Site icon Vistara News

ಡಾ.ಬಿ.ಆರ್. ಅಂಬೇಡ್ಕರ್‌ ಜನ್ಮದಿನ: ಮಹಾನಾಯಕನ 17 ನುಡಿಮುತ್ತುಗಳು

Dr.B.R.Ambedkar

1. ಧರ್ಮ ಇರಬೇಕಾದುದು ತತ್ವವಾಗಿ, ಹೊರತು ನಿಯಮಾವಳಿಯಾಗಿ ಅಲ್ಲ. ಅದು ಕಡ್ಡಾಯ ನಿಯಮಗಳಾಗಿ ಮಾರ್ಪಾಡಾದ ಕೂಡಲೇ ಧರ್ಮ ಎನಿಸುವ ಅರ್ಹತೆ ಕಳೆದುಕೊಳ್ಳುತ್ತದೆ. ನೈಜ ಧರ್ಮದ ಆಂತರಂಗಿಕ ಸ್ಫೂರ್ತಿಯನ್ನೇ ಕಳೆದುಕೊಳ್ಳುತ್ತದೆ.


2. ಸಾಗರದಲ್ಲಿ ಒಂದಾಗಿ ಅಸ್ತಿತ್ವ ಕಳೆದುಕೊಳ್ಳುವ ಹನಿಯಂತಲ್ಲ ಮನುಷ್ಯ. ಆತ ಸಮಾಜದಲ್ಲಿ ಬೆರೆತಿದ್ದರೂ ತನ್ನ ಅನನ್ಯತೆ ಕಾಪಾಡಿಕೊಳ್ಳುತ್ತಾನೆ. ಆತ ಸಮಾಜದ ಬೆಳವಣಿಗೆಗಾಗಿ ಹುಟ್ಟುವುದಲ್ಲ, ತನ್ನ ಬೆಳವಣಿಗೆಗಾಗಿ.


3. ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಜತೆಯಾಗಿ ಬಾಳುವ ವಿಧಾನ, ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮ.


4. ನಾನು ಒಂದು ಸಮುದಾಯದ ಬೆಳವಣಿಗೆಯನ್ನು ಅಳೆಯುವುದು ಅಲ್ಲಿರುವ ಮಹಿಳೆಯರು ಎಷ್ಟು ಪ್ರಮಾಣದ ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೇಲೆ.


5. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಲೇಬೇಕು. ಅದರಿಂದಲೇ ನಮಗೆ ಅಧಿಕಾರ, ಘನತೆ ದೊರೆಯುತ್ತದೆ. ಹೋರಾಡದವನಿಗೆ ಏನೂ ದೊರೆಯುವುದಿಲ್ಲ.


6. ಮನುಷ್ಯರು ಸಾವಿಗೆ ಈಡಾಗುವವರು. ಚಿಂತನೆಗಳೂ ಹಾಗೆಯೇ. ಸಸಿಗಳಿಗೆ ನೀರು ಎರೆಯುವಂತೆ ಚಿಂತನೆಗಳಿಗೂ ಬೆಳೆಯಲು ಪೋಷಣೆ ಬೇಕು.


7. ಸಂಪೂರ್ಣ ಸಮಾನತೆ ಎಂಬುದು ಕಲ್ಪನೆಯೇ ಇರಬಹುದು. ಆದರೆ ಅದನ್ನು ಆಡಳಿತ ತತ್ವವಾಗಿ ನಾವು ಅಂಗೀಕರಿಸಲೇಬೇಕು.


8. ಎಲ್ಲರೂ ಮೊತ್ತಮೊದಲಿಗೆ ಭಾರತೀಯರಾಗಿರಬೇಕು, ಕೊನೆಗೂ ಭಾರತೀಯರಾಗಿರಬೇಕು, ಭಾರತೀಯರಲ್ಲದೆ ಇನ್ನೇನೂ ಆಗಿರಬೇಕಿಲ್ಲ.


9. ವಿಜ್ಞಾನದ ಕ್ಷೇತ್ರದಲ್ಲಿ ಭಾವನೆಗಳನ್ನು ದೂರವಿಡಬೇಕು. ಅಲ್ಲಿ ವಸ್ತುನಿಷ್ಠ ನೆಲೆಯಿಂದ ಸಂಗತಿಗಳನ್ನು ಪರಾಮರ್ಶಿಸಬೇಕು.


10. ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯದೇ ಹೋದರೆ, ನಾವು ಕಾನೂನಾತ್ಮಕವಾಗಿ ಎಂಥ ಸ್ವಾತಂತ್ರ್ಯವನ್ನು ಪಡೆದರೂ ಉಪಯೋಗವಿಲ್ಲ.


11. ಸಂವಿಧಾನದ ದುರುಪಯೋಗ ಆಗುವಂತಿದೆ ಎನಿಸಿದರೆ, ಅದನ್ನು ಸುಟ್ಟುಹಾಕುವಲ್ಲಿ ನಾನೇ ಮೊದಲಿಗನಾಗಿರುತ್ತೇನೆ.


12. ಇತಿಹಾಸವನ್ನು ಮರೆಯುವವರು ಇತಿಹಾಸವನ್ನು ಸೃಷ್ಟಿಸಲಾರರು.


13. ವ್ಯಕ್ತಿಯ ಜೀವನ ಸುದೀರ್ಘವಾಗಿರಬೇಕಿಲ್ಲ. ಆದರೆ ಅತ್ಯುತ್ತಮವಾಗಿರಬೇಕು.


14. ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಹೋದರ್ಯವನ್ನು ಪ್ರತಿಪದಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ.


15. ಮನಸ್ಸಿನ ಸಂಸ್ಕೃತಿಯ ಉನ್ನತಿಯೇ ಮಾನವನ ಅಸ್ತಿತ್ವದ ಪರಮ ಗುರಿಯಾಗಿರಬೇಕು.


16. ಅಸ್ಪೃಶ್ಯತೆಯು ಮನುಷ್ಯರನ್ನು ಬಾಧಿಸಬಹುದಾದ ಅತೀ ಕೆಟ್ಟ ಕಾಯಿಲೆ.


17. ಧರ್ಮ ಹಾಗೂ ಜೀತಗಳು ಜೊತೆಯಾಗಿ ಇರಲಾರವು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

Exit mobile version