Site icon Vistara News

BBK SEASON 10: ತುಕಾಲಿ ಅವರಿಗೆ ‘ಬೆಸ್ಟ್ ಜಾಕಿ’ ಅವಾರ್ಡ್ ಸಿಗಬಹುದಾ?

Can Tukali Santhosh get the Best Jockey award

ಬೆಂಗಳೂರು: ನಿನ್ನೆಯ ಎಪಿಸೋಡಿನಲ್ಲಿ (ಜ.24) ಕೋಪ, ಆತ್ಮವಿಮರ್ಶೆ ನಂತರ ತನ್ನ ಸಹಸ್ಪರ್ಧಿಗಳ ಜತೆ ಮನಬಿಚ್ಚಿ ಮಾತಾಡಿ ಹಗುರಾಗಿರುವ ʻಬಿಗ್‌ಬಾಸ್ʼ (BBK SEASON 10) ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ.

ʻಬಿಗ್‌ಬಾಸ್ʼ ಮನೆಯೊಳಗೆ ರೆಡಿಯೊ ಸ್ಟೇಷನ್ ಸ್ಥಾಪಿತವಾಗಿದೆ. ಸ್ಟೇಷನ್‌ ಇಲ್ಲದೆಯೂ ರೇಡಿಯೊದ ಕೆಲಸ ಮಾಡುತ್ತಿದ್ದ ತುಕಾಲಿ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ?’ಹಾಯ್ ಅಲೋ ನಮಸ್ಕಾರ’ ಎಂದು ಶುರುಮಾಡಿ ಅವರು ಮೊದಲು ಮಾತಾಡಿಸಿದ್ದು ವರ್ತೂರು ಸಂತೋಷ್ ಅವರನ್ನೇ. ಇದಕ್ಕೆ ಸಂಗೀತಾ ಹುಸಿಮುನಿಸಿನಿಂದ, ‘ಬರೀ ಅವ್ರನ್ನೇ ಮಾತಾಡಿಸ್ಬೇಕಾ?’ ಎಂದು ಗಾಳಿಯಲ್ಲಿ ಗುದ್ದಿದ್ದಾರೆ.

ಅಷ್ಟೇ ಅಲ್ಲ, ಕಾರ್ತಿಕ್ ಅವರಿಗೆ, ‘ಈ ಮನೆಯಲ್ಲಿ ತಲೆನೋವು ಎಂಬ ಪದಕವನ್ನು ಯಾರಿಗೆ ಕೊಡಲು ಬಯಸುತ್ತೀರಾ?’ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್, ‘ಸಂಗೀತಾ’ ಎಂದು ಹೇಳಿದ್ದಾರೆ. ಅದಕ್ಕೆ ಸಂಗೀತಾ ಮುಖದಲ್ಲಿ ಅಸಮಧಾನದ ಗೆರೆಗಳು ಕಾಣಿಸಿಕೊಂಡಿವೆ. ಕಾರ್ತಿಕ್ ಅವರ ಉತ್ತರ ಕೇಳಿ ತುಕಾಲಿ ಅವರು, ‘ಈ ಸಂದರ್ಭದಲ್ಲಿ ನನಗೊಂದು ಹಾಡು ನೆನಪಾಗ್ತಿದೆ’ ಎಂದು ಹೇಳಿ ‘ಏನೋ ಮಾಡಲು ಹೋಗಿ… ಏನು ಮಾಡಿದೆ ನೀನು…’ ಎಂದು ಹಾಡಿ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: BBK SEASON 10: ಬದಲಾವಣೆಗಳೊಂದಿಗೆ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆ ಎಂದ ರಕ್ಷಕ್‌!

ಕಾರ್ತಿಕ್ ಮಾತು ಕೇಳಿ ಸಂಗೀತಾ ನಿಜಕ್ಕೂ ಮುನಿಸಿಕೊಂಡರಾ? ರೆಡಿಯೊ ಜಾಕಿ ಆಗಿ ಕೂತಾಗಿ ಇದಕ್ಕೆ ಉತ್ತರ ಕೊಡ್ತಾರಾ? ಈ ಎಲ್ಲ ಪ್ರಶ್ನೆಗಳಿಗೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

Exit mobile version