Site icon Vistara News

BBK Season 10 : ಬಿಗ್‌ ಬಾಸ್‌ನಲ್ಲಿ ಬಿಗ್‌ ಟ್ವಿಸ್ಟ್‌; ವಿನಯ್‌ ಟೀಮ್‌ ಸೇರಲು ಮುಂದಾದ ಸಂಗೀತಾ!

Sangeetha Shingeri and Bigg boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಅತಿ ದೊಡ್ಡ ಟ್ವಿಸ್ಟ್‌ ಈಗ ಬಂದಿದೆ. ಕಳೆದ ನಾಲ್ಕು ವಾರಗಳಿಂದ ವಿನಯ್‌ ಗೌಡ (Vinay Gowda) ಅವರನ್ನು ಮುಖಕ್ಕೆ ಮುಖ ಕೊಟ್ಟು ವಿರೋಧ ಮಾಡುತ್ತಿದ್ದ, ಪವರ್‌ ಫುಲ್‌ ಕಂಟೆಸ್ಟೆಂಟ್‌ ಸಂಗೀತಾ ಶೃಂಗೇರಿ (Sangeeta Shrigeri) ಈಗ ತಾನಿರುವ ಟೀಮ್‌ ಬಿಟ್ಟು ವಿನಯ್‌ ಗೌಡ ಟೀಮ್‌ ಸೇರಲು ಮುಂದಾಗಿದ್ದಾಳೆ. ಕಾರ್ತಿಕ್‌ ಮಹೇಶ್‌ (Kartik Mahesh) ಟೀಮ್‌ ಬಿಟ್ಟು ವಿನಯ್‌ ಟೀಮ್‌ ಸೇರಿಕೊಳ್ಳುವ ಅವಳ ನಿರ್ಧಾರಕ್ಕೆ ಮನೆ ಸ್ತಂಭೀಭೂತವಾಗಿದೆ. ಕಾರ್ತಿಕ್‌ ಬಿಟ್ಟು ಉಳಿದವರೆಲ್ಲರೂ ಆಕೆಯನ್ನು ಟೀಮ್‌ನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಾಗಿದ್ದರೆ ಟೀಮ್‌ ಚೇಂಜ್‌ ಆಗುತ್ತಾ? ಬೆಂಕಿ-ಬಿರುಗಾಳಿ ಒಂದೇ ಟೀಮ್‌ ಸೇರ್ಕೊಳ್ಳುತ್ತಾ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು ರಾತ್ರಿ 9.30ರವರೆಗೆ ಕಾಯಬೇಕು.

ಅಂದಹಾಗೆ ಈ ಟೀಮ್‌ ಚೇಂಜ್‌ನ ಪ್ರಸ್ತಾಪ ಬಂದಿದ್ದು, ಬಿಗ್‌ ಬಾಸ್‌ನ ಆ ಒಂದು ಮಾತಿನಿಂದ. ಎಲ್ಲರೂ ಆಕ್ಟಿವಿಟಿ ಪ್ರದೇಶದಲ್ಲಿದ್ದಾಗ ಬಿಗ್‌ ಬಾಸ್‌ ಒಂದು ಘೋಷಣೆ ಮಾಡುತ್ತಾರೆ. ಕಳೆದ ವಾರದ ಟೀಮನ್ನೇ ಉಳಿಸಿಕೊಳ್ಳಲು ಬಿಗ್‌ ಬಾಸ್‌ ಅನುಮತಿ ನೀಡುತ್ತಿದ್ದಾರೆ- ಅಂತ. ಆದರೆ, ಈ ಬಗ್ಗೆ ಚರ್ಚೆ ಮಾಡಿ ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗುತ್ತದೆ.

ಈ ನಡುವೆ, ಟೀಮ್‌ಗಳ ಒಳಗೆ ಚರ್ಚೆ ನಡೆಯುತ್ತಿದ್ದಾಗ ಸಂಗೀತ ʻನಾನು ಆ ಕಡೆ ಟೀಮ್‌ಗೆ ಹೋಗಬೇಕು ಅಂತ ಇದ್ದೀನಿʼʼ ಎಂದು ಹೇಳುತ್ತಾರೆ. ಈ ಮಾತು ಕೇಳಿ ಕಾರ್ತಿಕ್‌ ಟೀಮ್‌ಗೆ ಆಘಾತವಾಗುತ್ತದೆ. ಆದರೆ, ಕಾರ್ತಿಕ್‌ ಮಾತ್ರ ʻಅವಳಿಗೆ ಇಲ್ಲಿ ಇರೋಕೆ ಇಂಟ್ರೆಸ್ಟ್‌ ಇಲ್ಲ ಅನಿಸ್ತಿದೆ.. ಕಳಿಸಿಬಿಡ್ರಿʼʼ ಅನ್ನುತ್ತಾರೆ.

ʻನನ್ನ ಟೀಮ್‌ ನನ್ನನ್ನು ರೆಸ್ಪೆಕ್ಟ್‌ ಮಾಡ್ತಿಲ್ಲ. ಈ ಟೀಮ್‌ನಲ್ಲಿ ನಾನು ಯಾಕಿರಬೇಕುʼʼ ಎಂದು ಸಂಗೀತ ಕೇಳುತ್ತಾರೆ. ನಮ್ಮ ಟೀಮ್‌ನಲ್ಲಿ ಇಷ್ಟು ಯುನಿಟಿ ಇದೆ, ಯಾಕೆ ಹೀಗೆ ಮಾಡ್ತೀರಿ ಅಂತ ಕೆಲವರು ಕೇಳುತ್ತಾರೆ.

ಆಗ ಸಂಗೀತ: ನಮ್ಮ ಟೀಮ್‌ನಲ್ಲಿ ಎಷ್ಟು ಯುನಿಟ್‌ ಇದೆ ಎನ್ನುವುದು ಕಳೆದ ವಾರ ಕಳಪೆ ಮತ್ತು ಉತ್ತಮ ಕೊಟ್ಟಾಗಲೇ ಗೊತ್ತಾಗಿದೆ ಎಂದು ಹೇಳಿದರು. (ಕಳೆದ ವಾರ ವಿನಯ್‌ ಟೀಮ್‌ ಕಳಪೆಯನ್ನು ಒಂದು ಗ್ರೂಪ್‌ ಆಗಿ ಸಂಗೀತಾಗೆ ನೀಡಿ ಆಕೆಯನ್ನು ಜೈಲುಪಾಲು ಮಾಡಿತ್ತು)

ಆಗ ಕಾರ್ತಿಕ್‌ ಮಹೇಶ್‌, ಕಳಪೆ ಮತ್ತು ಉತ್ತಮ ಕೊಡುವುದು ಅವರವರ ವೈಯಕ್ತಿಕ ವಿಚಾರ ಎನ್ನುತ್ತಾರೆ. ಆಗ ಭಾಗ್ಯ ಶ್ರೀ ಅವರು ಯಾಕಪ್ಪಾ ಈ ರೀತಿ ಎಲ್ಲ ಎಂದು ಕೇಳುತ್ತಾಳೆ. ಆಗ ಸಂಗೀತ- ನಾನು ಏನು ಮಾತನಾಡಿದರೂ ಕಾರ್ತಿಕ್‌ಗೆ ಪ್ರಾಬ್ಲಂ ಆಗ್ತಾ ಇದೆ ಎನ್ನುತ್ತಾಳೆ. ಆಗ ಕಾರ್ತಿಕ್‌- ನಾವು ಮಾಡಿದ್ದೆಲ್ಲ ರಾಂಗ್‌ ಆಗಿಯೇ ಕಾಣಿಸುತ್ತಿದೆ ನಿಮಗೆ, ನಾವು ಏನು ಮಾಡ್ಲಿಕಾಗ್ತದೆ ಎನ್ನುತ್ತಾಳೆ. ನಂಗಿಲ್ಲಿ ಇರೋಕೇ ಇಷ್ಟ ಇಲ್ಲ ಎನ್ನುವುದು ಸಂಗೀತ ಸ್ಪಷ್ಟ ನುಡಿ.

ಅಷ್ಟು ಹೊತ್ತಿಗೆ ವಿನಯ್‌ ಟೀಮ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ. ಆ ಮನೆಯಲ್ಲಿ ಬೆಂಕಿ ಬಿದ್ದಿದೆ ಎಂದು ಎಲ್ಲರೂ ಖುಷಿಪಡುತ್ತಾರೆ. ಅಷ್ಟು ಹೊತ್ತಿಗೆ ತುಕಾಲಿ ಸಂತೋಷ್‌ ಅಲ್ಲಿಗೆ ಬಂದು, ʻʻಪೂರ್ತಿ ಸುಟ್ಟಾಕ್ಬೇಡ.. ನಮಗೆ ಆಟ ಆಡೋಕೆ ಆ ಟೀಮ್‌ ಬೇಕುʼʼ ಎಂದು ಹೇಳುತ್ತಾರೆ.

ಇದನ್ನೂ ಓದಿ: BBK Season 10: ಇದಕ್ಕಿದ್ದಂತೆ ಸ್ನೇಹಿತ್ ರೆಬೆಲ್ ಆಗೋಕೆ ಕಾರಣವೇನು?

ಹಾಗಿದ್ದರೆ ಮುಂದೇನಾಗುತ್ತದೆ? ಸಂಗೀತ ತನ್ನ ಟೀಮನ್ನು ಬಿಟ್ಟು ಹೋಗ್ತಾಳಾ? ವಿನಯ್‌ ಟೀಮ್‌ ಆಕೆಯನ್ನು ಸೇರಿಸಿಕೊಳ್ಳುತ್ತಾ? ಅಥವಾ ಇದು ಸಂಗೀತಾಳನ್ನು ವಿರೋಧಿ ಟೀಮ್‌ಗೆ ಸೇರಿಸಿ ಅದನ್ನು ಒಡೆಯುವ ತಂತ್ರವನ್ನೇನಾದರೂ ಕಾರ್ತಿಕ್‌ ಮಾಡಿದ್ದಾರಾ? ನಿಜಕ್ಕೂ ಆಗುತ್ತಿರುವುದೇನು ಅಂತ ತಿಳಿಯಲು ನೀವು ರಾತ್ರಿ 9.00 ಗಂಟೆಗೆ ಪ್ರಸಾರವಾಗುವ ಎಪಿಸೋಡ್‌ನಲ್ಲಿ ನೋಡಬಹುದು. ಅಥವಾ ಜಿಯೋ ಟಿವಿಯಲ್ಲಿ ಪ್ರಸಾರವಾಗುವ 24*7 Live streaming ನೋಡಬಹುದು.

Exit mobile version