Bigg Boss Telugu 7: ಶುರುವಾಯ್ತು ತೆಲುಗು ಬಿಗ್‌ ಬಾಸ್‌; ಯಾರೆಲ್ಲ ಸ್ಪರ್ಧಿಗಳು ಇದ್ದಾರೆ? - Vistara News

South Cinema

Bigg Boss Telugu 7: ಶುರುವಾಯ್ತು ತೆಲುಗು ಬಿಗ್‌ ಬಾಸ್‌; ಯಾರೆಲ್ಲ ಸ್ಪರ್ಧಿಗಳು ಇದ್ದಾರೆ?

Bigg Boss Telugu 7: ಈಗಾಗಲೇ ನಾಗುರ್ಜನ ಪ್ರೋಮೊದಲ್ಲಿ ಹೇಳಿರುವಂತೆ ಈ ಬಾರಿಯ ಬಿಗ್​ಬಾಸ್ ಸಾಮಾನ್ಯವಾಗಿರುವುದಿಲ್ಲ ಎಂದಿದ್ದರು. ಸ್ಪರ್ಧಿಗಳ ವಿವರ ಇಲ್ಲಿದೆ!

VISTARANEWS.COM


on

Bigg Boss Telugu 7 List Of Contestants
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಸೆಪ್ಟೆಂಬರ್ 3ರಂದು ಪ್ರಾರಂಭವಾಗಿದೆ. ನಟ ನಾಗಾರ್ಜುನ (Akkineni Nagarjuna)ಮತ್ತೊಮ್ಮೆ ಬಿಗ್​ಬಾಸ್ ಹೊಸ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಯಾರೆಲ್ಲ ಸ್ಪರ್ಧಿಗಳು ಇದ್ದಾರೆ ಎಂಬುದು ನೋಡೋಣ! (bigg boss telugu 7 contestants list) ಈಗಾಗಲೇ ನಾಗುರ್ಜನ ಪ್ರೋಮೊದಲ್ಲಿ ಹೇಳಿರುವಂತೆ ಈ ಬಾರಿಯ ಬಿಗ್​ಬಾಸ್ ಸಾಮಾನ್ಯವಾಗಿರುವುದಿಲ್ಲ ಎಂದಿದ್ದರು.

ಪ್ರಿಯಾಂಕಾ ಜೈನ್

ಟಿವಿ ನಟಿ ಪ್ರಿಯಾಂಕಾ ಜೈನ್, ಮೌನ ರಾಗಂ ಮತ್ತು ಜಾನಕಿ ಕಲಗನಾಲೆಡು ಧಾರಾವಾಹಿಗಳಿಂದ ಹೆಸರು ಪಡೆದಿರುವ ಅವರು ಬಿಗ್ ಬಾಸ್ ತೆಲುಗು 7 ಗೆ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಬಂದರು.

ಶಿವಾಜಿ

ಶಿವಾಜಿ ಟಾಲಿವುಡ್‌ನ ಜನಪ್ರಿಯ ನಟ. ತೆಲುಗಿನಲ್ಲಿ ಹಲವಾರು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದರು.

ದಾಮಿನಿ ಭಟ್ಲ

ದಾಮಿನಿ ಜನಪ್ರಿಯ ಹಿನ್ನೆಲೆ ಗಾಯಕಿ. ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಎಂಎಂ ಕೀರವಾಣಿ ಅವರ ನಿರ್ದೇಶನದಲ್ಲಿ ಅವರು ಹಲವಾರು ಗಮನಾರ್ಹ ಸಂಯೋಜನೆಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: Bigg Boss Telugu 7: ಬಿಗ್‌ ಬಾಸ್‌ ವೇದಿಕೆಯಲ್ಲಿ ಸಮಂತಾ ಎಲ್ಲಿ?ಎಂದು ಕೇಳಿದ ಮಾಜಿ ಮಾವ ನಾಗಾರ್ಜುನ!

ಪ್ರಿನ್ಸ್ ಯವರ್

ಫಿಟ್‌ನೆಸ್ ಉತ್ಸಾಹಿ, ರೂಪದರ್ಶಿ ಮತ್ತು ನಟ ಪ್ರಿನ್ಸ್ ಯವರ್ ಅವರು ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷಿಸಿ ಸೋಲು ಕಂಡು ಚಿತ್ರರಂಗ ತೊರೆದವರು.”ಬಿಗ್ ಬಾಸ್ ತೆಲುಗು ಅವಕಾಶ ನನಗೆ ಬಂದಿದೆ. ಇಂದಿನಿಂದ ನನ್ನ ಜೀವನ ಬದಲಾಗಲಿ ಎಂದು ನಾನು ಭಾವಿಸುತ್ತೇನೆ” ಎಂದು ವೇದಿಕೆಯಲ್ಲಿ ಹೇಳಿಕೊಂಡರು.

ಸುಭಾ ಶ್ರೀ ರಾಯಗುರು

ಸುಭಾ ಶ್ರೀ ರಾಯಗುರು ವಕೀಲೆ ಹಾಗೂ ನಟಿ. ಕುಟುಂಬದ ಆಸೆಯಂತೆ ಕಾನೂನು ಪದವಿ ಪಡೆದರು. ಆದರೆ ನಟನೆ ಮತ್ತು ನೃತ್ಯದ ಮೇಲಿನ ಆಸಕ್ತಿಯಿಂದಾಗಿ ಅವರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡರು.

ಶಕೀಲಾ

Bigg Boss Telugu 7

ಬಿಗ್ ಬಾಸ್ ತೆಲುಗು 7 ಕಾರ್ಯಕ್ರಮಕ್ಕೆ ಆರನೇ ಸ್ಪರ್ಧಿಯಾಗಿ ಶಕೀಲಾ ಪ್ರವೇಶಿಸಿದರು. ಮೊದಲು ಅವರ ಮಗಳು ಮಿಲಾ ಅವರು ‘ಬಿಗ್ ಬಾಸ್ ತಮಿಳು ಸೀಸನ್ 5’ ಸ್ಪರ್ಧಿ ಆಗಿದ್ದರು.

ಸಂದೀಪ್ ನೃತ್ಯ ನಿರ್ದೇಶಕ-

‘ಆಟ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಪಡೆದ ಆಟಾ ಸಂದೀಪ್ ನೃತ್ಯ ನಿರ್ದೇಶಕ.

ಇದನ್ನೂ ಓದಿ: Bigg Boss Telugu 7: ದೊಡ್ಮನೆಗೆ ಕಾಲಿಡಲು ನಟಿ ಶಕೀಲಾ ರೆಡಿ?

ಶೋಭಾ ಶೆಟ್ಟಿ

ಕಿರುತೆರೆ ನಟಿ ಶೋಭಾ ಶೆಟ್ಟಿ ಬಿಗ್ ಬಾಸ್ ತೆಲುಗು 7 ರ ಎಂಟನೇ ಸ್ಪರ್ಧಿಯಾಗಿ ಬಂದರು. ಅವರು ಕಾರ್ತಿಕಾ ದೀಪಂನ ಖಳನಾಯಕಿ ‘ಮೋನಿತಾ’ ಪಾತ್ರಧಾರಿಯಾಗಿದ್ದಾರೆ.

ಟೇಸ್ಟಿ ತೇಜಾ

ಯೂಟ್ಯೂಬರ್ ಮತ್ತು ಹಾಸ್ಯನಟಿ ಟೇಸ್ಟಿ ತೇಜ. ದಕ್ಷಿಣ ಭಾರತದ ನಟ ನಟಿಯರೊಂದಿಗೆ ತಾರೆಯರೊಂದಿಗೆ ವಿಭಿನ್ನವಾಗಿ ಅವರ ಚಲನಚಿತ್ರ ಪ್ರಚಾರಗಳನ್ನು ಮಾಡುತ್ತಾರೆ.

ರಥಿಕಾ

Bigg Boss Telugu 7

ರಥಿಕಾ ರೋಸ್ ನಟಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಿದವರು. ಬಿಗ್ ಬಾಸ್ ತೆಲುಗು 7 ಮೂಲಕ ಹೆಚ್ಚು ಜನರನ್ನು ತಲುಪಲು ಮತ್ತು ಜನಪ್ರಿಯರಾಗಲು ಬಯಸುತ್ತಿದ್ದಾರೆ. ಆಕೆ ಹತ್ತನೇ ಸ್ಪರ್ಧಿಯಾಗಿ ಮನೆಗೆ ಬಂದಿದ್ದಾರೆ.

ಡಾ ಗೌತಮ್ ಕೃಷ್ಣ

ಡಾ ಗೌತಮ್ ಯಾವಾಗಲೂ ನಟನಾಗಲು ಬಯಸಿದ್ದರು. ಆದರೆ ಅವರ ಪೋಷಕರ ಬೆಂಬಲದ ಕೊರತೆಯಿಂದಾಗಿ ಅವರ ಆಸಕ್ತಿಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆ ‘ಆಕಾಸ ಬೀದಿಲೋ..’ ಶೀರ್ಷಿಕೆಯ ಚಲನಚಿತ್ರದೊಂದಿಗೆ ಪದಾರ್ಪಣೆ ಮಾಡಿದರು.

ಕಿರಣ್ ರಾಥೋರ್

ನಟಿ ಕಿರಣ್ ರಾಥೋಡ್ ಟಾಲಿವುಡ್‌ನ ಜನಪ್ರಿಯ ನಟಿ. ಹಿಂದಿ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಹಲವಾರು ದಕ್ಷಿಣ-ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Bigg Boss Telugu 7: ಶುರುವಾಗ್ತಿದೆ ಬಿಗ್ ಬಾಸ್ ತೆಲುಗು ಸೀಸನ್‌ 7; ಪ್ರೋಮೊ ಔಟ್‌, ಆ್ಯಂಕರ್ ಫಿಕ್ಸ್!

ಪಲ್ಲವಿ ಪ್ರಶಾಂತ್

ಬಿಗ್ ಬಾಸ್ ತೆಲುಗು ಸೀಸನ್ 7 ರ ಹದಿಮೂರನೇ ಸ್ಪರ್ಧಿ ಪಲ್ಲವಿ ಪ್ರಶಾಂತ್. ಇವರು ಕೃಷಿ ಮತ್ತು ಡಿಜಿಟಲ್ ಕಟೆಂಟ್‌ ಕ್ರಿಯೇಟರ್‌.

ಅಮರ್‌ದೀಪ್ ಚೌದರಿ:

ಜಾನಕಿ ಕಲಗನಾಲೆಡು ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಹೆಸರುವಾಸಿಯಾದ ಕಿರುತೆರೆ ನಟ ಅಮರ್‌ದೀಪ್ ಚೌಧರಿ ಬಿಗ್ ಬಾಸ್ ತೆಲುಗು 7ರ 14 ನೇ ಸ್ಪರ್ಧಿಯಾಗಿದ್ದಾರೆ.

ಉದ್ಘಾಟನೆ ಕಾರ್ಯಕ್ರಮಕ್ಕೆ ನಟ ವಿಜಯ್ ದೇವರಕೊಂಡ ಹಾಗೂ ನಟ ನವೀನ್ ಪೋಲಿಶೆಟ್ಟಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ವಿಜಯ್ ದೇವರಕೊಂಡ ತಮ್ಮ ‘ಖುಷಿ’ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

Shobha Shetty: ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

VISTARANEWS.COM


on

Shobha Shetty car gift to yashwanth birthday
Koo

‘ಅಗ್ನಿಸಾಕ್ಷಿ’ (Shobha Shetty) ಹಾಗೂ ‘ನಮ್ಮ ರುಕ್ಕು’ ಧಾರಾವಾಹಿಗಳಲ್ಲಿ ನಟಿಸಿದ ಶೋಭಾ ಶೆಟ್ಟಿ ಸದ್ಯ ತೆಲುಗು ವೀಕ್ಷಕರ ಮನ ಗೆದ್ದಿದ್ದಾರೆ.

ನಟ ಯಶ್ವಂತ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಲು ಆಕೆ ಮುಂದಾಗಿದ್ದಾರೆ. ಈಗಾಗಲೇ ಇಬ್ಬರು ಮದುವೆ ನಿಶ್ಚಯವಾಗಿದೆ.

ಶೋಭಾ ಈಗಾಗಲೇ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. ಬೀಸ್ಟ್ ಎಕ್ಸ್‌ಯುವಿ 700 ಕಾರ್‌ ಅನ್ನು ಈ ವರ್ಷ ಯಶ್ವಂತ್ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಆಗಿ ಕೊಟ್ಟಿದ್ದಾರೆ.

ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿಯ ತನು ಪಾತ್ರ ಆಕೆಗೆ ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್‌ ತುಂಬ ಮುಗ್ದ, ತಾಯಿ ಕಣ್ಣೀರು ಹಾಕೊಂಡು ಮಗನನ್ನು ಬೆಳೆಸಬೇಕು ಎಂದಿದ್ರು ಎಂದ ಲಹರಿ ವೇಲು!

Actor Darshan: ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್‌ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.

VISTARANEWS.COM


on

Actor Darshan Lahari Velu About Darshan Arrest
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾಗುತ್ತಿದ್ದು, ಇಂದು (ಜೂನ್‌ 22) ಪೊಲೀಸರು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಇಲ್ಲಿ ದರ್ಶನ್‌ ಭವಿಷ್ಯ ನಿರ್ಧಾರವಾಗಲಿದೆ. ಇದೀಗ ಲಹರಿ ಸಂಸ್ಥೆಯ ವೇಲು ಅವರು ದರ್ಶನ್‌ ಕುತಾಗಿ ಬೇಸರ ಹೊರಹಾಕಿದ್ದಾರೆ. ವಿಸ್ತಾರ ಜತೆ ಮಾತನಾಡಿದ ಲಹರಿ ವೇಲು ಅವರು ʻʻಮುಂಚೆ ದರ್ಶನ್‌ ತುಂಬ ಮುಗ್ದನಾಗಿದ್ದ. ಒಂಥರ ಶೈ ವ್ಯಕ್ತಿತ್ವ. ದರ್ಶನ್‌ ತಾಯಿ ಆಗ ಮಗನನ್ನು ಬೆಳೆಸಬೇಕು ಎಂದು ಕಣ್ಣೀರಿಟ್ಟಿದ್ದರುʼʼಎಂದರು.

ಲಹರಿ ವೇಲು ಮಾತನಾಡಿ ʻʻಹಲವು ವರ್ಷಗಳಿಂದ ದರ್ಶನ್‌ ಅವರನ್ನು ನೋಡಿಕೊಂಡು ಬಂದಿದ್ದೆ. ಪೊರ್ಕಿ ಸಿನಿಮಾ ಆಡಿಯೊ ಲಾಂಚ್‌ ವೇಳೆ ದರ್ಶನ್‌ ನೋಡುವಾಗ ತುಂಬ ಮುಗ್ದ ಮನುಷ್ಯ. ಶೈ ವ್ಯಕ್ತಿತ್ವ. ತುಂಬ ಸ್ಮಾರ್ಟ್‌. ತಾಯಿ ಕಣ್ಣೀರಿಟ್ಟು ಮಗನನ್ನು ಬೆಳೆಸಬೇಕು ಎಂದಿದ್ದರು. ಆದರೆ ಬೆಳದ ಮೇಲೆ ಹೇಗೆ ಇರಬೇಕು ಎಂದು ನಾವು ಒಮ್ಮೆ ಪ್ರಶ್ನೆ ಕೇಳಿಕೊಳ್ಳಬೇಕು. ನಾನು ಯಾವಾಗಲೂ ಎಲ್ಲರಿಗೂ ಅದೇ ಹೇಳೋದು. ನೆಗೆಟಿವ್‌ ಇರೋ ಜಾಗದಲ್ಲಿ ಇರಬೇಡಿ ಎಂದು. ನಿಮ್ಮ ಸಂಘ ತುಂಬ ಮುಖ್ಯ ಆಗತ್ತೆ. ಸಮಾಜ ನಮ್ಮನ್ನು ಹೇಗೆ ನೋಡುತ್ತಿದೆ ಎನ್ನುವುದು ತಿಳಿದಿಕೊಳ್ಳಬೇಕು. ಗ್ರಹಣ ಹಿಡಿದ ಮೇಲೆ ನಂತರ ಒಳ್ಳೆಯದಾಗಲೇ ಬೇಕು. ಆಗಬಿಡುತ್ತೆ. ಚಲನಿಚಿತ್ರ ನಂಬಿಕೊಂಡು ಲಕ್ಷಾಂತರ ಜನ ಇದ್ದಾರೆ. ಇದೀಗ ಇಂತಹ ಘಟನೆಗಳು ಸಂಭವಿಸಿದಾಗ ಭಯ ಆಗತ್ತೆʼʼಎಂದರು.

ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿದ ಕಾಮುಕ

ʻʻನಟ ನಟಿಯರು, ತಂತ್ರಜ್ಞರು ಕಲಾವಿದರೂ ಹೀಗೆ, ಎಲ್ಲರೂ ನಮ್ಮ ಕುಂಟುಂಬ. ನಾವು 48 ವರ್ಷದಿಂದ ಲ ಹರಿ ನಡೆಸುಕೊಂಡು ಬರುತ್ತ ಇದ್ದೇವೆ. ಇದು ಕರುನಾಡು. ನಮಗೆ ಆದ ಇತಿಹಾಸ ಇದೆ. ಸಿನಿಮಾಗಳನ್ನು ನೋಡಿ, ಹಾಡುಗಳನ್ನು ಕೇಳಿ ಬದುಕು ಕಟ್ಟಿಕೊಂಡಂತಹ ಜೀವನ ನಮ್ಮದು. ಯಾರ ಜೀವನದಲ್ಲಿ ಕೆಟ್ಟ ಘಟನೆಗಳು ಸಂಭವಿಸಬಾರದು. ಚನಚಿತ್ರೋತ್ಸವ ಬೆಳಸೆದಂತಹವರು ಹೊಟ್ಟೆ ಹಿಟ್ಟಿಲ್ಲ ಅಂದರೂ ಪಕ್ಕದ ಮನೆ ಕೇಳಿಲ್ಲ.‌ ಕಲಾವಿದರಿಗೆ ತುಂಬ ಗೌರವ ಇದೆ. ಅದನ್ನು ಕಾಪಾಡಿಕೊಳ್ಳಬೇಕು. ಕಲಾವಿದರಿಗೆ ಮಾನವೀಯತೆ, ಮನುಷ್ಯತ್ವ ತುಂಬ ಮುಖ್ಯ. ತುಂಬ ಒಳ್ಳೆಯ ಮನಸ್ಸು ಇರೋರು ಕಲಾವಿದರು ಆಗೋದು. ಕಲೆಗೆ ಬೆಲೆ ಕಟ್ಟಲಾಗದು. ಅಭಿಮಾನಿಗಳು ಕೂಡ ಅಷ್ಟೇ ಬೆಳೆಸುತ್ತಾರೆ. ಬೆಳೆಸಿದಾಗ ಆಸ್ಥಾನವನ್ನು ಕಾಪಾಡಿಕೊಳ್ಲಬೇಕು. ನಾವು ಇರೋದೆ ಮೂರು ದಿನ. ಹಾಗಿದ್ದಾಗ ಸಮಾಜಕ್ಕೆ ನಾವು ಮಾದರಿಯಾಗಿ ಬದಕಬೇಕುʼʼಎಂದರು

ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್‌ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.

ಪೊಲೀಸರಿಂದ ಸಿದ್ಧತೆ

ದರ್ಶನ್ ಸೇರಿ 4 ಜನ ಬಂಧಿತ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಿರುವ ಪೊಲೀಸರು ಅದಕ್ಕಾಗಿ ಸಿದ್ಧತೆ ಕೈಗೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಕಳೆದ 12 ದಿನಗಳಿಂದ ಎಲ್ಲ 17 ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು ಈಗಾಗಲೇ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಸಂಗ್ರಹಿಸಿದ್ದಾರೆ.

ಕೊಲೆ ನಡೆದ ಆರ್.ಆರ್‌.ನಗರ ಶೆಡ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಾಕ್ಷ್ಯ ಕಲೆ ಹಾಕಿದ್ದಾರೆ. ಈಗಾಗಲೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತಿತರರ ಹೇಳಿಕೆಗಳನ್ನೂ ದಾಖಲಿಸಲಾಗಿದೆ.

ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿಯೊಂದು ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ‌ವರದಿ ಪಡೆದು‌ ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ದರ್ಶನ್‌ ಜೈಲಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

.

Continue Reading

ಕರ್ನಾಟಕ

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Kalki 2898 AD: ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

VISTARANEWS.COM


on

Kalki 2898 AD Final Trailer Released
Koo

ಬೆಂಗಳೂರು: ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ (Kalki 2898 AD) ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

ಟ್ರೇಲರ್‌ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್.‌ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್‌ ಆಗಿಯೇ ಮಿಂಚು ಹರಿಸಿದ್ದಾರೆ.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

ʼಕಲ್ಕಿ 2898 ADʼ ಚಿತ್ರದ ಟ್ರೇಲರ್‌ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯ ವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌

ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ.

ಇದನ್ನೂ ಓದಿ: Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ ಮತ್ತು ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‌

Continue Reading

ಸ್ಯಾಂಡಲ್ ವುಡ್

Kannada New Movie: ಡಾಲಿ-ಪರಮ್ ‘ಕೋಟಿ’ಗೆ ಪ್ರೇಕ್ಷಕರ ಜೈಕಾರ; ಕೊಂಡಾಡಿದ ಪ್ರತಾಪ್ ಸಿಂಹ!

Kannada New Movie: ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

VISTARANEWS.COM


on

Kannada New Movie kotee watched Bt prathap simha and likes
Koo

ಬೆಂಗಳೂರು: ಪರಮ್ ಚೊಚ್ಚಲ ಪ್ರಯತ್ನದ `ಕೋಟಿ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವಾರ ತೆರೆಗೆ ಬಂದ ಚಿತ್ರವನ್ನು ಫ್ಯಾಮಿಲಿ ಆಡಿಯನ್ಸ್ ಫರ್ಫೆಕ್ಟ್​ ಫ್ಯಾಮಿಲಿ ಎಂಟರ್‌ಟೈನರ್ ಅಂತಾ ಹಾಡಿ ಹೊಗಳುತ್ತಿದ್ದಾರೆ. ಯಶಸ್ವಿ ಎರಡನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿರುವ ಕೋಟಿ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಂದ ಚಪ್ಪಾಳೆ ಪಡೆಯುತ್ತಿದೆ.

ಕಾಮನ್ ಮ್ಯಾನ್ ಕಥೆಯಾಗಿರುವ ಕೋಟಿ ಸಿನಿಮಾದಲ್ಲಿ ಧನಂಜಯ್, ರಮೇಶ್ ಇಂದಿರಾ, ರಂಗಾಯಣ ರಘು, ತಾರಾ ನಟನೆ, ರೋಚಕ ಕ್ಲೈಮ್ಯಾಕ್ಸ್ ‌ಮತ್ತು ದುನಿಯಾ ವಿಜಯ್ ವಿಶೇಷ ಪಾತ್ರದ ಮೂಲಕ ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ. ಕೋಟಿ ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಮೈಸೂರಿನಲ್ಲಿ ಜನಪ್ರಿಯ ರಾಜಕಾರಣಿ ಪ್ರತಾಪ್ ಸಿಂಹ ಚಿತ್ರ ವೀಕ್ಷಣೆ ಮಾಡಿ ಕೋಟಿ ಕಥೆಯನ್ನು ಮನಸಾರೆ ಕೊಂಡಾಡಿದ್ದಾರೆ.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿ ಅವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಾಮನ್. ಚಿತ್ರವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ಕೋಟಿ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ವಿಶೇಷ ಪಾತ್ರದಲ್ಲಿ ದುನಿಯಾ ವಿಜಯ್

‘ಸಲಗ’ ಮೂಲಕ ತಮ್ಮ ವೃತ್ತಿಜೀವನಕ್ಕೆ ಹೊಸ ಬಣ್ಣ ತುಂಬಿರುವ ದುನಿಯಾ ವಿಜಯ್ ‘ಕೋಟಿ’ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರು ಅಚ್ಚರಿಯಿಂದಲೇ ಈ ವಿಶೇಷ ಪಾತ್ರವನ್ನು ಮೆಚ್ಚಿದ್ದಾರೆ. ಈ ಹಿಂದೆ ವಿಜಯ್ ಅವರ ‘ಸಲಗ’ ಸಿನೆಮಾದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

‘ದುನಿಯಾ ವಿಜಯ್ ಅವರ ನಟನೆ ಮತ್ತು ಆ ಒಂದು ಸನ್ನಿವೇಶ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡುತ್ತದೆ’ ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ದುನಿಯಾ ವಿಜಯ್ ಕ್ಯಾಮಿಯೋಗೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

Continue Reading
Advertisement
Swamji Murder
ಪ್ರಮುಖ ಸುದ್ದಿ12 mins ago

Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು

Child Death
ಬೆಳಗಾವಿ18 mins ago

Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

Shobha Shetty car gift to yashwanth birthday
ಟಾಲಿವುಡ್36 mins ago

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

IND vs BAN
ಕ್ರೀಡೆ43 mins ago

IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

Job Alert
ಉದ್ಯೋಗ50 mins ago

Job Alert: ಗುಡ್‌ನ್ಯೂಸ್‌; ರೈಲ್ವೆ ಇಲಾಖೆಯಲ್ಲಿ ಖಾಲಿ ಇದೆ ಬರೋಬ್ಬರಿ 18,799 ಹುದ್ದೆ: ಅಪ್ಲೈ ಮಾಡುವ ವಿಧಾನ ಇಲ್ಲಿದೆ

ITMS Corridor
Latest56 mins ago

Mysore News in Kannada: ಬೆಂಗಳೂರು-ಮೈಸೂರು ಸಂಚಾರ ನಿಯಂತ್ರಣ ಜು.1ರಿಂದ ಸಂಪೂರ್ಣ ಹೈಟೆಕ್‌

DCM D K Shivakumar statement about new advertising policy
ಕರ್ನಾಟಕ1 hour ago

DK Shivakumar: ವಾರದೊಳಗೆ ಹೊಸ ಜಾಹೀರಾತು ನೀತಿಯ ಕರಡು ಪ್ರತಿ ಬಿಡುಗಡೆ

2nd Puc Exam 3
ಶಿಕ್ಷಣ1 hour ago

2nd PUC Exam 3: ಸೋಮವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ-3 ಶುರು; ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಉಚಿತ

Actor darshan Satish Reddy On Darshan Case
ರಾಜಕೀಯ1 hour ago

Actor Darshan: ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು; ಬಿಜೆಪಿ ಶಾಸಕ ಸತೀಶ್ ರೆಡ್ಡಿ !

govt employees
ಕರ್ನಾಟಕ1 hour ago

Govt Employees: ಸರ್ಕಾರಿ ನೌಕರರಿಗೆ ಅಲರ್ಟ್‌; ಬೆಳಗ್ಗೆ 9.15ಕ್ಕೆ ಆಫೀಸ್‌ ತಲುಪದಿದ್ರೆ ಅರ್ಧ ದಿನ ರಜೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌