Site icon Vistara News

BBK Season 10: ಬೇಗ ಮಗು ಮಾಡ್ಕೊ ತುಕಾಲಿ ಅಂದಿದ್ಯಾಕೆ ಬ್ರಹ್ಮಾಂಡ ಗುರೂಜಿ? ಕಾರ್ತಿಕ್‌ಗೆ 2 ಮದುವೆ ಯೋಗ!

brahmanda guruji prediction about karthik marriage tukali child

ಬೆಂಗಳೂರು: ‘ಮುಂಡಾ ಮೋಚ್ತು’ ಎಂಬ ಪದದಿಂದ ಖ್ಯಾತಿ ಪಡೆದ ಬ್ರಹ್ಮಾಂಡ ಗುರೂಜಿ ಈಗಾಗಲೇ ಬಿಗ್‌ ಬಾಸ್‌ ಮನೆಗೆ (BBK Season 10) ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತೆರೆದ ಬಾಗಿಲಿಂದ ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದೂ ಆಗಿದೆ. ಆದರೀಗ ಗುರೂಜಿ ಅವರು ಕಾರ್ತಿಕ್‌ ಹಾಗೂ ತುಕಾಲಿ ಸಂತುವಿನ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ್‌ಗೆ ದ್ವಿಕಳ ತ್ರಿಯೋಗ ಇದ್ದರೆ, ತುಕಾಲಿ ಬೇಗ ಮಗು ಮಾಡ್ಕೋಬೇಕಂತೆ, ಹಾಗಾದ್ರೆ ಗುರೂಜಿ ಹೇಳಿದ್ದೇನು?

ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇದೀಗ ಗುರೂಜಿ ಅವರು ಕಾರ್ತಿಕ್‌ ಹಾಗೂ ತುಕಾಲಿ ಸಂತೋಷ್‌ ಅವರ ಭವಿಷ್ಯ ನುಡಿದಿದ್ದಾರೆ.

ತುಕಾಲಿ ಸಂತುಗೆ ಮೊದಲಿಗೆ ಕುಂಭ ರಾಶಿ ನಂದು, ಅದಿಕ್ಕೆ ನೀಲಿ ಬಣ್ಣದ ಉಂಗುರ ಹಾಕಿಕೊಂಡೆ ಎಂದು ಬ್ರಹ್ಮಾಂಡ ಗುರೂಜಿಗೆ ಹೇಳಿದ್ದಾರೆ. “ಕುಂಭ ರಾಶಿಗೆ ನೀಲಿ ಹಾಕ್ಕೊಳದಲ್ಲ, ಇರಲಿ ಬಿಡು” ಅಂತ ಬ್ರಹ್ಮಾಂಡ ಗುರೂಜಿ ಅವರು ಸಂತುಗೆ ಹೇಳಿದ್ದಾರೆ. ಕಾರ್ತಿಕ್ ಅವರನ್ನು ನೋಡಿ ಗುರೂಜಿ ಅವರು “ನೋಡು ಅವನು ಬ್ಲ್ಯಾಕ್. ನೀಲಿ ಅಂದ್ರೆ ಶನಿ. ಬ್ಲ್ಯಾಕ್ ಅಂದ್ರೂ ಶನಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK Season 10: ತಲೆ ಬೋಳಿಸ್ಕೊಂಡ್ರು ಕಾರ್ತಿಕ್, ತುಕಾಲಿ! ಮನೆಯಲ್ಲೀಗ ‘ಕಾಂಪಿಟೇಶನ್‌ ಹೀಟ್‌’!

ಇಬ್ಬಿಬ್ಬರನ್ನು ಮದುವೆ ಆದರೆ ಏನು ಕಥೆ?

ಕಾರ್ತಿಕ್‌ ಮದುವೆ ವಿಚಾರವಾಗಿ ಗುರೂಜಿ ಮಾತನಾಡಿ ʻʻಕಾರ್ತಿಕ್ ಮದುವೆ ಟೈಮ್‌ನಲ್ಲಿ ಮದುವೆ ಆಗುವ ಹುಡುಗಿ ಇವನನ್ನು ನೋಡಿಕೊಂಡು ಮದುವೆ ಆಗಬೇಕು. ಅವನಿಗೆ ದ್ವಿಕಳ ತ್ರಿಯೋಗ ಇದೆ. ಒಬ್ಬಳನ್ನು ಅವನು ಎರಡು ಸಲ ಮದುವೆ ಆದರೆ ಪರವಾಗಿಲ್ಲ, ಇಬ್ಬಿಬ್ಬರನ್ನು ಮದುವೆ ಆದರೆ ಏನು ಕಥೆ?ʼʼಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾರ್ತಿಕ್‌ ಕೂಡ ʻʻನಾನು ಅವಳನ್ನು ನೋಡಿಕೊಂಡು ಮದುವೆ ಆಗಬೇಕಾ? ಅವಳು ನನ್ನ ನೋಡಿಕೊಂಡು ಮದುವೆ ಆಗಬೇಕಾ?ಆ ತರ ಏನಿಲ್ಲʼʼಎಂಂದೆ. ಗುರೂಜಿ ಅವರು ʻಇದೆ ಕಣೋʼ ಎಂದರು.

ಇತ್ತ ತುಕಾಲಿಗೂ ಬೇಗ ಮಗು ಮಾಡಿಕೊಳ್ಳಲು ಗುರೂಜಿ ಹೇಳಿದರು. ಗುರೂಜಿ ಅವರು ತುಕಾಲಿಗೆ ʻʻಮಗು ಆಯ್ತಾ?ನೀನು ಆದಷ್ಟು ಬೇಗ ಮಗು ಮಾಡಿಕೊಳ್ಳಬೇಕು, ಬುಧ ಬಂದ್ರೆ ಅದು ಮುಂದಕ್ಕೆ ಹೋಗಿಬಿಡತ್ತೆ. ಹೆಂಡ್ತಿ ಸ್ವಂತನಾ? ಅತ್ತೆ ಮಗಳೋ? ದೂರದವಳೋ?ʼʼಎಂದು ಪ್ರಶ್ನೆ ಇಟ್ಟರು. ತುಕಾಲಿ ಕೂಡ ʻʻಇನ್ನು ಮಗು ಆಗಿಲ್ಲ ಗುರೂಜಿ. ಶೋ ಅದು ಇದು ಅದೇ ಆಯ್ತು. ಹೆಂಡತಿ ದೂರದ ಸಂಬಂಧಿʼʼಎಂದರು. ನೀತುಗೆ ಕೂಡ ವಿದೇಶಕ್ಕೆ ಹೋಗುವ ಯೋಗ ಇದೆ ಎಂದು ಗುರೂಜಿ ಹೇಳಿದರು.

ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಆದರೆ ಆ ನಗು ಎಷ್ಟು ಕಾಲ ಇರುತ್ತದೆ? ಬಿಗ್‌ಬಾಸ್ ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರು ಯಾರಿಗೆ ಏನು ಹೇಳುತ್ತಾರೆ? ಎಂಬದು ಇನ್ನು ಮುಂದೆ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version