Site icon Vistara News

Salman Rushdie: ಭಾರತೀಯ ಮೂಲದ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿಗೆ ಪ್ರತಿಷ್ಠಿತ ಜರ್ಮನ್ ಶಾಂತಿ ಪುರಸ್ಕಾರ

Salman Rushdie

ನವದೆಹಲಿ: ಭಾರತೀಯ ಮೂಲದ ಕಾದಂಬರಿಕಾರ ಪ್ರಸಿದ್ಧ ಸಲ್ಮಾನ್ ರಶ್ದಿ (Salman Rushdie) ಅವರಿಗೆ 2023ರ ಸಾಲಿನ ಪ್ರತಿಷ್ಠಿತ ಜರ್ಮನ್ ಶಾಂತಿ ಪುರಸ್ಕಾರ (German peace prize 2023) ಲಭಿಸಿದೆ. ಲೇಖಕ ಸಲ್ಮಾನ್ ರಶ್ದಿ ಅವರ ಸಾಹಿತ್ಯಿಕ ಕೆಲಸಕ್ಕಾಗಿ ಮತ್ತು ನಿರಂತರ ಅಪಾಯದ ನಡುವೆಯೂ ಅವರ ಸಂಕಲ್ಪ ಮತ್ತು ಸಕಾರಾತ್ಮಕ ಮನೋಭಾವಕ್ಕಾಗಿ ಪ್ರತಿಷ್ಠಿತ ಜರ್ಮನ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿಯ ಸಂಘಟಕರು ತಿಳಿಸಿದ್ದಾರೆ.

ಜರ್ಮನ್ ಬುಕ್ ಟ್ರೇಡ್‌ನ ಈ ಶಾಂತಿ ಪ್ರಶಸ್ತಿ ಪ್ರದಾನವು ಮುಂಬರುವ ಅಕ್ಟೋಬರ್‌ 22ರಂದು, ಫ್ರಾಂಕ್‌ಫರ್ಟ್‌ ನಗರದಲ್ಲಿ ನಡೆಯಲಿದೆ. ಅಂದು ಲೇಖಕ ಸಲ್ಮಾನ್ ರಶ್ದಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ರಶ್ದಿಯವರ ಸಾಹಿತ್ಯವು ನಿರೂಪಣೆಯ ದೃಷ್ಟಿಯನ್ನು ನಿರಂತರ ಸಾಹಿತ್ಯದ ನಾವೀನ್ಯತೆ, ಹಾಸ್ಯ ಮತ್ತು ಬುದ್ಧಿವಂತಿಕೆಯೊಂದಿಗೆ ಸಂಯೋಜಿಸುತ್ತದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಹಿಂಸಾತ್ಮಕ ಆಡಳಿತಗಳು ಇಡೀ ಸಮಾಜಗಳನ್ನು ನಾಶಪಡಿಸುವ ಶಕ್ತಿಯನ್ನು ಅವರು ವಿವರಿಸುತ್ತಾರೆ. ಆದರೆ ವ್ಯಕ್ತಿಯ ಪ್ರತಿರೋಧದ ಮನೋಭಾವದ ಸಹ ವಿವರಿಸುತ್ತಾರೆ ತೀರ್ಪುಗಾರರ ಮಂಡಳಿ ಹೇಳಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಸಲ್ಮಾನ್ ರಶ್ದಿ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿತ್ತು. ಅವರಿಗ ಚಾಕು ಇರಿಯಲಾಗಿತ್ತು. ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಸುದ್ದಿಯನ್ನೂ ಓದಿ: Salman Rushdie attack | ಸಲ್ಮಾನ್ ರಶ್ದಿ ದಾಳಿಕೋರನ ವಿರುದ್ಧ ಕೊಲೆ ಯತ್ನ ಕೇಸ್‌ ದಾಖಲು

ದೈಹಿಕ ಮತ್ತು ಮಾನಸಿಕ ಹೊಡೆತಗಳ ಹೊರತಾಗಿಯೂ ಸಲ್ಮಾನ್ ರಶ್ದಿ ಅವರು ಈಗಲೂ ತಮ್ಮ ಬರವಣೆಯ ನಿರಂತರತೆಯನ್ನು ಕಾಯ್ದುಕೊಡಿದ್ದಾರೆ. ಅದನ್ನು ಆಳವಾದ ಮಾನವೀಯ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಸಲ್ಮಾನ್ ರಶ್ದಿ ಅವರ ಸಂಕಲ್ಪ, ಜೀವನದ ಬಗ್ಗೆ ಅವರ ಸಕಾರಾತ್ಮಕ ಮನೋಭಾವ ಮತ್ತು ಅವರು ನಿರೂಪಣೆಯಲ್ಲಿ ಅವರ ಸಂತೋಷದಿಂದ ಜಗತ್ತನ್ನು ಶ್ರೀಮಂತಗೊಳಿಸುವುದಕ್ಕಾಗಿ ನಾವು ಅವರನ್ನು ಗೌರವಿಸುತ್ತೇವೆ ಎಂದು ತೀರ್ಪುಗಾರರು ಹೇಳಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version