Site icon Vistara News

Bigg Boss Telugu 7:‘ಅಗ್ನಿಸಾಕ್ಷಿ’ ನಟಿಯ ಬಾಯ್‌ಫ್ರೆಂಡ್‌ ಬಿಗ್‌ ಬಾಸ್‌ ವೇದಿಕೆಯಲ್ಲಿ ರಿವೀಲ್‌!

Shobha Shetty introduces her boyfriend!

ಬೆಂಗಳೂರು: ಬಿಗ್ ಬಾಸ್ ತೆಲುಗು (Bigg Boss Telugu 7) ಸೀಸನ್ 7 ಶೋನಲ್ಲಿ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ (Shobha Shetty) ಅವರು ಸ್ಪರ್ಧಿಯಾಗಿದ್ದಾರೆ. ವಿಶೇಷವೆಂದರೆ ಟಾಪ್ 5 ಸ್ಪರ್ಧಿಗಳಲ್ಲಿ ಶೋಭಾ ಶೆಟ್ಟಿ ಕೂಡ ಒಬ್ಬರು. ಶೋಭಾ ಶೆಟ್ಟಿ ಅವರು ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರ ತಂಗಿ ತನು ಪಾತ್ರವನ್ನು ನಿಭಾಯಿಸುತ್ತಿದ್ದರು. ಆದರೀಗ ಶೋಭಾ ಅವರು ಬಿಗ್‌ ಬಾಸ್‌ ಮೂಲಕ ಸಖತ್‌ ಸುದ್ದಿಯಾಗಿದ್ದಾರೆ. ಮಾತ್ರವಲ್ಲ ಅದೇ ವೇದಿಕೆಯಲ್ಲಿ ಅವರ ಬಾಯ್‌ಫ್ರೆಂಡ್‌ ಯಾರು ಎಂಬುದು ರಿವೀಲ್‌ ಆಗಿದೆ.

ಶೋನಲ್ಲಿ ಶೋಭಾ ಅವರ ಅಮ್ಮ ಕೂಡ ಭೇಟಿ ಕೊಟ್ಟಿದ್ದರು. ಆಗ ಕನ್ನಡದಲ್ಲಿಯೇ ಮಾತನಾಡಿದ್ದು ಗಮನಸೆಳೆದಿತ್ತು. ಮಾತ್ರವಲ್ಲ ವೇದಿಕೆಯಲ್ಲಿ ಅವರ ಬಾಯ್‌ಫ್ರೆಂಡ್‌ ಹಾಗೂ ಅವರ ತಂದೆ ಒಟ್ಟಿಗೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ನಟ ಯಶವಂತ್ ಎಂಬುವವರ ಜತೆ ಪ್ರೀತಿಯಲ್ಲಿದ್ದಾರೆ ಶೋಭಾ. ಶೋಭಾ ಅವರು ತಂದೆಯನ್ನು ನೋಡಿದ ಕೂಡಲೇ ‘ಅಪ್ಪ ಹೇಗಿದ್ದೀರಿ..’ಎಂದು ಕನ್ನಡದಲ್ಲೇ ಕೇಳಿದ್ದರು. ಅವರು ಕೂಡ ಕನ್ನಡದಲ್ಲೇ ‘ಚೆನ್ನಾಗಿದ್ದೀನಿ ಅಮ್ಮ..’ ಎಂದು ಹೇಳಿದರು. ನಂತರ ಯಶವಂತ್ ಅವರು, ‘ನೀನು ತುಂಬ ಚೆನ್ನಾಗಿ ಆಡುತ್ತಿದ್ದೀಯಾ, ಇನ್ನೂ ಚೆನ್ನಾಗಿ ಆಡು.. ಐ ಲವ್ ಯೂ, ಐ ಮಿಸ್ ಯೂ..’ ಎಂದು ಶೋಭಾಗೆ ಹೇಳಿದರು.

ಇದನ್ನೂ ಓದಿ: Bigg Boss Telugu 7: ಶುರುವಾಯ್ತು ತೆಲುಗು ಬಿಗ್‌ ಬಾಸ್‌; ಯಾರೆಲ್ಲ ಸ್ಪರ್ಧಿಗಳು ಇದ್ದಾರೆ?

ಯಶ್‌ವಂತ್‌ ಯಾರು?

ಶೋಭಾ ಶೆಟ್ಟಿ ನಟಿಸಿದ್ದ ‘ಕಾರ್ತಿಕ ದೀಪಂ’ ಧಾರಾವಾಹಿ ತೆಲುಗುವಿನಲ್ಲಿ ಸಖತ್‌ ಹಿಟ್‌ ಆಗಿತ್ತು. ಅದೇ ಧಾರಾವಾಹಿಯಲ್ಲಿ ಯಶವಂತ್‌ ಅವರು ಆದಿತ್ಯ ಪಾತ್ರ ನಿಭಾಯಿಸುತ್ತಿದ್ದರು. ಧಾರಾವಾಹಿ ಮುಗಿದ ಬಳಿಕವೂ ಅವರಿಬ್ಬ ಸ್ನೇಹ ಮುಂದುವರಿದಿತ್ತು. ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಇದಾದ ಬಳಿಕ ಇವರಿಬ್ಬರೂ ಜತೆಗೂಡಿ ‘ಬುಜ್ಜಿ ಬಂಗಾರಂ’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

Exit mobile version