Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ದಾವಣಗೆರೆಯಲ್ಲಿ ಇಂದು ಬಿಡುಗಡೆ - Vistara News

ಕರ್ನಾಟಕ

Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ದಾವಣಗೆರೆಯಲ್ಲಿ ಇಂದು ಬಿಡುಗಡೆ

Rama Mandir: ದಾವಣಗೆರೆಯ ಸೋಮೇಶ್ವರ ಶಾಲೆಯ ನೇತ್ರಾವತಿ ಕನ್ವೆನ್ಶನ್‌ ಹಾಲ್‌ನಲ್ಲಿ ಸೋಮೇಶ್ವರ ಪ್ರತಿಷ್ಠಾನದ ವತಿಯಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ʻಮಂದಿರವಲ್ಲೇ ಕಟ್ಟಿದೆವು!ʼ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಬಿಡುಗಡೆಗೆ ಮೊದಲೇ ಭಾರಿ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ಈ ಕೃತಿಯಲ್ಲಿ ಏನೇನಿದೆ? ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯೂ ಇಲ್ಲಿದೆ.

VISTARANEWS.COM


on

mandiravalle kattidevu book
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದ (Rama Mandir Movement) 496 ವರ್ಷಗಳ ರೋಚಕ ಕಥನವನ್ನು ಒಳಗೊಂಡ ʻಮಂದಿರವಲ್ಲೇ ಕಟ್ಟಿದೆವು!ʼ (Mandiravalle Kattidevu!) ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಗುರುವಾರ (ಜ. 18) ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ದಾವಣಗೆರೆಯ ಗ್ರಾಮಾಂತರ ಪೊಲೀಸ್‌ ಠಾಣೆ ಸಮೀಪದ ಸೋಮೇಶ್ವರ ಶಾಲೆಯ ನೇತ್ರಾವತಿ ಕನ್ವೆನ್ಶನ್‌ ಹಾಲ್‌ನಲ್ಲಿ ಸೋಮೇಶ್ವರ ಪ್ರತಿಷ್ಠಾನದ ವತಿಯಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ʻಮಂದಿರವಲ್ಲೇ ಕಟ್ಟಿದೆವು!ʼ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

mandiravalle kattidevu book

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್‌ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.‌ ರಾಜಶೇಖರ್‌, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್‌, ಆರ್‌ಎಸ್‌ಎಸ್‌ನ ದಾವಣಗೆರೆ ಜಿಲ್ಲಾ ಸಂಘಚಾಲಕರಾದ ಜಯರುದ್ರೇಶ್‌ ಮುಖ್ಯ ಅತಿಥಿಗಳಾಗಿದ್ದಾರೆ. ಜತೆಗೆ ಕೃತಿಯ ಲೇಖಕರು, ವಿಸ್ತಾರ ನ್ಯೂಸ್‌ ಡಿಜಿಟಲ್‌ ಸಂಪಾದಕರಾದ ರಮೇಶ್‌ ಕುಮಾರ್‌ ನಾಯಕ್‌ ಅವರು ಉಪಸ್ಥಿತರಿರಲಿದ್ದಾರೆ.

mandiravalle kattidevu book

ಸಮಾರಂಭದ ಆರಂಭದಲ್ಲಿ ಅನುಶ್ರೀ ಬಳಗದ ವೀಣಾ ಹೆಗಡೆ ತಂಡದಿಂದ ರಾಮನ ಹಾಡುಗಳ ಗಾಯನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

3ನೇ ಮುದ್ರಣದತ್ತ ಕೃತಿ!

ಈ ಕೃತಿ ಸಾರ್ವಜನಿಕ ಸಮಾರಂಭದಲ್ಲಿ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆದರೆ, ಪ್ರಿ ರಿಲೀಸ್‌ ಆರ್ಡರ್‌ನಲ್ಲಿಯೇ ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಪ್ರತಿಗಳನ್ನು ಮುಂಗಡ ಕಾಯ್ದಿರಿಸಲು ನೀಡಿದ ಅವಕಾಶದಲ್ಲೇ ಈಗಾಗಲೇ ಎರಡು ಮುದ್ರಣದ ಪ್ರತಿಗಳು ಖಾಲಿಯಾಗಿದ್ದು, ಮೂರನೇ ಮುದ್ರಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದ, ವಿದೇಶದಿಂದ ಪುಸ್ತಕಕ್ಕೆ ಬೇಡಿಕೆ ಬರುತ್ತಿದೆ. ಅನೇಕ ಸಂಘಟನೆಗಳು ಈ ಕೃತಿಯನ್ನು ಬಿಡುಗಡೆ ಮಾಡಲು ತಾವಾಗಿಯೇ ಮುಂದಾಗಿವೆ ಎಂದು ಪರಶಿವಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ನೀವೂ ಆರ್ಡರ್‌ ಮಾಡಬಹುದು

ಪ್ರತಿಗಳನ್ನು ಮುಂಗಡ ಕಾಯ್ದಿರಿಸಿದವರಿಗೆ ವಿಶೇಷ ರಿಯಾಯಿತಿಯಲ್ಲಿ ಪುಸ್ತಕವನ್ನು ಒದಗಿಸಲಾಗುತ್ತಿದ್ದು, ಅಂಚೆ ವೆಚ್ಚವು ಉಚಿತವಾಗಿದೆ. ಜ.22ರಂದು ನಡೆಯಲಿರುವ ರಾಮೋತ್ಸವದಂದು ಹಂಚಲು, ಸ್ನೇಹಿತರಿಗೆ ನೀಡಿ ಶುಭ ಕೋರಲು ಮತ್ತು ಅಂದಿನ ಕಾರ್ಯಕ್ರಮದ ಅತಿಥಿಗಳಿಗೆ ನೀಡಲು ಇದು ಅತ್ಯಂತ ಉಪಯುಕ್ತ ಕೃತಿಯಾಗಿದೆ. ಆಸಕ್ತರು ಮೊಬೈಲ್‌ ನಂ. 98450 31335ಗೆ ಸಂಪರ್ಕಿಸಿ, ಪ್ರತಿಯನ್ನು ತರಿಸಿಕೊಳ್ಳಬಹುದಾಗಿದೆ.

ಇದು ಸ್ನೇಹ ಬುಕ್‌ ಹೌಸ್‌ನ 500ನೇ ಕೃತಿ

ʻಮಂದಿರವಲ್ಲೇ ಕಟ್ಟುವೆವು!ʼ ಇದು ಸ್ನೇಹ ಬುಕ್‌ ಹೌಸ್‌ನ 500ನೇ ಪ್ರಕಟಣೆಯಾಗಿರುವುದು ವಿಶೇಷ. ಸಂಸ್ಥೆಯ 500ನೇ ಕೃತಿಯಾಗಿ ಇಂಥಹುದೊಂದು ಚಾರಿತ್ರಿಕ ಪುಸ್ತಕವನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ಕ್ಷಣ ಎಂದು ಸ್ನೇಹ ಬುಕ್ ಹೌಸ್‌ನ ಕೆ.ಬಿ. ಪರಶಿವಪ್ಪ ಹೇಳಿದ್ದಾರೆ. ಈ ಪುಸ್ತಕ ಬಿಡುಗಡೆ ಪೂರ್ವದಲ್ಲೇ ಭಾರಿ ಬೇಡಿಕೆಯನ್ನು ಪಡೆದುಕೊಂಡಿರುವುದು ಅವರಿಗೆ ಖುಷಿ ನೀಡಿದೆ. ರಾಜ್ಯಾದ್ಯಂತ ಮಾತ್ರವಲ್ಲ ವಿದೇಶದಿಂದಲೂ ಪುಸ್ತಕಕ್ಕೆ ಬೇಡಿಕೆ ಬರುತ್ತಿದ್ದು, ಅವುಗಳನ್ನು ಪೂರೈಸಲು ಅವರ ಟೀಮ್‌ ಟೊಂಕ ಕಟ್ಟಿ ನಿಂತಿದೆ.

ಇದನ್ನೂ ಓದಿ: Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ಕೃತಿ ಮೂರನೇ ಮುದ್ರಣದತ್ತ!

ಈ ಕೃತಿಯಲ್ಲಿ ಏನೇನಿವೆ?

  • ಶ್ರೀರಾಮನ ಕಾಲದ ಅಯೋಧ್ಯೆಯಿಂದ ಈಗಿನ ಅಯೋಧ್ಯೆತನಕದ ಸಮಗ್ರ ಚಿತ್ರಣ
  • ರಾಮ ಮಂದಿರ ಚಳವಳಿಗೆ ಗುಜರಾತ್‌ನ ಸೋಮನಾಥ ದೇಗುಲ ಸ್ಫೂರ್ತಿಯಾಗಿದ್ದು ಹೇಗೆ? ನೆಹರೂ ವಿರೋಧವನ್ನು ಲೆಕ್ಕಿಸದೆ ಕಾಂಗ್ರೆಸ್‌ ನಾಯಕರೇ ಮುಂದೆ ನಿಂತು ಈ ದೇಗುಲ ಕಟ್ಟಿದ ಕುತೂಹಲಕರ ವಿವರ!
  • ರಾಮ ಜನ್ಮಭೂಮಿಗಾಗಿ ನಡೆದ 496 ವರ್ಷಗಳ ಹೋರಾಟದ ಹಿನ್ನೋಟ
  • ಆಡ್ವಾಣಿಯವರ ರಾಮ ರಥ ಯಾತ್ರೆ ಸ್ವತಂತ್ರ ಭಾರತದ ಮಹಾ ಅಭಿಯಾನವಾಗಿ ಹೊರಹೊಮ್ಮಿದ್ದು ಹೇಗೆ?
  • ಮುಲಾಯಂ ಸಿಂಗ್‌ ಯಾದವ್‌ರನ್ನು‌ ಸ್ವತಂತ್ರ ಭಾರತದ ಜನರಲ್‌ ಡಯರ್‌ ಎಂದು ಕರೆಯುವುದೇಕೆ? ಅಯೋಧ್ಯೆಯ ಆಕಾಶದಲ್ಲಿ ಒಂದು ಪಕ್ಷಿ ಹಾರಿದರೂ ಹೊಡೆದುರುಳಿಸುತ್ತೇವೆ ಎಂದಿದ್ದರು ಮುಲಾಯಂ; ಆದರೆ ಆಗಿದ್ದೇನು?
  • ಆಡ್ವಾಣಿ ರಥ ಯಾತ್ರೆಯ ಕಂಪನದಿಂದ ವಿ ಪಿ ಸಿಂಗ್‌ ಸರಕಾರ ಪತನಗೊಂಡಿದ್ದು ಹೇಗೆ?
  • 1992ರ ಡಿಸೆಂಬರ್‌ 6ರಂದು ಬಾಬರೀ ಕಟ್ಟಡ ಉರುಳಿಸುವಾಗ ಏನೆಲ್ಲ ಬೆಳವಣಿಗೆಗಳು ನಡೆದವು? ಆನಂತರದ ಪರಿಣಾಮ ಏನೇನು?
  • ವಿವಾದಿತ ಕಟ್ಟಡ ಉರುಳುವ ಹಿಂದಿನ ದಿನದವರೆಗೂ ತೆರೆಮರೆಯಲ್ಲಿ ಏನೇನು ಕಸರತ್ತು ನಡೆದಿತ್ತು?
  • ಬಾಬರಿ ಕಟ್ಟಡ ಉರುಳಿದ್ದು ಹೇಗೆ? ಪೂರ್ವ ತಯಾರಿಯೋ? ಜನಾಕ್ರೋಶದ ಫಲವೋ?
  • ವಿವಾದಿತ ಕಟ್ಟಡ ಉರುಳಿಸಲು ಕಾಂಗ್ರೆಸ್‌ ಸರಕಾರದ ಪ್ರಧಾನಮಂತ್ರಿ ಪಿ ವಿ ನರಸಿಂಹ ರಾವ್ ಪರೋಕ್ಷವಾಗಿ ನೆರವು ನೀಡಿದ್ದರಾ?‌
  • ಗೋಧ್ರಾದಲ್ಲಿ 59 ಕರಸೇವಕರ ಸಜೀವ ದಹನದ ಬಳಿಕ ಗುಜರಾತ್‌ ಹೇಗೆ ಹೊತ್ತಿ ಉರಿಯಿತು?
  • ಮಂದಿರ ಚಳವಳಿಗೆ ಬಿಜೆಪಿ ಬಲ, ಬಿಜೆಪಿಗೆ ಮಂದಿರ ಚಳವಳಿಯ ಬಲ! ಕೇವಲ 2 ಸ್ಥಾನದಿಂದ ಬಿಜೆಪಿ ಸಂಸದರ ಸಂಖ್ಯೆ ಎರಡೇ ಚುನಾವಣೆಗಳಲ್ಲಿ 120 ಸ್ಥಾನಕ್ಕೆ ಜಿಗಿದ ಅಚ್ಚರಿ!
  • ಯಾವ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಹೇಳಿತು?
  • 1949ರಲ್ಲಿ ಪ್ರಧಾನಿ ನೆಹರೂ ಆದೇಶ ಧಿಕ್ಕರಿಸಿ ರಾಮ್‌ಲಲ್ಲಾ ಮೂರ್ತಿಯನ್ನು ರಕ್ಷಿಸಿದ್ದ ಆ ಜಿಲ್ಲಾಧಿಕಾರಿ ಯಾರು?
  • ಕೊಠಾರಿ ಸಹೋದರರು: ಬಾಬರಿ ಕಟ್ಟಡದ ಮೇಲೆ ಮೊದಲ ಬಾರಿ ಭಗವಾಧ್ವಜ ಹಾರಿಸಿ ಗುಂಡೇಟಿಗೆ ಬಲಿಯಾದವರು. ಈ ಯುವ ಸಹೋದರರಿಬ್ಬರ ಹೃದಯಸ್ಪರ್ಶಿ ಕಥೆ
  • ಕಲ್ಯಾಣ್‌ ಸಿಂಗ್‌: ಮಂದಿರಕ್ಕಾಗಿ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ ಅಪರೂಪದ ನಾಯಕ. ಕೋರ್ಟ್‌ ಕಟಕಟೆಯಲ್ಲಿ ಇವರು ಹೇಳಿದ್ದೇನು?
  • ಅಯೋಧ್ಯೆ ಆಂದೋಲನ ಹಾದಿಯಲ್ಲಿ ಮರೆಯಲಾಗದ ಮಹನೀಯರ ಕಿರು ಪರಿಚಯ
  • ಅಯೋಧ್ಯೆ ರಾಮ ಮಂದಿರವನ್ನು ಆಧುನಿಕ ಕಾಲದ ಅದ್ಭುತ ನಿರ್ಮಾಣ ಎನ್ನಬಹುದಾ?
  • ಮೋದಿ-ಯೋಗಿ ಜೋಡಿ ಅಯೋಧ್ಯೆಯ ಚಿತ್ರಣವನ್ನೇ ಹೇಗೆ ಬದಲಿಸಿತು?
  • ರಾಮ ಜನ್ಮ ಭೂಮಿ ಹಾದಿಯಲ್ಲಿ ಕೃಷ್ಣ ಜನ್ಮ ಭೂಮಿ; ಏನಿದು ವಿವಾದ?
  • ಕಾಶಿಯ ಶಿವ ದೇವಾಲಯ ಕೆಡವಿ ಕಟ್ಟಲಾಗಿತ್ತೇ ಜ್ಞಾನವಾಪಿ ಮಸೀದಿ? ಮಥುರಾ ಮತ್ತು ಕಾಶಿಯಲ್ಲೂ ತಲೆ ಎತ್ತಲಿವೆಯೇ ಭವ್ಯ ದೇಗುಲಗಳು?
    ಜತೆಗೆ 100ಕ್ಕೂ ಹೆಚ್ಚು ಅಪರೂಪದ ಫೋಟೊ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Anjali Murder Case: ಅಂಜಲಿ ಹತ್ಯೆ ಪ್ರಕರಣ; ಹು-ಧಾ ಐಪಿಎಸ್ ಅಧಿಕಾರಿಯ ತಲೆದಂಡ

Anjali Murder Case: ಕಾನೂನು ಸುವ್ಯವಸ್ಥೆ‌ ಕಾಪಾಡುವಲ್ಲಿ ಲೋಪ ಎಸಗಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಲಾಗಿದೆ.

VISTARANEWS.COM


on

Anjali Murder Case
Koo

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಬೆನ್ನಲ್ಲೇ ನಡೆದ ಅಂಜಲಿ ಹತ್ಯೆ ಪ್ರಕರಣ (Anjali Murder Case) ಅವಳಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಅಂಜಲಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿದ ಬೆನ್ನಲ್ಲೇ ಇದೀಗ ಐಪಿಎಸ್ ಅಧಿಕಾರಿಯ ತಲೆದಂಡವಾಗಿದೆ. ಕಾನೂನು ಸುವ್ಯವಸ್ಥೆ‌ ಕಾಪಾಡುವಲ್ಲಿ ಲೋಪ ಎಸಗಿದ್ದರಿಂದ ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಅಮಾನತುಗೊಂಡಿದ್ದಾರೆ.

ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗೃಹ ಸಚಿವರು ಹುಬ್ಬಳ್ಳಿ‌ಗೆ ಭೇಟಿ ನೀಡುವ ಮುನ್ನಾ ಅಮಾನತು ಆದೇಶ ಹೊರಬಿದ್ದಿದ್ದು, ಸೋಮವಾರ ಹುಬ್ಬಳ್ಳಿಗೆ ಗೃಹ ಸಚಿವ ಪರಮೇಶ್ವರ್ ಆಗಮಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮವಾಗಿದೆ. ಇನ್ನು ಈ ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರ ತಲೆದಂಡವೂ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

ಅಂಜಲಿ‌ ಕೊಲೆ‌ ಪ್ರಕರಣದಲ್ಲಿ (Anjali Murder Case) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಇತ್ತೀಚೆಗೆ ಆದೇಶ ಹೊರಡಿಸಿದ್ದರು.

ಕೊಲೆ ಪ್ರಕರಣಕ್ಕೂ ಮೊದಲೇ ಅಂಜಲಿ ಅಜ್ಜಿ, ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದು ಬೆದರಿಕೆ ಇದೆ ಎಂದು ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್‌ ಹಾಗೂ ಮಹಿಳಾ ಪೊಲೀಸ್ ಪೇದೆ ರೇಖಾ ಅವರನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಮಾನತು ಮಾಡಿದ್ದರು.

Continue Reading

ಕರ್ನಾಟಕ

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುತ್ತೇನೆ ಎಂದಿದ್ದ ಯುವಕ ವಶಕ್ಕೆ

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ವಿಡಿಯೊ ಮಾಡಿ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಐಪಿಎಲ್‌ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ಹೇಳಿದ್ದ ಯುವಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ವಿಡಿಯೊ ಮಾಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ.

ನಿತಿನ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ಯುವಕ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೇ 18ರಂದು ನಡೆಯುವ ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುತ್ತೇನೆ ಎಂದು ಯುವಕ ವಿಡಿಯೊದಲ್ಲಿ ಹೇಳಿದ್ದ. ಈ ವಿಡಿಯೊವನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಗಮನಿಸಿ ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಮಾರ್ಚ್‌ 25ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಅಭಿಮಾನಿಯೊಬ್ಬ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಪ್ರಸಂಗ ನಡೆದಿತ್ತು. ಈ ಘಟನೆಯಿಂದ ಪ್ರೇರಣೆಗೊಂಡ ಬೆಂಗಳೂರಿನ ಯುವಕ ನಿತಿನ್‌, ತಾನು ಕೂಡ ಮೈದಾನಕ್ಕೆ ನುಗ್ಗುವುದಾಗಿ ವಿಡಿಯೊದಲ್ಲಿ ಹೇಳಿದ್ದ. ಇದರಿಂದ ಪಂದ್ಯದ ವೇಳೆ ಸಮಸ್ಯೆಯಾಗಬಹುದು ಎಂದು ಕ್ರೀಡಾಂಗಣದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ | RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

ಯುವಕನ ವಿಡಿಯೊ ವೈರಲ್‌ ಆದ ಬಳಿಕ ನಿಗಾ ವಹಿಸಿದ್ದ ಪೊಲೀಸರು, ಯುವಕ ಟಿಕೆಟ್‌ ಪಡೆದು ಪಂದ್ಯ ವೀಕ್ಷಿಸಲು ಶನಿವಾರ ಆಗಮಿಸಿದ್ದಾಗ ವಶಕ್ಕೆ ಪಡೆದಿದ್ದಾರೆ.

ವಿರಾಟ್‌ ಕೊಹ್ಲಿಯ ಕಾಲಿಗೆ ಬಿದ್ದಿದ್ದ ಅಭಿಯಾನಿ

ಮಾರ್ಚ್‌ನಲ್ಲಿ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂಗೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಅಭಿಯಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಆಗ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಅ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಹಾಕಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ | RCB vs CSK: ಸಿಕ್ಸರ್​ ಮೂಲಕವೂ ದಾಖಲೆ ಬರೆದ ವಿರಾಟ್​ ಕೊಹ್ಲಿ

ರಾಯಚೂರು ಮೂಲದ ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿ ಕುರುಮಪ್ಪ‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಅತ ಪೊಲೀಸ್​ ವಿಚಾರಣೆ ವೇಳೆ ತನ್ನ ಮೂಲ ಹೆಸರನ್ನು ಮರೆ ಮಾಚಿ ರಂಜಿತ್ ಎಂದು ಹೇಳಿದ್ದ. ದಾಖಲೆಗಳನ್ನು ಪರಿಶೀಲಿಸುವ ವೇಳೆ ಆತ ರಂಜಿತ್​ ಅಲ್ಲ ಕುರುಮಪ್ಪ‌ ಎಂಬ ವಿಚಾರ ಬೆಳಕಿಗೆ ಬಂದಿತ್ತು. ನಂತರ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಲಾಗಿತ್ತು.

Continue Reading

ಸಿನಿಮಾ

Kannada New Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಔಟ್‌; ಶೀಘ್ರದಲ್ಲೇ ತೆರೆಗೆ

Kannada New Movie: ‘ರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣ’ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ 5ನೇ ಸಿನಿಮಾ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಚಿತ್ರದ ಪೋಸ್ಟರ್ ಈಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಸಿಂಪಲ್ ಸುನಿ, ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

VISTARANEWS.COM


on

Bank of Bhagyalakshmi movie poster released
Koo

ಬೆಂಗಳೂರು: ‘ರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ. ಪ್ರಕಾಶ್ ನಿರ್ಮಾಣದ 5ನೇ ಸಿನಿಮಾ ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಚಿತ್ರದ ಪೋಸ್ಟರ್ (Kannada New Movie) ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರು ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

ದೀಕ್ಷಿತ್ ಶೆಟ್ಟಿ ಅಭಿನಯದ ಚಿತ್ರ‌

ದಿಯಾ , ದಸರಾ, ಕೆಟಿಎಂ ಹಾಗೂ ಬ್ಲಿಂಕ್ ಸಿನಿಮಾಗಳಲ್ಲಿ ಅಭಿನಯದಲ್ಲಿ ಹೆಸರು ಮಾಡಿ, ತೆಲುಗು, ಮಲಯಾಳಂಗಳಲ್ಲಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ಸಿನಿಮಾದ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

ಚಿತ್ರಕ್ಕೆ ನವ ನಿರ್ದೇಶಕ ಅಭಿಷೇಕ ಎಂ. ಅವರ ನಿರ್ದೇಶನವಿದೆ. ನಿರ್ದೇಶಕ ಸಿಂಪಲ್ ಸುನಿ ಜತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗು ಕೆಲ ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. ‘ಪಿನಾಕ’ ಎಂಬ ವಿಎಫ್‌ಎಕ್ಸ್‌ (VFX) ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಹಾಸ್ಯ ಪ್ರಧಾನ ಕಥಾಹಂದರ

ಬ್ಯಾಂಕ್‌ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರವನ್ನು ಈ ಚಿತ್ರವು ಒಳಗೊಂಡಿದೆ. ಸಹ ಕಲಾವಿದರಾಗಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಸೇರಿದಂತೆ ಮುಂತಾದ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.

ಶೀಘ್ರದಲ್ಲೇ ಚಿತ್ರೀಕರಣ ಮುಕ್ತಾಯ

ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗ ಸುತ್ತಮುತ್ತ ಶೇ.80 ರಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಇನ್ನು ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾವನ್ನು ನಿರ್ಮಾಪಕ ಎಚ್.ಕೆ ಪ್ರಕಾಶ್, ಕನ್ನಡದ ಜತೆಗೆ ತೆಲುಗಿನಲ್ಲಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ. ಕಾಸರಗೋಡು ಅವರ ಕ್ಯಾಮೆರಾ ನಿರ್ದೇಶನ, ರಘು ಮೈಸೂರ್ ಅವರ ಕಲಾ ನಿರ್ದೇಶನ, ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

Continue Reading

ಕರ್ನಾಟಕ

Lorry Accident: ಕಾರ್ಕಳದಲ್ಲಿ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು

Lorry Accident: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಭ್ರಾಮರಿ ಕ್ರಾಸ್‌ನಲ್ಲಿ ಅಪಘಾತ ನಡೆದಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

VISTARANEWS.COM


on

Lorry Accident
Koo

ಉಡುಪಿ: ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ (Lorry Accident) ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಭ್ರಾಮರಿ ಕ್ರಾಸ್‌ನಲ್ಲಿ ನಡೆದಿದೆ. ಕಲ್ಲು ತುಂಬಿದ್ದ ಲಾರಿ ಮಂಗಳೂರಿನ ಕಡೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ದುರ್ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರದ ಕರಿಯಪ್ಪ ಮತ್ತು ನರಿಯಪ್ಪ ಮೃತ. ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್‌

ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

ಕಲಬುರಗಿ: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವುದು (Road Accident) ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ನಡೆದಿದೆ. ಅಫಜಲಪುರ ತಾಲೂಕಿನ ಹೊಸೂರು ಗ್ರಾಮದ ದೇವಾನಂದ್ ಘತ್ತರಗಿ (25), ಬಸವರಾಜ್ ದುರ್ಗ (56) ಮೃತ ದುರ್ದೈವಿಗಳು.

ಚೌಡಾಪುರದಿಂದ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿಯಾಗಿದ್ದರಿಂದ ದುರಂತ ನಡೆದಿದೆ. ಅಪಘಾತ ನಡೆದ ಬಳಿಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

ಗದಗ: ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ (Veerabhadreswara Fair) ರಥದ ಚಕ್ರದಡಿ‌ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಥ ಎಳೆಯುವ ವೇಳೆ ಈ ಅವಘಡ ನಡೆದಿದೆ.

ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಬ್ಬ ಭಕ್ತನ ತಲೆ‌ ಮೇಲೆ ರಥದ ಚಕ್ರ ಹತ್ತಿಳಿದಿದ್ದರಿಂದ ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೊಬ್ಬನ ಬೆನ್ನಿನ ಮೇಲೆ ಹಾದು ಹೋಗಿದೆ. ಹೀಗಾಗಿ ಆತನೂ ಅಲ್ಲಿಯೇ ಉಸಿರು ಚೆಲ್ಲಿದ್ದಾನೆ. ರಥೋತ್ಸವಕ್ಕೆ‌ ಎಸೆಯುವ ಉತ್ತುತ್ತೆಯನ್ನು ಆರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ | Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

ಮಲ್ಲಪ್ಪ ಲಿಂಗನಗೌಡರ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Continue Reading
Advertisement
RCB vs CSK
ಕ್ರೀಡೆ9 mins ago

RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

Anjali Murder Case
ಕರ್ನಾಟಕ21 mins ago

Anjali Murder Case: ಅಂಜಲಿ ಹತ್ಯೆ ಪ್ರಕರಣ; ಹು-ಧಾ ಐಪಿಎಸ್ ಅಧಿಕಾರಿಯ ತಲೆದಂಡ

Narendra Modi
ದೇಶ44 mins ago

Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

RCB vs CSK
ಕರ್ನಾಟಕ1 hour ago

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುತ್ತೇನೆ ಎಂದಿದ್ದ ಯುವಕ ವಶಕ್ಕೆ

Bank of Bhagyalakshmi movie poster released
ಸಿನಿಮಾ1 hour ago

Kannada New Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಔಟ್‌; ಶೀಘ್ರದಲ್ಲೇ ತೆರೆಗೆ

Priyanka Vadra
ಪ್ರಮುಖ ಸುದ್ದಿ2 hours ago

ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

Kangana Ranaut
ದೇಶ3 hours ago

Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

RCB vs CSK
ಕ್ರೀಡೆ3 hours ago

RCB vs CSK: ಸಿಕ್ಸರ್​ ಮೂಲಕವೂ ದಾಖಲೆ ಬರೆದ ವಿರಾಟ್​ ಕೊಹ್ಲಿ

Lorry Accident
ಕರ್ನಾಟಕ3 hours ago

Lorry Accident: ಕಾರ್ಕಳದಲ್ಲಿ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು

RCB vs CSK
ಕ್ರೀಡೆ3 hours ago

RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌