ಬೆಂಗಳೂರು: ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಶೋನಲ್ಲಿ ಕಿಚ್ಚು ಹೆಚ್ಚಾಗಿದೆ. ಇದೆ ಮೊದಲ ಸಲ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ನಿಯಮ ಮೀರಿದ ಹಿನ್ನೆಲೆಯಲ್ಲಿ ನೇರವಾಗಿ ಎಲಿಮಿನೇಟ್ ಆಗಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಲಾಯರ್ ಜಗದೀಶ್, ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್ ಶುಕ್ರವಾರ ಮನೆ ತೊರೆದಿದ್ದರು.
ಇದೀಗ ವಾರದ ಕಥೆ ಕಿಚ್ಚ ಜತೆಯಲ್ಲಿ ನಟ ಸುದೀಪ್ ಬಿಗ್‌ಬಾಸ್ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ? ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು ಯಾವುದು ಎಂಬ ಕುತೂಹಲ ಮೂಡಿದೆ.
ಅಸಲಿಗೆ ದೊಡ್ಡ ಮನೆಯಲ್ಲಿ ಆ ದಿನ ನಡೆದಿದ್ದೇನು ಗೊತ್ತಾ?
ಕಳೆದ (ಬುಧವಾರ) ಟಾಸ್ಕ್ ಮುಗಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಜಗದೀಶ್ ಮತ್ತು ಗೋಲ್ಡ್ ಸುರೇಶ್ ಮಾತನಾಡುತ್ತ ಕೂತಿದ್ದರು. ಈ ವೇಳೆ ಮಾತಿನ ಭರದಲ್ಲಿ ಜಗದೀಶ್ ಮನೆಯ ಸ್ಪರ್ಧಿಗಳ ಬಗ್ಗೆ ಇಲ್ಲ ಸಲ್ಲದ ಪದ ಬಳಕೆ ಮಾಡಿ ಮಾತನಾಡಲು ಶುರುಮಾಡಿದರು. ಜಗದೀಶ್ ಅವರ ಮಾತುಗಳು ಸುರೇಶ್‌ಗೆ ಅಸಹನೀಯ ಎನಿಸತೊಡಗಿದವು. ಕೂಡಲೇ ಇಂಥ ಪದಗಳ ಪ್ರಯೋಗ ನನ್ನ ಮುಂದೆ ಮಾಡಬೇಡ ಎಂದು ಬೇಡಿಕೊಂಡರು. ಮುಂದುವರಿದು, ಆ ಹಂಸಾ ಮುಂ* ಎಂಬ ಪದ ಬಳಕೆ ಪ್ರಯೋಗಿಸಿದರು .
ಅಲ್ಲಿಂದ ಶುರುವಾಯ್ತು ವಾರ್.. ಹಂಸಾಗೆ ಆ ಪದ ಪ್ರಯೋಗಿಸಿದ ವಿಚಾರ, ನಂತರ ಇಡೀ ಮನೆಗೂ ಗೊತ್ತಾಯ್ತು. ಮುಂದುವರಿದು ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆಯಿತು. ತಳ್ಳಾಟ ನೂಕಾಟವೂ ನಡೆಯಿತು. ಲಾಯರ್ ಜಗದೀಶ್ ಅವರ ಮೇಲೆ ಇಡೀ ಮನೆಯ ಮಹಿಳಾ ಸ್ಪರ್ಧಿಗಳು ಮುಗಿಬಿದ್ದರು. ಇದೇ ವೇಳೆ ಮಾತುಕತೆ ಅತಿರೇಕಕ್ಕೆ ಹೋಗುತ್ತಿದ್ದಂತೆ, ಜಗದೀಶ್ ಅವರನ್ನು ಅಲ್ಲೇ ಇದ್ದ ರಂಜಿತ್ ತಳ್ಳಿದರು. ಇದೆಲ್ಲವನ್ನು ಗಮನಿಸಿದ ಬಿಗ್‌ಬಾಸ್ ಸಹ ತಾಳ್ಮೆ ಕಳೆದುಕೊಂಡು, ಮೊದಲ ಸಲ ಜೋರಾಗಿ ಕೂಗಿ ಎಲ್ಲರನ್ನು ಒಂದೆಡೆ ಕೂರಿಸಿದರು.
ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್ ಹೊರಕ್ಕೆ
ಇತ್ತ, ಕೆಲ ಹೊತ್ತಿನ ಬಳಿಕ ಮಹಿಳೆಯರಿಗೆ ನಿಂದನೆ, ಅಪಮಾನ ಸಹಿಸುವುದಿಲ್ಲ ಎಂಬ ಆರೋಪದ ಮೇಲೆ ಜಗದೀಶ್ ಅವರನ್ನು ಬಿಗ್‌ಬಾಸ್‌ನಿಂದ ನೇರವಾಗಿ ಎಲಿಮಿನೇಟ್ ಮಾಡಿ, ಹೊರಗೆ ಕಳಿಸಲಾಯಿತು. ಇತ್ತ ದೈಹಿಕ ಹಲ್ಲೆ ಅಕ್ಷಮ್ಯ ಅಪರಾಧ ಎಂಬ ನಿಯಮದಡಿ ರಂಜಿತ್ ಅವರನ್ನೂ ಹೊರಗೆ ಕಳಿಸಲಾಯಿತು. ಈ ಮೂಲಕ ಶುಕ್ರವಾರ ಅಚ್ಚರಿಯ ಬೆಳವಣಿಗೆಯಲ್ಲಿ ಡಬಲ್ ಶಾಕಿಂಗ್ ಎಲಿಮಿನೇಷನ್ ಆಯ್ತು. ಇತ್ತ ರಂಜಿತ್ ಮಾಡಿದ್ದು ಸರಿಯಿದೆ. ಅವರ ಉದ್ದೇಶ ಒಳ್ಳೆಯದು ಎಂದು ಸ್ಪರ್ಧಿಗಳು ಕಣ್ಣೀರಿಟ್ಟರೂ, ನಿಯಮ ಗೌರವಿಸುವ ಸಲುವಾಗಿ ಔಟ್ ಮಾಡಲಾಯಿತು.
ಇದೀಗ.. ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಲಿರುವ ‘ಗರಮಾ ಗರಂ’ ವಿಷಯಗಳು ಯಾವವು ಎಂಬುದನ್ನು ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪೋಸ್ಟ್ ಹಂಚಿಕೊಂಡಿದೆ . ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚನ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ
ಈ ಸಲದ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟ ಪದ ಪ್ರಯೋಗ ಬಳಸಿದ್ದಕ್ಕೆ ಜಗದೀಶ್ ಎಲಿಮಿನೇಟ್ ಆದರೆ, ಒಳ್ಳೆಯ ಉದ್ದೇಶ ಇದ್ದರೂ, ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ರಂಜಿತ್ ಮನೆಯಿಂದ ಹೊರ ನಡೆದಿದ್ದಾರೆ. ಇತ್ತ ಮನೆಯ ಸ್ಪರ್ಧಿಗಳು ರಂಜಿತ್ ತೆರಳಿದ್ದಕ್ಕೆ ಬೇಸರದಲ್ಲಿದ್ದರೆ, ಜಗದೀಶ್ ಹೊರ ನಡೆದಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇದೆಲ್ಲದರ ನಡುವೆಯೇ ವಾರಾಂತ್ಯವೂ ಬಂದಿದೆ. ಕಿಚ್ಚನ ಆಗಮನಕ್ಕೂ ಕ್ಷಣಗಣನೆ ಆರಂಭವಾಗಿದೆ.
ಕಳೆದ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಎಲ್ಲರೂ ಸೇವ್ ಆಗಿದ್ದರು. ಆದರೆ, ಈ ವಾರ ಹಾಗಾಗಲಿಲ್ಲ. ಯಾರೂ ನಿರೀಕ್ಷಿಸದೇ ಇಬ್ಬರು ಸ್ಪರ್ಧಿಗಳು ನೇರವಾಗಿ ಹೊರ ನಡೆಯಬೇಕಾಯಿತು. ಹೀಗಿರುವಾಗ ಈ ವಾರ ಎಲಿಮಿನೇಷನ್ ಇರುತ್ತಾ? ಎಂಬ ಒಂದಷ್ಟು ಪ್ರಶ್ನೆಗಳಂತೂ ಎಲ್ಲರ ಮನಸಿನಲ್ಲೂ ಮೂಡಿದೆ. ಅದರಲ್ಲೂ ವೀಕ್ಷಕರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಸಿಗಬಹುದಾ?
ಹೌದು. ಸೋಷಿಯಲ್ ಮೀಡಿಯಾದಲ್ಲಿ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಿರೋ ‘ಗರಮಾ ಗರಂ’ ವಿಷಯಗಳು ಯಾವವು” ಎಂದು ಪೋಸ್ಟ್ ಹಂಚಿಕೊಂಡಿದೆ ಕಲರ್ಸ್ ಕನ್ನಡ. ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚ ಸುದೀಪ್ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ ಆಯ್ದ ಕೆಲವು ಪ್ರಶ್ನೆಗಳು ಮತ್ತು ಬೇಡಿಕೆಗಳು.
ಸುದೀಪ್‌ಗೆ ವೀಕ್ಷಕರ ಪ್ರಶ್ನೆ ಮತ್ತು ಬೇಡಿಕೆ:
- -ಜಗ್ಗು ಇಲ್ಲದ ಬಿಗ್ ಬಾಸ್ ನಾವು ನೋಡಲ್ಲ. ಲಾಯರ್ ಜಗದೀಶ್ಗೆ ನ್ಯಾಯ ಸಿಗಬೇಕು. ಪುರುಷರಿಗೆ ಆದ ನಿಂದನೆ ಅಪಮಾನದ ಬಗ್ಗೆ ಕರ್ನಾಟಕದ ಜನತೆ ಸಹಿಸುವುದಿಲ್ಲ. ಅವರನ್ನ ಮತ್ತೆ ಅಖಾಡಕ್ಕೆ ಇಳಿಸಲೇಬೇಕು. ಹೆಣ್ಣಿಗೆ ಮಾತ್ರ ಅವಮಾನ ಆಗಿರಲಿಲ್ಲ ಗಂಡಿಗೂ ಅವಮಾನ ಆಗಿದೆ ಇದರ ಬಗ್ಗೆ ನೀವು ಪ್ರಶ್ನೆ ಎತ್ತಲೇಬೇಕು. ಗಂಡಿನ ಮರ್ಯಾದೆಗೆ ಧಕ್ಕೆ ಬರ್ತಿದೆ ಈ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳಿಂದ. ಮುಂದೆ ಪುರುಷ ರಕ್ಷಣಾ ವೇದಿಕೆಯನ್ನು ತೆರೆದರು ತೆರೆಯಬಹುದು.
- -ಸುದೀಪ್ ಸರ್, ಜಗದೀಶ್ ಅವರನ್ನ ಏಕವಚನದಲ್ಲಿ ಮಾತಾಡುವುದಲ್ಲದೇ ಹೋರ್ಗಡೆ ಎನ್ ತಗೊಂಡು ಹೊಡೀತಾರೆ ನಿಂಗೆ ಎನ್ನುತ್ತ ತಳ್ಳಿದ್ದಾರೆ ಭವ್ಯ ಇದಕ್ಕೆ ನ್ಯಾಯ ಸಿಗುತ್ತಾ?
- -ಮಾನಸ ಅವರು ಒಬ್ಬ ಗಂಡಸಿಗೆ ಸೀರೆ ಕೊಡ್ತೀನಿ ಉಟ್ಕೋ, ಅಂತಾರೆ ಅವಳ ಗಂಡ ತುಕಾಲಿ, ಹೆಂಡತಿ ತುಕಾಲಿ ಪ್ರೊ ಮ್ಯಾಕ್ಸ್ ಅಂತ ನೆಟ್ಟಿಗರು ಕಿಡಿಕಾರಿದ್ದಾರೆ. ಗಂಡಿನ ಘನತೆಗೆ ಧಕ್ಕೆ ಆದಾಗ ತಿರುಗೇಟು ಕೊಟ್ಟರೆ ಅದು ಮಹಿಳೆಗೆ ಅಗೌರವವೇ? ಕಿಚ್ಚ ಸುದೀಪ್ ಇದಕ್ಕೆ ನ್ಯಾಯ ಒದಗಿಸುವ ಮೂಲಕ ಪುರುಷರ ಘನತೆ ಕಾಪಾಡಬೇಕು ಅಂದಿದ್ದಾರೆ.
- -ಜಗ್ಗುನ ಪ್ರವೋಕ್ ಮಾಡಿದ ಎಲ್ಲರಿಗೂ ಅವರ ತಪ್ಪಿನ ಅರಿವು ಮಾಡಿಸಬೇಕು. ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತಾಡುವುದು ತಪ್ಪು. ಜಗದೀಶ್ಗೆ ಶಿಕ್ಷೆಯಾಗಿದ್ದು ಸರಿ. ಆದರೆ ಚೈತ್ರ ಹೇಳ್ತಾರೆ ಅಪ್ಪನಿಗೆ ಹುಟ್ಟಿದರೆ ಬಾ, ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಬಾ ಅಂತ ಇದರಲ್ಲಿ ಆಗಿರುವುದು ಒಂದು ಹೆಣ್ಣಿಗೆ ಅವಮಾನ ಅಂದರೇ (ಜಗದೀಶ್ ತಾಯಿಯ ಬಗ್ಗೆ ) ಇದರ ಬಗ್ಗೆನೂ ಚರ್ಚೆ ಆಗಲೇಬೇಕು.
- -ಜಗ್ಗು ಮಾತಾಡಿದ್ದು ತಪ್ಪು ಅದರಲ್ಲಿ 2 ಮಾತಿಲ್ಲ.. ಆದ್ರೆ ಸತತ 3 ದಿನಗಳಿಂದ ರಂಜಿತ್, ಮಂಜು, ತ್ರಿವಿಕ್ರಮ ಜಗಳ ಆಡೋ ತರ ಪ್ರಚೋದನೆ ಮಾಡಿದ್ದು ತಪ್ಪಲ್ವಾ?.. ಮಾನಸ ಮಾತು ಅಸಹ್ಯವಾಗಿತ್ತು ಅವಳನ್ನು ಯಾಕೆ ಹೊರಗೆ ಹಾಕಿಲ್ಲ. . ಚೈತ್ರ, ಭವ್ಯ, ಮಾನಸ 3 ಜನ ಅಮ್ಮ ಅಪ್ಪ ಹೆಂಡ್ತಿ ಅನ್ನೋ ಶಬ್ದ ಬಳಸಿ ಮಾತನಾಡುವುದಲ್ಲದೇ ಜಗದೀಶ್ ಅವರನ್ನ ಥಳಿಸಿದ್ದಾರೆ.
ರಂಜಿತ್‌ಗೆ ವೀಕ್ಷಕರ ಮೆಚ್ಚುಗೆ
ರಂಜಿತ್ ನೇರವಾಗಿ ಮನೆಯಿಂದ ಹೊರಬರುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ರಂಜಿತ್ ಪರವಾಗಿ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. “ನಿಮ್ಮ ಹೆಸರು ಬಿಗ್‌ಬಾಸ್‌ನಲ್ಲಿ ಶಾಶ್ವತ. ಒಂದೊಳ್ಳೆಯ ಉದ್ದೇಶಕ್ಕೆ ನೀವು ನಿಯಮ ಮುರಿದಿದ್ದೀರಿ. ಇದನ್ನು ಬೇರೆಯವರೂ ಮಾಡಲು ಅಸಾಧ್ಯ” ಎಂದು ಧ್ರುವ ಎಂಬುವವರು ಟ್ವಿಟ್ ಮಾಡಿದ್ದಾರೆ. “ಉದ್ದೇಶ ಸರಿ. ಅಸಲಿ ವಿಚಾರ ಬಿಗ್‌ಬಾಸ್‌ಗೂ ಗೊತ್ತು, ಅಷ್ಟೇ ಸಾಕು.. ಮಿಸ್ ಯೂ ರಂಜಿತ್” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಹೋಗ್ತಿದ್ದೀಯಾ ಮಗ. ಸೂರ್ಯ ರಂಜಿತ್ ಬಿಬಿ ಇರೋವರೆಗೂ ಇದು ಒಂದು ಉದಾಹರಣೆಯಾಗಿ ನಿಲ್ಲಲಿದೆ. ಒಂದೊಳ್ಳೆಯ ಕಾರಣಕ್ಕೆ ನೀವು ಆಚೆ ಹೋಗಿದ್ದೀರಿ” ಎಂದು ವೀಕ್ಷಕರು ಟ್ವಿಟ್ ಮಾಡಿದ್ದಾರೆ.