸ್, ಸಾಗರ, ಶ್ರೀಕಾಂತ್ ಬರುವೆ, ವ್ಯವಸ್ಥಾಪಕ ನಿರ್ದೇಶಕರು, ಮಾಮ್ ಕೋಸ್, ವಿಜಯಾನಂದ ಭಟ್, ಪ್ರಧಾನ ವ್ಯವಸ್ಥಾಪಕರು , ಟಿಎಸ್ಎಸ್, ಶಿರಸಿ ಇವರು ಉಪಸ್ಥಿತರಿದ್ದರು.

Continue Reading

ಬೆಂಗಳೂರು

CM Siddaramaiah : ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ; ಸಿದ್ದರಾಮಯ್ಯ ಭರವಸೆ

CM Siddaramaiah : ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅವರು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

VISTARANEWS.COM


on

CM Siddaramaiah Pro Nanjundaswamy
Koo

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಯಗಳನ್ನು (Demands of Farmers) ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ (Land Reform Act 2020) ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂ ಪಾರ್ಕ್ ನಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.

CM Siddaramaiah Pro Nanjundaswamy

ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು ಎಂದರು.

ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಇವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ನಂಜುಂಡಸ್ವಾಮಿ ಮತ್ತು ರೈತ ಹೋರಾಟ ಸಮಾಜ ಮತ್ತು ಸರ್ಕಾರಗಳ ಮೇಲೆ ಪರಿಣಾಮ ಬೀರಿದೆ ಎಂದರು. ನಂಜುಂಡ ಸ್ವಾಮಿಯವರ ರೈತ ಹೋರಾಟ ನನಗೆ ರಾಜಕೀಯ ಪ್ರೇರಣೆ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.

CM Siddaramaiah Pro Nanjundaswamy

ಇದನ್ನೂ ಓದಿ : CM Janaspandana: ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಬಡಗಲಾಪುರ ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ರೈತ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕರಾದ ಕುಮಾರ್ ಸಮತಳ ಸೇರಿ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Continue Reading
Advertisement
ಕರ್ನಾಟಕ4 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Neha Hiremttt
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Narendra Modi
ದೇಶ4 hours ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ5 hours ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ5 hours ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Ballari Lok Sabha constituency Congress candidate e Tukaram Election campaign
ಬಳ್ಳಾರಿ5 hours ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 20245 hours ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ5 hours ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ5 hours ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ6 hours ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ13 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ23 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌