Bigg Boss Kannada | ರೂಪೇಶ್‌ ರಾಜಣ್ಣ -ದಿವ್ಯಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕಿಚ್ಚ ಸುದೀಪ್‌ ನೀಡಿದ ಸ್ಪಷ್ಟನೆ ಏನು? - Vistara News

ಬಿಗ್ ಬಾಸ್

Bigg Boss Kannada | ರೂಪೇಶ್‌ ರಾಜಣ್ಣ -ದಿವ್ಯಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕಿಚ್ಚ ಸುದೀಪ್‌ ನೀಡಿದ ಸ್ಪಷ್ಟನೆ ಏನು?

ʻವಾರದ ಕಥೆ ಕಿಚ್ಚನ ಜೊತೆʼಯಲ್ಲಿ (Bigg Boss Kannada) ಸುದೀಪ್‌ ಅವರು ರೂಪೇಶ್‌ ರಾಜಣ್ಣ ಮತ್ತು ದಿವ್ಯಾ ನಡುವೆ ಆದ ಮನಸ್ತಾಪಗಳ ಕುರಿತು ಚರ್ಚೆ ಮಾಡಿದ್ದಾರೆ.

VISTARANEWS.COM


on

Bigg Boss Kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada ) ಸ್ಪರ್ಧಿಗಳು 50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ರೂಪೇಶ್‌ ರಾಜಣ್ಣ, ಅನುಪಮಾ ಗೌಡ, ದೀಪಿಕಾ ದಾಸ್‌, ದಿವ್ಯಾ ಉರುಡುಗ ಹಾಗೂ ಆರ್ಯವರ್ಧನ್‌, ಅಮೂಲ್ಯ , ಅರುಣ್‌ ಸಾಗರ್‌ ನಾಮಿನೇಟ್‌ ಆಗಿದ್ದರು. ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಸೇಫ್‌ ಆದ ಇಬ್ಬರು ಸ್ಪರ್ಧಿಗಳನ್ನು ಅನೌನ್ಸ್‌ ಮಾಡಿದ್ದಾರೆ. ಈ ವಾರ ದಿವ್ಯಾ ಉರುಡುಗ ಮತ್ತು ಅರುಣ್‌ ಸಾಗರ್‌ ಸೇಫ್‌ ಆಗಿದ್ದಾರೆ. ʻವಾರದ ಕಥೆ ಕಿಚ್ಚನ ಜೊತೆʼಯಲ್ಲಿ ಸುದೀಪ್‌ ಅವರು ರೂಪೇಶ್‌ ರಾಜಣ್ಣ ಮತ್ತು ದಿವ್ಯಾ ನಡುವೆ ಆದ ಮನಸ್ತಾಪಗಳ ಕುರಿತು ಚರ್ಚೆ ಮಾಡಿದ್ದಾರೆ.

ಫೇಕ್‌ ಮತ್ತು ರಿಯಲ್‌ ಟಾಸ್ಕ್‌ನಲ್ಲಿ ರೂಪೇಶ್‌ ರಾಜಣ್ಣ ಅವರ ಮಾತಿನ ಧಾಟಿಯ ಬಗ್ಗೆ ಸುದೀಪ್‌ ಪ್ರಶ್ನಿಸಿದ್ದಾರೆ. ಪ್ರತಿಕ್ರಿಯೆ ನೀಡಿದ ರೂಪೇಶ್‌ ರಾಜಣ್ಣ ʻʻದಿವ್ಯಾ ಅವರ ಮೇಲೆ ಹಾಡಿನ ವಿಚಾರವಾಗಿ ಅಸಮಾಧಾನ ಆಯ್ತು. ʻನಗುವ ನಯನ ಹಾಡನ್ನುʼ ನಾನು ಆಯ್ಕೆ ಮಾಡಿದ್ದೆ. ಇನ್ನೇನು ಹಾಡಬೇಕು ಎನ್ನುವಷ್ಟರಲ್ಲಿ ಸೀನ್‌ ಕ್ರಿಯೇಟ್‌ ಮಾಡಿದ್ದರು ದಿವ್ಯಾ. ಇನ್ನೊಂದು ಗ್ಲಾಸ್‌ ವಿಚಾರಕ್ಕೆ ನನಗೆ ಬೇಸರವಾಯ್ತು. ಗ್ಲಾಸ್‌ ಒಡೆದಿದಕ್ಕೆ ಶೌಚಾಲಯ ಕ್ಲೀನ್‌ ಮಾಡಿ ಎಂದು ದೀಪಿಕಾ ದಾಸ್‌ ಹೇಳುತ್ತಾರೆ. ಆಗ ದಿವ್ಯಾ ಅವರು ಬಂದು ನನಗೆ ಸಪೋರ್ಟ್‌ ಮಾಡುತ್ತಾರೆ. ನನಗೆ ಅನ್ನಿಸಿದ್ದು, ಇವರೇ ಏನೋ ಒಡೆದು ಹಾಕಿದ್ದಾರೆ. ತನ್ನ ಮೇಲೆ ಎಲ್ಲಿ ಶಿಕ್ಷೆ ಬರುತ್ತೋ ಎಂದು ಸಪೋರ್ಟ್‌ ಮಾಡಿದ್ದರು ಅಂದುಕೊಂಡೆ. ಈ ಎಲ್ಲ ಘಟನೆಗಳ ಮೇರೆಗೆ ಅವರಿಗೆ ಸಮಯ ಸಾಧಕಿ ಎಂದೆʼನಎಂದರು.

ಇದನ್ನೂ ಓದಿ | Bigg Boss Kannada | ಅಭಿಮಾನಿಗಳ ವೋಟ್ ಸೆಳೆಯಲು ಸ್ಕೆಚ್‌ ಹಾಕ್ತಿದ್ದಾರಾ ಆರ್ಯವರ್ಧನ್‌-ರೂಪೇಶ್‌ ಶೆಟ್ಟಿ!

Bigg Boss Kannada

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಿವ್ಯಾ ʻʻನಾನು ಎಲ್ಲಿಯೂ ಸಹ ಒಬ್ಬಳೇ ಹಾಡಿಲ್ಲ. ನನ್ನ ಹಾಡು ಎಂದು ಎಲ್ಲಿಯೂ ಹೇಳಿಲ್ಲ. ಗ್ಲಾಸ್‌ ವಿಚಾರ ಕೂಡ ಮೊನ್ನೆ ಅವರು ಹೇಳಿದ ಮೇಲೆ ಅಂದುಕೊಂಡೆ, ಹೀಗೂ ಇವರು ಯೋಚನೆ ಮಾಡಿದ್ದಾರೆ ಎಂದು. ಲೋಟ ಒಡೆದು ಬೇರೆಯವರ ಮೇಲೆ ಆಪಾದನೆ ಹೊರಿಸುವ ಮನಸ್ಥಿತಿ ನನಗಿಲ್ಲ. ತಪ್ಪಿದ್ದರೆ ನಾನು ಒಪ್ಪಿಕೊಳ್ಳುತ್ತೇನೆʼʼಎಂದರು.

ಸುದೀಪ್‌ ಅವರು ರೂಪೇಶ್‌ ರಾಜಣ್ಣ ಅವರಿಗೆ ಪ್ರತಿಕ್ರಿಯೆ ನೀಡಿ ʻʻದಿವ್ಯಾ ಅವರು ಎರಡು ವಾರಗಳ ಹಿಂದೆ ಪ್ರಶಾಂತ್‌ ಮತ್ತು ಸಾನ್ಯ ಅವರು ನಿಮಗೆ ಪ್ರ್ಯಾಂಕ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಪರ ನಿಂತಿದ್ದರು. ಇಡೀ ಮನೆಯವರ ಜತೆ ನಿಮ್ಮ ಜಗಳ ಆಗಿದೆ. ವೇದಿಕೆ ಮೇಲೆ ನಿಂತು ಹಾಡು ಹಾಡುತ್ತೀರಿ. ʻನಗುವ ನಯನ ಮಧುರ ಮೌನʼ ಈ ಹಾಡಿನ ಸಾಹಿತ್ಯವನ್ನು ಇನ್ನೊಂದು ಸಲ ಪ್ರೀತಿಸಿ. ಅದರ ಅರ್ಥ ತಿಳಿದುಕೊಳ್ಳಿ. ಹಾಗೇ ಗ್ಲಾಸ್‌ ಒಡೆದು ಹಾಕಿದ್ದು ದಿವ್ಯಾ ಅಲ್ಲ ಅದು ರೂಪೇಶ್‌ ರಾಜಣ್ಣ. ಬಿಗ್‌ ಬಾಸ್‌ ಕ್ಯಾಮೆರಾ ಸುಳ್ಳು ಹೇಳುವುದಿಲ್ಲʼʼಎಂದು ಸುದೀಪ್‌ ಸ್ಪಷ್ಟನೆ ನೀಡಿದರು.

Bigg Boss Kannada

ಏನಿದು ಮುನಿಸು?
ಹಿಂದಿನ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಹಾಗೂ ರೂಪೇಶ್ ರಾಜಣ್ಣ ಅವರು ಒಂದು ಹಾಡು ಹಾಡಿದ್ದರು. ಆ ಹಾಡಿನ ಸಾಹಿತ್ಯ ರಚಿಸಿದ್ದು, ಟ್ಯೂನ್ ಹಾಕಿದ್ದು ರೂಪೇಶ್ ರಾಜಣ್ಣ ಎಂದು ಹೇಳಿಕೊಂಡಿದ್ದರು. ʻʻಎಲ್ಲಿಯೂ ಕೂಡ ಇದನ್ನು ಬರೆದಿದ್ದು ನಾನು, ಟ್ಯೂನ್ ಹಾಕಿದ್ದು ನಾನು ಎಂದು ದಿವ್ಯಾ ಹೇಳಲಿಲ್ಲ, ತನ್ನ ಹಾಡು ಅಂತಲೇ ಬಿಂಬಿಸಿಕೊಂಡರುʼʼ ಎಂದು ರೂಪೇಶ್ ರಾಜಣ್ಣ ಅವರು ದಿವ್ಯಾ ಅವರಿಗೆ ಫೇಕ್ ಎಂಬ ಪಟ್ಟ ನೀಡಿದ್ದರು.

Bigg Boss Kannada

ಇದನ್ನೂ ಓದಿ | Bigg Boss Kannada | ಕಳಪೆ ಕೊಡುವ ವೇಳೆ ರೂಪೇಶ್‌ ರಾಜಣ್ಣಗೆ ದಿವ್ಯಾ ತಿರುಗೇಟು: ಹೇಗಿತ್ತುಆರ್ಯವರ್ಧನ್‌ ಏಕಪಾತ್ರಾಭಿನಯ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

Sangeetha Sringeri: ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರು ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು.

VISTARANEWS.COM


on

Sangeetha Sringeri Wore Lioness Logo On Her Belt
Koo
ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ (Sangeetha Sringeri) ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಲವು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಅವರ ಡ್ರೆಸ್ ಹಾಗೂ ಬೆಲ್ಟ್ ಪ್ರಮುಖ ಹೈಲೈಟ್‌.

ಸಂಗೀತಾ ಶೃಂಗೇರಿ ಅವರ ಬೆಲ್ಟ್​ ಮೇಲೆ ಸಿಂಹಿಣಿಯ ಲೋಗೊ ಇದೆ. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರ ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು. ಹೀಗಾಗಿ ಈ ರೀತಿ ಪೋಸ್‌ ಕೊಟ್ಟಿದ್ದಾರೆ ಸಂಗೀತಾ. ʼ

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​. ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದರು.
Continue Reading

ಕಿರುತೆರೆ

Drone Prathap: ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

Drone Prathap: ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

VISTARANEWS.COM


on

Drone Prathap Special Gift For sangeetha sringeri Birthday
Koo

ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​.ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಗೀತಾ ಅವರು ಪ್ರತಾಪ್‌ ಅವರಿಗೆ ಆರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದಾರೆ. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Elvish Yadav: ಐಷಾರಾಮಿ ದುಬಾರಿ ಕಾರು ಖರೀದಿಸಿದ  ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌!

Elvish Yadav: ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

VISTARANEWS.COM


on

Elvish Yadav
Koo

ಬೆಂಗಳೂರು: ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಹೊಂದಿದ್ದಾರೆ. ಬಿಗ್‌ ಬಾಸ್‌ (Bigg Boss OTT 2) ಮೂಲಕವೇ ಜನಪ್ರೀಯತೆ ಪಡೆದ ಎಲ್ವಿಶ್ ಯಾದವ್ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ . ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿಯಲ್ಲಿ ಇವೆ. ಇದೀಗ ಎಲ್ವಿಶ್‌ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮರ್ಸಿಡಿಸ್‌ ಗ್ವ್ಯಾಗನ್‌ G350 D (Mercedes G Wagon) ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂ. ಮರ್ಸಿಡಿಸ್‌ ಗ್ವ್ಯಾಗನ್‌ G350 D ಬಾಕ್ಸಿ ಸ್ಟೈಲಿಂಗ್‌ನಿಂದ ಕೂಡಿದೆ.

ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

ಏನಿದು ಪ್ರಕರಣ?

ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿತ್ತು. ನಂತರ ಎಲ್ವಿಶ್‌ಗೆ ಗೌತಮ್ ಬುದ್ ನಗರ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನೀಡಿತು. ಮಾರ್ಚ್ 17 ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆ ಬಳಿಕ ಗುರುಗ್ರಾಮ್ ನ್ಯಾಯಾಲಯದಿಂದ ಜಾಮೀನು ಪಡೆದರು. ಎರಡು ಜಾಮೀನು ಪಡೆದ ಬಳಿಕ ಇದೀಗ ರಿಲ್ಯಾಕ್ಸ್‌ ಆಗಿದ್ದಾರೆ ಎಲ್ವಿಶ್‌.

ಇದನ್ನೂ ಓದಿ: Elvish Yadav: ಎರಡು ಜಾಮೀನು ಪಡೆದ ಬಳಿಕ ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ ಟೆಂಪಲ್ ರನ್‌!

ಜಾಮೀನು ಪಡೆದ ನಂತರ, ಎಲ್ವಿಶ್ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದರು, “ಒಂದು ವಾರ ನಿಸ್ಸಂದೇಹವಾಗಿ ಕಳೆದುಹೋಯಿತು. ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು. ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ. ನನ್ನನ್ನು ಬೆಂಬಲಿಸಿದವರೆಲ್ಲರೂ ನನ್ನನ್ನು ಬೆಂಬಲಿಸಲಿಲ್ಲ, ನನ್ನ ಬಗ್ಗೆ ಕೆಟ್ಟದಾಗಿ ಹಾಗೂ ಚೆನ್ನಾಗಿ ಮಾತನಾಡಿದವರೆಲ್ಲರಿಗೂ, ಧನ್ಯವಾದಗಳು. ನಾನು ಎಲ್ಲರಿಗೂ ಧನ್ಯವಾದ ಮಾತ್ರ ಹೇಳಬಲ್ಲೆ. ನಾನು ನನ್ನ ಕೆಲಸಕ್ಕೆ ಮತ್ತೆ ಮರಳಿದ್ದೇನೆʼʼ ಎಂದು ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Tanisha Kuppanda: ತನಿಷಾಳ ಕನಸು ನನಸಾಗಿದೆ, ಹೊಸ ಬ್ಯುಸಿನೆಸ್‌ ಸಕ್ಸೆಸ್‌ ಆಗಲಿ ಎಂದು ಆಶಿಸಿದ ಕಾರ್ತಿಕ್‌!

Tanisha Kuppanda: ʻಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

VISTARANEWS.COM


on

Tanisha Kuppanda with karthik
Koo

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಅವರು ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್​ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಆದರೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.

ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

ಇದು ಮಾ. 29ರಂದು ಉದ್ಘಾಟನೆಯಾಗಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾಗೇ ಸೀಸನ್‌ 10ರ ವಿನ್ನರ್‌, ತನಿಷಾ ಅವರ ಬೆಸ್ಟ್‌ ಫ್ರೆಂಡ್‌ ಕಾರ್ತಿಕ್‌ ಮಹೇಶ್‌ ಸಹ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ!

ಕಾರ್ತಿಕ್‌ ಮಹೇಶ್‌ ಈ ಬಗ್ಗೆ ಇನ್‌ಸ್ಟಾ ಪೋಸ್ಟ್‌ ಮಾಡಿ ʻʻಬಿಗ್ ಬಾಸ್ ಮನೆಯಲ್ಲಿ ತನಿಶಾ ತನ್ನ ಕನಸಿನ ಬಗ್ಗೆ ಬಹಳ ಉತ್ಸುಕಳಾಗಿ ಹೇಳುತ್ತಿದ್ದಾಗ ಆಲಿಸಿದ್ದೆ. ಇಂದು ಗೆಳತಿ ತನಿಷಾಳ ಕನಸು ನನಸಾಗಿದೆ. ನಿನ್ನ ಮುಂದಿನ ಎಲ್ಲಾ ಕೆಲಸಗಳು ಯಶಸ್ವಿಯಾಗಲಿ ಎಂದು ಪ್ರೀತಿಯಿಂದ ಆಶಿಸುವೆʼʼಎಂದು ಬರೆದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

Continue Reading
Advertisement
education News
ಬೆಂಗಳೂರು1 min ago

Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

Sushant Singh Rajput's sister cries as she visits Kedarnath
ಬಾಲಿವುಡ್6 mins ago

Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

PM Narendra Modi
ದೇಶ10 mins ago

PM Narendra Modi: ಎಕ್ಸಿಟ್‌ ಪೋಲ್‌ ರಿಸಲ್ಟ್‌ ಬೆನ್ನಲ್ಲೇ ಪ್ರಧಾನಿ ಮೋದಿ ಬ್ಯಾಕ್‌ ಟು ಬ್ಯಾಕ್‌ ಮೀಟಿಂಗ್‌

Muthyala Maduvu Waterfalls
ಪ್ರವಾಸ26 mins ago

Muthyala Maduvu Waterfalls: ಜಲರಾಶಿಯಿಂದ ತುಂಬಿಕೊಂಡು ಕಣ್ಮನ ಸೆಳೆಯುತ್ತಿರುವ ಮುತ್ಯಾಲಮಡುವು ಜಲಪಾತ

CAN vs USA
ಕ್ರೀಡೆ31 mins ago

CAN vs USA: ಕೆನಡಾ ಪರ ಟಿ20 ವಿಶ್ವಕಪ್​ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್

Raveena Tandon attacked In Mumbai After Being Accused Of Rash Driving
ಬಾಲಿವುಡ್43 mins ago

Raveena Tandon: ರವೀನಾ ಟಂಡನ್ ಕಾರು ಅಪಘಾತ; ನಟಿ ಹೊಡೆಯಬೇಡಿ ಪ್ಲೀಸ್ ಎನ್ನುತ್ತಿರುವ ವಿಡಿಯೊ ನೋಡಿ!

gold rate today
ಕರ್ನಾಟಕ52 mins ago

Gold Rate Today: ಬಂಗಾರ ಪ್ರಿಯರಿಗೆ ಶುಭ ಸುದ್ದಿ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Drowned in water
ಚಿಕ್ಕಬಳ್ಳಾಪುರ1 hour ago

Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

Virat Kohli
ಕ್ರೀಡೆ1 hour ago

Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Exit Poll 2024
ದೇಶ1 hour ago

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು20 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌