ಬಿಗ್ ಬಾಸ್ ಸೀಸನ್ 10ರ 8ನೇ (BBK SEASON 10) ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ನೀಡಿದ್ದರು. ಸ್ಪರ್ಧಿಗಳು ತಮ್ಮ ತಮ್ಮ ಜೀವನದಲ್ಲಿ ಎದುರಿಸಿದ ಸದಾ ಕಾಡುವ ನೋವಿನ ಘಟನೆಗಳನ್ನು ಹಂಚಿಕೊಳ್ಳಬೇಕಿತ್ತು. ಈ ವೇಳೆ ಪ್ರತಾಪ್ ವಿವಾದದಲ್ಲಿ ಸಿಲುಕಿದಾಗ ಏನೆಲ್ಲ ಕಷ್ಟಗಳನ್ನು ಎದುರಿಸಿದೆ. ಹಾಗೇ ʻಮೆಂಟಲಿ ಅನ್‌ಸ್ಟೇಬಲ್ (Mentally Unstable) ಎಂದು ಬರೆದುಕೊಡು’ ಎಂದು ತಲ್ ತಲೆ ಮೇಲೆ ಹೊಡೆದರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಪ್ರತಾಪ್ ಆರೋಪಗಳನ್ನು ಅಂದು ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಖಂಡಿಸಿದ್ದರು. ಇದೀಗ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಪ್ರಕಾರ, ಪ್ರಯಾಗ್ ರಾಜ್ (Prayag Raj) 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಗುರುವಾರ (ಜ.18) ಕೋರ್ಟ್‌ನಿಂದ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ.
ಪ್ರತಾಪ್ ಹೇಳಿದ್ದೇನು?
ಪ್ರತಾಪ್ ಮಾತನಾಡಿ ʻʻನನ್ನ ಜೀವನದಲ್ಲಿ ಏನು ಆಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾನು ದೇಶ ಬಿಟ್ಟು ಹೊರಗೆ ಹೋಗಿದ್ದೆ. ನನ್ನ ಜತೆ ಇದ್ದ ಬ್ಲಾಗರ್ಸ್ ಕೆಲಸ ಮಾಡಿದವರು. ನನ್ನ ಬಗ್ಗೆ ಒಂದಷ್ಟು ಕಥೆಗಳನ್ನ ಕ್ರಿಯೇಟ್ ಮಾಡಿದರು. ಡ್ರೋನ್ ಪ್ರತಾಪ್ ದುಡ್ಡು ತಗೊಂಡಿದ್ದಾನೆ ಎಂದು ಮೂರು ವ್ಯಕ್ತಿಗಳು ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿದರು. ಜೀವನದಲ್ಲಿ ಒಂದೆರಡು ಮಾತುಗಳನ್ನ ಬಾಯ್ತಪ್ಪಿ ಹೇಳಿದ್ದೀನಿ. ಸಾಕಷ್ಟು ಅನುಭವಿಸಿದೆ. ನಾನು ಸರಿಯಾಗಿದ್ದರೂ ಮಾತನಾಡಲು ಆಗ್ತಾ ಇರಲಿಲ್ಲʼʼ ಎಂದಿದ್ದರು.
ಇದನ್ನೂ ಓದಿ: BBK SEASON 10: ʻನಾಮಿನೇಷನ್ʼನಿಂದ ಪಾರಾದ ಡ್ರೋನ್ ಪ್ರತಾಪ್; ಕಣ್ಣೀರಿಟ್ಟ ನಮ್ರತಾ!
ಇದನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡು ಇಲ್ಲಿಗೆ ಬಂದ್ಮೇಲೆ ಹೆಂಗೋ ಪರಿಚಯ ಆಯ್ತು. ಹೋಗಿ ಮಾತನಾಡಿಸಿದೆ. ಅಲ್ಲಿಂದ ಕರ್ಕೊಂಡ್ ಹೋಗಿ ನನ್ನನ್ನ ಯಾರಿಗೋ ಪರಿಚಯ ಮಾಡಿಸಿದರು. ಅಲ್ಲಿಂದ ನಾನು ಮೈಸೂರಿಗೆ ಹೊರಟು ಬಂದೆ. ಆಗ ಅವರು ನನಗೆ 2 ಸಾವಿರ ರೂಪಾಯಿ ನೋಟು ಕೊಟ್ಟರು. ಅದು ಬಿಟ್ಟರೆ ನಾನು ಒಂದು ರೂಪಾಯಿ ಹಣ ತಗೊಂಡಿಲ್ಲʼʼಎಂದಿದ್ದರು.
ʻಚಿಕ್ಕಮಗಳೂರಿನಲ್ಲೇ ಇದ್ದೆ. ತಂದೆ ಕರ್ಕೊಂಡು ಹೋಗಿ ಕ್ವಾರಂಟೈನ್ ಕೇಸ್‌ಗೆ ಪೊಲೀಸ್ ಸ್ಟೇಷನ್‌ನಲ್ಲಿ ಇರಿಸಿದರು. ಶೂಟ್ ಅಟ್ ಸೈಟ್ ಆರ್ಡರ್ ಕೊಟ್ಟಿದ್ದಾರೆ ಎಂದು ಊರೆಲ್ಲ ಸುದ್ದಿಯಾಯ್ತು. ನನ್ನ ಅಪ್ಪ – ಅಮ್ಮ ಹೊರಗಡೆ ಬಂದಿಲ್ಲ. ನನ್ನ ತಾಯಿ ಬಾಗಿಲು ಹಾಕಿಕೊಂಡು ತೋಟದ ಕಡೆ ಓಡಿದ್ರು. ಊಟದಲ್ಲಿ ವಿಷ ಹಾಕಿ ಸಾಯಿಸಬೇಕಿತ್ತು.. ಯಾಕೆ ಬಿಟ್ಟಿದ್ದೀರಾ ಇನ್ನೂ ಎಂದು ಸಂಬಂಧಿಕರು ಅಂದರು. ಚಿಕ್ಕಮಗಳೂರಿನಿಂದ ಬಂದಮೇಲೆ ಬೆಂಗಳೂರಿನ ಶಾಂತಿನಗರದಲ್ಲಿರುವ ಹೋಟೆಲ್‌ನಲ್ಲಿ ನನ್ನನ್ನ ಇರಿಸಿದರು. ಅಲ್ಲಿ ಸ್ಕ್ರೀನ್ ಓಪನ್ ಮಾಡಿದರೆ ಸುತ್ತ ಕ್ಯಾಮೆರಾಗಳು.. ಯಾವ ಪ್ರತಾಪ್‌ನ ಮೆರೆಸಿದ್ರೋ, ಹೋಟೆಲ್ ಸುತ್ತ ಪೊಲೀಸ್ ರಿಸರ್ವ್. ಆಮೇಲೆ ಆ ನ್ಯೂಸ್ ಜತೆ ಮಾತನಾಡು, ಈ ನ್ಯೂಸ್ ಜತೆ ಮಾತನಾಡು, ಆ ಪೇಪರ್‌ನವರ ಬಳಿ ಮಾತನಾಡು.. ಎಲ್ಲವನ್ನೂ ಒಪ್ಪಿಕೋ ಎಂದು ಕೊಡಬಾರದ ಹಿಂಸೆ ಕೊಟ್ಟರು. ನಿನ್ನ ತಂಗಿಯನ್ನ ಯಾರು ಮದುವೆ ಆಗ್ತಾರೆ? ನಿನ್ನ ತಂಗಿಗೆ ಮದುವೆಯಾಗದ ಹಾಗೆ ಮಾಡ್ತೀವಿ. ನಿನ್ನ ಅಮ್ಮ ಹುಚ್ಚಿ ತರಹ ರೋಡ್‌ನಲ್ಲಿ ಅಲೆಯಬೇಕು. ನಿನ್ನ ತಂದೆಗೆ ಯಾರೂ ಇರಬಾರದು. ಯಾರೂ ಸಹಾಯ ಮಾಡಬಾರದು ಎಂದು ಹೇಳಿದ್ದರುʼʼಎನ್ನುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಇದನ್ನೂ ಓದಿ: BBK SEASON 10: ಮನೆಗೆ ಮರಳುತ್ತಿದ್ದಂತೆ ದೇವರಿಗೆ ಊದಿನ ಕಡ್ಡಿ ಹಚ್ಚಿ ಪೂಜೆ ಮಾಡಿದ ಡ್ರೋನ್ ಪ್ರತಾಪ್!
’ಮೆಂಟಲ್ ಆಸ್ಪತ್ರೆಯಿಂದ ಡಾಕ್ಟರ್‌ನ ಕರ್ಕೊಂಡ್ ಬಂದರು. ಮೆಂಟಲಿ ಅನ್‌ಸ್ಟೇಬಲ್ ಅಂತ ಬರೆದುಕೊಡು ಎಂದು ಹಿಂಸೆ ಕೊಟ್ಟರು. ನನ್ನ ಪಾಸ್‌ಪೋರ್ಟ್, ಐಪ್ಯಾಡ್ ಕಿತ್ತುಕೊಂಡರು. ಎಲ್ಲ ಕಿತ್ತುಕೊಂಡು.. ಮೆಂಟಲಿ ಅನ್‌ಸ್ಟೇಬಲ್ ಬರಿ ಎಂದು ಸ್ಟೇಟ್‌ಮೆಂಟ್ ರೆಡಿ ಮಾಡಿಸಿದರು. ಕೊನೆಗೆ ನಾನು ಯಾವುದಕ್ಕೂ ಸಹಿ ಹಾಕಲಿಲ್ಲ. ನನ್ನ ತಂದೆ – ತಾಯಿ ಜತೆಗೆ ಮಾತನಾಡಿದರು. ಮೆಂಟಲಿ ಅನ್‌ಸ್ಬೇಬಲ್ ಎಂದು ಬರೆದುಕೊಡು ಎಂದು ತಲೆ ಮೇಲೆ ಹೊಡೆಯುತ್ತಿದ್ದರು ನನಗೆ’’ ಎಂದು ಅತ್ತಿದ್ದರು.
ಪ್ರಯಾಗ್ ಹೇಳಿದ್ದೇನು?
ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಪ್ರಯಾಗ್ ಅವರು ಮಾತನಾಡಿ ʻಪ್ರತಾಪ್ ಹೇಳಿರುವುದು ಸುಳ್ಳು. ಸತ್ಯ ಆಗಿದ್ದರೆ, ಮೂರು ವರ್ಷಗಳ ಕಾಲ ಸುಮ್ಮನೆ ಇರುತ್ತಿರಲಿಲ್ಲ. ಒಂದು ಪಕ್ಷ ನಾನು ಹೊಡೆದಿದ್ದೇ ಆಗಿದ್ದರೆ, ಆಗಲೇ ಅವನು ಕಂಪ್ಲೇಂಟ್ ಮಾಡಬೇಕಿತ್ತು. ನಾವು ನಮ್ಮ ಪವರ್ ಮಿಸ್‌ಯೂಸ್ ಮಾಡಿದ್ದೇ ಆಗಿದ್ದರೆ, ನಮಗೆ ಕೆಲಸಾನೇ ಹೋಗುತ್ತಿತ್ತು. ಈಗ ಆತ ಪ್ರೂವ್ ಮಾಡಬೇಕು. ಸಾರ್ವಜನಿಕರು ನಮ್ಮ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಆತ ಬೇಕಿದ್ದರೆ ಸಾಬೀತು ಮಾಡಲಿʼʼ ಎಂದಿದ್ದರು.
ʻʻಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ಕೂತು ಸಂದರ್ಶನದಲ್ಲಿ ಮಾತನಾಡಿದ್ದ. ಆತ ಹೇಳುವಂತೆ ಇಡೀ ಪೊಲೀಸ್ ಪಡೆ ಅವನನ್ನು ಸುತ್ತುವರಿದಿರಲಿಲ್ಲ. ತಂದೆ ತಾಯಿ ವಿಚಾರ ಬಂದಾಗ ಆತ ವೀಕ್ ಆಗುತ್ತಿದ್ದ. ಆಗ ನಾವು ತಂದೆ ತಾಯಿ ಕರೆಸಿ ಮಾತನಾಡಿದ್ದೆವು. ಆತ ಡಿಗ್ರಿ ಮಾಡಿರುವುದು ನನಗೆ ಅನುಮಾನ ಇದೆ. ಆತ ಹೇಳುತ್ತಿರುವುದೆಲ್ಲಾ ಸುಳ್ಳು. ಆಯಾ ದೇಶಗಳಿಂದಲೇ ಪ್ರತಾಪ್ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ನಮಗೆ ಮಾಹಿತಿ ಸಿಕ್ಕಿತ್ತುʼʼ ಎಂದಿದ್ದರು.