Site icon Vistara News

ಸಿಂಗಾಪುರ ಡೆಪ್ಯುಟಿ ಪಿಎಂ ಸಿತಾರ ಪ್ರೀತಿಗೆ ಪ್ರಧಾನಿ ಮೋದಿ ಶರಣು!

PM Modi praises Singapore Deputy PM Playing sitar and shared post

ನವದೆಹಲಿ: ಭಾರತೀಯ ಸಂಗೀತ (Indian Music) ವಾದ್ಯ ಸಿತಾರ್ (Sitar) ಕಲಿಯುತ್ತಿರುವ ಸಿಂಗಾಪುರದ ಉಪ ಪ್ರಧಾನ ಮಂತ್ರಿ ಲಾರೆನ್ಸ್ ವಾಂಗ್ (Singapore Deputy PM Lawrence Wong) ಅವರಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಜತೆಗೆ, ಸಂಗೀತದೆಡೆಗೆ ವಾಂಗ್ ಅವರ ಸೆಳೆತ ಮತ್ತು ಅವರು ಈ ಪ್ರಕ್ರಿಯೆಯಲ್ಲಿ ಯಶಸ್ಸು ಸಾಧಿಸಲಿ ಎಂದು ಪ್ರಧಾನಿ ಮೋದಿ (PM Modi) ಅವರು ಹೇಳಿದ್ದಾರೆ.

ವಾಂಗ್ ಅವರು ಸಿತಾರ್‌ನ ಮೂಲ ತಂತ್ರಗಳನ್ನು ಕಲಿಯುತ್ತಿರುವ ವೀಡಿಯೊವನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಸಿತಾರ್ ನುಡಿಸುತ್ತಿರುವುದನ್ನು ಕಾಣಬಹುದು. ಸಿಂಗಾಪುರ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು “ಸಿತಾರ್‌ನ ಸುಂದರವಾದ ಟ್ಯೂನ್‌ಗಳ ಪರಿಚಯವನ್ನು ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿ ಕಾರ್ತಿಗಯನ್ ಅವರು ಸ್ವಲ್ಪ ಸಮಯದವರೆಗೆ ಕಲಿಸುತ್ತಿದ್ದಾರೆ. ಸಂಗೀತದ ಕೆಲವು ಮೂಲಭೂತ ತಂತ್ರಗಳ ಮೂಲಕ ನನಗೆ ಮಾರ್ಗದರ್ಶನ ನೀಡುವಲ್ಲಿ ಅವರು ತುಂಬಾ ತಾಳ್ಮೆಯಿಂದಿದ್ದಾರೆ. ಅನುಭವವನ್ನು ಆನಂದಿಸಿದೆ ಮತ್ತು ಶ್ರೀಮಂತ ಶಾಸ್ತ್ರೀಯ ಭಾರತೀಯ ಸಂಗೀತ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಸಿಗುತ್ತಿದೆ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಸೀತಾರ ಕಲಿಯುತ್ತಿರುವ ಸಿಂಗಾಪುರ ಡೆಪ್ಯುಟಿ ಪಿಎಂ

ಎಕ್ಸ್ ವೇದಿಕೆಯಲ್ಲಿ ವಾಂಗ್ ಮಾಡಿದ್ದ ಪೋಸ್ಟ್ ಅನ್ನು ಮರು ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, “ಸಿತಾರ್ ಮೇಲಿನ ನಿಮ್ಮ ಉತ್ಸಾಹವು ಇನ್ನಷ್ಟು ಬೆಳೆಯಲಿ ಮತ್ತು ಇತರರಿಗೆ ಸ್ಫೂರ್ತಿ ನೀಡಲಿ. ಈ ಮಧುರ ಪ್ರಯತ್ನಕ್ಕೆ ಶುಭಾಶಯಗಳು. ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದೆ, ಅದು ಲಯಗಳ ಮೂಲಕ ಪ್ರತಿಧ್ವನಿಸುತ್ತದೆ. ಸಹಸ್ರಮಾನಗಳಿಂದ ವಿಕಸನಗೊಂಡಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಪೋಸ್ಟ್ ಅನ್ನು ನವೆಂಬರ್ 14ರಂದು ಮರು ಹಂಚಿಕೊಂಡಿದ್ದರು. ಅಲ್ಲಿಂದ ಈ ವಿಡಿಯೋಗೆ ಹತ್ತು ಲಕ್ಷಕ್ಕೂ ಅಧಿಕ ವಿವ್ಸ್ ಬಂದಿದೆ. ಅಲ್ಲದೇ, ಬಹಳಷ್ಟು ಕಮೆಂಟ್ ಹಾಗೂ ಲೈಕ್ಸ್ ಕೂಡ ಬಂದಿದೆ.

ಸಿಂಗಾಪುರ ಡೆಪ್ಯುಟಿ ಪಿಎಂ ಪೋಸ್ಟ್ ಷೇರ್ ಮಾಡಿದ ಪ್ರಧಾನಿ ಮೋದಿ

ವ್ಯಕ್ತಿಯೊಬ್ಬರು ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದು, ನಿಮ್ಮ ಸಿತಾರ್‌ನ ತಂತಿಗಳು ಭಾರತದ ಸಂಗೀತ ಪರಂಪರೆಯ ಶ್ರೀಮಂತ ವೈವಿಧ್ಯತೆಯನ್ನು ಪ್ರತಿಧ್ವನಿಸುತ್ತಾ ಕಾಲಾತೀತ ಮಧುರ ಗೀತೆಗಳನ್ನು ನೇಯ್ಗೆ ಮಾಡಲಿ. ನಿಮ್ಮ ಉತ್ಸಾಹವು ಎಲ್ಲರಿಗೂ ಸ್ಫೂರ್ತಿಯಾಗಿದೆ. ಈ ಮಧುರ ಪ್ರಯಾಣಕ್ಕೆ ಶುಭಾಶಯಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು ಕಿವಿಗೆ ಎಂಥಾ ಇಂಪು, ಅದ್ಭುತ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ನೀವು ತುಂಬಾ ಚೆನ್ನಾಗಿ ನುಡಿಸುತ್ತಿದ್ದೀರಿ, ನಿಮ್ಮ ಸಂಗೀತ ಇಷ್ಟ ಆಯ್ತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: World Culture Festival: ಸಂಗೀತ, ನೃತ್ಯಗಳ ಮೂಲಕ ‘ವಸುದೈವ ಕುಟುಂಬಕಂ’ ಸಂದೇಶ ಸಾರಿದ ವಿಶ್ವ ಸಾಂಸ್ಕೃತಿಕ ಉತ್ಸವ

Exit mobile version