BBK SEASON 10: ತುಕಾಲಿ ಅವರಿಗೆ ‘ಬೆಸ್ಟ್ ಜಾಕಿ’ ಅವಾರ್ಡ್ ಸಿಗಬಹುದಾ? - Vistara News

ಬಿಗ್ ಬಾಸ್

BBK SEASON 10: ತುಕಾಲಿ ಅವರಿಗೆ ‘ಬೆಸ್ಟ್ ಜಾಕಿ’ ಅವಾರ್ಡ್ ಸಿಗಬಹುದಾ?

BBK SEASON 10:  ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ.

VISTARANEWS.COM


on

Can Tukali Santhosh get the Best Jockey award
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಿನ್ನೆಯ ಎಪಿಸೋಡಿನಲ್ಲಿ (ಜ.24) ಕೋಪ, ಆತ್ಮವಿಮರ್ಶೆ ನಂತರ ತನ್ನ ಸಹಸ್ಪರ್ಧಿಗಳ ಜತೆ ಮನಬಿಚ್ಚಿ ಮಾತಾಡಿ ಹಗುರಾಗಿರುವ ʻಬಿಗ್‌ಬಾಸ್ʼ (BBK SEASON 10) ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ.

ʻಬಿಗ್‌ಬಾಸ್ʼ ಮನೆಯೊಳಗೆ ರೆಡಿಯೊ ಸ್ಟೇಷನ್ ಸ್ಥಾಪಿತವಾಗಿದೆ. ಸ್ಟೇಷನ್‌ ಇಲ್ಲದೆಯೂ ರೇಡಿಯೊದ ಕೆಲಸ ಮಾಡುತ್ತಿದ್ದ ತುಕಾಲಿ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ?’ಹಾಯ್ ಅಲೋ ನಮಸ್ಕಾರ’ ಎಂದು ಶುರುಮಾಡಿ ಅವರು ಮೊದಲು ಮಾತಾಡಿಸಿದ್ದು ವರ್ತೂರು ಸಂತೋಷ್ ಅವರನ್ನೇ. ಇದಕ್ಕೆ ಸಂಗೀತಾ ಹುಸಿಮುನಿಸಿನಿಂದ, ‘ಬರೀ ಅವ್ರನ್ನೇ ಮಾತಾಡಿಸ್ಬೇಕಾ?’ ಎಂದು ಗಾಳಿಯಲ್ಲಿ ಗುದ್ದಿದ್ದಾರೆ.

ಅಷ್ಟೇ ಅಲ್ಲ, ಕಾರ್ತಿಕ್ ಅವರಿಗೆ, ‘ಈ ಮನೆಯಲ್ಲಿ ತಲೆನೋವು ಎಂಬ ಪದಕವನ್ನು ಯಾರಿಗೆ ಕೊಡಲು ಬಯಸುತ್ತೀರಾ?’ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್, ‘ಸಂಗೀತಾ’ ಎಂದು ಹೇಳಿದ್ದಾರೆ. ಅದಕ್ಕೆ ಸಂಗೀತಾ ಮುಖದಲ್ಲಿ ಅಸಮಧಾನದ ಗೆರೆಗಳು ಕಾಣಿಸಿಕೊಂಡಿವೆ. ಕಾರ್ತಿಕ್ ಅವರ ಉತ್ತರ ಕೇಳಿ ತುಕಾಲಿ ಅವರು, ‘ಈ ಸಂದರ್ಭದಲ್ಲಿ ನನಗೊಂದು ಹಾಡು ನೆನಪಾಗ್ತಿದೆ’ ಎಂದು ಹೇಳಿ ‘ಏನೋ ಮಾಡಲು ಹೋಗಿ… ಏನು ಮಾಡಿದೆ ನೀನು…’ ಎಂದು ಹಾಡಿ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: BBK SEASON 10: ಬದಲಾವಣೆಗಳೊಂದಿಗೆ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆ ಎಂದ ರಕ್ಷಕ್‌!

ಕಾರ್ತಿಕ್ ಮಾತು ಕೇಳಿ ಸಂಗೀತಾ ನಿಜಕ್ಕೂ ಮುನಿಸಿಕೊಂಡರಾ? ರೆಡಿಯೊ ಜಾಕಿ ಆಗಿ ಕೂತಾಗಿ ಇದಕ್ಕೆ ಉತ್ತರ ಕೊಡ್ತಾರಾ? ಈ ಎಲ್ಲ ಪ್ರಶ್ನೆಗಳಿಗೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Soniya Bansal: ಪ್ರಶಸ್ತಿ ಸಮಾರಂಭದ ವೇಳೆ ಖ್ಯಾತ ʻಬಿಗ್ ಬಾಸ್ʼ ಸ್ಪರ್ಧಿಗೆ ಪ್ಯಾನಿಕ್ ಅಟ್ಯಾಕ್‌; ಆಸ್ಪತ್ರೆಗೆ ದಾಖಲು

Soniya Bansal: ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್‌ನ 17 ನೇ ಸೀಸನ್‌ನಲ್ಲಿ ಕಾಣಿಸಿಕೊಂಡಾಗ ಸೋನಿಯಾ ಬನ್ಸಾಲ್ ಸಾಕಷ್ಟು ಫೇಮ್‌ ಪಡೆದರು. ಆ ಸೀಸನ್‌ನಲ್ಲಿ ಹಾಸ್ಯನಟ ಮುನಾವರ್ ಫರೂಕಿ ಗೆದ್ದರು ಮತ್ತು ಅಭಿಷೇಕ್ ಕುಮಾರ್ ರನ್ನರ್ ಅಪ್ ಆಗಿದ್ದರು. ಮೂಲಗಳ ಪ್ರಕಾರ ನಟಿ, ಕಳೆದ ನಾಲ್ಕು ತಿಂಗಳಿನಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ನಟಿ ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರೂ ಎಂದೂ ಹೇಳಲಾಗುತ್ತಿದೆ.

VISTARANEWS.COM


on

Soniya Bansal Suffers Panic Attack Bigg Boss 17 Fame Hospitalised
Koo

ಬೆಂಗಳೂರು: ಕಿರುತೆರೆ ನಟಿ, ಹಿಂದಿ ಬಿಗ್ ಬಾಸ್ 17 ರ ಸ್ಪರ್ಧಿ ಸೋನಿಯಾ ಬನ್ಸಾಲ್ ಅವರು (Soniya Bansal) ಜುಲೈ 2 ರಂದು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಜುಲೈ 21 ರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೋನಿಯಾ ಬಂದಿದ್ದರು. ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡಿದ್ದ ನಟಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತು. ಮೂಲಗಳ ಪ್ರಕಾರ ನಟಿಗೆ ಹೃದಯಾಘಾತ ಕೂಡ ಆಗಿದೆ ಎನ್ನಲಾಗಿದೆ.

ಪ್ರಶಸ್ತಿ ಸಮಾರಂಭದಲ್ಲಿ ನಟಿ ಆರೋಗ್ಯ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ಮೂಲಗಳ ಪ್ರಕಾರ ನಟಿ, ಕಳೆದ ನಾಲ್ಕು ತಿಂಗಳಿನಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ನಟಿ ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರೂ ಎಂದೂ ಹೇಳಲಾಗುತ್ತಿದೆ. ಸೋನಿಯಾ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಟಿಗೆ ಅನೇಕ ದಿನಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎನ್ನಲಾಗಿದೆ. ಈ ಮೊದಲು ಕೂಡ ಆರೋಗ್ಯ ಹದಗೆಡುತ್ತಿತ್ತು. ಆದರೆ ಇದೀಗ ಅದು ತೀವ್ರಗೊಂಡಿತು ಎಂದು ವರದಿಗಳು ಹೇಳುತ್ತಿವೆ.  

ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್‌ನ 17 ನೇ ಸೀಸನ್‌ನಲ್ಲಿ ಕಾಣಿಸಿಕೊಂಡಾಗ ಸೋನಿಯಾ ಬನ್ಸಾಲ್ ಸಾಕಷ್ಟು ಫೇಮ್‌ ಪಡೆದರು. ಆ ಸೀಸನ್‌ನಲ್ಲಿ ಹಾಸ್ಯನಟ ಮುನಾವರ್ ಫರೂಕಿ ಗೆದ್ದರು ಮತ್ತು ಅಭಿಷೇಕ್ ಕುಮಾರ್ ರನ್ನರ್ ಅಪ್ ಆಗಿದ್ದರು.

ಇದನ್ನೂ ಓದಿ: Actor Suriya: ಕಾಲಿವುಡ್‌ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ   ಸ್ಟಾರ್ ಹೀರೋಗೆ ಬಂದಿತ್ತು ಆಫರ್‌!

ನಟನೆಗೂ ಮುಂಚೆ ಸೋನಿಯಾ ಬನ್ಸಾಲ್ ಮಾಡೆಲ್‌ ಆಗಿದ್ದರು. ಬಳಿಕ ಸಂಗೀತ ವೀಡಿಯೊಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.  ‘ಗೇಮ್ 100 ಕೋಟಿ ಕಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ನಂತರ ‘ನಾಟಿ ಗ್ಯಾಂಗ್’, ‘ಡಬ್ಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ನಟನೆಯ  ‘ಶೂರ್ವೀರ್’ ವೆಬ್ ಸರಣಿಯಲ್ಲಿ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಇಷ್ಟೇ ಅಲ್ಲದೇ ನಟಿ, ಈ ವರ್ಷ ತೆಲುಗು ಚಿತ್ರಗಳಾದ  ತೆಲುಗಿನ ‘ಧೀರ’ ಮತ್ತು ‘ಯೆಸ್ ಬಾಸ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Continue Reading

ಬಿಗ್ ಬಾಸ್

Actress Siri: ನಾನೇನು ʻಮದುವೆʼಯ ವಿರೋಧಿ ಅಲ್ಲ, ವಿವಾಹ ಬೇಡ ಎಂದೂ ಅಂದುಕೊಂಡಿರಲಿಲ್ಲ ಎಂದ ಸಿರಿ!

Actress Siri: ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

VISTARANEWS.COM


on

Actress Siri Reaction about late marriage
Koo

ಬೆಂಗಳೂರು: `ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿರುವುದು ಗೊತ್ತೇ ಇದೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

ಸಿರಿ ಮಾತನಾಡಿ ʻʻಇಷ್ಟು ವರ್ಷ ನನಗೆ ಮದುವೆ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ನಮ್ಮ ತಾಯಿ ಬಿಟ್ಟರೆ ನಾನು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನನ್ನ ತಾಯಿಗೆ ಒಂದು ಮಾತು ಹೇಳುತ್ತ ಇದ್ದೆ. ನಿನ್ನ ಮಗಳು ಖುಷಿಯಾಗಿ ಇರಬೇಕು. ಅದೇ ಮುಖ್ಯ ಅಂದರೆ ನೋಡು ಅಂತಿದ್ದೆ. ಆದರೆ ಬಿಗ್‌ ಬಾಸ್‌ ಆದ ಬಳಿಕ ಆಗಬೇಕು ಎಂಬ ಮನಸ್ಸು ಬಂತು. ಆದರೆ ಒತ್ತಡ ಅಂತೇನಿಲ್ಲ. ಹೀಗೆ ಆಗಬೇಕು ಎಂದು ಅನ್ನಿಸಿತ್ತು. ಹೊರಗೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ಮಾಡಿದೆ. ಬಳಿಕ ಇವರನ್ನ ಮದುವೆ ಆಗಬಹುದು ಎಂದು ಅನ್ನಿಸಿದ ಮೇಲೆ ನಾನು ಮದುವೆಯಾದೆʼʼಎಂದರು.

ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿಲ್ಲ. ನನ್ನ ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದೇ ಇತ್ತು. ಮದುವೆ ವಿರುದ್ಧನೂ ಅಲ್ಲ ನಾನು. ನನ್ನ ಹಣೆಬರಹದಲ್ಲಿ ಈಗ ಬರ್ದಿದೆ. ಮನೆಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಈಗ ಆ ಕಾಲ ಕೂಡಿ ಬಂದಿದೆ. ಮದುವೆ ಬೇಗ ಆಗಿ ಏನಾದರೂ ಸಮಸ್ಯೆ ಮಾಡಿಕೊಳ್ಳುವುದಿಕ್ಕಿಂತ , ನಾನು ರೆಡಿ ಇದ್ದೀನಿ.. ಎಂದು ರೆಡಿ ಆದ ಮೇಲೆ ಮದುವೆ ಮದುವೆಯಾಗೋದು ಸರಿ. ಯಾರಿಗಾದರೂ ಇದು ದೊಡ್ಡ ನಿರ್ಧಾರ. ನನಗೆ ನನ್ನ ಪತಿ ಬದುಕು ಸೀರಿಯಲ್‌ ನಿಂದ ಪರಿಚಯ. ಇಬ್ಬರು ಸ್ನೇಹಿತರಾಗಿದ್ದೇವು. ಬಳಿಕ ಮತ್ತೆ ವರ್ಷಗಳ ನಂತರ ಟಚ್‌ನಲ್ಲಿ ಬಂದೆವು. ನಂತರ ಇಬ್ಬರು ಮದುವೆಯಾಗೋಣ ಎಂದು ನಿರ್ಧಾರ ಮಾಡಿದೆವು. ಈಗಲೂ ಫ್ರೆಂಡ್‌ ಜತಗೆ ಇದ್ದೇನೆ ಎಂದು ಅನ್ನಿಸುತ್ತೆ. ಇಬ್ಬರಲ್ಲೂ ಪ್ರಪೋಸ್‌ ಏನೂ ಆಗಿಲ್ಲ. ಮಾತುಕತೆ ಆಯ್ತು. ಹಾಗೇ ಮದುವೆ ಆದೆವುʼʼಎಂದರು.

ಇದನ್ನೂ ಓದಿ: Actress Siri: ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀವೆ; ಪತಿಯನ್ನು ಬಣ್ಣಿಸಿದ ಸಿರಿ!

ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್​ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

Continue Reading

ಬಿಗ್ ಬಾಸ್

Payal Malik: ಇನ್ನೊಬ್ಬಳ ಜತೆ ಹಾಯಾಗಿರಲಿ ಎಂದು ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್!

Payal Malik: ಇಬ್ಬರು ಪತ್ನಿಯರನ್ನು ಹೊಂದಿರುವ ಯೂಟ್ಯೂಬರ್ ಅರ್ಮಾನ್ ಮಲಿಕ್ ಬಿಗ್ ಬಾಸ್ OTT 3 ಸೀಸನ್ ನ ಸ್ಪರ್ಧಿ ಆಗಿದ್ದು. ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 3ರ ಮೊದಲ ವಾರವೇ ಪಾಯಲ್ ಎಲಿಮಿನೇಟ್ ಆಗಿದ್ದಾರೆ. ಈಗ ಅರ್ಮಾನ್ ತನ್ನ ಎರಡನೇ ಪತ್ನಿ ಕೃತಿಕಾ ಅವರೊಂದಿಗೆ ಶೋನಲ್ಲಿದ್ದಾರೆ.

VISTARANEWS.COM


on

Payal Malik declares she’s ready to divorce Armaan Malik
Koo

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ OTT 3 ನಿಂದ ಎಲಿಮಿನೇಟ್ ಆದ ವಾರಗಳ ನಂತರ, ಪಾಯಲ್ ಮಲಿಕ್ (Payal Malik ) ಪತಿ ಅರ್ಮಾನ್ ಮಲಿಕ್‌ಗೆ (Armaan Malik) ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಯೂಟ್ಯೂಬರ್ ಅರ್ಮಾನ್ ಮಲಿಕ್ ಬಿಗ್ ಬಾಸ್ OTT 3 ಸೀಸನ್ ನ ಸ್ಪರ್ಧಿ ಆಗಿದ್ದು. ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 3ರ ಮೊದಲ ವಾರವೇ ಪಾಯಲ್ ಎಲಿಮಿನೇಟ್ ಆಗಿದ್ದಾರೆ. ಈಗ ಅರ್ಮಾನ್ ತನ್ನ ಎರಡನೇ ಪತ್ನಿ ಕೃತಿಕಾ ಅವರೊಂದಿಗೆ ಶೋನಲ್ಲಿದ್ದಾರೆ. ‘ನಾನು ಈ ನಾಟಕ ಮತ್ತು ದ್ವೇಷದಿಂದ ಬೇಸತ್ತಿದ್ದೇನೆ. ನನ್ನ ಬಗ್ಗೆ ಇದ್ದಷ್ಟು ದಿನ ಚೆನ್ನಾಗಿಯೇ ಇದ್ದೆ. ಆದರೆ ಈಗ ಈ ದ್ವೇಷ ನನ್ನ ಮಕ್ಕಳಿಗೂ ತಲುಪುತ್ತಿದೆ. ಇದು ಕೀಳು ಮಟ್ಟದಾಗಿದೆ ಎಂದು ಪಾಯಲ್ ಹೇಳಿದ್ದಾರೆ. 

“ನಾನು ಈ ನಾಟಕ ಮತ್ತು ದ್ವೇಷದಿಂದ ಬೇಸತ್ತಿದ್ದೇನೆ. ನಾನು ಟ್ರೋಲ್ ಆಗುವವರೆಗೂ ಅದು ಚೆನ್ನಾಗಿತ್ತು. ಆದರೆ ಈಗ ನನ್ನ ಮಕ್ಕಳೂ ಟ್ರೋಲ್ ಆಗುತ್ತಿದ್ದಾರೆ. ಇದೇ ಕಾರಣಕ್ಕೆ ಅರ್ಮಾನ್‌ನಿಂದ ಬೇರೆಯಾಗಲು ನಿರ್ಧರಿಸಿದ್ದೇನೆ. ಅವರು ಈಗ ಅವನು ಕೃತಿಕಾ ಜೊತೆ ಬದುಕಬಹುದು ಮತ್ತು ನಾನು ನನ್ನ ಮಕ್ಕಳನ್ನು ನೋಡಿಕೊಳ್ತೇನೆ” ಎಂದಿದ್ದಾರೆ.

“ಒಂದೋ ನಾವು ಮೂವರೂ ಬೇರ್ಪಡುತ್ತೇವೆ, ಅಥವಾ ನಮ್ಮಲ್ಲಿ ಇಬ್ಬರು ಬೇರ್ಪಡುತ್ತೇವೆ, ಅಥವಾ ನಾನು ದೂರ ಹೋಗುತ್ತೇನೆ. . ಹೊರಗೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ಏನಾಗುತ್ತಿದೆ ಎಂದು ನನಗೆ ತಿಳಿದಿದೆ, ನನ್ನ ಜೀವನದಲ್ಲಿ ನಾನು ಎಂದಿಗೂ ದ್ವೇಷ, ಟ್ರೋಲಿಂಗ್ ಮತ್ತು ನಿಂದನೆಗಳನ್ನು ಎದುರಿಸಿಲ್ಲ. ನನ್ನ ನಿರ್ಧಾರ ಧೃಢವಾಗಿದೆ. ನಾನು ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅರ್ಮಾನ್ ಮತ್ತು ಕೃತಿಕಾ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅದರ ಬಗ್ಗೆ ಚರ್ಚಿಸುತ್ತೇನೆ ಎಂದು ಪಾಯಲ್‌ ಹೇಳಿದ್ದಾರೆ.

ಇದನ್ನೂ ಓದಿ: Chiyaan Vikram: ʻKGFʼ ಅಸಲಿ ಕಥೆ ಹೇಳಲು ಬರ್ತಾ ಇದೆ ‘ತಂಗಲಾನ್’; ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್!

ಪಾಯಲ್ ಮತ್ತು ಆಕೆಯ ಆತ್ಮೀಯ ಸ್ನೇಹಿತೆ ಕೃತಿಕಾ ಅವರು ಅರ್ಮಾನ್ ಮಲಿಕ್ ಅವರನ್ನು ಮದುವೆಯಾಗಿದ್ದರು. : ಖ್ಯಾತ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ ಅವರು ಯುಟ್ಯೂಬ್‌ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ.

Continue Reading

ಬಿಗ್ ಬಾಸ್

Bigg Boss Kannada: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಯಾವಾಗಿನಿಂದ ಶುರು? ಸ್ಪರ್ಧಿಗಳು ಇವರೇನಾ?

Bigg Boss Kannada: ಕಳೆದ ಬಾರಿ ಕನ್ನಡ ಬಿಗ್‌ಬಾಸ್ ಶೋ ಒಟಿಟಿಯಲ್ಲಿ 24 ಗಂಟೆ ಪ್ರಸಾರವಾಗಿತ್ತು. ಈ ಬಾರಿ ಕೂಡ ಅದೇ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ.

VISTARANEWS.COM


on

Bigg Boss Kannada 11 Starting Date And Contestants List
Koo

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಶುರುವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಕನ್ನಡ ಬಿಗ್‌ಬಾಸ್ ಶೋ ಒಟಿಟಿಯಲ್ಲಿ 24 ಗಂಟೆ ಪ್ರಸಾರವಾಗಿತ್ತು. ಈ ಬಾರಿ ಕೂಡ ಅದೇ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಕಳೆದ ಸೀಸನ್‌ನಲ್ಲಿ ಹಾಸ್ಯನಟ ತುಕಾಲಿ ಸಂತು ಬಿಗ್‌ಬಾಸ್ ಮನೆಗೆ ಹೋಗಿದ್ದರು. ಈ ಬಾರಿ ಅವರ ಪತ್ನಿ ಮಾನಸ ಹೋಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಕಿರುತೆರೆ ನಡ ವರುಣ್ ಆರಾಧ್ಯ ಕೂಡ ಈ ಲಿಸ್ಟ್‌ನಲ್ಲಿರುವ ಸಾಧ್ಯತೆಯಿದೆ. ಇನ್ನು ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ನಟಿಯರಾದ ಭವ್ಯಾ ಗೌಡ, ಮೋಕ್ಷಿತಾ ಪೈ ಹೀಗೆ ಹಲವರ ಹೆಸರುಗಳು ಹರಿದಾಡುತ್ತಿದೆ.

ಇದನ್ನೂ ಓದಿ: Bigg Boss Kannada OTT : ಬರ್ತಾ ಇದೆ ‘ಬಿಗ್ ಬಾಸ್ ಕನ್ನಡ’ ಒಟಿಟಿ ಸೀಸನ್? ಯಾವಾಗಿಂದ ಶುರು?

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಾರಿ ಯಾರು ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿ ಆಗಿತ್ತು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವರ್ತೂರು ಸಂತೋಷ್ ಅವರು ಒಂದಷ್ಟು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ತನಿಷಾ ಕುಪ್ಪಂಡ ಅವರು ಒಂದು ಸಮುದಾಯಕ್ಕೆ ಬೇಸರ ತರಿಸುವ ಮಾತಾಡಿದರು ಎಂಬ ದೂರು ಕೇಳಿ ಬಂತು.

Continue Reading
Advertisement
Encounter in Kupwara
ದೇಶ16 mins ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ

Champions Trophy 2025
ಕ್ರೀಡೆ19 mins ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ27 mins ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ41 mins ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Malaika Arora breakup rumours rushes past Arjun Kapoor
ಬಾಲಿವುಡ್41 mins ago

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Narendra Modi
ದೇಶ54 mins ago

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Actor Rajinikanth Fulfils Grandfather Duties By Dropping Grandson At School
ಕಾಲಿವುಡ್1 hour ago

Actor Rajinikanth: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಮೊಮ್ಮಗ; ತಾತನ ಡ್ಯೂಟಿ ಮಿಸ್ ಮಾಡ್ದೆ ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌!

Paris Olympics 2024
ಕ್ರೀಡೆ1 hour ago

Paris Olympics 2024: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಕ್ರೀಡಾ ಸ್ಫರ್ಧೆಗಳು; ಶೂಟಿಂಗ್​ನಲ್ಲಿ ಪದಕ ನಿರೀಕ್ಷೆ

students night
ಪ್ರಮುಖ ಸುದ್ದಿ1 hour ago

Students Night: ವಿದ್ಯಾರ್ಥಿಗಳು ಕುಡಿದು ಕುಪ್ಪಳಿಸಲು ʼಸ್ಟೂಡೆಂಟ್ಸ್‌ ನೈಟ್‌ʼ ಆಯೋಜಿಸಿದ ಬಾರ್‌ ಮಾಲಿಕ! ಕಾರ್ಯಕ್ರಮ ರದ್ದು

Salman Khan New Pics From Iulia Vantur Birthday Party
ಸಿನಿಮಾ1 hour ago

Salman Khan: ಗರ್ಲ್​ಫ್ರೆಂಡ್ ಬರ್ತ್​ಡೇ ಪಾರ್ಟಿಯಲ್ಲಿ ಸಖತ್‌ ಎಂಜಾಯ್‌ ಮಾಡಿದ ಸಲ್ಮಾನ್ ಖಾನ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ15 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ16 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ17 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ18 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌