Site icon Vistara News

Ram Mandir: ರಾಮನನ್ನೇ ಇಬ್ಭಾಗ ಮಾಡಲು ಹೊರಟ ಕಾಂಗ್ರೆಸ್‌ಗೆ ಧಿಕ್ಕಾರ: ಪ್ರಲ್ಹಾದ್ ಜೋಶಿ ಕಿಡಿ

Pralhad Joshi

ಬೆಂಗಳೂರು: ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯವು ಅದ್ಧೂರಿಯಾಗಿ ಸಂಪನ್ನವಾಗಿದೆ. ಈ ನಡುವೆ ಕಾಂಗ್ರೆಸ್‌ ಧೋರಣೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Union Minister Pralhad Joshi) ಕಿಡಿಕಾರಿದ್ದು, ರಾಮನನ್ನೇ ಇಬ್ಭಾಗ ಮಾಡಲು ಕಾಂಗ್ರೆಸ್‌ (Congress Karnataka) ಹೊರಟಿಸದೆ ಎಂದು ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರು ಈ ಪ್ರಯತ್ನಕ್ಕೆ ತಮ್ಮದೊಂದು ಧಿಕ್ಕಾರ ಎಂದು ಹೇಳಿದ್ದಾರೆ. ರಾಮನ ಹೆಸರಿಗೆ ಮಸಿ ಬಳಿದ ನಿಮಗೆ ಈಗ ರಾಮರಾಜ್ಯದ ಕನಸೇ ಎಂದೂ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್‌ ಸರ್ಕಾರ ಹಾಗೂ ಆ ಪಕ್ಷದ ನಾಯಕರ ಧೋರಣೆ ಬಗ್ಗೆ ಕಿಡಿಕಾರಿದ್ದಾರೆ. ಜಾತಿ ಗಣತಿ ಬಗ್ಗೆಯೂ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ರಾಮನನ್ನು ನ್ಯಾಯಾಲಯಕ್ಕೆ ತಂದು ನಿಲ್ಲಿಸಿದ ಕಾಂಗ್ರೆಸ್ಸಿಗರು ಈಗ ಬಣ್ಣ ಬದಲಿಸಿದ ಊಸರವಳ್ಳಿಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Education News: ಶಾಲೆಗಳಲ್ಲಿ ಗಾಂಧೀಜಿ ವಿಚಾರಧಾರೆಯ ಪ್ರಬಂಧ ಸ್ಪರ್ಧೆ; ಮಧು ಬಂಗಾರಪ್ಪಗೆ ಸಿಎಂ ಸೂಚನೆ

“ರಾಮ ರಾಜ್ಯದ ಕನಸು ನಮ್ಮ ಗ್ಯಾರಂಟಿಗಳಿಂದ ನನಸು” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟರ್‌ನಲ್ಲಿ ಹಾಕಿಕೊಂಡಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಲ್ಹಾದ್‌ ಜೋಶಿ, ಈಗ ರಾಮ ನೆನಪಾದನೇ? ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಬಿಜೆಪಿಯವರ ರಾಮ, ಕಾಂಗ್ರೆಸ್‌ನವರ ರಾಮ ಎನ್ನುತ್ತ ರಾಮನನ್ನೇ ಇಬ್ಭಾಗ ಮಾಡುವ ಪ್ರಯತ್ನ ಮಾಡುತ್ತಿದ್ದೀರಿ. ಧಿಕ್ಕಾರವಿರಲಿ ನಿಮ್ಮ ಕಾಂಗ್ರೆಸ್ ಪಕ್ಷದ ನೀಚ ರಾಜಕಾರಣಕ್ಕೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಲ್ಲೂ ರಾಜಕಾರಣ ಮಾಡುವ ನಿಮ್ಮದು ನೀಚ ರಾಜಕಾರಣವಾಗಿದೆ. ಶ್ರೀರಾಮ ಭಾರತೀಯರ ಅಸ್ಮಿತೆಯ ಸಂಕೇತ. ನಮ್ಮ ಮಣ್ಣಿನ ಮಹೋನ್ನತ ಇತಿಹಾಸವನ್ನು ಸಾರುವ ಮರ್ಯಾದಾ ಪುರುಷೋತ್ತಮ. ಅಂಥ ಮಹಾಮಹಿಮನ ಹೆಸರಿಗೆ ಮಸಿ ಬಳಿದ ನಿಮ್ಮ ಪಕ್ಷಕ್ಕೆ ಈಗ ರಾಮ ರಾಜ್ಯದ ಕನಸೇ..? ಎಂದು ಪ್ರಲ್ಹಾದ್‌ ಜೋಶಿ ಪ್ರಶ್ನೆ ಮಾಡಿದ್ದಾರೆ.

ರಾಮ ಎಲ್ಲಿದ್ದಾನೆ? ಎಂದವರು ರಾಮನ ಜನನ ಪತ್ರ ಬಯಸಿದವರು ನೀವು, ರಾಮನನ್ನು ನ್ಯಾಯಾಲಯದಲ್ಲಿ ನಿಲ್ಲಿಸಲು ಹಾತೊರೆದವರು ನೀವು, ಕೋಮುಗಲಭೆ ಆಗಬಹುದೆಂಬ ನೆಪವೊಡ್ಡಿ ರಾಮ ಜನ್ಮಭೂಮಿಯ ತೀರ್ಪನ್ನು ಕೊಡದಂತೆ ಆಗ್ರಹಿಸಿದವರು ನೀವು. ಈಗ ಬಣ್ಣ ಬದಲಿಸಿದ ಊಸರವಳ್ಳಿಗಳಾಗಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Alcohol price hike: ಬಿಯರ್ ದರ 10 ರೂಪಾಯಿ ಹೆಚ್ಚಳ? ಪ್ರಸ್ತಾವನೆ ಸಲ್ಲಿಸಿದೆ ಅಬಕಾರಿ ಇಲಾಖೆ!

ಜಾತಿ ಗಣತಿ ಬಗ್ಗೆ ವಿರೋಧ

ಜಾತಿ ಗಣತಿ ಮೂಲಕ ಜನರನ್ನು ಜಾತಿಯ ಹೆಸರಲ್ಲಿ ಒಡೆಯುವ ಹುನ್ನಾರ ಮಾಡಿದ್ದೀರಿ ಎಂದು ಪ್ರಲ್ಹಾದ್‌ ಜೋಶಿ ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Exit mobile version