Site icon Vistara News

Nobel Prize 2023: ನಾರ್ವೆ ನಾಟಕಕಾರ ಜಾನ್ ಫೋಸ್ಸೆಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ, ಸಲ್ಮಾನ್ ರಶ್ದಿಗೆ ಮಿಸ್!

Norwegian Dramatist Job Fosse wins Nobel prize 2023

ಸ್ಟಾಕ್ ಹೋಮ್: ನಾರ್ವೆ ಕಾಂದಬರಿಕಾರ ಹಾಗೂ ನಾಟಕಕಾರ ಜಾನ್ ಫೋಸ್ಸೆ (Norwegian author and Author Jon Fosse) ಅವರಿಗೆ 20203ರ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು (Nobel Prize in Literature) ಸ್ವಿಡಿಷ್ ಅಕಾಡೆಮಿ (Swedish Academy) ಗುರುವಾರ ಘೋಷಣೆ ಮಾಡಿದೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ. ನೊಬೆಲ್ ಪ್ರಶಸ್ತಿ ಅಕಾಡೆಮಿಯು ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಅನುವಾದಗಳನ್ನು ಒಳಗೊಂಡಂತೆ ನಾರ್ವೇಜಿಯನ್ ನೈನೋರ್ಸ್ಕ್‌ನಲ್ಲಿ ಬರೆದ ಫೊಸ್ಸೆ ಅವರ ಕೃತಿಯನ್ನು ಗೌರವಿಸಿದೆ(Nobel Prize 2023).

ಜಾನ್ ಫೋಸ್ಸೆ ಅವರು ಇಂದು ವಿಶ್ವದ ಅತ್ಯಂತ ವ್ಯಾಪಕವಾಗಿ ಪ್ರದರ್ಶನಗೊಂಡ ನಾಟಕಕಾರರಲ್ಲಿ ಒಬ್ಬರಾಗಿರುವಾಗಲೂ ಅವರು ತಮ್ಮ ಗದ್ಯ ಬರಹಗಳಿಂದಲೂ ಹೆಚ್ಚು ಗುರುತಿಸಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದು ಅಂತಿಮ ಕ್ಷಣದವರೆಗೂ ಗೊತ್ತಾಗುವುದಿಲ್ಲ. ಆದರೆ, ಪ್ರೈಜ್ ಬೆಟ್ಟಿಂಗ್ ಸೈಟ್‌ಗಳ ಪ್ರಕಾರ, ಜಾನ್ ಫೋಸ್ಸೆ ಅವರೇ ಮುಂಚೂಣಿಯಲ್ಲಿದ್ದರು. ಅಲ್ಲದೇ ಚೀನೀಯ ಫಿಕ್ಷನ್ ರೈಟರ್ ಕ್ಯಾನ್ ಕ್ಸುಮ ಮತ್ತು ಕೆನ್ನಿಯನ್ ರೈಟರ್ ಗುಗಿ ವಾ ಥಿಯಾಂಗ್ ಅವರು ರೇಸ್‌ನಲ್ಲಿದ್ದರು. ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಮತ್ತು ಥಾಮಸ್ ಪಿಂಚಾನ್ ಅವರು ಹೆಸರಗಳೂ ಬುಕಿಗಳ ಮಧ್ಯೆ ಓಡಾಡುತ್ತಿದ್ದವು.

ಅಮೆರಿಕದ ಮೌಂಗಿ ಬವೆಂಡಿ, ಲೂಯಿಸ್ ಬ್ರಸ್, ಅಲೆಕ್ಸಿ ಎಕಿಮೊವ್‌ಗೆ ಕೆಮೆಸ್ಟ್ರಿ ನೊಬೆಲ್ ಪ್ರಶಸ್ತಿ

ಕ್ವಾಂಟಮ್ ಡಾಟ್ಸ್‌ (quantum dots) ಎಂದು ಕರೆಯಲಾಗುವ ಟಿನ್ನಿ ಪಾರ್ಟಿಕಲ್ಸ್ ಕುರಿತಾದ ಸಂಶೋಧನೆಗಾಗೆ ಫ್ರೆಂಚ್ ಮೂಲಕ ಮೌಂಗಿ ಬವೆಂಡಿ(Moungi Bawendi), ಅಮೆರಿಕದ ಲೂಯಿಸ್ ಬ್ರಸ್ (Louis Brus) ಮತ್ತು ರಷ್ಯನ್ ಮೂಲದ ಅಲೆಕ್ಸಿ ಎಕಿಮೂವ್ (Alexei Ekimov) ಅವರಿಗೆ 2023ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಮೂವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಘೋಷಣೆಗೂ ಮೊದಲೇ ಈ ಮೂವರ ಹೆಸರುಗಳು ಸ್ವೀಡಿಸ್‌ ಪತ್ರಿಕೆಗಳಲ್ಲಿ ಸೋರಿಕೆಯಾಗಿದ್ದವು. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಕ್ವಾಂಟಮ್ ಡಾಟ್ಸ್ ಉತ್ಪಾದನೆಯಲ್ಲಿ ಸಕ್ಸೆಸ್ ಆಗಿದೆ. ಈಗ ಟೆಲಿವಿಷನ್ ಮತ್ತು ಎಲ್‌ಇಡಿ ಬಲ್ಬಗಳಲ್ಲಿ ಬೆಳಕು ಹರಡಲು ಮತ್ತು ಗೆಡ್ಡೆಯ ಅಂಗಾಂಶಗಳನ್ನು ತೆಗೆಯಲು ಶಸ್ತ್ರಚಿಕಿತ್ಸಕರಿಗೆ ಮಾರ್ಗದರ್ಶನ ಸೇರಿದಂತೆ ಅನೇಕ ರೀತಿಯಲ್ಲಿ ನೆರವಿಗೆ ಕಾರಣವಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ಹೇಳಿದೆ(Nobel Prize 2023).

ಅಗೋಸ್ಟಿನಿ, ಕ್ರೌಸ್ಟ್, ಎಲ್‌’ಹುಲ್ಲಿಯರ್‌ಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ

2023ರ ಸಾಲಿನ ನೊಬೆಲ್ ಪ್ರಶಸ್ತಿ (Nobel Prize 2023) ಘೋಷಣೆಯಾಗುತ್ತಿದ್ದು, ಫ್ರಾನ್ಸ್‌ನ ಪಿಯರೆ ಅಗೋಸ್ಟಿನಿ(Pierre Agostini), ಹಂಗೇರಿ-ಆಸ್ಟ್ರಿಯಾದ ಫೆರೆಂಕ್ ಕ್ರೌಸ್ಟ್ (Ferenc Krausz) ಮತ್ತು ಫ್ರಾನ್ಸ್-ಸ್ವೀಡನ್‌ನ ಆನ್ನೆ ಎಲ್’ಹುಲ್ಲಿಯರ್ (Anne L’ Huillier) ವಿಜ್ಞಾನಿಗಳಿಗೆ ಸೋಮವಾರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ವಸ್ತುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ಪಲ್ಸ್ ಅನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Nobel Peace Prize: 20ನೇ ಶತಮಾನದ ಮೇರು ನಾಯಕ ‘ಮಹಾತ್ಮ ಗಾಂಧಿ’ಗೇಕೆ ಸಿಗಲಿಲ್ಲ ನೊಬೆಲ್ ಪ್ರಶಸ್ತಿ?

ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್

ತ್ವರಿತ ಕೋವಿಡ್ ವ್ಯಾಕ್ಸಿನ್ (Covid Vaccine) ‌ತಯಾರಿಕೆಗೆ ದಾರಿ ಮಾಡಿಕೊಟ್ಟ ಮೆಂಸೆಂಜರ್ ಆರ್‌ಎನ್ಎ(mRNA) ತಂತ್ರಜ್ಞಾನದ ಕೆಲಸಕ್ಕಾಗಿ ಕಟಲಿನ್ ಕರಿಕೊ (Katalin Kariko) ಮತ್ತು ಡ್ರೂ ವೈಸ್‌ಮನ್ (Drew Weissman) ಅವರಿಗೆ ವೈದ್ಯಕೀಯ (Medicine) ನೊಬೆಲ್ ಪುರಸ್ಕಾರ ಲಭಿಸಿದೆ(Nobel Prize 2023). ಆಧುನಿಕ ಕಾಲದ ಮಾನವ ಆರೋಗ್ಯಕ್ಕೆ ದೊಡ್ಡ ಬೆದರಿಕೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ಅಭೂತಪೂರ್ವ ಕಾಣಿಕೆಯನ್ನು ಮೆಂಸೆಂಜರ್ ಆರ್‌ಎನ್ಎ ನೀಡಿದೆ ಎಂದು ತೀರ್ಪುಗಾರರ ಸಮಿತಿ ಹೇಳಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸುವಾಗ ದಶಕಗಳ ಹಳೆಯ ಸಂಶೋಧನೆಯನ್ನು ಗೌರವಿಸುವ ತನ್ನ ಸಂಪ್ರದಾಯವನ್ನು ನೊಬೆಲ್ ಸಮಿತಿ ಈ ಬಾರಿ ಕೈ ಬಿಟ್ಟಿದೆ. ಬಹುಮಾನ ವಿಜೇತ ವಿಜ್ಞಾನವು 2005ರ ಹಿಂದಿನದ್ದಾರೂ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಫೈಜರ್/ಬಯೋಎನ್‌ಟೆಕ್ ಮತ್ತು ಮಾಡರ್ನಾ ಕೋವಿಡ್ ಲಸಿಕೆಗಳನ್ನು ತಯಾರಿಸಿದವು.

Exit mobile version