ಬೆಂಗಳೂರು: ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್ (BBK SEASON 10) ಫಿನಾಲೆ ಹಬ್ಬ ಶುರುವಾಗಿ ಆಗಿದೆ. ಸಖತ್ ಅದ್ದೂರಿ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಫೈನಲಿಸ್ಟ್ ಆಗಿರುವ ಆರು ಜನ ಸ್ಪರ್ಧಿಗಳನ್ನು, ಅವರ ಮನೆಯವರನ್ನು ಮಾತಾಡಿಸಿದ್ದಾರೆ. ಈ ಕಲರ್‌ಫುಲ್ ವೇದಿಕೆಯ ತುಣುಕನ್ನು ಜಿಯೊಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದೆ.
‘ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ’ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು.
ಡ್ರೋನ್ ಪ್ರತಾಪ್ ತಾಯಿ, ‘ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ’ ಎಂದು ಭಾವುಕರಾಗಿದ್ದಾರೆ. ಎಲ್ಲರ ಮುಖದಲ್ಲಿಯೂ ಬಿಗ್‌ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ.
ಇನ್ನಷ್ಟು ಪರ್ಫಾರ್ಮೆನ್ಸ್, ಕಲರ್‌ಫುಲ್ ಡಾನ್ಸ್, ಕಚಗುಳಿಯ ಮಾತುಕತೆ ಎಲ್ಲವೂ ತಂಬಿರುವ ಬಿಗ್‌ಬಾಸ್ ಕನ್ನಡ ಸೀಸನ್ 10 ಫಿನಾಲೆ ಶನಿವಾರ ಮತ್ತು ಭಾನುವಾರ ಜಿಯೊಸಿನಿಮಾದಲ್ಲಿ ಸಂಜೆ 7.30ಯಿಂದ ಪ್ರಸಾರವಾಗಲಿದೆ. ಕಲರ್ಸ್ ಕನ್ನಡದಲ್ಲಿಯೂ ಅದೇ ಸಮಯದಲ್ಲಿ ಫಿನಾಲೆ ವೀಕ್ಷಿಸಬಹುದು.
BBK SEASON 10 ಯಾರಾಗುತ್ತಾರೆ ವಿನ್ನರ್: ಎಲ್ಲ ಕಡೆ ಭಾರಿ ಚರ್ಚೆ
ಈ ಬಾರಿಯ ಬಿಗ್ ಬಾಸ್ ಸೀಸನ್ 10 ವೇದಿಕೆಗೆ 17 ಮಂದಿ ಪ್ರವೇಶ ಪಡೆದಿದ್ದರು. ಅವರಲ್ಲಿ ಈಗಾಗಲೇ ಆರು ಸ್ಪರ್ಧಿಗಳು ಫಿನಾಲೆಗೆ ತಲುಪಿದ್ದಾರೆ. ಸಂಗೀತಾ, ತುಕಾಲಿ, ವರ್ತೂರ್, ಪ್ರತಾಪ್, ವಿನಯ್, ಕಾರ್ತಿಕ್ ಅವರಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬುದು ವೀಕ್ಷಕರಲ್ಲಿ ಇದೆ ಕುತೂಹಲ. ನಾಲ್ಕು ತಿಂಗಳ ಕಾಲ ನಡೆದ ಈ ಕಾರ್ಯಕ್ರಮದ ವಿಜೇತರನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಭಾನುವಾರ ಘೋಷಿಸಲಾಗುತ್ತದೆ. ಶನಿವಾರ ಇಬ್ಬರನ್ನು ಮನೆಯಿಂದ ಹೊರಗೆ ತರಲಾಗುತ್ತಿದೆ. ನಾಲ್ವರು ಫಿನಾಲೆ ದಿನ ಒಳಗಿರುತ್ತಾರೆ ಎಂಬ ಮಾಹಿತಿ ಇದೆ. ಹಾಗಿದ್ದರೆ ಹೊರಗೆ ಬರುವವರು ಯಾರು ಎಂಬ ಚರ್ಚೆ ಜೋರಾಗಿದೆ.
ಇದನ್ನೂ ಓದಿ: BBK SEASON 10: ಹಳೆಯ ಬೇಸರ ಮರೆತು ಕಾರ್ತಿಕ್‌ಗೆ ಸಪೋರ್ಟ್ ಮಾಡಿ ಎಂದ ತನಿಷಾ!
ಹಲವು ವಿವಾದಗಳಿಂದ ಈ ಬಾರಿ ʻಬಿಗ್ ಬಾಸ್ʼ ಕನ್ನಡ ಸಾಕಷ್ಟು ಸುದ್ದಿಯಲ್ಲಿತ್ತು. ಇದೀಗ ವಿಜೇತರಿಗೆ ಬಹುಮಾನ ಏನೆಲ್ಲ ಇರಬಹುದು ಎಂಬುದು ವೀಕ್ಷಕರಿಗೆ ಕುತೂಹಲ. ಬಿಗ್ ಬಾಸ್‌ನ ಟ್ರೋಫಿಯ ಹೊರತಾಗಿ, ಬಿಗ್ ಬಾಸ್ 10 ವಿಜೇತರು ನಗದು ಬಹುಮಾನದ ಹಣದ ಜತೆಗೆ ಹೊಚ್ಚ ಹೊಸ ಕಾರನ್ನು ಸಹ ಪಡೆಯುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತರಿಗೆ ಶೋ ಗೆದ್ದ ನಂತರ 50 ಲಕ್ಷ ರೂಪಾಯಿ, ಅದ್ದೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಪ್ರತಿಯೊಬ್ಬ ಸ್ಪರ್ಧಿಗೂ ದೊಡ್ಡ ಮಟ್ಟದ ಅಭಿಮಾನಿ ಬಳಗ ಬೆಳೆದಿದೆ. ಅವರವರ ಅಭಿಮಾನಿಗಳು ಶನಿವಾರ ಬೆಳಗ್ಗೆ 11 ಗಂಟೆಯವರೆಗೆ ವೋಟ್ ಮಾಡಿದ್ದಾರೆ. ಈ ಬಾರಿ ಕೆಲವರ ವೋಟಿಂಗ್ ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ.