Site icon Vistara News

World Culture Festival: ಸಂಗೀತ, ನೃತ್ಯಗಳ ಮೂಲಕ ‘ವಸುದೈವ ಕುಟುಂಬಕಂ’ ಸಂದೇಶ ಸಾರಿದ ವಿಶ್ವ ಸಾಂಸ್ಕೃತಿಕ ಉತ್ಸವ

World Culture Festival Dance

ಬೆಂಗಳೂರು: ವಾಷಿಂಗ್ಟನ್ ಡಿ.ಸಿ.ಯ ಪ್ರತಿಷ್ಠಿತ ನ್ಯಾಷನಲ್ ಮಾಲ್‌ನಲ್ಲಿ ಶುಕ್ರವಾರ ಚಾಲನೆಗೊಂಡ ಆರ್ಟ್ ಆಫ್ ಲಿವಿಂಗ್‌ನ 4ನೇ ಆವೃತ್ತಿಯ ವಿಶ್ವ ಸಾಂಸ್ಕೃತಿಕ ಉತ್ಸವವು (World Culture Festival), ಸಂಗೀತ, ನೃತ್ಯಗಳ ಮೂಲಕ ಏಕತೆ, ಸಾಮರಸ್ಯದ ವಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಜಾಗತಿಕ ಸಂದೇಶವನ್ನು ಸಾರಿತು. ಉತ್ಸವದಲ್ಲಿ 180 ದೇಶಗಳಿಂದ ದಾಖಲೆಯ 10 ಲಕ್ಷ ಜನರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಜಾಗತಿಕ ಗಣ್ಯರು, ರೋಮಾಂಚನಗೊಳಿಸುವ ಸಂಗೀತ ಮತ್ತು ವರ್ಣರಂಜಿತ ನೃತ್ಯ ಪ್ರದರ್ಶನಗಳನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ಇತರ ಹೆಸರಾಂತ ಕಲಾವಿದರು ವಸುದೈವ ಕುಟುಂಬಕಂ ಸಂದೇಶದೊಂದಿಗೆ ಒಂದುಗೂಡಿದ್ದರು.

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾರತೀಯ ಕಲಾವಿದರಿಂದ ಭರತನಾಟ್ಯ ಪ್ರದರ್ಶನ

ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು 200 ಕಲಾವಿದರಿಂದ ಅಮೆರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ ಗಾಯನ ಮಾಡಲಾಯಿತು. 1000 ಜನರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಕಛೇರಿಯು ಪಂಚಭೂತಂ ಎಂಬ ಪ್ರದರ್ಶನವು ನಡೆಯಿತು. ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1000 ಗಿಟಾರ್ ವಾದನವು ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯದಿಂದ ಪ್ರದರ್ಶನಗಳು ನಡೆದವು.

ಇದನ್ನೂ ಓದಿ | Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್

ಅಂತಿಮವಾಗಿ, ‘ಒನ್ ಲವ್’ ಆಚರಣೆಯೊಂದಿಗೆ, ಸ್ಕಿಪ್ ಮಾರ್ಲೆಯವರ ರೆಗ್ಗೀ ರಿದಮ್ಸ್ ಪ್ರದರ್ಶನದೊಂದಿಗೆ ಮೊದಲ ದಿನದ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಎಲ್ಲರ ಮುಖದಲ್ಲೂ ನಗು ಮೂಡಿಸೋಣ: ಗುರುದೇವ ಶ್ರೀ ಶ್ರೀ ರವಿಶಂಕರ್

ಜಾಗತಿಕ ಮಾನವತಾವಾದಿ, ಶಾಂತಿದೂತ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಮಾತನಾಡಿ, ನಮ್ಮ ವೈವಿಧ್ಯತೆಯನ್ನು ಆಚರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ನಮ್ಮ ಜಗತ್ತು ತುಂಬಾ ವೈವಿಧ್ಯಮಯವಾಗಿದೆ, ಆದರೂ ನಮ್ಮ ಮಾನವೀಯ ಮೌಲ್ಯಗಳಲ್ಲಿ ಏಕತೆ ಇದೆ. ಇಂದು, ಈ ಸಂದರ್ಭದಲ್ಲಿ, ಸಮಾಜದಲ್ಲಿ ಹೆಚ್ಚಿನ ಸಂತೋಷವನ್ನು ತರಲು ನಾವು ಬದ್ಧರಾಗೋಣ. ಎಲ್ಲರ ಮುಖದಲ್ಲೂ ನಗು ಮೂಡಿಸೋಣ. ಅದು ಮಾನವೀಯತೆ. ಅದರಿಂದಲೇ ನಾವೆಲ್ಲರೂ ಮಾಡಲ್ಪಟ್ಟಿರುವುದು ತಿಳಿಸಿದರು.

ಜ್ಞಾನದ ಬೆಂಬಲವಿಲ್ಲದಿದ್ದರೆ ಯಾವುದೇ ಆಚರಣೆಯು ಸತ್ವವನ್ನು ಹೊಂದಿರುವುದಿಲ್ಲ ಮತ್ತು ಆ ಜ್ಞಾನವು ನಮ್ಮೆಲ್ಲರೊಳಗಿದೆ. ನಾವೆಲ್ಲರೂ ವಿಭಿನ್ನವಾಗಿದ್ದರೂ, ನಾವೆಲ್ಲರೂ ಒಂದೇ ಎಂದು ಗುರುತಿಸುವುದು ಜಾಣ್ಮೆಯಾಗಿದೆ. ಮತ್ತೊಮ್ಮೆ ಎಲ್ಲರಿಗೂ ಹೇಳುತ್ತೇವೆ – ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸೇರಿದವರು. ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು. ನಮ್ಮ ಜೀವನವನ್ನು ಸಂಭ್ರಮಿಸೋಣ. ಸವಾಲುಗಳನ್ನು ದಿಟ್ಟತನದಂದ ಸ್ವೀಕರಿಸಿ ಎದುರಿಸೋಣ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕನಸನ್ನು ಕಾಣೋಣ ಎಂದರು.

ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಮಾತನಾಡಿ, ನಾವೆಲ್ಲರೂ ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ನಮ್ಮ ಭೂಮಿಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಸವಾಲುಗಳನ್ನು ನಾವು ಎದುರಿಸುವುದು ಸಹಜ. ನೈಸರ್ಗಿಕ ವಿಕೋಪಗಳಾಗಲಿ, ಮಾನವ ನಿರ್ಮಿತವಾದವುಗಳಾಗಲಿ, ಘರ್ಷಣೆಗಳಾಗಲಿ ಅಥವಾ ಅಡೆತಡೆಗಳಾಗಲಿ, ಪರಸ್ಪರ ಅವಲಂಬಿತ ಜಗತ್ತಿನಲ್ಲಿ, ನಾವು ಯಾವಾಗಲೂ ಒಬ್ಬರಿಗೊಬ್ಬರು ಇರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ. ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಅವರು ಇತ್ತೀಚೆಗೆ ಬೀರಿದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂದು, ಅವರ ಸಂದೇಶ, ನಿಮ್ಮ ಸಂದೇಶ, ನಮ್ಮ ಸಂದೇಶವು ಕಾಳಜಿ, ಹಂಚಿಕೊಳ್ಳುವಿಕೆ, ಔದಾರ್ಯ, ತಿಳುವಳಿಕೆಯ ಸದ್ಭಾವನೆ ಮತ್ತು ಸಹಕಾರವಾಗಿರಬೇಕು. ಇದುವೇ ನಮ್ಮೆಲ್ಲರನ್ನೂ ಇಲ್ಲಿ ಒಟ್ಟುಗೂಡಿಸಿರುವುದು ಎಂದು ತಿಳಿಸಿದರು.

ದಿ ರೆವರೆಂಡ್ ಬಿಷಪ್ ಎಮೆರಿಟಸ್ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋದ ಪೋಪ್, ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಚಾನ್ಸೆಲರ್ ಎಮೆರಿಟಸ್ ಹೋಲಿ ಸೀ ಅವರು ಮಾತನಾಡಿ, “ವಿಶ್ವ ಶಾಂತಿಯನ್ನು ಹೊಂದಲು, ನಮ್ಮಲ್ಲಿ ಆಂತರಿಕ ಶಾಂತಿಯಿರಬೇಕು. ಶಾಂತಿಯನ್ನು ಸಂವಹನ ಮಾಡಲು, ನಾವು ಶಾಂತಿಯಿಂದ ಬದುಕಬೇಕು ಮತ್ತು ಶಾಂತಿಯಿಂದ ಬದುಕಲು, ನಮಗೆ ಆರ್ಟ್ ಆಫ್ ಲಿವಿಂಗ್ ಅಗತ್ಯವಿದೆ. ಶಾಂತಿಯಿಂದ ಬದುಕುವ ಕಲೆಯನ್ನು ಹೊಂದಲು, ನಾವು ದೇವರೊಂದಿಗೆ ಸಂವಹನವನ್ನು ಹೊಂದಿರಬೇಕು. ದೇವರು ಮಾನವನಿಗೆ ಶತ್ರುವಲ್ಲ. ದೇವರು ಒಬ್ಬ ಸ್ನೇಹಿತ, ದೇವರು ಅಂದರೆ ಪ್ರೀತಿ. ದೇವರನ್ನು ಹೊಂದಲು, ನಾವು ಧ್ಯಾನಕ್ಕೆ, ಪ್ರಾರ್ಥನೆಗೆ ಹಿಂತಿರುಗಬೇಕಾಗಿದೆ. ನಾವು ನಮ್ಮ ಮೂಲಕ್ಕೆ ಹಿಂತಿರುಗಬೇಕಾಗಿದೆ ಎಂದರು.

ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರು ಮಾತನಾಡಿ, “ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸುತ್ತದೆ, ಗೋಡೆಗಳನ್ನು ಒಡೆಯುತ್ತದೆ, ಮಾತುಕತೆ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಜಗತ್ತನ್ನು ಒಟ್ಟುಗೂಡಿಸುತ್ತದೆ. ಜನರು ಮತ್ತು ರಾಷ್ಟ್ರಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಂಸ್ಕೃತಿಯು ಎಲ್ಲಾ ಜಾಗತಿಕ ನಾಗರಿಕರ ನಡುವೆ ಪ್ರಬಲ ವಿನಿಮಯವನ್ನು ರಚಿಸಬಹುದು. ಇಂದು, ಪ್ರಪಂಚದ ಎಲ್ಲಾ ಸಾಂಸ್ಕೃತಿಕ ಶ್ರೀಮಂತಿಕೆಯು, ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಮಾಲ್‌ನಲ್ಲಿ ಒಟ್ಟುಗೂಡಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಏಕತೆ ಮತ್ತು ವೈವಿಧ್ಯತೆಯ ಸ್ಫೂರ್ತಿದಾಯಕ ದೃಷ್ಟಿಕೋನವನ್ನು ನಾನು ಪ್ರಶಂಸಿಸುತ್ತೇನೆ. ನಮಗೆ ಇಂತಹ ಹೆಚ್ಚು ಹೆಚ್ಚು ಆಚರಣೆಗಳು, ಹೆಚ್ಚು ಒಗ್ಗೂಡುವಿಕೆ, ಹೆಚ್ಚು ಶಾಂತಿ ಮತ್ತು ಹೆಚ್ಚಿನ ಸಹಕಾರ, ಐಕ್ಯಭಾವ ಮತ್ತು ಪಾಲುದಾರಿಕೆಯ ಅಗತ್ಯವಿದೆ. ನಾವು ಈಗ ಎದುರಿಸುತ್ತಿರುವ ದೊಡ್ಡ ಸವಾಲುಗಳ ಮೇಲೆ ನಾವು ಹೀಗೆಯೇ ಮುನ್ನುಗ್ಗಿ ಮುಂದುವರಿಯುತ್ತೇವೆ. ಇದೇ ರೀತಿ ನಾವು ಶಾಂತಿಯನ್ನು ನಿರ್ಮಿಸುತ್ತೇವೆ ಎಂದರು.

ಇದನ್ನೂ ಓದಿ | Rajyotsava Award 2023 : ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಹೆಸರು ನಾಮನಿರ್ದೇಶನ ಮಾಡಿ; ಅ. 15 ಕೊನೆ ದಿನ

ವಾಷಿಂಗ್ಟನ್ ಡಿಸಿಯ ಮೇಯರ್ ಮುರಿಯಲ್ ಬೌಸರ್, ಮಿಚಿಗನ್ ಕಾಂಗ್ರೆಸಿಗ ಥಾನೆದರ್, ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಜಿ ಸಚಿವ, ಸಂಸದ ಹಕುಬುನ್ ಶಿಮೊಮುರಾ, ಯುಎನ್‌ಇಪಿಯ ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್‌ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್‌ಹೈಮ್, ಹಾಗೆಯೇ ಮಾಜಿ ಅಂತಾರಾಷ್ಟ್ರೀಯ ಅಭಿವೃದ್ಧಿ ನಾರ್ವೆ ಸಚಿವರು ಮತ್ತು ಇತರ ಜಾಗತಿಕ ಗಣ್ಯರು, ಅನೇಕ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಸಂಘರ್ಷದ ಜಗತ್ತಿನಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯದ ಸಹಬಾಳ್ವೆಗಾಗಿ ತಮ್ಮ ಸಾಮಾನ್ಯ ದೃಷ್ಟಿಯನ್ನು ಹಂಚಿಕೊಂಡರು.

Exit mobile version