BBK Season 10: ಮನೆಯವರ ನೆನೆದು ಮರುಗುತ್ತಿರೋ ಮನೆಮಂದಿ; ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು! - Vistara News

ಬಿಗ್ ಬಾಸ್

BBK Season 10: ಮನೆಯವರ ನೆನೆದು ಮರುಗುತ್ತಿರೋ ಮನೆಮಂದಿ; ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು!

BBK Season 10:  ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಹಾಡು ಹಾಡಿದರು. ವರ್ತೂರು ಸಂತೋಶ್, ತುಕಾಲಿ ಸಂತೋಶ್, ಭಾಗ್ಯಾ ಹಾಗೂ ತನಿಷಾ ಸೇರಿ ಕಾಮಿಡಿ ಸ್ಕಿಟ್ ಮಾಡಿದರು. ಇದಾದ ಮೇಲೆ ಕುಟುಂಬ ನೆನಪಿಸಿಕೊಂಡು ಸ್ಪರ್ಧಿಗಳು ಭಾವುಕರಾದರು.

VISTARANEWS.COM


on

BBK Season 10 contestants
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಬೃಂದಾವನ ಧಾರಾವಾಹಿ ತಂಡ ಬಿಗ್‌ ಬಾಸ್‌ ಮನೆಗೆ ಆಗಮಿಸಿತ್ತು. ಮನೆಯ ಸದಸ್ಯರೂ ಕೂಡ ಕಾರ್ಯಕ್ರಮ ಮೂಲಕ ರಂಜಿಸಿದರು. ವಿನಯ್, ಕಾರ್ತಿಕ್, ಸ್ನೇಹಿತ್, ರಕ್ಷಕ್ ಅವರುಗಳು ಅಪ್ಪು ಅವರ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದರು. ಅದರ ಬಳಿಕ ಮನೆಯ ಮಹಿಳೆಯರು ಸಹ ಅದ್ಭುತವಾಗಿ ಡ್ಯಾನ್ಸ್ ಮಾಡಿದರು. ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಹಾಡು ಹಾಡಿದರು. ವರ್ತೂರು ಸಂತೋಶ್, ತುಕಾಲಿ ಸಂತೋಶ್, ಭಾಗ್ಯಾ ಹಾಗೂ ತನಿಷಾ ಸೇರಿ ಕಾಮಿಡಿ ಸ್ಕಿಟ್ ಮಾಡಿದರು. ಇದಾದ ಮೇಲೆ ಕುಟುಂಬ ನೆನಪಿಸಿಕೊಂಡು ಸ್ಪರ್ಧಿಗಳು ಭಾವುಕರಾದರು.

ಬೃಂದಾವನದ ತುಂಬು ಕುಟುಂಬ ನೋಡಿ ನಿಮಗೂ ನಿಮ್ಮ ಕುಟುಂಬ ಮನೆಯವರ ನೆನಪು ಆಗಲಿರಬೇಕು. ಮನೆಯವರ ಜತೆಗಿನ ಸವಿನನೆನಪುಗಳು ಮರುಕಳಿಸಿರಬಹುದು. ಏನಾದರು ಹೇಳಲು ಬಯಸಿದರೆ, ಈ ಕ್ಷಣ ನಿಮ್ಮದು ಎಂದು ಬಿಗ್‌ ಬಾಸ್‌ ಹೇಳಿದರು.

ವಿನಯ್‌ ಗೌಡ ಅವರು ಮಗನನ್ನು ನೆನೆದು ಭಾವುಕರಾದರು. ʻʻರಿಷಿ ಮಗನೆ. ಇಲ್ಲಿ ಪಪ್ಪಾ ಏನಾದರೂ ತಪ್ಪು ಮಾಡಿದ್ದರೇ ಏನು ಅನ್ಕೋಬೇಡ. ನಿನಗೆ ಗೊತ್ತು ಪಪ್ಪಾ ಹೇಗೆ ಅಂತʼʼ ಎಂದು ಹೇಳಿ ಭಾವುಕರಾದರು. ಕಾರ್ತಿಕ್‌ ಅವರು ಮಾತನಾಡಿ ʻʻಕಳೆದ ವರ್ಷ ನನ್ನ ತಂದೆ ಹೋದ ಮೇಲೆ ಶಕ್ತಿ ಮೀರಿ ನಾನು ನನ್ನ ತಂಗಿ ಮದುವೆ ಮಾಡಿದ್ದೆ. ಈಗ ತಂಗಿ ಸೀಮಂತಕ್ಕೆ ನಾನು ಇರಕ್ಕೆ ಆಗಲ್ಲ ಅಂತ ಬೇಜಾರು. ಅಮ್ಮನ್ನ ತುಂಬ ಮಿಸ್‌ ಮಾಡ್ಕೋತ್ತ ಇದ್ದೀನಿ. ಎಲ್ಲ ಕೂತಿದ್ದ ಕಡೆಗೆ ಬರೋದು. ಇವಾಗ ಅದರ ಬೆಲೆ ಗೊತ್ತಾಗುತ್ತಿದೆʼʼ ಎಂದರು. ನಮ್ರತಾ ಮಾತನಾಡಿ ʻʻಅಪ್ಪ ಅಮ್ಮನ್ನು ಚೆನ್ನಾಗಿ ನೋಡ್ಕೋಳಿʼʼ ಎಂದರು. ನೀತು ಕೂಡ ಭಾವುಕರಾದರು. ನಟ ಸ್ನೇಹಿತ್ ಮಾತನಾಡುತ್ತ, ‘ನಾನ್ಯಾವತ್ತೂ ನಮ್ಮಪ್ಪನ ಎದುರೆದುರು ನಿಂತುಕೊಂಡು ಐ ಲವ್ ಯೂ ಅಂತ ಹೇಳೇ ಇಲ್ಲ..’ ಎಂದು ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಇದೀಗ ವಿನಯ್‌- ಸಂಗೀತಾ ಕುಚಿಕು ಫ್ರೆಂಡ್ಸ್‌; ಕಾರ್ತಿಕ್ ಜತೆ ಶುರುವಾಯ್ತು ಫೈಟ್‌!

ತನಿಷಾ ಮಾತನಾಡಿ ʻʻಇದೇ ಮೊದಲ ಸಲ ನನ್ನ ಅಮ್ಮ ಬಿಟ್ಟಿರುವುದು. ಈ ಡ್ರೆಸ್‌ ಕೂಡ ಅವರೇ ಫೈನಲ್‌ ಮಾಡಿದ್ದು. ಅಮ್ಮ ಕರೆಕ್ಟ್‌ ಟೈಮ್‌ ಊಟ ಮಾಡು. ನಮ್ಮ ಮನೇಲಿ ಗಂಡು ಹುಡುಗ ನಾನುʼʼ ಎಂದು ಅತ್ತರು. ಸಿರಿ ಮಾತನಾಡಿ ʻʻನಾನು ಇಲ್ಲಿ ತುಂಬ ಸ್ಟ್ರಾಂಗ್‌ ಆಗಿದ್ದೀನಿ. ಹನಿ ನಿಂಗೋಸ್ಕರ ಬಂದಿದ್ದೀನಿʼʼ ಎಂದರು. ಭಾಗ್ಯಶ್ರೀ ಮಾತನಾಡಿ ʻʻಇಲ್ಲಿ ತನಕ ನಾನು ಬಂದಿದ್ದೇನೆ, ಸಾಧನೆ ಮಾಡಿದ್ದೀನಿ ಅಂದರೆ ಅದು ನನ್ನ ಗಂಡಿನಿಗೋಸ್ಕರ. ನಾನು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆʼʼ ಎಂದರು. ಗೌರೀಶ್‌ ಅಕ್ಕಿ ಮಾತನಾಡಿ ʻʻಇಲ್ಲಿ ಬರಲಿಕ್ಕೆ ಕಾರಣ ನನ್ನ ಹೆಂಡತಿ. ನನ್ನ ಕರಿಯರ್‌ ಬೇರೆ. ತುಂಬ ಲಕ್ಕಿ ನಾನು. ಅಪ್ಪ ಅಮ್ಮಗೆ ನಾನು ಈ ಶೋ ನೋಡಬೇಡಿ ಎಂದಿದ್ದೆ. ನಂದು ಲವ್‌ ಮ್ಯಾರೇಜ್‌. ನನ್ನ ಬಿಟ್ಟು ಹೋಗಬೇಡ ಎಂದೇ ಅವಳಿಗೆ ಹೇಳೋದು. ನನಗೆ ನಿನ್ನ ಬಿಟ್ಟರಕ್ಕಾಗಲ್ಲʼʼ ಎಂದು ಬಿಕ್ಕಿ ಬಿಕ್ಕಿ ಅತ್ತರು.

ಪ್ರತಾಪ್‌ ಮಾತನಾಡಿ ʻʻನನ್ನ ಮತ್ತು ತಂದೆಯ ಬಾಂಡಿಂಗ್‌ ಚೆನ್ನಾಗಿದೆ. ತಾಯಿಗಿಂತ. ಜೀವನದಲ್ಲಿ ತುಂಬ ಕಷ್ಟ ಪಟ್ಟಿದ್ದಾರೆ. ಮೂರು ವರ್ಷ ಆಯ್ತು ತಂದೆ ಜತೆ ಮಾತನಾಡಿʼʼ ಎಂದರು. ವರ್ತುರ್‌ ಸಂತೋಷ್‌ ಮಾತನಾಡಿ ʻʻನಮಗೆ ದೊಡ್ಡಪ್ಪನೇ ಎಲ್ಲ. ಇಲ್ಲಿ ಇದ್ದೇನೆ ಎಂದರೆ ನನ್ನ ತಾಯಿಯೇ ಕಾರಣʼʼ ಎಂದರು. ಇಶಾನಿ ಕೂಡ ತಂದೆ ತಾಯಿ ನೆನೆದು ಭಾವುಕರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬಿಗ್ ಬಾಸ್

Bigg Boss Kannada: ಲೀಕ್‌ ಆಯ್ತು ಬಿಗ್‌ ಬಾಸ್‌ ಪ್ರೋಮೊ ಶೂಟ್‌ ಫೋಟೊ; ನಿರೂಪಕನ ಫೇಸ್‌ ರಿವೀಲ್‌!

Bigg Boss Kannada: ಈ ಮುಂಚೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್‌ ಫೋಟೊಗಳು ವೈರಲ್‌ ಆಗಿವೆ.

VISTARANEWS.COM


on

Bigg Boss Kannada promo shoot leak sudeep anchor
Koo

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಮುಕ್ತಾಯವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಆಗೋದು ಗ್ಯಾರಂಟಿ ಆಗಿದೆ ಸದ್ದಿಲ್ಲದೇ ಪ್ರೋಮೊ ಚಿತ್ರೀಕರಣ ಮಾಡಲಾಗಿದೆ. ಮತ್ತೊಮ್ಮೆ ಸುದೀಪ್ ವೀಕೆಂಡ್‌ನಲ್ಲಿ ಮನೆ ಮನೆಯ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡ-11 ಮೊದಲ ಪ್ರೋಮೊ ಬಿಡುಗಡೆ ಆಗಲಿದೆ.

ಈ ಮುಂಚೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್‌ ಫೋಟೊಗಳು ವೈರಲ್‌ ಆಗಿವೆ.

ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊಗೆ ಸಂಬಂಧಿಸಿದಂತೆ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಸೀಸನ್‌ನಿಂದ ಸೀಸನ್‌ಗೆ ಸುದೀಪ್ ಸಂಭಾವನೆ ಕೂಡ ಹೆಚ್ಚಾಗಿದೆ. ಇನ್ನು ಕಿಚ್ಚ ಬಹಳ ಇಷ್ಟಪಟ್ಟು ಶೋ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 27 ಅಥವಾ ಅಕ್ಟೋಬರ್ 5ರಂದು ಬಿಗ್‌ಬಾಸ್ ಕನ್ನಡ-11 ಆರಂಭವಾಗಲಿದೆ. ಯೂಟ್ಯೂಬರ್ ವರ್ಷಾ ಕಾವೇರಿ, ಕಿರುತೆರೆ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸ, ನಟ ಸುನೀಲ್ ರಾವ್, ಮೋಕ್ಷಿತಾ ಪೈ, ದಿವ್ಯಾ ವಸಂತ ಹೀಗೆ ಹಲವರ ಹೆಸರುಗಳು ಈ ಬಾರಿ ದೊಡ್ಮನೆಗೆ ಹೋಗಲು ಕೇಳಿಬರುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್‌ ಬಾಸ್‌ ಆಫರ್‌ ಬಂದಿದ್ದು ನಿಜ ಎಂದ ನಟಿ ಜ್ಯೋತಿ ರೈ! ಆದರೆ…..

ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Continue Reading

ಬಿಗ್ ಬಾಸ್

Bigg boss Hindi: ಬಿಗ್ ಬಾಸ್ 18ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಯಾವಾಗಿಂದ ಶುರು? 

Bigg boss Hindi: ಇದೀಗ ಬಿಗ್ ಬಾಸ್ 18ನೇ ಆವೃತ್ತಿ ರಿಯಾಲಿಟಿ ಶೋವನ್ನು ನಟ ಸಲ್ಮಾನ್ ಖಾನ್ನ ಡೆಸಿಕೊಡಲಿದ್ದಾರೆ. ಜತೆಗೆ ಸ್ಪರ್ಧಿಗಳು ಯಾರೆಲ್ಲ ಎಂಬ ಸಂಭಾವ್ಯ ಪಟ್ಟಿ ಹೊರ ಬಿದ್ದಿದೆ.

VISTARANEWS.COM


on

Bigg boss Hindi list of contestants
Koo

ಬೆಂಗಳೂರು: ಈ ವರ್ಷ, ನಟ ಅನಿಲ್ ಕಪೂರ್ ಅವರು ಸಲ್ಮಾನ್ ಖಾನ್ ಬದಲಿಗೆ ಬಿಗ್ ಬಾಸ್ ಹಿಂದಿ (Bigg boss Hindi) OTT ಯ (Bigg Boss OTT 3) ಮೂರನೇ ಸೀಸನ್‌ನ ನಿರೂಪಕರಾಗಿದ್ದರು. ಪ್ರೇಕ್ಷಕರ ಒಂದು ವರ್ಗ ಅನಿಲ್ ಕಪೂರ್ ಅವರ ನಿರೂಪಣಾ ಶೈಲಿಗೆ ಛೀಮಾರಿ ಹಾಕಿದೆ. ಬಿಗ್‌ ಬಾಸ್‌ ಸೀಸನ್‌ 18ನೇ ಆವೃತ್ತಿಗೆ ಸಲ್ಮಾನ್‌ ಅವರೇ ಹೋಸ್ಟ್‌ ಮಾಡಬೇಕು ಎಂದು ಪ್ರೇಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದರು. ಇದೀಗ ಬಿಗ್ ಬಾಸ್ 18ನೇ ಆವೃತ್ತಿ ರಿಯಾಲಿಟಿ ಶೋವನ್ನು ನಟ ಸಲ್ಮಾನ್ ಖಾನ್ನ ಡೆಸಿಕೊಡಲಿದ್ದಾರೆ. ಜತೆಗೆ ಸ್ಪರ್ಧಿಗಳು ಯಾರೆಲ್ಲ ಎಂಬ ಸಂಭಾವ್ಯ ಪಟ್ಟಿ ಹೊರ ಬಿದ್ದಿದೆ.

ಬಾಲಿವುಡ್ ನಟಿ ಇಶಾ ಕೋಪಿಕ್ಕರ್ 18ನೇ ಆವೃತ್ತಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.ಇಶಾ ಹೊರತಪಡಿಸಿದರೆ ಹಲವು ಹೆಸರು ಕೇಳಿಬರುತ್ತಿದೆ. ಈ ಪೈಕಿ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ನಟನೆಯಿಂದ ದೂರ ಉಳಿದಿರುವ ಸಮೀರಾ ರೆಡ್ಡಿ ಹೆಸರು ಮುಂಚೂಣಿಯಲ್ಲಿದೆ. ಹಿಂದಿ ಸೀರಿಯಲ್ ನಟ ಶೋಯಿಬ್ ಇಬ್ರಾಹಂ, ನಟಿ ಕಾಶಿಶ್ ಕಪೂರ್, ನಟ ಝ್ಯಾನ್ ಸೈಫಿ, ಪೂಜಾ ಶರ್ಮಾ, ಶೀಝಾನ್ ಖಾನ್, ದಲ್ಜಿತ್ ಕೌರ್ ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ. ಬಾಲಿವುಡ್ ಹಿರಿಯ ನಟಿ ರೇಖಾ ಈ ಬಾರಿಯಾ ಹಿಂದಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೆಲೆಬ್ರೆಟಿ ಚಾಯ್‌ವಾಲ ಡೋಲಿ ಚಾಯ್‌ವಾಲ ಈ ಬಾರಿಯ ಬಿಗ್ ಬಾಸ್‌ಗೆ ಆಹ್ವಾ ನೀಡಲಾಗಿದೆ ಎನ್ನಲಾಗುತ್ತಿದೆ. ಸಂಭಾವ್ಯ ಪಟ್ಟಿಯಲ್ಲಿ ಈ ಡೋಲಿ ಚಾಯ್‌ವಾಲ್ ಹೆಸರು ಮುಂಚೂಣಿಯಲ್ಲಿದೆ. ಸೋಶಿಯಲ್ ಮೀಡಿಯಾ ಸ್ಟಾರ್ ಫೈಸಲ್ ಶೇಕ್, ಫುಕ್ರಾ ಇನ್ಸಾನ್ ಯೂಟ್ಯೂಬರ್ ಅಭಿಷೇಕ್ ಮಲ್ಹನ್, ಟಿವಿ ನಟಿ ನುಸ್ರತ್ ಜಹಾನ್, ನಟಿ ದೀಪಿಕಾ ಆರ್ಯ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.ಕಾಮಿಡಿಯನ್ ಹರ್ಷಾ ಬೆನಿವಾಲ್, ಟಿವಿ ನಟಿ ಸುರ್ಭಿ ಜ್ಯೋತಿ, ನಟ ಕರನ್ ಪಟೇಲ್, ನಟ ಅಲೈಸ್ ಕೌಶಿಕ್ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ: Kundapura Kannada Habba: ನನ್ನ ಸಿನಿಮಾ ಕಥೆಗಳಿಗೆ ಊರು, ಯಕ್ಷಗಾನವೇ ಪ್ರೇರಣೆ; ರಿಷಬ್ ಶೆಟ್ಟಿ

ಹಿಂದಿಯ ಬಿಗ್ ಬಾಸ್ 17ನೇ (Bigg Boss 17)ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು,ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿತ್ತು.

Continue Reading

ಬಿಗ್ ಬಾಸ್

Isha Koppikar: ʻಸೂರ್ಯವಂಶʼ ಖ್ಯಾತಿಯ ನಟಿ ಬಿಗ್‌ ಬಾಸ್‌ಗೆ ಹೋಗೋದು ಫಿಕ್ಸ್‌!

Isha Koppikar:ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು.

VISTARANEWS.COM


on

Isha Koppikar Bigg Boss 18 Is Isha Koppikar a confirmed contestant
Koo

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಜತೆ ʻಸೂರ್ಯವಂಶʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮುಂಬೈ ನಟಿ ಇಶಾ ಕೊಪ್ಪಿಕರ್ (Isha Koppikar) ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಬ್ಬರು. ನಟಿ ಹಿಂದಿ ಚಿತ್ರರಂಗದಲ್ಲೂ ಹೆಸರು ಗಳಿಸಿದ್ದಾರೆ.  ಹಿಂದಿಯ ಬಿಗ್​ಬಾಸ್​ಗೆ ಮೊದಲ ಎಂಟ್ರಿಯಾಗಿ ಇಶಾ ಕೊಪ್ಪಿಕರ್​ ಹೆಸರು ಕನ್​ಫರ್ಮ್​ ಆಗಿದೆ. ಈ ಕುರಿತು ಖುದ್ದು ನಟಿ ಹೇಳಿದ್ದಾರೆ ಎನ್ನಲಾಗಿದೆ. 

ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಕನ್ನಡದಲ್ಲೂ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೂರ್ಯವಂಶ’,’ಹೂ ಅಂತಿಯಾ ಹೂಂ ಅಂತಿಯಾ’, ‘ಓ ನನ್ನ ನಲ್ಲೆ’, ‘ಲೂಟಿ’ ಹಾಗೂ ನಾಲ್ಕು ವರ್ಷಗಳ ಹಿಂದಷ್ಟೇ ತೆರೆಕಂಡಿರೋ ‘ಕವಚ’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅವರು ಹಿಂದಿಯ ಬಿಗ್​ಬಾಸ್​ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Isha Koppikar: ಖ್ಯಾತ ನಟ ನನಗೆ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದ ʻಸೂರ್ಯವಂಶʼ ನಟಿ!

ಇತ್ತೇಚೆಗೆ ನಟಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದರು. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಇಶಾ ಮಾತನಾಡಿ ʻʻಆಗೆಲ್ಲ ಮಿ ಟೂ ಭಿಯಾನ ಇರಲಿಲ್ಲ. ನನ್ನ ಕಾಲದಲ್ಲಿ ಅನೇಕ ನಟಿಯರು ಇಂಡಸ್ಟ್ರಿ ತೊರೆದರು. ಕೆಲವೇ ಕೆಲವರು ಇಂಡಸ್ಟ್ರಿಯಲ್ಲಿ ಇದ್ದರು. ಅದರಲ್ಲಿ ನಾನೂ ಒಬ್ಬಳು. ನಾನು 18 ವರ್ಷವನಿದ್ದಾಗ ನಟ ಕಾಸ್ಟಿಂಗ್ ಕೌಚ್‌ಗಾಗಿ ಸಂಪರ್ಕಿಸಿದರು. ಕೆಲಸ ಸಿಗಬೇಕಾದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಬೇಕು ಅಂತ ಹೇಳಿದ್ರು. ನೀವು ಯಾವ ಅರ್ಥದಲ್ಲಿ ‘ಫ್ರೆಂಡ್ಲಿ’ ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಮರು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ. ಇನ್ನೂ.. ಇದೊಂದೇ ಅಲ್ಲ. ಮತ್ತೊಮ್ಮೆ.. ಮತ್ತೊಬ್ಬ ಸ್ಟಾರ್‌ ನನಗೆ ಸಿಂಗಲ್ ಆಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದಿದ್ದಾರೆ. ಡ್ರೈವರ್ ಅಥವಾ ಬೇರೆ ಯಾರನ್ನೂ ಜತೆಗೆ ಕರೆದುಕೊಂಡು ಬರಬಾರದು ಎಂಬ ಷರತ್ತನ್ನೂ ಹಾಕಿದ್ದ ಎಂದಿರುವ ಇಶಾ ಕೊಪ್ಪಿಕರ್, ಆ ಕಾಲಕ್ಕೆ ಆತ ಹಿಂದಿ ಚಿತ್ರರಂಗದ ‘ಎ’ ದರ್ಜೆಯ ನಾಯಕನಾಗಿದ್ದ ಎಂದು ಕೂಡ ಹೇಳಿದ್ದಾರೆ. ನನ್ನ ಜೊತೆ ಚಿತ್ರರಂಗದ ಬಂದ ಹಲವಾರು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಕಾರಣಕ್ಕೆ ಚಿತ್ರರಂಗದಿಂದ ದೂರ ಸರೆದರು ಎಂದು ಹೇಳಿಕೊಂಡಿದ್ದರು.

ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಷೋ 18ನೇ ಸೀಸನ್​ ಬರುವ ಅಕ್ಟೋಬರ್​ 5ರಿಂದ ಶುರುವಾಗಲಿದೆ.

Continue Reading

ಬಿಗ್ ಬಾಸ್

Bigg Boss Telugu 8: ಬಿಗ್​ಬಾಸ್ ತೆಲುಗು ಸೀಸನ್‌ 8ರ ಪ್ರೋಮೊ ಔಟ್‌; ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

Bigg Boss Telugu 8: ಈಗಾಗಲೇ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಸೀಸನ್ 8ಕ್ಕೆ ಯಾರೆಲ್ಲ ಬರುತ್ತಾರೆ ಎಂಬ ಬಗ್ಗೆ ಕುತೂಹಲ ಕೂಡ ಹೆಚ್ಚಿದೆ. ಕನ್ನಡದವರು ಕೂಡ ಈ ಬಾರಿ ಇರಲಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Bigg Boss Telugu 8 Confirmed Contestants nagarjuna akkineni host
Koo

ಬಿಗ್​ಬಾಸ್ ತೆಲುಗು (Bigg Boss Telugu 8) ಮತ್ತೆ ಪ್ರಾರಂಭವಾಗುತ್ತಿದೆ. ಸ್ಟಾರ್ ಮಾ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ 8 ರ ಹೊಸ ಪ್ರೋಮೊವನ್ನು ಭಾನುವಾರ ಬಿಡುಗಡೆ ಮಾಡಿದೆ. ,ಈ ಶೋಗೆ ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ. ಈಗಾಗಲೇ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಸೀಸನ್ 8ಕ್ಕೆ ಯಾರೆಲ್ಲ ಬರುತ್ತಾರೆ ಎಂಬ ಬಗ್ಗೆ ಕುತೂಹಲ ಕೂಡ ಹೆಚ್ಚಿದೆ. ಕನ್ನಡದವರು ಕೂಡ ಈ ಬಾರಿ ಇರಲಿದ್ದಾರೆ ಎಂದು ವರದಿಯಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಬರೆಲ್ಲಕ್ಕ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಯಶ್ಮಿ ಗೌಡ, ತೇಜಸ್ವಿನಿ ಗೌಡ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ಕಿರಾಕ್ ಆರ್‌ಪಿ, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ. ಇದರ ಜೊತೆಗೆ ಸುದ್ದಿ ವಾಚಕಿ ಕಲ್ಯಾಣಿ, ನಟಿ ರೇಖಾ ಬೋಜ್, ಸಾವಯವ ಕೃಷಿ ತಜ್ಞ ನೇತ್ರಾ ರೆಡ್ಡಿ, ಧಾರಾವಾಹಿ ನಟ ಇಂದ್ರನೀಲ್ ಸೇನ್‌ಗುಪ್ತ, ನಟ ಅಬ್ಬಾಸ್, ನಟ ರೋಹಿತ್, ಗಾಯಕ ಸಾಕೇತ್ ಕೊಮಂದೂರಿ, ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2023 ರ ಊರ್ಮಿಳಾ ಚೌಹಾಣ್ ಅವರ ಹೆಸರು ಕೂಡ ಇದೆ.

ಇದರಲ್ಲಿ ಯಶ್ಮಿ ಗೌಡ ಕನ್ನಡದಾಕೆ, ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಮೂಲತಃ ಕನ್ನಡದವರಾದ ಇವರು ತೆಲುಗಿನ ಧಾರವಾಹಿಗಳಲ್ಲಿ ಫೇಮಸ್ ಆಗಿದ್ದಾರೆ. . ಬಿಗ್ ಬಾಸ್ ಸೀಸನ್ 8 ಸೆಪ್ಟೆಂಬರ್ 8 ರ ಭಾನುವಾರ ಸಂಜೆ 6 ರಿಂದ ಪ್ರಾರಂಭವಾಗಲಿದೆ. ನಂದಮೂರಿ ಕುಟುಂಬದಿಂದ ತೆಲುಗು ಸಿನೆಮಾ ರಂಗಕ್ಕೆ ನಾಯಕನಾಗಿ ಕಾಲಿಟ್ಟಿರುವ ಚೈತನ್ಯ ಕೃಷ್ಣ ಅವರು ಬಿಗ್‌ಬಾಸ್‌ ಗೆ ಬರಲಿದ್ದಾರೆಂದು ಸುದ್ದಿ ಹಬ್ಬಿದೆ.

ಇದನ್ನೂ ಓದಿ: Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

ಸೆಪ್ಟೆಂಬರ್ 3 ರಂದು ತೆಲುಗು ಬಿಗ್​ಬಾಸ್ ಸೀಸನ್ 7 ಆರಂಭವಾಗಿತ್ತು. 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರುಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿತ್ತು. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿತ್ತು.

Continue Reading
Advertisement
Karnataka Weather Forecast
ಮಳೆ2 ಗಂಟೆಗಳು ago

Karnataka Weather : ವಾರಾಂತ್ಯದಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ3 ಗಂಟೆಗಳು ago

Dina Bhavishya : ದಿನದ ಮಟ್ಟಿಗೆ ಖರ್ಚು ಹೆಚ್ಚು; ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Use nandini ghee compulsorily in temple prasadam Order of the Department of Religious Endowments
ಕರ್ನಾಟಕ15 ಗಂಟೆಗಳು ago

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ

Temporary additional coaches to be attached to 34 trains for Dasara 2024
ಬೆಂಗಳೂರು15 ಗಂಟೆಗಳು ago

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

Theft case
ಬೆಂಗಳೂರು16 ಗಂಟೆಗಳು ago

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು

Also test the prasadam of the holy places of the state Pralhad Joshi urges state government
ಬೆಂಗಳೂರು18 ಗಂಟೆಗಳು ago

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Road Accident
ಬೆಂಗಳೂರು19 ಗಂಟೆಗಳು ago

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ!

Road Accident
ಕೋಲಾರ20 ಗಂಟೆಗಳು ago

Road Accident: ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರನ ತಲೆಯೇ ಕಟ್‌! ಭೀಕರ ದೃಶ್ಯಕ್ಕೆ ಬೆಚ್ಚಿ ಬಿದ್ದ ಜನರು

Good news for the children of yellow board drivers Do this to get a scholarship under Vidyanidhi
ಬೆಂಗಳೂರು ಟೆಕ್ ಸಮ್ಮಿಟ್20 ಗಂಟೆಗಳು ago

Students Scholarship : ಯೆಲ್ಲೋ ಬೋರ್ಡ್‌ ವಾಹನ ಚಾಲಕರ ಮಕ್ಕಳಿಗೆ ಗುಡ್‌ ನ್ಯೂಸ್‌; ವಿದ್ಯಾನಿಧಿಯಡಿ ಸ್ಕಾಲರ್‌ಶಿಪ್‌ ಪಡೆಯಲು ಹೀಗೆ ಮಾಡಿ

allegations of rape honeytrap Mla Munirathna arrested again by Kaggalipura police as soon as he came out of jail
ರಾಜಕೀಯ21 ಗಂಟೆಗಳು ago

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌