Site icon Vistara News

ಇನ್ನೂ ಮಾಸದ ನೆನಪು King Of Pop

King of Pop

ಮೈಕೆಲ್ ಜೋಸೆಫ್ ಜಾಕ್ಸನ್ ಅಮೆರಿಕನ್ ಪಾಪ್‌ ಗಾಯಕ, ಗೀತೆ ರಚನೆಕಾರ, ನರ್ತಕ. 1958ರ ಆಗಸ್ಟ್‌ 29ರಂದು ಇಂಡಿಯಾನಾದ ಗ್ಯಾರಿಯಲ್ಲಿ ಜನಿಸಿದ್ದರು.

ಆಫ್ರಿಕನ್- ಅಮೆರಿಕನ್‌ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ʼಮೈಕೆಲ್ ಜಾಕ್ಸನ್ʼ, ಕುಟುಂಬದ ಹತ್ತು ಮಕ್ಕಳಲ್ಲಿ ಎಂಟನೆಯವರು. “ಕಿಂಗ್ ಆಫ್ ಪಾಪ್” ಎಂಬ ಉಪನಾಮ ಹೊಂದಿರುವ ಮೈಕೆಲ್ 20ನೇ ಶತಮಾನದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು.

ತನ್ನ 5ನೇ ವಯಸ್ಸಿನಲ್ಲಿಯೇ ತನ್ನ ಸಹೋದರ ಜತೆಗೂಡಿ Jackson brothers Band ತಂಡಕ್ಕೆ ಸೇರಿ ಹಾಡಲು ಆರಂಭಿಸಿದ್ದರು. ನಂತರದಲ್ಲಿ Band ಹೆಸರನ್ನು Jackson5 ಎಂದು ಬದಲಿಸಿದ್ದರು.

1972ರಲ್ಲಿ Got to Be There ಮೈಕೆಲ್ ಅವರು ಹಾಡಿದ ಮೊದಲ ಸೋಲೊ ಸಾಂಗ್‌.

ಮೈಕೆಲ್ ಜಾಕ್ಸನ್ American Music Award (26), Billboard Award (17) , Brit Award (6), MOBO Awards (1), Grammy Award (13 ), Dhanish Music Award(2) ತಮ್ಮದಾಗಿಸಿಕೊಂಡಿದ್ದಾರೆ.
ಮೈಕೆಲ್ ಜಾಕ್ಸನ್ ಹೆಸರಲ್ಲಿ 40 ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ಗಳಿವೆ.

1983ರಲ್ಲಿ Billie Jean ಹಾಡಿನ ವೇಳೆ ಮೊದಲ ಬಾರಿ “Moonwalk” ಪ್ರದರ್ಶಿಸಿದ ಜಾಕ್ಸನ್.

1984ರಲ್ಲಿ ಪೆಪ್ಸಿ ಕಂಪನಿಯ ಲಾಸ್‌ ಏಂಜಲೀಸ್‌ನ ಕಾರ್ಯಕ್ರಮದಲ್ಲಿ ಜಾಕ್ಸನ್‌ ಅವರ ತಲೆಗೂದಲು ಹಾಗೂ ಮುಖ ಸುಟ್ಟು ಹೋಗಿತ್ತು. ಆ ಬಳಿಕ ಎರಡು ಬಾರಿ ಪ್ಲಾಸ್ಟಿಕ್‌ ಸರ್ಜರಿಗೆ ಒಳಗಾಗಿದ್ದರು.

1994ರಲ್ಲಿ Lisa Marie ಜತೆ ವಿವಾಹ, 1996ಲ್ಲಿ ವಿಚ್ಚೇಧನ. 1997ರಲ್ಲಿ Debbi Rowe ಜತೆ ಮದುವೆ. ಅವರಿಗೆ Prince Jackson ಮತ್ತು Paris Jackson ಎಂಬ ಮಕ್ಕಳಿದ್ದಾರೆ. 1999ರಲ್ಲಿ ಅವರೂ ಬೇರ್ಪಟ್ಟಿದ್ದರು.

2009ರ ಜೂನ್‌ 25ರಂದು ತಮ್ಮ 50ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದ ಮೈಕೆಲ್‌ ಜಾಕ್ಸನ್‌.

ಇದನ್ನೂ ಓದಿ| Happy Birthday@ಚಿರಂಜೀವಿ

Exit mobile version