ನವದೆಹಲಿ: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾನ (Ram Lalla) ವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆ’ (Prana Pratishtha) ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಮವಾರ ಸಂಜೆ ‘ರಾಮ ಜ್ಯೋತಿ’ ಬೆಳಗಿಸಿದರು(Ram Jyothi). ಈ ಮೊದಲೇ ಅವರು ರಾಮ ಜ್ಯೋತಿ ಬೆಳಗಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಅದರಂತೆ ಅವರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶುಭ ಸಂದರ್ಭದಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಿ ರಾಮ ಲಲ್ಲಾನನ್ನು ಸ್ವಾಗತಿಸುವಂತೆ ಪ್ರಧಾನಿ ನಾಗರಿಕರಿಗೆ ಹೇಳಿದ್ದರು. ಮತ್ತೊಂದೆಡೆ, ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ಬಿಜೆಪಿ ಕಾರ್ಯಕರ್ತರು 1008 ರಾಮ ಜ್ಯೋತಿಗಳನ್ನು ಬೆಳಗಿದರು. ಒಟ್ಟಾರೆ 10 ಲಕ್ಷ ದೀಪಗಳಿಂದ ಅಯೋಧ್ಯೆ ಮಿನುಗುತ್ತಿದೆ.
ಈ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳು ರಾಮ ಜ್ಯೋತಿಯನ್ನು ಬೆಳಗಿಸಲು ಮತ್ತು ಅವರ ಮನೆಗಳಲ್ಲಿ ಭಗವಾನ್ ರಾಮನನ್ನು ಸ್ವಾಗತಿಸಲು ನಾನು ವಿನಂತಿಸುತ್ತೇನೆ. ಜೈ ಸಿಯಾ ರಾಮ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ವೇದಿಕೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
रामज्योति! #RamJyoti pic.twitter.com/DTxg2QquTT
— Narendra Modi (@narendramodi) January 22, 2024
ಪ್ರತಿಷ್ಠಾಪನೆಯ ಸಮಾರಂಭದ ನಂತರ, ಅಯೋಧ್ಯಾ ನಗರವು 10 ಲಕ್ಷ ದೀಪಗಳ ಪ್ರಕಾಶದಿಂದ ಅಲಂಕರಿಸಲ್ಪಟ್ಟಿದೆ, ಅದರ ಭೂದೃಶ್ಯವನ್ನು ಮೋಡಿಮಾಡುವ ದೃಶ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕರೆಯ ಮೇರೆಗೆ ಮನೆಗಳು, ಅಂಗಡಿಗಳು, ಧಾರ್ಮಿಕ ಸ್ಥಳಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಲಾಗುತ್ತದೆ, ಇದು ಅಯೋಧ್ಯೆಯಲ್ಲಿ ಭಗವಾನ್ ರಾಮನ ದೈವಿಕ ಉಪಸ್ಥಿತಿಯನ್ನು ಸಂಕೇತಿಸುವ ಮೋಡಿಮಾಡುವ ವಾತಾವರಣವನ್ನು ಸೃಷ್ಟಿಸಿದೆ.
ಇದಕ್ಕೂ ಮೊದಲು ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ಆರ್‌ಪಿ ಯಾದವ್ ಅವರು, ಜನವರಿ 22ರ ಸಂಜೆ, 100 ಪ್ರಮುಖ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ, ಸ್ಥಳೀಯವಾಗಿ ರಚಿಸಲಾದ ದೀಪಗಳನ್ನು ಬಳಸಲಾಗುವುದು ಮತ್ತು ಸ್ಥಳೀಯ ಕುಂಬಾರರು ದೀಪಗಳನ್ನು ಸಿದ್ಧ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದರು.
ಇದು ರಾಮಮಂದಿರ ಅಷ್ಟೇ ಅಲ್ಲ, ರಾಷ್ಟ್ರಮಂದಿರ: ಪ್ರಾಣ ಪ್ರತಿಷ್ಠೆ ಬಳಿಕ ಮೋದಿ ಭಾವುಕ ನುಡಿ
“ನೂರಾರು ವರ್ಷಗಳ ತ್ಯಾಗ, ಬಲಿದಾನದ ಪ್ರತೀಕವಾಗಿ ರಾಮಮಂದಿರ ನಮ್ಮ ಕಣ್ಣೆದುರು ನಿಂತಿದೆ. ಇದು ಕೇವಲ ರಾಮಮಂದಿರವಲ್ಲ, ರಾಷ್ಟ್ರಮಂದಿರ” ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಹೇಳಿದರು. ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಶ್ರೀ ರಾಮಚಂದ್ರ ಕೀ ಜೈ ಎಂದು ಭಾಷಣ ಆರಂಭಿಸಿದ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ರಾಮನ ಎಲ್ಲ ಭಕ್ತರಿಗೆ ಪ್ರಣಾಮಗಳು. ಇಂದು ನಮ್ಮ ರಾಮ ಬಂದಿದ್ದಾನೆ. ಎಲ್ಲರ ಧೈರ್ಯ, ಬಲಿದಾನ, ತ್ಯಾಗ, ತಪಸ್ಸಿನ ಬಳಿಕ ನಮ್ಮ ಶ್ರೀರಾಮ ಬಂದಿದ್ದಾನೆ ಎಂದು ಹೇಳಿದರು.
“ಇಂತಹ ಶುಭ ಘಳಿಗೆಯಲ್ಲಿ ದೇಶದ ಸಮಸ್ತ ಜನರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಈಗಷ್ಟೇ ನಾನು ಪ್ರಾಣಪ್ರತಿಷ್ಠೆ ಬಳಿಕ ನಿಮ್ಮ ಎದುರು ಬಂದು ನಿಂತಿದ್ದೇನೆ. ನಿಮ್ಮ ಜತೆ ನಾನು ಅಸಂಖ್ಯ ವಿಚಾರಗಳನ್ನು ಹೇಳಬೇಕು. ಆದರೆ, ನಾನು ಪದಗಳೇ ಇಲ್ಲದಂತಾಗಿದ್ದೇನೆ. ಈಗಲೂ ನನ್ನ ದೇಹ, ಮನಸ್ಸು ರಾಮನೊಂದಿಗೆ ವಿಲೀನವಾಗಿದೆ. ಈಗ ನಮ್ಮ ರಾಮಲಲ್ಲಾ ಟೆಂಟ್‌ನಲ್ಲಿ ಇರುವುದಿಲ್ಲ. ಇಂತಹ ಭವ್ಯ ರಾಮಮಂದಿರದಲ್ಲಿ ರಾಮನು ವಿರಾಜಮಾನನಾಗಿದ್ದಾನೆ” ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Ram Mandir: ಭಕ್ತನಿಗೆ ಹಾರ್ಟ್ ಅಟ್ಯಾಕ್, ಜೀವ ಉಳಿಸಿದ ವಾಯುಪಡೆಯ ಮೊಬೈಲ್ ಹಾಸ್ಪಿಟಲ್!