ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದ (Rama Mandir Movement) 496 ವರ್ಷಗಳ ರೋಚಕ ಕಥನವನ್ನು ಒಳಗೊಂಡ ʻಮಂದಿರವಲ್ಲೇ ಕಟ್ಟಿದೆವು!ʼ (Mandiravalle Kattidevu!) ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಗುರುವಾರ (ಜ. 18) ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.
ದಾವಣಗೆರೆಯ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ಸೋಮೇಶ್ವರ ಶಾಲೆಯ ನೇತ್ರಾವತಿ ಕನ್ವೆನ್ಶನ್ ಹಾಲ್‌ನಲ್ಲಿ ಸೋಮೇಶ್ವರ ಪ್ರತಿಷ್ಠಾನದ ವತಿಯಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ʻಮಂದಿರವಲ್ಲೇ ಕಟ್ಟಿದೆವು!ʼ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್, ಆರ್‌ಎಸ್‌ಎಸ್‌ನ ದಾವಣಗೆರೆ ಜಿಲ್ಲಾ ಸಂಘಚಾಲಕರಾದ ಜಯರುದ್ರೇಶ್ ಮುಖ್ಯ ಅತಿಥಿಗಳಾಗಿದ್ದಾರೆ. ಜತೆಗೆ ಕೃತಿಯ ಲೇಖಕರು, ವಿಸ್ತಾರ ನ್ಯೂಸ್ ಡಿಜಿಟಲ್ ಸಂಪಾದಕರಾದ ರಮೇಶ್ ಕುಮಾರ್ ನಾಯಕ್ ಅವರು ಉಪಸ್ಥಿತರಿರಲಿದ್ದಾರೆ.
ಸಮಾರಂಭದ ಆರಂಭದಲ್ಲಿ ಅನುಶ್ರೀ ಬಳಗದ ವೀಣಾ ಹೆಗಡೆ ತಂಡದಿಂದ ರಾಮನ ಹಾಡುಗಳ ಗಾಯನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
3ನೇ ಮುದ್ರಣದತ್ತ ಕೃತಿ!
ಈ ಕೃತಿ ಸಾರ್ವಜನಿಕ ಸಮಾರಂಭದಲ್ಲಿ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆದರೆ, ಪ್ರಿ ರಿಲೀಸ್ ಆರ್ಡರ್‌ನಲ್ಲಿಯೇ ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಪ್ರತಿಗಳನ್ನು ಮುಂಗಡ ಕಾಯ್ದಿರಿಸಲು ನೀಡಿದ ಅವಕಾಶದಲ್ಲೇ ಈಗಾಗಲೇ ಎರಡು ಮುದ್ರಣದ ಪ್ರತಿಗಳು ಖಾಲಿಯಾಗಿದ್ದು, ಮೂರನೇ ಮುದ್ರಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದ, ವಿದೇಶದಿಂದ ಪುಸ್ತಕಕ್ಕೆ ಬೇಡಿಕೆ ಬರುತ್ತಿದೆ. ಅನೇಕ ಸಂಘಟನೆಗಳು ಈ ಕೃತಿಯನ್ನು ಬಿಡುಗಡೆ ಮಾಡಲು ತಾವಾಗಿಯೇ ಮುಂದಾಗಿವೆ ಎಂದು ಪರಶಿವಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ನೀವೂ ಆರ್ಡರ್ ಮಾಡಬಹುದು
ಪ್ರತಿಗಳನ್ನು ಮುಂಗಡ ಕಾಯ್ದಿರಿಸಿದವರಿಗೆ ವಿಶೇಷ ರಿಯಾಯಿತಿಯಲ್ಲಿ ಪುಸ್ತಕವನ್ನು ಒದಗಿಸಲಾಗುತ್ತಿದ್ದು, ಅಂಚೆ ವೆಚ್ಚವು ಉಚಿತವಾಗಿದೆ. ಜ.22ರಂದು ನಡೆಯಲಿರುವ ರಾಮೋತ್ಸವದಂದು ಹಂಚಲು, ಸ್ನೇಹಿತರಿಗೆ ನೀಡಿ ಶುಭ ಕೋರಲು ಮತ್ತು ಅಂದಿನ ಕಾರ್ಯಕ್ರಮದ ಅತಿಥಿಗಳಿಗೆ ನೀಡಲು ಇದು ಅತ್ಯಂತ ಉಪಯುಕ್ತ ಕೃತಿಯಾಗಿದೆ. ಆಸಕ್ತರು ಮೊಬೈಲ್ ನಂ. 98450 31335ಗೆ ಸಂಪರ್ಕಿಸಿ, ಪ್ರತಿಯನ್ನು ತರಿಸಿಕೊಳ್ಳಬಹುದಾಗಿದೆ.
ಇದು ಸ್ನೇಹ ಬುಕ್ ಹೌಸ್‌ನ 500ನೇ ಕೃತಿ
ʻಮಂದಿರವಲ್ಲೇ ಕಟ್ಟುವೆವು!ʼ ಇದು ಸ್ನೇಹ ಬುಕ್ ಹೌಸ್‌ನ 500ನೇ ಪ್ರಕಟಣೆಯಾಗಿರುವುದು ವಿಶೇಷ. ಸಂಸ್ಥೆಯ 500ನೇ ಕೃತಿಯಾಗಿ ಇಂಥಹುದೊಂದು ಚಾರಿತ್ರಿಕ ಪುಸ್ತಕವನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ಕ್ಷಣ ಎಂದು ಸ್ನೇಹ ಬುಕ್ ಹೌಸ್‌ನ ಕೆ.ಬಿ. ಪರಶಿವಪ್ಪ ಹೇಳಿದ್ದಾರೆ. ಈ ಪುಸ್ತಕ ಬಿಡುಗಡೆ ಪೂರ್ವದಲ್ಲೇ ಭಾರಿ ಬೇಡಿಕೆಯನ್ನು ಪಡೆದುಕೊಂಡಿರುವುದು ಅವರಿಗೆ ಖುಷಿ ನೀಡಿದೆ. ರಾಜ್ಯಾದ್ಯಂತ ಮಾತ್ರವಲ್ಲ ವಿದೇಶದಿಂದಲೂ ಪುಸ್ತಕಕ್ಕೆ ಬೇಡಿಕೆ ಬರುತ್ತಿದ್ದು, ಅವುಗಳನ್ನು ಪೂರೈಸಲು ಅವರ ಟೀಮ್ ಟೊಂಕ ಕಟ್ಟಿ ನಿಂತಿದೆ.
ಇದನ್ನೂ ಓದಿ: Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ಕೃತಿ ಮೂರನೇ ಮುದ್ರಣದತ್ತ!
ಈ ಕೃತಿಯಲ್ಲಿ ಏನೇನಿವೆ?
- ಶ್ರೀರಾಮನ ಕಾಲದ ಅಯೋಧ್ಯೆಯಿಂದ ಈಗಿನ ಅಯೋಧ್ಯೆತನಕದ ಸಮಗ್ರ ಚಿತ್ರಣ
- ರಾಮ ಮಂದಿರ ಚಳವಳಿಗೆ ಗುಜರಾತ್ನ ಸೋಮನಾಥ ದೇಗುಲ ಸ್ಫೂರ್ತಿಯಾಗಿದ್ದು ಹೇಗೆ? ನೆಹರೂ ವಿರೋಧವನ್ನು ಲೆಕ್ಕಿಸದೆ ಕಾಂಗ್ರೆಸ್ ನಾಯಕರೇ ಮುಂದೆ ನಿಂತು ಈ ದೇಗುಲ ಕಟ್ಟಿದ ಕುತೂಹಲಕರ ವಿವರ!
- ರಾಮ ಜನ್ಮಭೂಮಿಗಾಗಿ ನಡೆದ 496 ವರ್ಷಗಳ ಹೋರಾಟದ ಹಿನ್ನೋಟ
- ಆಡ್ವಾಣಿಯವರ ರಾಮ ರಥ ಯಾತ್ರೆ ಸ್ವತಂತ್ರ ಭಾರತದ ಮಹಾ ಅಭಿಯಾನವಾಗಿ ಹೊರಹೊಮ್ಮಿದ್ದು ಹೇಗೆ?
- ಮುಲಾಯಂ ಸಿಂಗ್ ಯಾದವ್ರನ್ನು ಸ್ವತಂತ್ರ ಭಾರತದ ಜನರಲ್ ಡಯರ್ ಎಂದು ಕರೆಯುವುದೇಕೆ? ಅಯೋಧ್ಯೆಯ ಆಕಾಶದಲ್ಲಿ ಒಂದು ಪಕ್ಷಿ ಹಾರಿದರೂ ಹೊಡೆದುರುಳಿಸುತ್ತೇವೆ ಎಂದಿದ್ದರು ಮುಲಾಯಂ; ಆದರೆ ಆಗಿದ್ದೇನು?
- ಆಡ್ವಾಣಿ ರಥ ಯಾತ್ರೆಯ ಕಂಪನದಿಂದ ವಿ ಪಿ ಸಿಂಗ್ ಸರಕಾರ ಪತನಗೊಂಡಿದ್ದು ಹೇಗೆ?
- 1992ರ ಡಿಸೆಂಬರ್ 6ರಂದು ಬಾಬರೀ ಕಟ್ಟಡ ಉರುಳಿಸುವಾಗ ಏನೆಲ್ಲ ಬೆಳವಣಿಗೆಗಳು ನಡೆದವು? ಆನಂತರದ ಪರಿಣಾಮ ಏನೇನು?
- ವಿವಾದಿತ ಕಟ್ಟಡ ಉರುಳುವ ಹಿಂದಿನ ದಿನದವರೆಗೂ ತೆರೆಮರೆಯಲ್ಲಿ ಏನೇನು ಕಸರತ್ತು ನಡೆದಿತ್ತು?
- ಬಾಬರಿ ಕಟ್ಟಡ ಉರುಳಿದ್ದು ಹೇಗೆ? ಪೂರ್ವ ತಯಾರಿಯೋ? ಜನಾಕ್ರೋಶದ ಫಲವೋ?
- ವಿವಾದಿತ ಕಟ್ಟಡ ಉರುಳಿಸಲು ಕಾಂಗ್ರೆಸ್ ಸರಕಾರದ ಪ್ರಧಾನಮಂತ್ರಿ ಪಿ ವಿ ನರಸಿಂಹ ರಾವ್ ಪರೋಕ್ಷವಾಗಿ ನೆರವು ನೀಡಿದ್ದರಾ?
- ಗೋಧ್ರಾದಲ್ಲಿ 59 ಕರಸೇವಕರ ಸಜೀವ ದಹನದ ಬಳಿಕ ಗುಜರಾತ್ ಹೇಗೆ ಹೊತ್ತಿ ಉರಿಯಿತು?
- ಮಂದಿರ ಚಳವಳಿಗೆ ಬಿಜೆಪಿ ಬಲ, ಬಿಜೆಪಿಗೆ ಮಂದಿರ ಚಳವಳಿಯ ಬಲ! ಕೇವಲ 2 ಸ್ಥಾನದಿಂದ ಬಿಜೆಪಿ ಸಂಸದರ ಸಂಖ್ಯೆ ಎರಡೇ ಚುನಾವಣೆಗಳಲ್ಲಿ 120 ಸ್ಥಾನಕ್ಕೆ ಜಿಗಿದ ಅಚ್ಚರಿ!
- ಯಾವ ಆಧಾರದಲ್ಲಿ ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಹೇಳಿತು?
- 1949ರಲ್ಲಿ ಪ್ರಧಾನಿ ನೆಹರೂ ಆದೇಶ ಧಿಕ್ಕರಿಸಿ ರಾಮ್ಲಲ್ಲಾ ಮೂರ್ತಿಯನ್ನು ರಕ್ಷಿಸಿದ್ದ ಆ ಜಿಲ್ಲಾಧಿಕಾರಿ ಯಾರು?
- ಕೊಠಾರಿ ಸಹೋದರರು: ಬಾಬರಿ ಕಟ್ಟಡದ ಮೇಲೆ ಮೊದಲ ಬಾರಿ ಭಗವಾಧ್ವಜ ಹಾರಿಸಿ ಗುಂಡೇಟಿಗೆ ಬಲಿಯಾದವರು. ಈ ಯುವ ಸಹೋದರರಿಬ್ಬರ ಹೃದಯಸ್ಪರ್ಶಿ ಕಥೆ
- ಕಲ್ಯಾಣ್ ಸಿಂಗ್: ಮಂದಿರಕ್ಕಾಗಿ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ ಅಪರೂಪದ ನಾಯಕ. ಕೋರ್ಟ್ ಕಟಕಟೆಯಲ್ಲಿ ಇವರು ಹೇಳಿದ್ದೇನು?
- ಅಯೋಧ್ಯೆ ಆಂದೋಲನ ಹಾದಿಯಲ್ಲಿ ಮರೆಯಲಾಗದ ಮಹನೀಯರ ಕಿರು ಪರಿಚಯ
- ಅಯೋಧ್ಯೆ ರಾಮ ಮಂದಿರವನ್ನು ಆಧುನಿಕ ಕಾಲದ ಅದ್ಭುತ ನಿರ್ಮಾಣ ಎನ್ನಬಹುದಾ?
- ಮೋದಿ-ಯೋಗಿ ಜೋಡಿ ಅಯೋಧ್ಯೆಯ ಚಿತ್ರಣವನ್ನೇ ಹೇಗೆ ಬದಲಿಸಿತು?
- ರಾಮ ಜನ್ಮ ಭೂಮಿ ಹಾದಿಯಲ್ಲಿ ಕೃಷ್ಣ ಜನ್ಮ ಭೂಮಿ; ಏನಿದು ವಿವಾದ?
- ಕಾಶಿಯ ಶಿವ ದೇವಾಲಯ ಕೆಡವಿ ಕಟ್ಟಲಾಗಿತ್ತೇ ಜ್ಞಾನವಾಪಿ ಮಸೀದಿ? ಮಥುರಾ ಮತ್ತು ಕಾಶಿಯಲ್ಲೂ ತಲೆ ಎತ್ತಲಿವೆಯೇ ಭವ್ಯ ದೇಗುಲಗಳು?
ಜತೆಗೆ 100ಕ್ಕೂ ಹೆಚ್ಚು ಅಪರೂಪದ ಫೋಟೊ