Site icon Vistara News

BBK Season 10: ಮತ್ತೆ ಹೆಚ್ಚಿದೆ ಬಿಗ್‌ ಬಾಸ್‌ ಟಿಆರ್‌ಪಿ; ಹಳೆಯ ರೆಕಾರ್ಡ್ ಎಲ್ಲ ಪುಡಿ ಪುಡಿ!

Bigg Boss 10 sudeep look

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK Season 10) ಈ ಬಾರಿ ಮನೆಯ ಒಳಗೂ ಹೊರಗೂ ಭಾರಿ ಚರ್ಚೆಯಲ್ಲಿದೆ. ವಿನಯ್‌ ಹಾಗೂ ಪ್ರತಾಪ್‌, ಸಂಗೀತಾ ಮನೆಯ ಒಳಗೆ ಪ್ರಬ ಸ್ಪರ್ಧಿಯಾಗಿದ್ದಾರೆ. ಮನೆಯ ಹೊರಗೆ ವರ್ತೂರ್‌ ಸಂತೋಷ್‌ ಹಾಗೂ ತನಿಷಾ ಕೇಸ್‌ಗಳು ನಡಯುತ್ತಲೇ ಇದೆ. ಈಗಾಗಲೇ ವರ್ತೂರ್‌ ಸಂತೋಷ್‌ ಹುಲಿ ಉಗುರು ಪ್ರಕರಣದಲ್ಲಿ ಜಾಮೀನು ಪಡೆದು ಮನೆಯಲ್ಲಿ ಅಸಲಿ ಆಟ ತೋರುತ್ತಿದ್ದಾರೆ. ಅತ್ತ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಷಾ ಮೇಲಿನ ಪ್ರಕರಣದ ತನಿಖೆಯನ್ನು ಮಾಗಡಿ ಪೊಲೀಸರು ಚುರುಕುಗೊಳಿಸಿದ್ದಾರೆ. ಇದೆಲ್ಲ ಟಾಕ್‌ಗಳ ನಡುವೆ ಬಿಗ್‌ ಬಾಸ್‌ ಟಿಆರ್‌ಪಿ ಏರುತ್ತಲೇ ಇದೆ.

ಈ ಸೀಸನ್​ ಹೆಚ್ಚು ಟಿಆರ್​ಪಿ ಶೋಗೆ ಸಿಕ್ಕಿದೆ. 9.0 ಟಿವಿಆರ್ ಸಿಕ್ಕಿದೆ. ನಗರ ಭಾಗದಲ್ಲಿ 9.6 ಟಿಆರ್​ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.4 ಟಿಆರ್​ಪಿ ಸಿಕ್ಕಿದೆ. ಇಷ್ಟು ಟಿಆರ್​ಪಿಯನ್ನು ನಿರೀಕ್ಷಿಸಲಾಗಿತ್ತು ಎಂದು ಅನೇಕರು ಹೇಳಿದ್ದಾರೆ.

ಬಳೆ ದೌರ್ಬಲ್ಯದ ಸಂಕೇತ

ಹಿಂದೊಮ್ಮೆ ಮನೆಯಲ್ಲಿ ವಿನಯ್‌ ಅವರು ಸಂಗೀತಾ ಅವರಿಗೆ ಬಳೆಯ ವಿಚಾರವಾಗಿ ಅಟ್ಯಾಕ್‌ ಮಾಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ನಾಲ್ಕನೇ ವಾರದ ʻವಾರದ ಕಥೆ ಕಿಚ್ಚನ ಜೊತೆʼ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ವಿನಯ್‌ ಅವರಿಗೆ ಬಳೆ ವಿಚಾರವಾಗಿ ಬೆವರು ಇಳಿಸಿದ್ದರು. ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಅವರು ಕಾರ್ತಿಕ್‌ ಅವರಿಗೆ ಟಾಸ್ಕ್‌ ಸಂಬರ್ಭದಲ್ಲಿ ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದನ್ನು ಸಂಗೀತಾ ಮಾತ್ರ ವಿರೋಧಿಸಿದ್ದರು, ಮತ್ಯಾರು ಧ್ವನಿ ಎತ್ತಿರಲಿಲ್ಲ. ಆದರೀಗ ಕಿಚ್ಚ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದರು. ‘ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಬಲಶಾಲಿ ಬಳೆ’ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ. ಆ ಮೂಲಕ ವಿನಯ್‌ ಗೌಡಗೆ ಕಿಚ್ಚ ಸುದೀಪ್ ಸರಿಯಾಗಿ ತಿರುಗೇಟು ಕೊಟ್ಟಿದ್ದರು.

ಇದನ್ನೂ ಓದಿ: BBK Season 10: ಐ ಲವ್ ಯೂ’ ಎಂದು ಪ್ರತಾಪ್‌ಗೆ ಪ್ರಪೋಸ್‌ ಮಾಡಿದ ಸಂಗೀತಾ!

ಸಂಗೀತಾ ಅಂದು ’ಬಳೆ ಹಾಕೊಂಡಿದ್ದೀನಿ.. ನೋಡು.. ಬಳೆ.. ಬಳೆ ಎಂದು ಬಳೆ ತೋರಿಸುವ ಚಿತ್ರ ಇತ್ತು. ಅದೇ ಫೋಟೋಗೆ ಕಿಚ್ಚ ಸುದೀಪ್ ಅವರು ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಬಳೆಗೆ ನನ್ನ ಚಪ್ಪಾಳೆ. ಇಷ್ಟು ಸೀಸನ್‌ನಲ್ಲಿ ಫಸ್ಟ್ ಟೈಮ್‌ ಒಂದು ಚಪ್ಪಾಳೆ ಒಂದು ವಸ್ತುಗೆ ಹೋಗುತ್ತೆ. ಆ ವಸ್ತು ಹಿಂದೆ ಇರುವ ಶಕ್ತಿಗೆ ಹೋಗುತ್ತೆ’’ ಎಂದಿದ್ದರು ಕಿಚ್ಚ ಸುದೀಪ್. ಅಷ್ಟೇ ಅಲ್ಲದೇ ಎಂದಿನಂತೆ ವಾಲ್ ಆಫ್​ ಫೇಮ್​ಗೆ ವಿನಯ್‌ ಕಡೆಯಿಂದಲೇ ಸಹ ತೂಗು ಹಾಕಲಾಯಿತು. ಈ ಮೂಲಕ ಮೂಲಕ ಮಹಿಳೆಯರಿಗೆ ಗೌರವ ನೀಡಿದ್ದರು. ‘’ಬಲಶಾಲಿ ಬಳೆ.. ನನ್ನ ಪ್ರಕಾರ ಅದು ಬಲದ ಸಂಕೇತ. ಇದು ರಿಮೈಂಡ್ ಆಗಲಿ ಎಲ್ಲರಿಗೂ..’’ ಎಂದಿದ್ದರು ಕಿಚ್ಚ ಸುದೀಪ್. ಬಳಿಕ ವಿನಯ್‌ ಕೂಡ ಕ್ಷಮೆ ಕೇಳಿದ್ದರು.

ಬಳೆ ಅಸ್ತ್ರವಲ್ಲ

ಇದಾದ ಬಳಿಕ ತನಿಷಾ ಹಾಗೂ ಸಂಗೀತಾ ಅವರು ಬಳೆಯನ್ನು ಒಂದು ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ಆಟವಾಡಿರುವುದು ಸರಿಯಲ್ಲ ಎಂದು ಸುದೀಪ್‌ ಮನವರಿಕೆ ಮಾಡಿಕೊಟ್ಟರು. ಇದು ಗೊಂಬೆಯಾಟವಯ್ಯ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಮನಬಂದಂತೆ ವರ್ತಿಸಿದ್ದರು. ಮಾತ್ರವಲ್ಲ ಕಾರ್ತಿಕ್‌, ತನಿಷಾ, ಸಂಗೀತಾ ಬಳೆಯನ್ನು ಇಟ್ಟುಕೊಂಡು ಹಂಗಿಸಿ ಮಾತನಾಡಿದ್ದರು. ಈ ಬಗ್ಗೆ ಸುದೀಪ್‌ ಮಾತನಾಡಿ ʻಈಗಾಗಲೇ ವಿನಯ್ ಗೌಡ ಅವರು ಬಳೆಗಳ ರಾಜ ಎಂದು ಹೇಳಿ, ನಾವು ಅದನ್ನು ತಪ್ಪು ಎಂದು ಹೇಳಿ ಫೋಟೊ ಪ್ರೇಮ್ ಮಾಡಿಸಿದ್ವಿ, ಬಳೆಗೆ ಚಪ್ಪಾಳೆ ಕೂಡ ಕೊಟ್ವಿ. ವಿನಯ್ ಗೌಡ ತಮ್ಮದು ತಪ್ಪು ಅಂತ ಹೇಳಿಕೊಂಡು ಪಶ್ಚಾತ್ತಾಪ ಪಟ್ಟರು. ಅದು ಅಲ್ಲಿಗೆ ಮುಗಿಯಿತು. ಆದರೆ ನೀವು ಟಾಸ್ಕ್‌ನಲ್ಲಿ ಬಳೆ ಹಾಕಿಕೊಂಡು ಅದನ್ನೇ ಶಸ್ತ್ರ ಮಾಡಿಕೊಂಡು ಮಾತಾಡಿದ್ದು ಸರಿಯಾ?ಮತ್ತೆ ಯಾಕೆ ನೆನಪಿಸಬೇಕು?” ಎಂದು ಕಿಚ್ಚ ಸುದೀಪ್ ಅವರು ತನಿಷಾ, ಸಂಗೀತಾಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಗೀತಾ ಹಾಗೂ ತನಿಷಾ ಕ್ಷಮೆ ಕೂಡ ಕೇಳಿದ್ದರು.

ಇದನ್ನೂ ಓದಿ: BBK SEASON 10: ತುಕಾಲಿ ‘ಕೆಟ್ಟ ಹುಳ’ ಎಂದ ವಿನಯ್‌; ಶುರುವಾಯ್ತು ಕಚ್ಚಾಟ!

ನಮ್ರತಾ ಗೌಡ ಅವರು ವಿನಯ್ ಚಮಚ ರೀತಿಯಲ್ಲಿ ವರ್ತಿಸಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಮಾತ್ರವಲ್ಲ ವರ್ತೂರ್‌ ಸಂತೋಷ್‌ ಮನೆಯಿಂದ ಆಚೆ ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ವೀಕೆಂಡ್​ನ ಎಪಿಸೋಡ್​ನ ಹೆಚ್ಚಿನ ವೀಕ್ಷಕರು ನೋಡಿದ್ದರು.

ವರ್ತೂರ್‌ ಸಂತೋಷ್‌ ಅವರ ವಿಚಾರವಾಗಿ ಸುದೀಪ್‌ ಬೇಸರಗೊಂಡಿದ್ದರು. ಈ ವಾರ ವರ್ತೂರ್‌ ಸಂತೋಷ್‌ ಅವರು ನಾಮಿನೇಟ್‌ ಕೂಡ ಆಗಿದ್ದರು. ಆದರೆ ಬರೋಬ್ಬರಿ 34,15, 472 ಮತಗಳು ಬಂದು ಸೇಫ್‌ ಆಗಿದ್ದರು. ಆದರೆ ವರ್ತೂರ್‌ ಅವರು ಕಿಚ್ಚನ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿದ್ದರು. ಕಿಚ್ಚ ಸುದೀಪ್‌ ಅವರು ಎಷ್ಟೇ ಕನ್ವಿನ್ಸ್‌ ಮಾಡಿದರೂ ವರ್ತೂರ್‌ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ವರ್ತೂರ್‌ ಅವರ ಈ ನಡೆಗೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದರ. ಇದೇ ಹೊತ್ತಿನಲ್ಲಿ ವರ್ತೂರ್‌ ಅವರ ತಾಯಿ ಕೂಡ ಮನೆಯೊಳಗೆ ಬಂದು ಮಗನನ್ನು ಸಮಾಧಾನ ಮಾಡಿ ಧೈರ್ಯ ತುಂಬಿದರು. ಮತ್ತೆ ವರ್ತೂರ್‌ ಮನೆಯಲ್ಲಿ ಇರುವುದಾಗಿ ಘೋಷಿಸಿದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version