ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10) ಬೃಂದಾವನ ಧಾರಾವಾಹಿ ತಂಡ ಬಿಗ್ ಬಾಸ್ ಮನೆಗೆ ಆಗಮಿಸಿತ್ತು. ಮನೆಯ ಸದಸ್ಯರೂ ಕೂಡ ಕಾರ್ಯಕ್ರಮ ಮೂಲಕ ರಂಜಿಸಿದರು. ವಿನಯ್, ಕಾರ್ತಿಕ್, ಸ್ನೇಹಿತ್, ರಕ್ಷಕ್ ಅವರುಗಳು ಅಪ್ಪು ಅವರ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದರು. ಅದರ ಬಳಿಕ ಮನೆಯ ಮಹಿಳೆಯರು ಸಹ ಅದ್ಭುತವಾಗಿ ಡ್ಯಾನ್ಸ್ ಮಾಡಿದರು. ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಹಾಡು ಹಾಡಿದರು. ವರ್ತೂರು ಸಂತೋಶ್, ತುಕಾಲಿ ಸಂತೋಶ್, ಭಾಗ್ಯಾ ಹಾಗೂ ತನಿಷಾ ಸೇರಿ ಕಾಮಿಡಿ ಸ್ಕಿಟ್ ಮಾಡಿದರು. ಇದಾದ ಮೇಲೆ ಕುಟುಂಬ ನೆನಪಿಸಿಕೊಂಡು ಸ್ಪರ್ಧಿಗಳು ಭಾವುಕರಾದರು.
ಬೃಂದಾವನದ ತುಂಬು ಕುಟುಂಬ ನೋಡಿ ನಿಮಗೂ ನಿಮ್ಮ ಕುಟುಂಬ ಮನೆಯವರ ನೆನಪು ಆಗಲಿರಬೇಕು. ಮನೆಯವರ ಜತೆಗಿನ ಸವಿನನೆನಪುಗಳು ಮರುಕಳಿಸಿರಬಹುದು. ಏನಾದರು ಹೇಳಲು ಬಯಸಿದರೆ, ಈ ಕ್ಷಣ ನಿಮ್ಮದು ಎಂದು ಬಿಗ್ ಬಾಸ್ ಹೇಳಿದರು.
ವಿನಯ್ ಗೌಡ ಅವರು ಮಗನನ್ನು ನೆನೆದು ಭಾವುಕರಾದರು. ʻʻರಿಷಿ ಮಗನೆ. ಇಲ್ಲಿ ಪಪ್ಪಾ ಏನಾದರೂ ತಪ್ಪು ಮಾಡಿದ್ದರೇ ಏನು ಅನ್ಕೋಬೇಡ. ನಿನಗೆ ಗೊತ್ತು ಪಪ್ಪಾ ಹೇಗೆ ಅಂತʼʼ ಎಂದು ಹೇಳಿ ಭಾವುಕರಾದರು. ಕಾರ್ತಿಕ್ ಅವರು ಮಾತನಾಡಿ ʻʻಕಳೆದ ವರ್ಷ ನನ್ನ ತಂದೆ ಹೋದ ಮೇಲೆ ಶಕ್ತಿ ಮೀರಿ ನಾನು ನನ್ನ ತಂಗಿ ಮದುವೆ ಮಾಡಿದ್ದೆ. ಈಗ ತಂಗಿ ಸೀಮಂತಕ್ಕೆ ನಾನು ಇರಕ್ಕೆ ಆಗಲ್ಲ ಅಂತ ಬೇಜಾರು. ಅಮ್ಮನ್ನ ತುಂಬ ಮಿಸ್ ಮಾಡ್ಕೋತ್ತ ಇದ್ದೀನಿ. ಎಲ್ಲ ಕೂತಿದ್ದ ಕಡೆಗೆ ಬರೋದು. ಇವಾಗ ಅದರ ಬೆಲೆ ಗೊತ್ತಾಗುತ್ತಿದೆʼʼ ಎಂದರು. ನಮ್ರತಾ ಮಾತನಾಡಿ ʻʻಅಪ್ಪ ಅಮ್ಮನ್ನು ಚೆನ್ನಾಗಿ ನೋಡ್ಕೋಳಿʼʼ ಎಂದರು. ನೀತು ಕೂಡ ಭಾವುಕರಾದರು. ನಟ ಸ್ನೇಹಿತ್ ಮಾತನಾಡುತ್ತ, ‘ನಾನ್ಯಾವತ್ತೂ ನಮ್ಮಪ್ಪನ ಎದುರೆದುರು ನಿಂತುಕೊಂಡು ಐ ಲವ್ ಯೂ ಅಂತ ಹೇಳೇ ಇಲ್ಲ..’ ಎಂದು ಬೇಸರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: BBK Season 10: ಇದೀಗ ವಿನಯ್- ಸಂಗೀತಾ ಕುಚಿಕು ಫ್ರೆಂಡ್ಸ್; ಕಾರ್ತಿಕ್ ಜತೆ ಶುರುವಾಯ್ತು ಫೈಟ್!
ತನಿಷಾ ಮಾತನಾಡಿ ʻʻಇದೇ ಮೊದಲ ಸಲ ನನ್ನ ಅಮ್ಮ ಬಿಟ್ಟಿರುವುದು. ಈ ಡ್ರೆಸ್ ಕೂಡ ಅವರೇ ಫೈನಲ್ ಮಾಡಿದ್ದು. ಅಮ್ಮ ಕರೆಕ್ಟ್ ಟೈಮ್ ಊಟ ಮಾಡು. ನಮ್ಮ ಮನೇಲಿ ಗಂಡು ಹುಡುಗ ನಾನುʼʼ ಎಂದು ಅತ್ತರು. ಸಿರಿ ಮಾತನಾಡಿ ʻʻನಾನು ಇಲ್ಲಿ ತುಂಬ ಸ್ಟ್ರಾಂಗ್ ಆಗಿದ್ದೀನಿ. ಹನಿ ನಿಂಗೋಸ್ಕರ ಬಂದಿದ್ದೀನಿʼʼ ಎಂದರು. ಭಾಗ್ಯಶ್ರೀ ಮಾತನಾಡಿ ʻʻಇಲ್ಲಿ ತನಕ ನಾನು ಬಂದಿದ್ದೇನೆ, ಸಾಧನೆ ಮಾಡಿದ್ದೀನಿ ಅಂದರೆ ಅದು ನನ್ನ ಗಂಡಿನಿಗೋಸ್ಕರ. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆʼʼ ಎಂದರು. ಗೌರೀಶ್ ಅಕ್ಕಿ ಮಾತನಾಡಿ ʻʻಇಲ್ಲಿ ಬರಲಿಕ್ಕೆ ಕಾರಣ ನನ್ನ ಹೆಂಡತಿ. ನನ್ನ ಕರಿಯರ್ ಬೇರೆ. ತುಂಬ ಲಕ್ಕಿ ನಾನು. ಅಪ್ಪ ಅಮ್ಮಗೆ ನಾನು ಈ ಶೋ ನೋಡಬೇಡಿ ಎಂದಿದ್ದೆ. ನಂದು ಲವ್ ಮ್ಯಾರೇಜ್. ನನ್ನ ಬಿಟ್ಟು ಹೋಗಬೇಡ ಎಂದೇ ಅವಳಿಗೆ ಹೇಳೋದು. ನನಗೆ ನಿನ್ನ ಬಿಟ್ಟರಕ್ಕಾಗಲ್ಲʼʼ ಎಂದು ಬಿಕ್ಕಿ ಬಿಕ್ಕಿ ಅತ್ತರು.
ಪ್ರತಾಪ್ ಮಾತನಾಡಿ ʻʻನನ್ನ ಮತ್ತು ತಂದೆಯ ಬಾಂಡಿಂಗ್ ಚೆನ್ನಾಗಿದೆ. ತಾಯಿಗಿಂತ. ಜೀವನದಲ್ಲಿ ತುಂಬ ಕಷ್ಟ ಪಟ್ಟಿದ್ದಾರೆ. ಮೂರು ವರ್ಷ ಆಯ್ತು ತಂದೆ ಜತೆ ಮಾತನಾಡಿʼʼ ಎಂದರು. ವರ್ತುರ್ ಸಂತೋಷ್ ಮಾತನಾಡಿ ʻʻನಮಗೆ ದೊಡ್ಡಪ್ಪನೇ ಎಲ್ಲ. ಇಲ್ಲಿ ಇದ್ದೇನೆ ಎಂದರೆ ನನ್ನ ತಾಯಿಯೇ ಕಾರಣʼʼ ಎಂದರು. ಇಶಾನಿ ಕೂಡ ತಂದೆ ತಾಯಿ ನೆನೆದು ಭಾವುಕರಾದರು.