Site icon Vistara News

Bigg Boss OTT 2: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ 12 ಗಂಟೆಯಲ್ಲೇ ಔಟ್‌; ದಾಖಲೆ ಮಾಡಿದ ಈ ಸೂಪರ್‌ ಸ್ಟಾರ್‌ ಯಾರು?

Bigg Boss OTT 2 Puneet Kumar

ಬೆಂಗಳೂರು: ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್’ ಒಟಿಟಿ (Bigg Boss OTT 2) ಸೀಸನ್‌ 2 ಜೂನ್ 17ರಂದು ಚಾಲನೆ ದೊರೆತಿರುವ ಬೆನ್ನಲ್ಲೇ ಇತಿಹಾಸವನ್ನೂ ಸೃಷ್ಟಿಸಿಬಿಟ್ಟಿದೆ. ಅಚ್ಚರಿಯ ತಿರುವುಗಳೊಂದಿಗೆ ಸೀಸನ್‌ ಶುರುವಾಗಿದ್ದು, ಪ್ರೇಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಸೀಸನ್ 2ರ ಶೋ ಶುರುವಾದ 12 ಗಂಟೆಯಲ್ಲೇ ಸ್ಪರ್ಧಿಯೊಬ್ಬರೂ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹೌದು, ಹೀಗೆ ಎಲಿಮಿನೇಟ್​ ಆಗುವ ಮೂಲಕ ದಾಖಲೆ ಮಾಡಿದ್ದಾರೆ. ಅವರೇ ತಮ್ಮನ್ನು ತಾವೇ ಸೂಪರ್‌ ಸ್ಟಾರ್‌ ಎಂದೆಲ್ಲಾ ಕರೆದುಕೊಳ್ಳುವ ಪುನೀತ್ ಕುಮಾರ್​​​.

ಜೂನ್‌ 17ರ ರಾತ್ರಿ ಜಿಯೋ ಸಿನಿಮಾದಲ್ಲಿ ಕಾರ್ಯಕ್ರಮದ ಪ್ರಥಮ ಪ್ರದರ್ಶನವಾದಾಗ ಪುನೀತ್ ಲಾಸ್ಟ್‌ ಕಂಟೆಸ್ಟ್‌ ಆಗಿ ಮನೆಗೆ ಪ್ರವೇಶಿಸಿದರು. ಪುನೀತ್ ಬಿಗ್ ಬಾಸ್ ಓಟಿಟಿ ಸೀಸನ್‌ 2ರ ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. ಆದರೆ, ಇದೀಗ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಅವರಾಗಿದ್ದಾರೆ. ಅಂದಹಾಗೆ, ಶೋ ಶುರುವಾದ ಕೆಲವೇ ಗಂಟೆಗಳಲ್ಲಿ ಪುನೀತ್ ನಡವಳಿಕೆಯಿಂದ ಬೇಸತ್ತಿದ್ದ ಇತರೆ ಸ್ಪರ್ಧಿಗಳು. ನೇರವಾಗಿ ನಾಮಿನೇಟ್ ಮಾಡಿದ್ದರು. ಹಾಗಾಗಿ ಪುನೀತ್ ಕುಮಾರ್ ಬಂದಷ್ಟೇ ಸ್ಪೀಡ್‌ನಲ್ಲಿ ಶೋನಿಂದ ಹೊರಗೆ ಹೋಗಬೇಕಾಯ್ತು, ಇದು ಹೊಸ ದಾಖಲೆಗೂ ಕಾರಣವಾಗಿದೆ.

ಯಾರು ಈ ಪುನೀತ್‌ ಕುಮಾರ್‌?

ಸೋಷಿಯಲ್‌ ಮೀಡಿಯಾದಲ್ಲಿ ಇವರು ಸಖತ್‌ ಆ್ಯಕ್ಟಿವ್‌. ತಮ್ಮನ್ನು ತಾವೇ ಪುನೀತ್ ಸೂಪರ್ ಸ್ಟಾರ್, ಲಾರ್ಡ್ ಪುನೀತ್ ಎಂದೆಲ್ಲಾ ಕರೆದುಕೊಳ್ಳುತ್ತಿದ್ದಾರೆ. ಇವರು ಫೇಮಸ್​ ಆಗಿರುವುದು ಬೈಕ್ ರೈಡ್ ವಿಡಿಯೊ ಮೂಲಕ. ಇದು ಸಖತ್ ಟ್ರೆಂಡಿಂಗ್ ಆಗಿತ್ತು. ಸೋಷಿಯಲ್ ಮೀಡಿಯಾದಿಂದ ಗಳಿಸುವ 90% ಹಣವನ್ನು ಹಿಂದುಳಿದ ಮಕ್ಕಳ ಏಳಿಗೆಗೆ ದಾನ ಮಾಡುತ್ತಾರೆ. ಆದರೆ ಮನೆಯಲ್ಲಿ ಅವರ ನಡವಳಿಕೆಗೆ ಮನೆಯ ಸ್ಪರ್ಧಿಗಳಿಗೆ ಕಿರಿ ಕಿರಿ ಉಂಟಾಗಿತ್ತು. ಕೇವಲ 12 ಗಂಟೆಗಳಲ್ಲೇ ಮನೆಯಿಂದ ಹೊರಬಿದ್ದರು. ಪುನೀತ್‌ ಅವರು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮನೆಯಲ್ಲಿ ಪೂಜಾ ಭಟ್, ಪಾಲಕ್ ಪುರ್ಸ್ವಾಮಿ, ಅವಿನಾಶ್ ಸಚ್‌ದೇವ್, ಬೇಬಿಕಾ ಧುರ್ವೆ, ಆಲಿಯಾ ಸಿದ್ಧಿಕಿ, ಜಾಡ್‌ ಹದೀದ್, ಮನಿಷಾ ರಾಣಿ, ಸೈರಸ್, ಅಕಾಂಕ್ಷಾ ಪುರಿ, ಅಭಿಷೇಕ್ ಮಲ್ಹಾನ್, ಜಿಯಾ ಶಂಕರ್ ಮುಂತಾದವರು ಸ್ಪರ್ಧಿಗಳಾಗಿ ಮನೆಯೊಳಗೆ ಇದ್ದಾರೆ.

ಇದನ್ನೂ ಓದಿ: Bigg Boss OTT season 2: ʻಹಿಂದಿ ಬಿಗ್‌ ಬಾಸ್‌ ಒಟಿಟಿ 2ನೇʼ ಸೀಸನ್‌ ಹಾಸ್ಟ್‌ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌; ಪ್ರೊಮೊ ಇಲ್ಲಿದೆ!

ಬಿಗ್‌ ಬಾಸ್‌ ಹಿಂದಿ ಒಟಿಟಿ (Bigg Boss OTT) ಸೀಸನ್‌ ಒಂದನ್ನು ಕರಣ್ ಜೋಹರ್ ಹೋಸ್ಟ್‌ ಮಾಡಿದ್ದರು. ಈ ಬಾರಿ ನಿರೂಪಕರ ಸ್ಥಾನಕ್ಕೆ ಕರಣ್​ ಜೋಹರ್​ ಬದಲಿಗೆ ಸಲ್ಮಾನ್​ ಖಾನ್​ (Salman Khan) ಬಂದಿದ್ದಾರೆ. ಸಲ್ಮಾನ್‌ ಖಾನ್‌ ನಟ 2010 ರಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದರು. ಈ ನಡುವೆ, ಫರ‍್ಹಾ ಖಾನ್ 2015ರಲ್ಲಿ ಬಿಗ್ ಬಾಸ್ʻ ಹಲ್ಲಾ ಬೋಲ್ʼ ಎಂಬ ಶೀರ್ಷಿಕೆಯ ಸ್ಪಿನ್‌ಆಫ್ ಆವೃತ್ತಿಯನ್ನು ಹೋಸ್ಟ್ ಮಾಡಿದರು. ಕರಣ್ ಜೋಹರ್ 2021ರಲ್ಲಿ ಬಿಗ್ ಬಾಸ್ OTT ಸೀಸನ್‌ ಒಂದನ್ನು ಹೋಸ್ಟ್ ಮಾಡಿದರು.

Exit mobile version