Site icon Vistara News

Bigg Boss Kannada | ರೂಪೇಶ್ ಶೆಟ್ಟಿ ಹೊಸ ಡಯಟ್ ಶುರು: ʻಮನೆಯವರು ಫೇಕ್‌ʼ ಅಂದ್ರು ಆರ್ಯವರ್ಧನ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 50ನೇ ದಿನ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ರೂಪೇಶ್‌ ಶೆಟ್ಟಿ ಮತ್ತು ಆರ್ಯವರ್ಧನ್‌ ಅವರ ಕಾಲೆಳೆದಿದ್ದಾರೆ. ಸಾನ್ಯ ಅವರು ಮನೆಯಿಂದ ಹೊರನಡೆದ ನಂತರ ರೂಪೇಶ್‌ ಶೆಟ್ಟಿ ಅವರಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಸಾನ್ಯ ಅಯ್ಯರ್ ಅವರ ನೆನಪಿನಲ್ಲಿ ತಮ್ಮ ಹಣೆಗೆ ಪಟ್ಟಿ ಕಟ್ಟಿಕೊಂಡಿದ್ದರು. ಜತೆಗೆ ತಮ್ಮ ಕೆನ್ನೆಗಳ ಮೇಲೆ ಹಾರ್ಟ್ ಶೇಪ್ ಪೇಂಟ್ ಮಾಡಿಸಿಕೊಂಡು ಅದರಲ್ಲಿ ಸಾನ್ಯ (SAN) ಎಂದು ಬರೆಸಿಕೊಂಡಿದ್ದರು. ಈ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ.

ಸುದೀಪ್‌ ಅವರು ದೀಪಿಕಾ ಅವರ ಬಳಿ ʻʻಈ ಮನೆಯಲ್ಲಿ ಹೆಚ್ಚು ಮೊಟ್ಟೆಯನ್ನು ಯಾರು ತಿಂದಿದ್ದುʼʼಎಂದು ಪ್ರಶ್ನಿಸಿದ್ದಾರೆ. ಪ್ರತಿಕ್ರಿಯೆ ನೀಡಿದ ದೀಪಿಕಾ ʻʻಸಾನ್ಯ ಅವರ ಮೊಟ್ಟೆ ಮತ್ತು ರೂಪೇಶ್‌ ಅವರ ಮೊಟ್ಟೆಯನ್ನು ರೂಪೇಶ್‌ ಹೆಚ್ಚು ತಿಂದಿದ್ದಾರೆʼʼಎಂದರು. ಬಳಿಕ ಸುದೀಪ್‌ ಅವರು ಮಜವಾಗಿ ಮಾತನಾಡಿದ್ದು ʻʻಜೀವನದಲ್ಲಿ ನಮಗೆ ಯಾರಾದರೂ ಇಷ್ಟವಾದವರು ನಮ್ಮಿಂದ ದೂರವಾದರೆ, ಅನ್ನ ತಿನ್ನುವವರು ಅನ್ನ ಬಿಟ್ಟಿರುವುದನ್ನು ನೋಡಿದ್ದೇನೆ. ಊಟ ಮಾಡುವಾಗ ಎರಡು ತಟ್ಟೆ ಅನ್ನ, ಎಮೋಷನಲ್‌ನಲ್ಲಿ ಇದ್ದಾಗ ಎರಡು ತಟ್ಟೆ ಅನ್ನ ತಿನ್ನುವಾಗ ಯಾರು ಇದರ ಬಗ್ಗೆ ಪ್ರಶ್ನೆ ಕೇಳುವುದಿಲ್ಲ. ತನ್ನ ಪಾಡಿಗೆ ಅದೆಲ್ಲವೂ ಸ್ವಾಹ ಆಗಿಬಿಡುತ್ತದೆʼʼಎಂದು ರೂಪೇಶ್‌ ಶೆಟ್ಟಿ ಕಾಲೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೂಪೇಶ್‌ ಶೆಟ್ಟಿ ʻಊಟ ನನ್ನ ಬಿಟ್ಟರೂ ನಾನು ಅದನ್ನು ಬಿಡುವುದಿಲ್ಲʼʼಎಂದು ನಗುತ್ತಲೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಅಭಿಮಾನಿಗಳ ವೋಟ್ ಸೆಳೆಯಲು ಸ್ಕೆಚ್‌ ಹಾಕ್ತಿದ್ದಾರಾ ಆರ್ಯವರ್ಧನ್‌-ರೂಪೇಶ್‌ ಶೆಟ್ಟಿ!

ಎರಡನೇ ವಾರಕ್ಕೆ ನೇರವಾಗಿ ನಾಮಿನೇಟ್‌ ಆದ ಆರ್ಯವರ್ಧನ್‌ ಗುರೂಜಿ
ರಿಯಲ್‌ ಮತ್ತು ಫೇಕ್‌ ಟಾಸ್ಕ್‌ ಅನುಸಾರ ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ಗುರೂಜಿ ಅವರು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್‌ ಆಗಿದ್ದಾರೆ. ಈ ಬಗ್ಗೆ ಸುದೀಪ್‌ ಅವರು ಆರ್ಯವರ್ಧನ್‌ ಅವರ ಬಳಿ ತಮಾಷೆ ಮಾಡಿದ್ದು,ʻʻಸದಸ್ಯರು ನಿಮಗೆ ಫೇಕ್‌ ಎಂದು ಪ್ರತಿ ಬಾರಿ ಕೊಟ್ಟಾಗ ನಿಮಗೆ ಏನು ಅನ್ನಿಸಿಲ್ಲ, ಅಲ್ಲವೆ?ʼʼಎಂದು ಕೇಳಿದ್ದಾರೆ. ಈ ಬಗ್ಗೆ ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡಿದ ಆರ್ಯವರ್ಧನ್‌ ʻʻಖಂಡಿತ ಇಲ್ಲ. ಪ್ರತಿ ವಾರ ನನಗೆ ಏನಾದರೂ ಹೇಳುತ್ತಾರೆ. ಪ್ರತಿ ಬಾರಿ ನಾಮಿನೇಟ್‌ ಮಾಡುತ್ತಾರೆ. ಇದು ನನಗೆ ಹೊಸತಲ್ಲ. ಇವರೇ ಫೇಕ್‌ ಎಂದು ನನಗೆ ಅನ್ನಿಸುತ್ತದೆ. ಮಾತು ಎತ್ತಿದರೆ ಸಾಕು, ನನ್ನ ಹೆಸರೇ ತೆಗೆದುಕೊಳ್ಳುತ್ತಾರೆʼʼಎಂದರು. ಆರ್ಯವರ್ಧನ್‌ ಅವರ ಉತ್ತರ ಕೇಳಿ ಸುದೀಪ್‌ ಅವರಿಂದ ಹಿಡಿದು ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ | Bigg Boss Kannada | ರೂಪೇಶ್‌ ರಾಜಣ್ಣ -ದಿವ್ಯಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕಿಚ್ಚ ಸುದೀಪ್‌ ನೀಡಿದ ಸ್ಪಷ್ಟನೆ ಏನು?

Exit mobile version