BBK Season 10: ಬೇಗ ಮಗು ಮಾಡ್ಕೊ ತುಕಾಲಿ ಅಂದಿದ್ಯಾಕೆ ಬ್ರಹ್ಮಾಂಡ ಗುರೂಜಿ? ಕಾರ್ತಿಕ್‌ಗೆ 2 ಮದುವೆ ಯೋಗ! Vistara News

ಬಿಗ್ ಬಾಸ್

BBK Season 10: ಬೇಗ ಮಗು ಮಾಡ್ಕೊ ತುಕಾಲಿ ಅಂದಿದ್ಯಾಕೆ ಬ್ರಹ್ಮಾಂಡ ಗುರೂಜಿ? ಕಾರ್ತಿಕ್‌ಗೆ 2 ಮದುವೆ ಯೋಗ!

BBK Season 10: ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇದೀಗ ಗುರೂಜಿ ಅವರು ಕಾರ್ತಿಕ್‌ ಹಾಗೂ ತುಕಾಲಿ ಸಂತೋಷ್‌ ಅವರ ಭವಿಷ್ಯ ನುಡಿದಿದ್ದಾರೆ.

VISTARANEWS.COM


on

brahmanda guruji prediction about karthik marriage tukali child
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ಮುಂಡಾ ಮೋಚ್ತು’ ಎಂಬ ಪದದಿಂದ ಖ್ಯಾತಿ ಪಡೆದ ಬ್ರಹ್ಮಾಂಡ ಗುರೂಜಿ ಈಗಾಗಲೇ ಬಿಗ್‌ ಬಾಸ್‌ ಮನೆಗೆ (BBK Season 10) ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತೆರೆದ ಬಾಗಿಲಿಂದ ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದೂ ಆಗಿದೆ. ಆದರೀಗ ಗುರೂಜಿ ಅವರು ಕಾರ್ತಿಕ್‌ ಹಾಗೂ ತುಕಾಲಿ ಸಂತುವಿನ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ್‌ಗೆ ದ್ವಿಕಳ ತ್ರಿಯೋಗ ಇದ್ದರೆ, ತುಕಾಲಿ ಬೇಗ ಮಗು ಮಾಡ್ಕೋಬೇಕಂತೆ, ಹಾಗಾದ್ರೆ ಗುರೂಜಿ ಹೇಳಿದ್ದೇನು?

ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇದೀಗ ಗುರೂಜಿ ಅವರು ಕಾರ್ತಿಕ್‌ ಹಾಗೂ ತುಕಾಲಿ ಸಂತೋಷ್‌ ಅವರ ಭವಿಷ್ಯ ನುಡಿದಿದ್ದಾರೆ.

ತುಕಾಲಿ ಸಂತುಗೆ ಮೊದಲಿಗೆ ಕುಂಭ ರಾಶಿ ನಂದು, ಅದಿಕ್ಕೆ ನೀಲಿ ಬಣ್ಣದ ಉಂಗುರ ಹಾಕಿಕೊಂಡೆ ಎಂದು ಬ್ರಹ್ಮಾಂಡ ಗುರೂಜಿಗೆ ಹೇಳಿದ್ದಾರೆ. “ಕುಂಭ ರಾಶಿಗೆ ನೀಲಿ ಹಾಕ್ಕೊಳದಲ್ಲ, ಇರಲಿ ಬಿಡು” ಅಂತ ಬ್ರಹ್ಮಾಂಡ ಗುರೂಜಿ ಅವರು ಸಂತುಗೆ ಹೇಳಿದ್ದಾರೆ. ಕಾರ್ತಿಕ್ ಅವರನ್ನು ನೋಡಿ ಗುರೂಜಿ ಅವರು “ನೋಡು ಅವನು ಬ್ಲ್ಯಾಕ್. ನೀಲಿ ಅಂದ್ರೆ ಶನಿ. ಬ್ಲ್ಯಾಕ್ ಅಂದ್ರೂ ಶನಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK Season 10: ತಲೆ ಬೋಳಿಸ್ಕೊಂಡ್ರು ಕಾರ್ತಿಕ್, ತುಕಾಲಿ! ಮನೆಯಲ್ಲೀಗ ‘ಕಾಂಪಿಟೇಶನ್‌ ಹೀಟ್‌’!

ಇಬ್ಬಿಬ್ಬರನ್ನು ಮದುವೆ ಆದರೆ ಏನು ಕಥೆ?

ಕಾರ್ತಿಕ್‌ ಮದುವೆ ವಿಚಾರವಾಗಿ ಗುರೂಜಿ ಮಾತನಾಡಿ ʻʻಕಾರ್ತಿಕ್ ಮದುವೆ ಟೈಮ್‌ನಲ್ಲಿ ಮದುವೆ ಆಗುವ ಹುಡುಗಿ ಇವನನ್ನು ನೋಡಿಕೊಂಡು ಮದುವೆ ಆಗಬೇಕು. ಅವನಿಗೆ ದ್ವಿಕಳ ತ್ರಿಯೋಗ ಇದೆ. ಒಬ್ಬಳನ್ನು ಅವನು ಎರಡು ಸಲ ಮದುವೆ ಆದರೆ ಪರವಾಗಿಲ್ಲ, ಇಬ್ಬಿಬ್ಬರನ್ನು ಮದುವೆ ಆದರೆ ಏನು ಕಥೆ?ʼʼಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾರ್ತಿಕ್‌ ಕೂಡ ʻʻನಾನು ಅವಳನ್ನು ನೋಡಿಕೊಂಡು ಮದುವೆ ಆಗಬೇಕಾ? ಅವಳು ನನ್ನ ನೋಡಿಕೊಂಡು ಮದುವೆ ಆಗಬೇಕಾ?ಆ ತರ ಏನಿಲ್ಲʼʼಎಂಂದೆ. ಗುರೂಜಿ ಅವರು ʻಇದೆ ಕಣೋʼ ಎಂದರು.

ಇತ್ತ ತುಕಾಲಿಗೂ ಬೇಗ ಮಗು ಮಾಡಿಕೊಳ್ಳಲು ಗುರೂಜಿ ಹೇಳಿದರು. ಗುರೂಜಿ ಅವರು ತುಕಾಲಿಗೆ ʻʻಮಗು ಆಯ್ತಾ?ನೀನು ಆದಷ್ಟು ಬೇಗ ಮಗು ಮಾಡಿಕೊಳ್ಳಬೇಕು, ಬುಧ ಬಂದ್ರೆ ಅದು ಮುಂದಕ್ಕೆ ಹೋಗಿಬಿಡತ್ತೆ. ಹೆಂಡ್ತಿ ಸ್ವಂತನಾ? ಅತ್ತೆ ಮಗಳೋ? ದೂರದವಳೋ?ʼʼಎಂದು ಪ್ರಶ್ನೆ ಇಟ್ಟರು. ತುಕಾಲಿ ಕೂಡ ʻʻಇನ್ನು ಮಗು ಆಗಿಲ್ಲ ಗುರೂಜಿ. ಶೋ ಅದು ಇದು ಅದೇ ಆಯ್ತು. ಹೆಂಡತಿ ದೂರದ ಸಂಬಂಧಿʼʼಎಂದರು. ನೀತುಗೆ ಕೂಡ ವಿದೇಶಕ್ಕೆ ಹೋಗುವ ಯೋಗ ಇದೆ ಎಂದು ಗುರೂಜಿ ಹೇಳಿದರು.

ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಆದರೆ ಆ ನಗು ಎಷ್ಟು ಕಾಲ ಇರುತ್ತದೆ? ಬಿಗ್‌ಬಾಸ್ ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರು ಯಾರಿಗೆ ಏನು ಹೇಳುತ್ತಾರೆ? ಎಂಬದು ಇನ್ನು ಮುಂದೆ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

BBK SEASON 10: ಬಿಗ್ ಬಾಸ್‌ ಮನೆಯಿಂದ ಹೊರ ಬಂದ್ರಾ ಡ್ರೋನ್ ಪ್ರತಾಪ್, ಸಂಗೀತಾ?

BBK SEASON 10: ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿರುವ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಬಿಗ್‌ ಬಾಸ್ ಮನೆಯಿಂದ ಹೊರ ಬಂದಿದ್ದಾರೆಂದು ಹೇಳಲಾಗುತ್ತಿದೆ.

VISTARANEWS.COM


on

BBK SEASON 10, Is Drone Pratap and Sangita out of big boss house?
Koo

ಬೆಂಗಳೂರು: ಈ ಬಾರಿ ಬಿಗ್‌ ಬಾಸ್ (BBK SEASON 10) ಸ್ಪರ್ಧೆ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ನಟಿ ಸಂಗೀತಾ (Sangita) ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆಂದು ಹೇಳಲಾಗುತ್ತಿದೆ(Out of Big Boss House). ಆದರೆ, ಇದರಲ್ಲಿ ಟ್ವಿಸ್ಟ್ ಇದ್ದು, ಟಾಸ್ಕ್‌ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಅವರನ್ನು ಮನೆಯಿಂದ ಹೊರಗೆ ತಂದು, ಆಸ್ಪತ್ರೆ ದಾಖಲಿಸಲಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪೆತ್ರೆಯಲ್ಲಿ ಚಿಕಿತ್ಸೆ (Bengaluru Hospital) ಪಡೆಯುತ್ತಾರೆಂದು ಮೂಲಗಳು ತಿಳಿಸಿವೆ.

ಬಿಗ್‌ ಬಾಸ್ ನೀಡಿದ ಟಾಸ್ಕ್ ಮಾಡುವಾಗ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಅವರ ಪರಿಸ್ಥಿತಿ ಯಾವ ರೀತಿ ಇದೆ, ಅವರು ಮತ್ತೆ ವಾಪಸ್ ಬಿಗ್‌ಬಾಸ್ ಮನೆಗೆ ಹೋಗುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಾರೆಯಾಗಿ ಈ ಘಟನೆ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ದೊರೆಯಬೇಕಿದೆ.

ಅವಿನಾಶ್‌ ಈಗ ಮಾವುತನಾ ಮೇಕೆಯಾ? ಏನಯ್ಯ ನಿನ್ನ ಕಥೆ ಹೀಗಾಗೋಯ್ತು!

ರಕ್ಕಸ-ಗಂಧರ್ವರ (BBK SEASON 10) ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಡುನಡುವೆ ನಗೆಬುಗ್ಗೆಯುಕ್ಕಿಸುವಂಥಹ ಕಾಮಿಡಿ ಸನ್ನಿವೇಶಗಳಿಗೂ ಬಿಗ್‌ಬಾಸ್ ಸಾಕ್ಷಿಯಾಗುತ್ತಿದೆ. ಇಂಥದ್ದೊಂದು ಕಾಮಿಡಿ ದೃಶ್ಯದ ಝಲಕ್‌ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

“ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ’ ಎಂದು ಹೇಳಿಕೊಂಡೇ ಅವಿನಾಶ್‌ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ-ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾನೆ.

ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ! ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಎದುರಾಳಿ ತಂಡದ ಸದಸ್ಯನನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಯೇ ವರ್ತೂರು? ಇದಕ್ಕೆ ಅವಿನಾಶ್ ಮರುಳಾಗುತ್ತಾರಾ?ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಅವಿನಾಶ್‌ ಅವರು ಮೊದ ಮೊದಲು ಸ್ಟ್ರಾಂಗ್‌ ಆಗಿಯೇ ಇದ್ದರು. ಇನ್ನು ವಿನಯ್‌ ಕೂಡ ಅವಿನಾಶ್‌ ಅವರಿಗೆ ಗೋಳು ಕೊಡುತ್ತಲೇ ಇದ್ದಾರೆ. ಕಳೆದ ಸಂಚಿಕೆಯಲ್ಲಿ ವಿನಯ್‌ ಅವರು ಅವಿನಾಶ್‌ಗೆ ʻʻನಾನು ಮಾವುತ ಅಲ್ಲ. ಹುಚ್ಚು ಕುದುರೆʼʼ ಎಂದು ಹೇಳಿಸಿದರು. ಇದಕ್ಕೂ ಮುಂಚೆ ವಿನಯ್‌ ಅವರು ಮನೆಮಂದಿ ಜತೆಗೆ ಅವಿನಾಶ್‌ ಕುರುತು ತುಂಬಾ ಕೀಳಾಗಿ ಮಾತನಾಡಿದ್ದೂ ಇದೆ. ಆಗಾಗ ವರ್ತೂರ್‌ ಹಾಗೂ ತುಕಾಲಿ ಅವಿನಾಶ್‌ ಅವರಿಗೆ ವಿನಯ್‌ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದನೆಯನ್ನು ಕೊಟ್ಟಿದ್ದೂ ಇದೆ. ಅವಿನಾಶ್‌ ಕೂಡ ಈ ಬಗ್ಗೆ ತುಕಾಲಿ ಜತೆ ʻʻಪದೇ ಪದೇ ಮಾವುತ ಎಂದು ಹೇಳಬೇಡಿʼʼಎಂದಿದ್ದರು.

ಈ ಸುದ್ದಿಯನ್ನೂ ಓದಿ: Bigg Boss Telugu 7: ಬಿಗ್‌ ಬಾಸ್‌ ತೆಲುಗು ವೇದಿಕೆಯಲ್ಲಿ ಕನ್ನಡ ಮಾತನಾಡಿದ ಆಶಿಕಾ ರಂಗನಾಥ್‌!

Continue Reading

ಬಿಗ್ ಬಾಸ್

BBK SEASON 10: ಅವಿನಾಶ್‌ ಈಗ ಮಾವುತನಾ ಮೇಕೆಯಾ? ಏನಯ್ಯ ನಿನ್ನ ಕಥೆ ಹೀಗಾಗೋಯ್ತು!

BBK SEASON 10: ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ.

VISTARANEWS.COM


on

Avinash Shetty Becomes Comedy Piece
Koo

ಬೆಂಗಳೂರು: ರಕ್ಕಸ-ಗಂಧರ್ವರ (BBK SEASON 10) ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಡುನಡುವೆ ನಗೆಬುಗ್ಗೆಯುಕ್ಕಿಸುವಂಥಹ ಕಾಮಿಡಿ ಸನ್ನಿವೇಶಗಳಿಗೂ ಬಿಗ್‌ಬಾಸ್ ಸಾಕ್ಷಿಯಾಗುತ್ತಿದೆ. ಇಂಥದ್ದೊಂದು ಕಾಮಿಡಿ ದೃಶ್ಯದ ಝಲಕ್‌ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

“ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ’ ಎಂದು ಹೇಳಿಕೊಂಡೇ ಅವಿನಾಶ್‌ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ-ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾನೆ.

ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ! ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಎದುರಾಳಿ ತಂಡದ ಸದಸ್ಯನನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಯೇ ವರ್ತೂರು? ಇದಕ್ಕೆ ಅವಿನಾಶ್ ಮರುಳಾಗುತ್ತಾರಾ?ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ; BBK SEASON 10: ನಮ್ರತಾ ಹೇಳಿದ ತಕ್ಷಣ ನಿರ್ಧಾರವೇ ಬದಲಾಯ್ತು; ಸ್ನೇಹಿತ್‌ಗೆ ಛೀಮಾರಿ ಹಾಕಿದ ಸಂಗೀತಾ, ತನಿಷಾ!

ಬಿಗ್‌ ಬಾಸ್‌ ಮನೆಯಲ್ಲಿ ಅವಿನಾಶ್‌ ಅವರು ಮೊದ ಮೊದಲು ಸ್ಟ್ರಾಂಗ್‌ ಆಗಿಯೇ ಇದ್ದರು. ಇನ್ನು ವಿನಯ್‌ ಕೂಡ ಅವಿನಾಶ್‌ ಅವರಿಗೆ ಗೋಳು ಕೊಡುತ್ತಲೇ ಇದ್ದಾರೆ. ಕಳೆದ ಸಂಚಿಕೆಯಲ್ಲಿ ವಿನಯ್‌ ಅವರು ಅವಿನಾಶ್‌ಗೆ ʻʻನಾನು ಮಾವುತ ಅಲ್ಲ. ಹುಚ್ಚು ಕುದುರೆʼʼ ಎಂದು ಹೇಳಿಸಿದರು. ಇದಕ್ಕೂ ಮುಂಚೆ ವಿನಯ್‌ ಅವರು ಮನೆಮಂದಿ ಜತೆಗೆ ಅವಿನಾಶ್‌ ಕುರುತು ತುಂಬಾ ಕೀಳಾಗಿ ಮಾತನಾಡಿದ್ದೂ ಇದೆ. ಆಗಾಗ ವರ್ತೂರ್‌ ಹಾಗೂ ತುಕಾಲಿ ಅವಿನಾಶ್‌ ಅವರಿಗೆ ವಿನಯ್‌ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದನೆಯನ್ನು ಕೊಟ್ಟಿದ್ದೂ ಇದೆ. ಅವಿನಾಶ್‌ ಕೂಡ ಈ ಬಗ್ಗೆ ತುಕಾಲಿ ಜತೆ ʻʻಪದೇ ಪದೇ ಮಾವುತ ಎಂದು ಹೇಳಬೇಡಿʼʼಎಂದಿದ್ದರು.

Continue Reading

ಬಿಗ್ ಬಾಸ್

BBK SEASON 10: ನಮ್ರತಾ ಹೇಳಿದ ತಕ್ಷಣ ನಿರ್ಧಾರವೇ ಬದಲಾಯ್ತು; ಸ್ನೇಹಿತ್‌ಗೆ ಛೀಮಾರಿ ಹಾಕಿದ ಸಂಗೀತಾ, ತನಿಷಾ!

BBK SEASON 10: ನಮ್ರತಾ ಅವರು ಹೇಳುತ್ತಿದ್ದಂತೆ ವರ್ತೂರ್‌ ಅವರು ಔಟ್‌ ಆಗಿಲ್ಲ ಎಂಬ ಸ್ನೇಹಿತ್‌ ಅವರ ನಿರ್ಧಾರಕ್ಕೆ ಸಂಗೀತಾ ಹಾಗೂ ತನಿಷಾ ಕಿರುಚಾಡಿದ್ದಾರೆ. ಸ್ವಂತ ನಿರ್ಧಾರ ಸ್ನೇಹಿತ್‌ಗೆ ತೆಗೆದುಕೊಳ್ಳಲು ಬರುವುದಲ್ಲಿವೇ? ಎಂದು ಪ್ರೇಕ್ಷಕರು ಪ್ರಶ್ನೆ ಇಟ್ಟರು.

VISTARANEWS.COM


on

Namratha and snehith
Koo

ಬೆಂಗಳೂರು: ಬಿಗ್‌ ಬಾಸ್‌ ಸಿಸನ್‌ 10ರಲ್ಲಿ (BBK SEASON 10) ಸ್ನೇಹಿತ್‌ ಬಯಾಸ್ಡ್‌ ಆಗಿ ಆಟಗಳನ್ನು ಆಡುತ್ತಿರುವುದು ಹೋಸತೇನಲ್ಲ. ನಿನ್ನೆಯ ಸಂಚಿಕೆಯಲ್ಲಿ ಕೂಡ ಸ್ನೇಹಿತ್‌ ಅವರು ನಮ್ರತಾ ಮಾತಿಗೆ ತಲೆ ಅಲ್ಲಾಡಿಸಿದ್ದಾರೆ. ಸಂಗೀತಾ ಹಾಗೂ ತನಿಷಾ ಈ ವಿಚಾರಕ್ಕೆ ರೊಚ್ಚಿಗೆದ್ದಿದ್ದರು. ʻಚೇರ್ ಆಫ್‌ ಥಾರ್ನ್ಸ್‌’ ಎಂಬ ಚಟುವಟಿಕೆಯನ್ನ ‘ಬಿಗ್ ಬಾಸ್‌’ ಘೋಷಿಸಿದರು. ಇದರಲ್ಲಿ ಕುರ್ಚಿ ಮೇಲೆ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ವರ್ತೂರ್‌ ಮೊದಲಿಗೆ ಎದಿದ್ದರು. ನಮ್ರತಾ ಎದ್ದಿಲ್ಲ ಅಂದ ತಕ್ಷಣ ಸ್ನೇಹಿತ್‌ ಅವರು ನಮ್ರತಾ ಪರವಾಗಿ ನಿಂತರು, ಇನ್ನು ಸ್ವತಃ ವರ್ತೂರ್‌ ಅವರು ಪ್ರತಾಪ್‌ ಮುಂದೆ ತಾವು ಎದ್ದಿರುವುದಾಗಿ ಹೇಳಿಕೊಂಡಿದ್ದರು.

ನಮ್ರತಾ ಅವರು ಹೇಳುತ್ತಿದ್ದಂತೆ ವರ್ತೂರ್‌ ಅವರು ಔಟ್‌ ಆಗಿಲ್ಲ ಎಂಬ ಸ್ನೇಹಿತ್‌ ಅವರ ನಿರ್ಧಾರಕ್ಕೆ ಸಂಗೀತಾ ಹಾಗೂ ತನಿಷಾ ಕಿರುಚಾಡಿದ್ದಾರೆ. ಸ್ವಂತ ನಿರ್ಧಾರ ಸ್ನೇಹಿತ್‌ಗೆ ತೆಗೆದುಕೊಳ್ಳಲು ಬರುವುದಲ್ಲಿವೇ ಎಂದು ಪ್ರೇಕ್ಷಕರು ಪ್ರಶ್ನೆ ಇಟ್ಟರು.

ಬಾವುಟ ಟಾಸ್ಕ್‌ನಲ್ಲಿಯೂ ಕೂಡ ಸ್ನೇಹಿತ್‌ ಅಂದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ‘ವಿಜಯ ಪತಾಕೆ’ ಟಾಸ್ಕ್‌ನಲ್ಲಿ ಕಾರ್ತಿಕ್ – ವಿನಯ್, ಸಂಗೀತಾ – ನಮ್ರತಾ ಮಧ್ಯೆ ಫಿಸಿಕಲ್ ಅಟ್ಯಾಕ್‌ ನಡೆಯಿತು. ಕ್ಯಾಪ್ಟನ್ ಆಗಿ, ಉಸ್ತುವಾರಿಯಾಗಿ ಸ್ನೇಹಿತ್‌ ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳಲಿಲ್ಲ. ಬಳಿಕ ಬಿಗ್‌ ಬಾಸ್‌ ಮಧ್ಯ ಪ್ರವೇಶಿಸಿ ಆಟವನ್ನು ನಿಲ್ಲಿಸಿದರು. ಈ ಟಾಸ್ಕ್‌ ಪೂರ್ಣಗೊಳ್ಳದೆ ಇರಲು ಕಾರಣವೇನು?’’ ಎಂದು ‘ಬಿಗ್ ಬಾಸ್‌’ ಪ್ರಶ್ನಿಸಿದರು. ‘’ತುಂಬಾ ಫಿಸಿಕಲ್ ಆಯ್ತು. ಯಾವಾಗ ಲೈನ್‌ ಡ್ರಾ ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ’’ ಎಂದರು ಸ್ನೇಹಿತ್. ‘’ನಡೆದಿರುವ ಘಟನೆ ಬಗ್ಗೆ ನಿಮ್ಮ ನಿಲುವು ಏನು?’’ ಎಂದು ‘ಬಿಗ್ ಬಾಸ್‌’ ಕೇಳಿದಾಗ, ‘’ನನ್ನ ವೈಯಕ್ತಿಕ ನಿಲುವು ಏನು ಅಂದ್ರೆ ಈ ಆಟವನ್ನ ರದ್ದು ಮಾಡಬೇಕು. ಇದನ್ನ ಮುಂದುವರೆಸೋಕೆ ಆಗಲ್ಲ’’ ಅಂತ ಸ್ನೇಹಿತ್ ಹೇಳಿದರು.

ಎರಡೂ ಗುಂಪುಗಳ ಬಳಿ ಇದ್ದ ಬಾವುಟಗಳನ್ನ ಸ್ನೇಹಿತ್ ಎಣಿಸಿದರು. ವರ್ತೂರು ಸಂತೋಷ್‌ ತಂಡದಲ್ಲಿ 31, ಸಂಗೀತಾ ತಂಡದಲ್ಲಿ 33 ಬಾವುಟಗಳಿದ್ದವು. ಇದರ ಆಧಾರದ ಮೇಲೆ ಸಂಗೀತಾ ತಂಡ ಗೆದ್ದಿದೆ ಎಂದು ಸ್ನೇಹಿತ್ ಘೋಷಿಸಿದರು.

ಇದನ್ನೂ ಓದಿ: BBK SEASON 10: ಕೈ ಮುಗಿದು ಕಣ್ಣೀರಿಟ್ಟ ಸಂಗೀತಾ; ಸೋತು ಶರಣಾದರಾ ಗಂಧರ್ವರು?

ನನಗೆ ಹೆಮ್ಮೆ ಇದೆ. ನಾವು ನಾವಾಗಿರೋಣ. ನಮ್ಮತನವನ್ನ ಬಿಟ್ಟುಕೊಡೋದು ಬೇಡ. ಎಂದು ಸಂಗೀತಾ ಅವರ ತಮ್ಮ ತಂಡಕ್ಕೆ ದೃಷ್ಟಿ ತೆಗೆದರು. ಇನ್ನು ಮೈಕಲ್‌ ತಮ್ಮ ತಂಡದಲ್ಲಿ ʻʻನನ್ನ ಬಳಿ ಸ್ಟ್ರಾಟಜಿ ತುಂಬ ಇತ್ತು. ನೀವು ಕೇಳಲು ರೆಡಿ ಇರಲಿಲ್ಲʼʼ ಎಂದು ಮೈಕಲ್ ಬೇಸರ ವ್ಯಕ್ತಪಡಿಸಿದರು. ಈ ವೇಳೆ, ‘’ಅದು ನನ್ನ ತಪ್ಪು’’ ಎಂದು ವಿನಯ್ ಒಪ್ಪಿಕೊಂಡರು.

ಸ್ನೇಹಿತ್‌ ಕೂಡ ತಮ್ಮ ಉಸ್ತುವಾರಿಯಲ್ಲಿ ಅಧಿಕಾರವನ್ನು ಬಳಿಸಿಕೊಂಡು ಸಭೆಯನ್ನು ಕರೆದರು. ನಿನ್ನೆಯ ಟಾಸ್ಕ್‌ ಆದ್ಮೇಲೆ ಒಂದಷ್ಟು ಗೈಡ್‌ಲೈನ್ಸ್ ಸೆಟ್ ಮಾಡಬೇಕು ಅಂತಿದ್ದೀನಿ. ಪರ್ಸನಲ್ ಐಟಮ್ಸ್ ಮುಟ್ಟುವಂತಿಲ್ಲ. ಪರ್ಸನಲ್ ಅಟ್ಯಾಕ್ ಮಾಡುವಂತಿಲ್ಲ. ಮಾನವೀಯತೆ ಮೀರಿದರೆ ನಾನು ನಿರ್ಧಾರ ತೆಗೆದುಕೊಳ್ತೀನಿ’’ ಎಂದು ಸ್ನೇಹಿತ್‌ ಹೇಳಿದರು. ಇದನ್ನು ಸಂಗೀತಾ ಟೀಂ ವಿರೋಧಿಸಿದರು. ನಮ್ಮ ಪರ ಯಾವಾಗ ಮಾತಾಡ್ತೀರಾ’’ ಎಂದು ಸಂಗೀತಾ, ತನಿಷಾ ಪ್ರಶ್ನಿಸಿದರು. ‘’ನಾವು ನಿಮ್ಮ ಮಾತು ಕೇಳಲ್ಲ’’ ಎಂದು ಸ್ನೇಹಿತ್‌ಗೆ ರಾಕ್ಷಸರು ಹೇಳಿದರು.

Continue Reading

ಬಿಗ್ ಬಾಸ್

BBK SEASON 10: ಕೈ ಮುಗಿದು ಕಣ್ಣೀರಿಟ್ಟ ಸಂಗೀತಾ; ಸೋತು ಶರಣಾದರಾ ಗಂಧರ್ವರು?

BBK SEASON 10:  ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.

VISTARANEWS.COM


on

Sangeetha was tears Did the Gandhars surrender
Koo

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ (BBK SEASON 10) ರಕ್ಕಸ-ಗಂಧರ್ವರ ಜಿದ್ದಾಜಿದ್ದು ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಆದರೆ ಆ ಟಾಸ್ಕ್‌ ಈಗ ಒಂದು ಹಂತಕ್ಕೆ ಬಂದು ನಿಂತಿರುವ ಸೂಚನೆ ಇವತ್ತು ಜಿಯೋ ಸಿನಿಮಾದಲ್ಲಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.

ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.

ಈ ನಡುವೆ ಸದ್ಯ ಗಂಧರ್ವರಾಗಿರುವ ಸಂಗೀತಾ ತಂಡ ದಣಿದಂತೆ ಕಾಣಿಸುತ್ತಿದೆ. ನಿರಂತರವಾದ ರಕ್ಕಸರ ಕಿರುಕುಳವನ್ನು ತಾಳಿಕೊಳ್ಳಲಾಗದೆ ಕಾರ್ತಿಕ್, ‘ನನ್ನ ಕೈಲಿ ಸಾಧ್ಯವಾಗುತ್ತಿಲ್ಲ’ ಎಂದು ನೆಲಕ್ಕೊರಗಿದ್ದಾರೆ.
ನಾಯಕಿ ಸಂಗೀತಾ, ಸಿರಿ ಅವರೊಂದಿಗೆ, ‘ಪನಿಷ್ಮೆಂಟ್ ತೆಗೆದುಕೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ. ನಾವು ತಗೊಳ್ಳಲ್ಲ ಎಂದು ಹೇಳೋಣ’ ಎನ್ನುತ್ತಿದ್ದಾರೆ.

ಇತ್ತ ರಕ್ಕಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ.. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಕಿರುಚಾಡಿದ್ದಾರೆ. ʻʻಅವ್ರು ವರ್ಸ್ಟ್‌ ಆಗಿ ಮಾಡ್ತಿರೋದಕ್ಕೆ ಅವ್ರು ಹೊಣೆ ಮ್ಯಾಮ್… ನಾನದಕ್ಕೆ ಕಾರಣ ಅಲ್ಲ’ ಎಂದು ಸಂಗೀತಾ ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರು ಹಾಕುತ್ತಿದ್ದಾರೆ.
ಇಡೀ ಮನೆ ರಣರಂಗವಾಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ವೀಕೆಂಡ್‌ವರೆಗೂ ಕಾಯಲೇಬೇಕು.

ಇದನ್ನೂ ಓದಿ: BBK SEASON 10: ವಿನಯ್ v/s ಕಾರ್ತಿಕ್; ʻಏಯ್ ತಗಡುʼ ,ಹೆಣ್ಮಕ್ಕಳನ್ನ ಬಿಟ್ಟು ಆಡಿಸ್ತಿದ್ದಾನೆ ಅಂದ್ರೆ ಏನರ್ಥ?

ಕಣ್ಣೀರಿಟ್ಟ ಕಾರ್ತಿಕ್‌

ವಿನಯ್‌ ಹಾಗೂ ಕಾರ್ತಿಕ್‌ ಮಾತಿನ ಚಕಮಕಿ ತಾರರಕ್ಕೇರಿದೆ. ವಿನಯ್‌ ಕೂಡ ಕಾರ್ತಿಕ್‌ ಅವರಿಗೆ ʻತಗಡುʼ ಎಂದಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಕೆಟ್ಟದ್ದಾಗಿ ಕಾರ್ತಿಕ್‌ ಮಾತನಾಡಿದ್ದಾರೆ ಎಂದು ವಿನಯ್‌ ಅವರು ಗಂಭೀರವಾಗಿ ಆರೋಪ ಮಾಡಿದರು. ಕಾರ್ತಿಕ್‌ ಕೂಡ ಪದೇ ಪದೆ ತಮ್ಮ ಮೇಲೆ ಗಂಭೀರ ಆರೋಪ ಮಾಡುತ್ತಿರುವ ವಿನಯ್‌ ವಿರುದ್ಧ ಕಣ್ಣೀರು ಸುರಿಸಿದರು. ‘’ನಾನು ಅಂತಹ ಮಾತನ್ನು ಆಡಿದ್ದರೆ ಹೊರಗೆ ಹೋಗುತ್ತೇನೆ’’ ಎಂದು ಕಾರ್ತಿಕ್‌ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಕಣ್ಣೀರಿಟ್ಟಿದ್ದಾರೆ ಕೂಡ.

ಜಗಳ ಆರಂಭವಾಗಿದ್ದು ಯಾವಾಗ?

‘ಚೇರ್ ಆಫ್‌ ಥಾರ್ನ್ಸ್‌’ ಎಂಬ ಚಟುವಟಿಕೆಯನ್ನು ‘ಬಿಗ್ ಬಾಸ್‌’ ನೀಡಿದರು. ಇದರಲ್ಲಿ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಈ ಟಾಸ್ಕ್‌ನಲ್ಲಿ ಸಂಗೀತಾ ಹಾಗೂ ಕಾರ್ತಿಕ್‌ ಅವರು ವರ್ತೂರ್‌ ಮತ್ತು ಪವಿ ಅವರನ್ನು ಟಾರ್ಗೆಟ್‌ ಮಾಡಿದರು. ಈ ವೇಳೆ ಕಾರ್ತಿಕ್‌ ಮತ್ತು ವಿನಯ್‌ ನಡುವೆ ಮಾತಿನ ಜಕಮಕಿ ನಡೆದಿದೆ. ಸಂಗೀತಾ ಅವರು ಪವಿ ಮುಖಕ್ಕೆ ನೀರು ಎರಚುವ ಫೋರ್ಸ್‌ಗೆ ವಿನಯ್‌ ಅವರು ‘’ಕರೆಕ್ಟ್ ಆಗಿದೆ ಜೋಡಿ’’ (ಕಾರ್ತಿಕ್‌-ಸಂಗೀತಾ) ಎಂದು ವಿನಯ್ ಟಾಂಟ್‌ ಕೊಡುತ್ತಿದ್ದರು.

ʻಮೈಮ್‌ ಮಾಡಿಕೊಂಡು ಅಸಭ್ಯ ಬೈಗುಳ ಬಳಸಿದರೆ ಸುಮ್ಮನೆ ಇರಬೇಕಾ? ಅವನು ಕಿತ್ತೋದ್‌ ನನ್ಮಗ. ಅಮ್ಮ, ತಂಗಿ ಇದ್ದಾರೆ. ಅವನ ಯೋಗ್ಯತೆಗೆ ಹೆಣ್ಮಕ್ಕಳನ್ನ ಬಿಟ್ಟು ಮುಂದೆ ಆಡಿಸ್ತೀಯಾ ಎಂದು ಕೇಳ್ತಾನೆʼ ಎಂದು ವಿನಯ್‌ ಕೂಗಾಡಿದರು. ಇತ್ತ ಕಾರ್ತಿಕ್‌ ಕೂಡ ನಾನು ಆ ರೀತಿ ಮಾಡಿಲ್ಲ ಎಂದು ಭಾವುಕರಾದರು.

ನಾನೇನಾದರೂ ಅಂದಿದ್ದರೆ ಈ ಕ್ಷಣವೇ ಹೊರಗೆ ಹೋಗೋಕೆ ರೆಡಿ. ತಂಗಿಗೆ ಇನ್ನೂ ಹೆರಿಗೆ ಆಗಿದ್ಯಾ ಅಂತ ಗೊತ್ತಿಲ್ಲ. ಇಂತಹ ಮಾತುಗಳನ್ನ ಕೇಳಿಸಿಕೊಂಡು ಹೇಗಿರಲಿ? ಪ್ರತಿ ಸಲಿ ಇದೇ ಆಯ್ತು ಎಂದು ಕಾರ್ತಿಕ್‌ ಅವರು ಕಣ್ಣೀರಿಟ್ಟರು. ಆದರೆ ವಿನಯ್, ತುಕಾಲಿ, ನಮ್ರತಾ ಇನ್ನಿತರರ ಮುಂದೆ ಕಾರ್ತಿಕ್ ಬಗ್ಗೆ ಬೋಡ ಇನ್ನಿತರೆ ಮಾತುಗಳನ್ನು ಬೈಯ್ಯುತ್ತಲೇ ಇದ್ದರು. ನಿಜವಾಗಿಯೂ ಕಾರ್ತಿಕ್, ವಿನಯ್​ಗೆ ಕೆಟ್ಟ ಪದಗಳನ್ನು ಬಳಸಿದರೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಅವರು ಬಂದಾಗ ಈ ಈ ವಿಚಾರ ಮುನ್ನಲೆಗೆ ಬರಬಹುದು. ವಿನಯ್‌ ಬೇಕು ಎಂತಲೇ ಅಂದರೇ, ಇಲ್ಲವೇ ಎಂಬುದು ವೀಕೆಂಡ್‌ನಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Dina Bhavishya
ಪ್ರಮುಖ ಸುದ್ದಿ21 mins ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ6 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್6 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್6 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ7 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check7 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20238 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ8 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ8 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ8 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ21 mins ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ11 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ12 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ17 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌