BBK SEASON 10: ಎಲ್ರಿಗೂ ಒಳ್ಳೊಳ್ಳೆ ಫ್ರೆಂಡ್ಸ್‌ ಕಳ್ಸಿದೀರಿ; ನಂಗೆ ಹಾಳ್‌ಬಿದ್ದವನ್ನ ಕಳಿಸಿದ್ದೀರಲ್ಲ ಎಂದ ವಿನಯ್‌ - Vistara News

ಬಿಗ್ ಬಾಸ್

BBK SEASON 10: ಎಲ್ರಿಗೂ ಒಳ್ಳೊಳ್ಳೆ ಫ್ರೆಂಡ್ಸ್‌ ಕಳ್ಸಿದೀರಿ; ನಂಗೆ ಹಾಳ್‌ಬಿದ್ದವನ್ನ ಕಳಿಸಿದ್ದೀರಲ್ಲ ಎಂದ ವಿನಯ್‌

BBK SEASON 10: ಕಳೆದ ವಾರ ‘ಬಿಗ್ ಬಾಸ್‌’ ಮನೆಯಿಂದ ನೀತು ವನಜಾಕ್ಷಿ ಔಟ್‌ ಆದರು. ಆದರೆ ಮೈಕಲ್‌ಗೆ ನೀತು ಅವರು ಮುಂಜುನಾಥ್‌ ಆಗಿದ್ದಾಗಲೇ ಗೊತ್ತಿತ್ತು ಎಂದು ಮನೆಯಲ್ಲಿ ಹೇಳಿಕೊಂಡಿದ್ದಾರೆ. ಈ ಮಾತು ಕೇಳಿ ಸಿರಿ ಕೂಡ ಅಚ್ಚರಿಗೆ ಒಳಗಾದರು. ವಿನಯ್‌ ಕೂಡ ಮೈಕಲ್‌ ಹಾಗೂ ನೀತು ಇಬ್ಬರೂ ಮಾಡ್‌ಲಿಂಗ್‌ ಫ್ರೆಂಡ್ಸ್‌ ಎಂದರು.

VISTARANEWS.COM


on

vinay Gowda and sangeetha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಎಂಟನೇ ವಾರ ವಿನಯ್‌ ಅವರು ಫ್ರೆಂಡ್‌ಶಿಪ್‌ ಬಗ್ಗೆ ಮನೆಯಲ್ಲಿ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಮೈಕಲ್‌ ಅವರು ನೀತು ಮತ್ತು ನಾನು 6 ವರ್ಷಗಳಿಂದ ಸ್ನೇಹಿತರು ಎಂದು ಹೇಳಿದಾಗ, ವಿನಯ್‌ ಅವರು ʻಎಲ್ಲರಿಗೂ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್‌ಬಿದ್ದವನ್ನ ಕಳಿಸಿದ್ದೀರಲ್ಲʼಎಂದು ಬಿಗ್‌ ಬಾಸ್‌ ಮೇಲೆ ಬೇಸರಸಿಕೊಂಡರು.

ಕಳೆದ ವಾರ ‘ಬಿಗ್ ಬಾಸ್‌’ ಮನೆಯಿಂದ ನೀತು ವನಜಾಕ್ಷಿ ಔಟ್‌ ಆದರು. ಆದರೆ ಮೈಕಲ್‌ಗೆ ನೀತು ಅವರು ಮುಂಜುನಾಥ್‌ ಆಗಿದ್ದಾಗಲೇ ಗೊತ್ತಿತ್ತು ಎಂದು ಮನೆಯಲ್ಲಿ ಹೇಳಿಕೊಂಡಿದ್ದಾರೆ. ʻನೀತು ಮತ್ತು ನಾನು 6 ವರ್ಷಗಳಿಂದ ಸ್ನೇಹಿತರು. ನೀತುನೇ ನನಗೆ ಕೈ ಮೇಲೆ ಟ್ಯಾಟೂ ಹಾಕಿರೋದು. ಗೊತ್ತಿಲ್ವಾ ನಿಮಗೆ? ಅವರ ಟ್ಯಾಟೂ ಸ್ಟುಡಿಯೋ ಇರೋದು ನಮ್ಮ ಮನೆಯ ಹತ್ತಿರವೇ. ನೀತು ಟ್ರಾನ್ಸ್‌ಫಾರ್ಮ್ ಆಗೋಕೂ ಮುಂಚಿನಿಂದಲೇ ನನಗೆ ಗೊತ್ತು. ಮಂಜುನಾಥ್ ಆಗಿದ್ದ ಕಾಲದಿಂದಲೂ ಗೊತ್ತುʼ ಎಂದು ಸಿರಿ ಮುಂದೆ ಅಂದರು. ಈ ಮಾತು ಕೇಳಿ ಸಿರಿ ಕೂಡ ಅಚ್ಚರಿಗೆ ಒಳಗಾದರು. ವಿನಯ್‌ ಕೂಡ ಮೈಕಲ್‌ ಹಾಗೂ ನೀತು ಇಬ್ಬರೂ ಮಾಡೆಲಿಂಗ್‌ ಫ್ರೆಂಡ್ಸ್‌ ಎಂದರು.

ಇದನ್ನೂ ಓದಿ: BBK SEASON 10: ವಿನಯ್‌ ವಿನ್‌ ಆದ್ರೆ ಖುಷಿ ಎಂದ ಸ್ನೇಹಿತ್‌; ಮತ್ಯಾಕೆ ಅಲ್ಲಿ ಇದ್ದೀಯಾ? ಎಂದ ಪ್ರೇಕ್ಷಕರು!

ಇದಾದ ಬಳಿಕ ವಿನಯ್‌ ಅವರು ಸ್ನೇಹಿತ್‌ ಎದುರುಗಡೆ, ಬೇಸರ ಹೊರ ಹಾಕಿದರು. ‘ಬಿಗ್ ಬಾಸ್‌’.. ಎಲ್ಲರಿಗೂ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್‌ಬಿದ್ದವನ್ನ ಕಳಿಸಿದ್ದೀರಲ್ಲ. ನನಗೂ ಒಂದೊಳ್ಳೆ ಫ್ರೆಂಡ್ಸ್‌ ಕಳುಹಿಸಿದ್ದರೆ ಏನಾಗಿರೋದು? ನನಗೆ ಪರಿಚಯ ಇರೋರೆಲ್ಲಾ ಇಂಥ ಬೆನ್ನಿಗೆ ಚೂರಿ ಹಾಕುವವರೇ ಸಿಕ್ಕಿದ್ದಾರೆ. ಗೊತ್ತಿಲ್ಲದಿರುವ ದುಶ್ಮನ್‌ಗಿಂತ ಗೊತ್ತಿರೋ ಫ್ರೆಂಡ್‌ ತುಂಬಾ ಡೇಂಜರಸ್ ಅಂತೆʼʼ ಎಂದರು.

ವಿನಯ್‌ ಈ ಮಾತನ್ನು ಹೇಳಿದ್ದು ಕಾರ್ತಿಕ್‌ ಮಹೇಶ್‌ ಅವರನ್ನು ಉಲ್ಲೇಖಿಸಿ. ಅದಕ್ಕಿಂತ ಮೊದಲು ಕಾರ್ತಿಕ್‌ ಅವರು ತನಿಷಾನಿಗೆ ಸೇರಿದ ಪ್ರೊಟೀನ್‌ ಪೌಡರನ್ನು ತೆಗೆದಿಟ್ಟಿದ್ದರು. ಇದು ವಿನಯ್‌ ಅವರನ್ನು ಕೆರಳಿಸಿತ್ತು. ಬಳಿಕ ತುಂಬ ಹೊತ್ತು ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

ಸ್ನೇಹಿತ್, ವಿನಯ್, ನಮ್ರತಾ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಸ್ನೇಹಿತ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ‘ನಾವು ಮೂರು ಜನ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದ್ದೇವೆ’ ಎಂದರು ಸ್ನೇಹಿತ್. ‘ಟಾಪ್​ ಮೂರರಲ್ಲಿ ಇದ್ದಿದ್ದು ನಾವೇ’ ಎಂದು ವಿನಯ್ ಖುಷಿಪಟ್ಟರು. ಅಲ್ಲದೆ ಈ ವಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂಬ ಖುಷಿ ಇದೆ ಎಂದರು. ಇದಕ್ಕೆ ನಮ್ರತಾ ಕೂಡ ಒಪ್ಪಿಗೆ ಸೂಚಿಸಿದರು. ಫಿನಾಲೆಯಲ್ಲಿ ಟಾಪ್​ 3ಗೆ ನಾವೇ ಹೋಗಬೇಕು’ ಎಂದು ಸ್ನೇಹಿತ್ ಹೇಳಿದರು. ‘ಯೆಸ್ ನಾವು ಮೂರು ಜನ ಹೋಗುತ್ತೇವೆ. ಆದರೆ, ಅಲ್ಲಿ ವಿನ್ ಆಗೋದು ನಾನೇ’ ಎಂದರು ವಿನಯ್. ‘ನೀವು ವಿನ್ ಆದ್ರೆ ನನಗಿಂತ ಹೆಚ್ಚು ಖುಷಿಪಡುವವರು ಮತ್ತೊಬ್ಬರು ಇರಲ್ಲ’ ಎಂದರು. ಹೀಗೆ ವಿನಯ್‌ ತಮ್ಮ ಸ್ಟ್ರ್ಯಾಟಜಿ ಮೂಲಕ ಆಟದಲ್ಲಿ ಮುನ್ನುಗ್ಗುತ್ತಲೇ ಇದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Elvish Yadav: ಐಷಾರಾಮಿ ದುಬಾರಿ ಕಾರು ಖರೀದಿಸಿದ  ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌!

Elvish Yadav: ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

VISTARANEWS.COM


on

Elvish Yadav
Koo

ಬೆಂಗಳೂರು: ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಹೊಂದಿದ್ದಾರೆ. ಬಿಗ್‌ ಬಾಸ್‌ (Bigg Boss OTT 2) ಮೂಲಕವೇ ಜನಪ್ರೀಯತೆ ಪಡೆದ ಎಲ್ವಿಶ್ ಯಾದವ್ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ . ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿಯಲ್ಲಿ ಇವೆ. ಇದೀಗ ಎಲ್ವಿಶ್‌ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮರ್ಸಿಡಿಸ್‌ ಗ್ವ್ಯಾಗನ್‌ G350 D (Mercedes G Wagon) ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂ. ಮರ್ಸಿಡಿಸ್‌ ಗ್ವ್ಯಾಗನ್‌ G350 D ಬಾಕ್ಸಿ ಸ್ಟೈಲಿಂಗ್‌ನಿಂದ ಕೂಡಿದೆ.

ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

ಏನಿದು ಪ್ರಕರಣ?

ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿತ್ತು. ನಂತರ ಎಲ್ವಿಶ್‌ಗೆ ಗೌತಮ್ ಬುದ್ ನಗರ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನೀಡಿತು. ಮಾರ್ಚ್ 17 ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆ ಬಳಿಕ ಗುರುಗ್ರಾಮ್ ನ್ಯಾಯಾಲಯದಿಂದ ಜಾಮೀನು ಪಡೆದರು. ಎರಡು ಜಾಮೀನು ಪಡೆದ ಬಳಿಕ ಇದೀಗ ರಿಲ್ಯಾಕ್ಸ್‌ ಆಗಿದ್ದಾರೆ ಎಲ್ವಿಶ್‌.

ಇದನ್ನೂ ಓದಿ: Elvish Yadav: ಎರಡು ಜಾಮೀನು ಪಡೆದ ಬಳಿಕ ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ ಟೆಂಪಲ್ ರನ್‌!

ಜಾಮೀನು ಪಡೆದ ನಂತರ, ಎಲ್ವಿಶ್ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದರು, “ಒಂದು ವಾರ ನಿಸ್ಸಂದೇಹವಾಗಿ ಕಳೆದುಹೋಯಿತು. ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು. ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ. ನನ್ನನ್ನು ಬೆಂಬಲಿಸಿದವರೆಲ್ಲರೂ ನನ್ನನ್ನು ಬೆಂಬಲಿಸಲಿಲ್ಲ, ನನ್ನ ಬಗ್ಗೆ ಕೆಟ್ಟದಾಗಿ ಹಾಗೂ ಚೆನ್ನಾಗಿ ಮಾತನಾಡಿದವರೆಲ್ಲರಿಗೂ, ಧನ್ಯವಾದಗಳು. ನಾನು ಎಲ್ಲರಿಗೂ ಧನ್ಯವಾದ ಮಾತ್ರ ಹೇಳಬಲ್ಲೆ. ನಾನು ನನ್ನ ಕೆಲಸಕ್ಕೆ ಮತ್ತೆ ಮರಳಿದ್ದೇನೆʼʼ ಎಂದು ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Tanisha Kuppanda: ತನಿಷಾಳ ಕನಸು ನನಸಾಗಿದೆ, ಹೊಸ ಬ್ಯುಸಿನೆಸ್‌ ಸಕ್ಸೆಸ್‌ ಆಗಲಿ ಎಂದು ಆಶಿಸಿದ ಕಾರ್ತಿಕ್‌!

Tanisha Kuppanda: ʻಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

VISTARANEWS.COM


on

Tanisha Kuppanda with karthik
Koo

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಅವರು ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್​ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಆದರೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.

ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

ಇದು ಮಾ. 29ರಂದು ಉದ್ಘಾಟನೆಯಾಗಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾಗೇ ಸೀಸನ್‌ 10ರ ವಿನ್ನರ್‌, ತನಿಷಾ ಅವರ ಬೆಸ್ಟ್‌ ಫ್ರೆಂಡ್‌ ಕಾರ್ತಿಕ್‌ ಮಹೇಶ್‌ ಸಹ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ!

ಕಾರ್ತಿಕ್‌ ಮಹೇಶ್‌ ಈ ಬಗ್ಗೆ ಇನ್‌ಸ್ಟಾ ಪೋಸ್ಟ್‌ ಮಾಡಿ ʻʻಬಿಗ್ ಬಾಸ್ ಮನೆಯಲ್ಲಿ ತನಿಶಾ ತನ್ನ ಕನಸಿನ ಬಗ್ಗೆ ಬಹಳ ಉತ್ಸುಕಳಾಗಿ ಹೇಳುತ್ತಿದ್ದಾಗ ಆಲಿಸಿದ್ದೆ. ಇಂದು ಗೆಳತಿ ತನಿಷಾಳ ಕನಸು ನನಸಾಗಿದೆ. ನಿನ್ನ ಮುಂದಿನ ಎಲ್ಲಾ ಕೆಲಸಗಳು ಯಶಸ್ವಿಯಾಗಲಿ ಎಂದು ಪ್ರೀತಿಯಿಂದ ಆಶಿಸುವೆʼʼಎಂದು ಬರೆದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

Continue Reading

ಬಿಗ್ ಬಾಸ್

Varthur Santhosh: ಟೀಕೆಗಳಿಗೆ ಮನನೊಂದು ಕಣ್ಣೀರಿಟ್ಟ ವರ್ತೂರ್‌ ಸಂತೋಷ್‌!

Varthur Santhosh: ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯುಟ್ಯೂಬ್‌ ಚಾನೆಲ್‌ ವೊಂದರ ಬಗ್ಗೆ ಹಾಗೂ ಒಬ್ಬ ವ್ಯಕ್ತಿಯ ಬಗ್ಗೆ ಕಟುವಾಗಿಯೇ ಏಕವಚನದಲ್ಲಿ ಮಾತನಾಡಿದ್ದಾರೆ ವರ್ತೂರ್‌ ಸಂತೋಷ್‌.

VISTARANEWS.COM


on

Varthur Santhosh tears
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಅವರ ವಿರುದ್ಧ ಹಲವರು ಟೀಕೆ ಮಾಡುವವರು ಇದ್ದಾರೆ. ವರ್ತೂರು ಸಂತೋಷ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ. ಕೆಟ್ಟದಾಗಿ ಟೀಕೆಗಳನ್ನು ಮಾಡುತ್ತಿರುವುದರಿಂದ ತಾಯಿ ಊಟ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಯೂಟ್ಯೂಬ್ ಚಾನೆಲ್​ನಲ್ಲಿ ಗೆಳೆಯರ ಜತೆ ವಿಡಿಯೊ ಮಾಡಿರುವ ವರ್ತೂರು ಸಂತೋಷ್, ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯುಟ್ಯೂಬ್‌ ಚಾನಲ್‌ ವೊಂದರ ಬಗ್ಗೆ ಹಾಗೂ ಒಬ್ಬ ವ್ಯಕ್ತಿಯ ಬಗ್ಗೆ ಕಟುವಾಗಿಯೇ ಏಕವಚನದಲ್ಲಿ ಮಾತನಾಡಿದ್ದಾರೆ.

ವರ್ತೂರ್‌ ಸಂತೋಷ್‌ (Varthur Santhosh) ಮಾತನಾಡಿ ʻʻಇಡೀ ಕರ್ನಾಟಕ ಜನತೆಗೆ ನಾನು ಹೇಳೋದು ಒಂದೇ. ಇಂದು ಬಹಳ ನೋವಾಗಿದೆ. ನನ್ನ ತಾಯಿ ನನ್ನ ತಂದೆಯನ್ನು ಕಳೆದುಕೊಂಡ ನಂತರ ಗೌರವದಿಂದ ನನ್ನನ್ನು ಸಾಕಿದರು. 2022ರಲ್ಲಿ ರೇಸ್‌ ಮಾಡಿದಾಗ ಬಂದು ಎಂಜಲು ಕಾಸು ತಿಂದ ಮಕ್ಕಳು ಇವರು. ನಮ್ಮ ಅನ್ನ ತಿಂದು ಇವತ್ತು ನಮಗೆ ಅನ್ನುತ್ತಾರೆ. ಅದಕ್ಕೆ ಭಗವಂತನೇ ಸಾಕ್ಷಿ. ನಮ್ಮ ರೇಸ್‌ನಲ್ಲಿ ಇವರೆಲ್ಲ ಒಂದು ಸಾವಿರ, ಎರಡು ಸಾವಿರಕ್ಕೆ ಬಂದವರುʼʼಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: Varthur Santhosh: `ಹಳ್ಳಿಕಾರ್ ಒಡೆಯ’ ವಿವಾದದ ಬಗ್ಗೆ ವರ್ತೂರ್‌ ಸಂತೋಷ್‌ ರಿಯಾಕ್ಷನ್‌ ಏನು?

ʻʻಇಷ್ಟೆಲ್ಲ ವಿಡಿಯೊಗಳನ್ನು ಮಾಡುತ್ತಾರೆ. ನಾನು ಮಾತನಾಡಿರುವ ವಿಡಿಯೊ ಯಾವುದಾದರೂ ಹಾಕಿದ್ದಾರಾ? ಕಮೆಂಟ್‌ ಸೆಕ್ಷನ್‌ ಆಫ್‌ ಮಾಡುತ್ತಾರೆ. ನಾನು ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಈ ಮೂಲಕ ಹೇಳುವುದೇನಂದ್ರೆ, ನಾನು ಇದೂವರೆಗೂ ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಒಬ್ಬರ ಅನ್ನ ಕಿತ್ತುಕೊಂಡಿಲ್ಲʼʼ ಎಂದರು.

ʻʻಕರ್ನಾಟಕ ಜನರು ನನ್ನ ಧರ್ಮ, ದೇವರು. ಇಷ್ಟು ಬೆಳಿಸಿದ್ದೀರಾ ನನ್ನನ್ನು. ನಾನು ಯಾರ ಅನ್ನ ಕಿತ್ತುಕೊಂಡಿಲ್ಲ. ನಾವು ತುಂಬಾ ಮರ್ಯಾದೆ ಇಂದ ಬದುಕಿದ್ದವರು. ನಮ್ಮ ತಾಯಿ ಊಟ ಮಾಡಲ್ಲ ಅಣ್ಣ. ಈ ನನ್ ಮಕ್ಕಳು ಒಂದೊಂದಲ್ಲ ಅಣ್ಣ. ಆ ರೆಕಾರ್ಡಿಂಗ್‌ಗಳು ಎಲ್ಲೆಲ್ಲಿ ಸಿಗ್ತಾವೋ ಆ ಭಗವಂತನಿಗೆ ಗೊತ್ತು. ನಮ್ಮ ಹಾಗೇ ಇದ್ದು, ನಮ್ಮೊಂದಿಗೆ ಇದ್ದು ಹೀಗೆ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳು ತಣ್ಣಗಿರಲಿʼʼಎಂದು ಬೇಸರ ಹೊರಹಾಕಿದ್ದಾರೆ. ಮಾತ್ರವಲ್ಲ ತಮ್ಮ ಬಗ್ಗೆ ಈ ರೀತಿ ಇಲ್ಲ ಸಲ್ಲದ ವಿಚಾರಗಳನ್ನು ಪೋಸ್ಟ್‌ ಮಾಡಿದ ಯೂಟ್ಯೂಬ್ ಚಾನೆಲ್​ ಅನ್ನು ರಿಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Drone Prathap: ಬಿಗ್ ಬಾಸ್ ಸ್ಪರ್ಧಿ ಪ್ರತಾಪನ ʻಡ್ರೋನ್‌ʼ ಇನ್ಮುಂದೆ ಹಾರಲ್ಲ! ಕಳ್ಳಾಟ ಬಯಲು!

Drone Prathap: ಈ ಮುಂಚೆ ಡ್ರೋನ್‌ ಪ್ರತಾಪ್‌ ಲೈಸೆನ್ಸ್‌ ಪಡೆಯದೇ ಡ್ರೋನ್‌ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ವಂಚಿಸುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು. ಇದೀಗ ಪ್ರತಾಪ್‌ ಕಳ್ಳಾಟವನ್ನು ಬಟಾಬಯಲು ಮಾಡಿದ್ದಾರೆ ಕಳ್ಳಾಟವನ್ನು ಬಟಾಬಯಲು ಮಾಡಿದ್ದಾರೆ ಪ್ರಯಾಗ್‌.

VISTARANEWS.COM


on

Drone Prathap prayag
Koo

ಬೆಂಗಳೂರು: ಬಿಗ್​ಬಾಸ್​ ಕನ್ನಡದ 10ನೇ ಆವೃತ್ತಿಯಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ರನ್ನರ್‌ ಅಪ್‌ ಆಗಿರುವುದು ಗೊತ್ತೇ ಇದೆ. ಡ್ರೋನ್​ ಪ್ರತಾಪ್ ʻಬಿಗ್​ ಬಾಸ್​ʼ ಶೋದಲ್ಲಿ ಬಿಬಿಎಂಪಿ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್​ ಎಚ್​ ಎಸ್ (HS Prayag)​ ಮೇಲೆ ಆರೋಪ ಮಾಡಿದ್ದರು. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿ ನೋಟಿಸ್​ ಕಳುಹಿಸಿದ್ದರು ಪ್ರಯಾಗ್‌. ಇದಾದ ಬಳಿಕ ಲೈಸೆನ್ಸ್‌ ಪಡೆಯದೇ ಡ್ರೋನ್‌ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್‌ ಪ್ರತಾಪ್‌ (Drone Prathap Controversy) ವಂಚಿಸುತ್ತಿದ್ದಾರೆ ಎಂದು ಕಳೆದ ಫೆಬ್ರವರಿಯಲ್ಲಿ ಪ್ರತಾಪ್ ವಿರುದ್ದ ಆರ್.ಆರ್.ನಗರ ಠಾಣೆಯಲ್ಲಿ ಪ್ರಯಾಗ್‌ ಹಾಗೂ ತಂಡ ದೂರು ದಾಖಲಿಸಿತ್ತು. ಇದೀಗ ಡ್ರೋನ್ ಪ್ರತಾಪ್‌ (Drone Prathap Issue) ಕಳ್ಳಾಟವನ್ನು ಬಟಾಬಯಲು ಮಾಡಿದ್ದಾರೆ ಪ್ರಯಾಗ್‌. ಡ್ರೋನ್‌ ಪ್ರತಾಪ್‌ಗೆ ಡ್ರೋನ್ ತಯಾರಿಸಲು, ಹಾರಿಸಲು ಮತ್ತು ಮಾರಲು ಯಾವುದೇ ಲೈಸೆನ್ಸ್ ಇಲ್ಲ ಎಂದು ಪ್ರಯಾಗ್‌ ತಂಡ ವಿಸ್ತಾರ ನ್ಯೂಸ್‌ಗೆ ಮಾಹಿತಿ ಹಂಚಿಕೊಂಡಿದೆ.

ಡ್ರೋನ್ ತಯಾರಿಸಲು, ಹಾರಿಸಲು ಅನುಮತಿ ಇಲ್ಲ!

ಡ್ರೋನ್ ಪ್ರತಾಪ್‌ (Drone Prathap) ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ಪ್ರಯಾಗ್‌ ಹಾಗೂ ತಂಡ ಲೈಸೆನ್ಸ್‌ ಪಡೆಯದೇ ಡ್ರೋನ್‌ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್‌ ಪ್ರತಾಪ್‌ ವಂಚಿಸುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರತಾಪ್ ಅವರ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಡಿಜಿಸಿಎ (ನಾಗರೀಕ ವಿಮಾನಯಾನ ಇಲಾಖೆ) ಅಧಿಕೃತವಾಗಿ ಪರವಾನಗಿ ಹೊಂದಿಲ್ಲ. ಜತೆಗೆ ಹೆಸರು ಸಹ ಇಲ್ಲ ಎಂದು ಈ ಮುಂಚೆಯೇ ಡಿಜಿಸಿಎ ಅಧಿಕೃತ ವೆಬ್‌ಸೈಟ್‌ನಿಂದ ಸ್ಪಷ್ಟವಾಗಿತ್ತು. ಡ್ರೋನ್‌ ಪ್ರತಾಪ್‌ಗೆ ಡ್ರೋನ್‌ ಲೈಸೆನ್ಸ್ ಇದೆಯಾ ಎಂದು ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿದ್ದರು ಪ್ರಯಾಗ್‌. ಜತೆಗೆ ಡಿಜಿಸಿಎ(ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್)ಗೆ ಆರ್‌ಟಿಐನಲ್ಲಿ ಮಾಹಿತಿ ಕೋರಲಾಗಿತ್ತು.

ಇದೀಗ ಪ್ರತಾಪ್‌ಗೆ ಡ್ರೋನ್ ತಯಾರಿಸಲು, ಹಾರಿಸಲು ಮತ್ತು ಮಾರಲು ಯಾವುದೇ ಲೈಸೆನ್ಸ್ ಇಲ್ಲ ಎಂದು ಪ್ರಯಾಗ್‌ ರೈಟ್ ಟೂ ಇನ್ಫಾರ್ಮೇಶನ್ (ಆರ್‌ಟಿಐ) ಮೂಲಕ ಮಾಹಿತಿ ಪಡೆದಿದ್ದಾರೆ. ಡ್ರೋನ್‌ ಪ್ರತಾಪ್‌ಗೆ ಯಾವುದೇ ಪರವಾನಗಿ ಇಲ್ಲ ಎಂದು ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗಪಡಿಸಿದೆ. ಈ ಬಗ್ಗೆ ಪ್ರಯಾಗ್‌ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Drone Prathap: ಡ್ರೋನ್​ ಪ್ರತಾಪ್‌ರನ್ನು ಮದುವೆಯಾಗಲು ಮುಗಿಬಿದ್ದ ಹೊಸಪೇಟೆ ಯುವತಿಯರು!

ಪ್ರತಾಪ್‌ ವಿರುದ್ಧ ಕೇಳಿ ಬಂದಿತ್ತು ಹಲವು ಆರೋಪ!

ಪ್ರತಾಪ್‌ (Drone Prathap) ಅವರು ಸಾರಂಗ್‌ ಅವರಿಗೆ ಒಂಬತ್ತು ಡ್ರೋನ್‌ ನೀಡಬೇಕಿತ್ತು. ಹೀಗಾಗಿ ಸಾರಂಗ್‌ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು. ಆದರೆ ಡ್ರೋನ್ ನೀಡಲು ಪ್ರತಾಪ್‌ ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದರು. ಇದಾದ ಬಳಿಕ ಎರಡು ಡ್ರೋನ್ ಅನ್ನು ಸಾರಂಗ್‌ ಅವರಿಗೆ ಪ್ರತಾಪ್‌ ನೀಡಿದ್ದರು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು. ಆದರೆ ಸಾರಂಗ್‌ ಈ ಬಗ್ಗೆ ಧ್ವನಿ ಎತ್ತಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಬ್ಯಾಟರಿಗಳ ಕ್ಯಾಲಿಟಿ ಸರಿಯಿಲ್ಲ. ಮತ್ತೊಂದು ಹಾರಬೇಕಾದರೆ, ಕೆಳಗಡೆ ಬಿದ್ದು ಹೋಯಿತು. ನಾವೀಗ ತುಂಬಾ ಲಾಸ್ ನಲ್ಲಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದರು.

ಈ ಬಗ್ಗೆ ವಿಸ್ತಾರ ಜತೆ ಸಾರಂಗ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಸಾರಂಗ್‌ ಮಾತನಾಡಿ ʻʻನಾನು ಇ-ಮೇಲ್‌ ಮೂಲಕ ವಾರ್ನಿಂಗ್ ನೀಡಿದ್ದೇನೆ ಲೋನ್ ಮೂಲಕ ದುಡ್ಡು ತಂದು, ರೈತರ ಬಳಿ ದುಡ್ಡು ಪಡೆದು ಪ್ರತಾಪ್‌ಗೆ ಕೊಟ್ಟಿದ್ದೆ. ಆದರೆ ಇಲ್ಲಿಯವರೆಗೆ ಆತ ಹಣ ಕೊಟ್ಟಿಲ್ಲ. ಅವರ ಪಿಎ ಸಾಗರ್ ನನಗೆ ಹೇಳಿದ್ದಾರೆ. ಪ್ರತಾಪ್‌ ಕಾರ್ ಸೇಲ್ ಮಾಡಿದ್ದಾನೆ ಅವನ ಬಳಿ ಹಣವಿಲ್ಲ ಎಂದು. ಕಾರ್ ಇರೋದು ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ. ಅವರ ಜತೆ ನನಗೆ ಸಂಪರ್ಕ ಇಲ್ಲ. ಪ್ರತಾಪ್ ಬಿಗ್ ಬಾಸ್‌ ಮನೆಯಲ್ಲಿ ಇದ್ದಾರೆ ಬಂದು ಕೊಡ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಸುಮ್ಮನ್ನಿದ್ದೇ. ಪ್ರತಾಪ್‌ಗೆ ಕಿರಣ್ ಮಾಧವ್ ಬೆಂಬಲ ನೀಡುತ್ತಿದ್ದರು. ನನಗೆ ಅವರಿಬ್ಬರು ಸೇರಿ ಬೆಂಗಳೂರಿನಲ್ಲಿ 20 ಸಾವಿರದ ಹೋಟೆಲ್ ಫೆಸಿಲಿಟಿ ನೀಡಿ ಬ್ಯುಸಿನೆಸ್‌ ಮಾಡಿದ್ದರು. ಈಗ ನೋಡಿದ್ರೆ ಈ ರೀತಿ ಮಾಡ್ತಿದ್ದಾರೆ. ನನಗೀಗ ಬಡ್ಡಿ ಎಲ್ಲವೂ ಸೇರಿ 83 ಲಕ್ಷ ರೂ. ಖರ್ಚಾಗಿದೆ. ನಮ್ಮದು ಸ್ಟಾರ್ಟ್ ಅಪ್ ಕಂಪನಿ. ನಮಗೆ ತುಂಬ ಕಷ್ಟ ಆಗಿದೆ ಡ್ರೋನ್ ಪ್ರತಾಪ್ ನಿಂದʼʼ ಎಂದು ಸಾರಂಗ್‌ ಹೇಳಿಕೆ ನೀಡಿದ್ದರು.

ಮತ್ತೊಂದೆಡೆ ಪ್ರತಾಪ್‌ ವಿರುದ್ಧ ಪ್ರಯಾಗ್ ರಾಜ್ (Prayag Raj) 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ.

Continue Reading
Advertisement
Beef smuggling suspected Hindu activists pelt stones at vehicle
ಯಾದಗಿರಿ12 mins ago

Beef Smuggling: ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ

Narendra Modi
ದೇಶ12 mins ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Vijay Namdevrao Wadettiwar
ದೇಶ37 mins ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ52 mins ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್1 hour ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 20241 hour ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest1 hour ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

MI vs SRH
ಕ್ರೀಡೆ2 hours ago

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

Kavitha Gowda chandan expected First Child
ಕಿರುತೆರೆ2 hours ago

Kavitha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿʻಲಕ್ಷ್ಮೀಬಾರಮ್ಮʼ ಧಾರಾವಾಹಿ ಖ್ಯಾತಿಯ ಜೋಡಿ

Met Gala 2024 Alia Bhatt attend
ಬಾಲಿವುಡ್2 hours ago

Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Narendra Modi
ದೇಶ12 mins ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌