Site icon Vistara News

ನಾಡದೇವಿ ಚಿತ್ರ ಈಗ ಅಧಿಕೃತ; ಶಾಲೆ-ಕಾಲೇಜು-ಕಚೇರಿಯಲ್ಲಿ ಅಳವಡಿಕೆ ಕಡ್ಡಾಯ: ಮುಖದಲ್ಲಿ ಬದಲಾವಣೆ ಮಾಡಿ ಸರ್ಕಾರದ ಆದೇಶ

Karnataka Govt ordered karnataka mathe official painting

#image_title

ಬೆಂಗಳೂರು: ಕರ್ನಾಟಕ ಸರ್ಕಾರದ ಕಚೇರಿಗಳಲ್ಲಿ ಅಳವಡಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದ್ದ ನಾಡದೇವಿಯ ಭಾವಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಿದೆ. ಆದರೆ 2022ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದ ನಾಡದೇವಿಯ ಭಾವಚಿತ್ರದಲ್ಲಿನ ಮುಖ ಹಾಗೂ ಒಟ್ಟಾರೆ ಚಿತ್ರದ ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ವಿಭಿನ್ನ ರೀತಿಯಲ್ಲಿ ಕರ್ನಾಟಕ ಮಾತೆಯ (ನಾಡದೇವಿಯ) ಚಿತ್ರಗಳಿರುವುದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಡದೇವಿಯ ಹೊಸ ಚಿತ್ರವನ್ನು ಅಧಿಕೃತಗೊಳಿಸಲು ನವೆಂಬರ್‌ನಲ್ಲಿ ಒಪ್ಪಿತ್ತು

ಚಿತ್ರವನ್ನು ರಚಿಸುವ ಸಲುವಾಗಿ ಅಂದಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿಯಲ್ಲಿ ಡಾ. ಚೂಡಾಮಣಿ ನಂದಗೋಪಾಲ್, ಎಚ್.ಎಚ್.‌ಮ್ಯಾದರ್, ಬಾಬು ನಡೋಣಿ, ವಿ.ಎಸ್. ಕಡೇಮನಿ ಸದಸ್ಯರಾಗಿದ್ದರು. ಕಲಾವಿದ ಕೆ. ಸೋಮಶೇಖರ್‌(ಚಿತ್ರ ಸೋಮು) ಅವರಿಂದ ರಚಿತವಾದ ಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಒಪ್ಪಿ, ಅಂತಿಮ ಆದೇಶಕ್ಕೆ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು.

ಸರ್ಕಾರ ಅಧಿಕೃತಗೊಳಿಸಿರುವ ಚಿತ್ರ

ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಚಿತ್ರ

ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಜನವರಿ 21ರಂದೇ ಈ ಕುರಿತು ಆದೇಶ ಹೊರಡಿಸಲಾಗಿದೆ. ಅಧಿಕೃತ ಭಾವಚಿತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

ಮುಖದಲ್ಲಿ ಬದಲಾವಣೆ

ಈ ಹಿಂದೆ ಬಿಡುಗಡೆ ಮಾಡಿದ್ದ ಚಿತ್ರಕ್ಕೂ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿರುವ ಚಿತ್ರಕ್ಕೂ ಕೆಲ ವ್ಯತ್ಯಾಸವಿದೆ. ನಾಡದೇವಿಯ ಮುಖಭಾವ ಹಾಗೂ ಕಣ್ಣಿನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಬಣ್ಣವನ್ನು ಸ್ವಲ್ಪ ಗಾಢವಾಗಿಸಲಾಗಿದೆ. ನಾಡಿನ ವಿವಿಧೆಡೆಯಿಂದ ಈ ಕುರಿತು ಲಭಿಸಿದ ಸಲಹೆ ಮೇರೆಗೆ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.

Exit mobile version