Site icon Vistara News

BBK SEASON 10: ಇದೆಂತಾ ಫ್ಯಾಮಿಲಿ ಶೋ? ಏನಿದು ಸುದೀಪ್‌ ಸರ್‌? ಸಂಗೀತಾ ಸಹೋದರ ಬೇಸರ!

Is this a family show Sangeetha brother questioned to sudeep bigg boss

ಬೆಂಗಳೂರು: ಈ ಬಾರಿ ಬಿಗ್‌ ಬಾಸ್ (BBK SEASON 10) ಸ್ಪರ್ಧಿಗಳಾಗಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ನಟಿ ಸಂಗೀತಾ (Sangita) ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಿನಯ್‌ ತಂಡ ಅಗ್ರೆಸಿವ್‌ ಆಗಿ ಆಟ ಆಡಿದ್ದು, ಸಂಗೀತಾ ಹಾಗೂ ಡ್ರೋನ್‌ ತಾಪ್ ಗಾಯಗೊಂಡಿದ್ದರು. ಈಗಾಗಲೇ ಸಂಗೀತಾ ಹಾಗೂ ಪ್ರತಾಪ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್‌ ಅವರಿಗೆ ಬಿಗ್‌ಬಾಸ್ ಮನೆ ಎಷ್ಟು ಸುರಕ್ಷಿತ? ಎಂದು ಪ್ರಶ್ನೆ ಇಟ್ಟಿದ್ದಾರೆ.

ಸಂಗೀತಾ ಸಹೋದರ ಸಂತೋಷ್‌ ಕುಮಾರ್‌ ಅವರು ಪೋಸ್ಟ್‌ನಲ್ಲಿ “ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ ಎಂದು. ಏನು ಆಗುವುದಿಲ್ಲ ಎಂದು. ಆದರೆ ಈಗ ನೋಡಿದರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಎಂದು ಕಾಣಲ್ಲ. ಕೇವಲ ಹಿಂಸೆಯೇ ಕಾಣುತ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ” ಎಂದು ಪ್ರಶ್ನಿಸಿದ್ದಾರೆ.

ʻʻಸುದೀಪ್ ಸರ್ ಈ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರುವುದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: BBK SEASON 10: ಸ್ನೇಹಿತ್‌ ಕಚಡಾ, ಪುಟಗೋಸಿ ಫ್ರೆಂಡ್‌; ಕಣ್ಣೀರಿಟ್ಟ ನಮ್ರತಾ!

ಪರ್ಸನಲ್‌ ಅಟ್ಯಾಕ್‌!

ಮೊದಲ ಹಂತದಲ್ಲಿ ಗಂಧರ್ವರಾಗಿದ್ದವರು ವರ್ತೂರು ಸಂತೋಷ್‌ ಮತ್ತು ತಂಡ, ರಾಕ್ಷಸರಾಗಿದ್ದವರು ಕಾರ್ತಿಕ್ ಮತ್ತು ತಂಡ. ಎರಡನೇ ಹಂತದಲ್ಲಿ ರೋಲ್ ರಿವರ್ಸ್ ಆಯ್ತು. ವರ್ತೂರು ಸಂತೋಷ್‌ ಮತ್ತು ತಂಡ ರಾಕ್ಷಸರಾದ್ಮೇಲೆ ರಿವೆಂಜ್ ಗೇಮ್‌ ಶುರುವಾಯಿತು. ಇದಾದ ಮೇಲೆ ಪರ್ಸನಲ್‌ ಅಟ್ಯಾಕ್‌ ಕೂಡ ಆಯ್ತು.

ʻಚೇರ್ ಆಫ್‌ ಥಾರ್ನ್ಸ್‌’ ಎಂಬ ಚಟುವಟಿಕೆಯನ್ನು ‘ಬಿಗ್ ಬಾಸ್‌’ ನೀಡಿದರು. ಇದರಲ್ಲಿ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಈ ಟಾಸ್ಕ್‌ನಲ್ಲಿ ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್‌ ಅವರು ವರ್ತೂರ್‌ ಮತ್ತು ಪವಿ ಅವರನ್ನು ಟಾರ್ಗೆಟ್‌ ಮಾಡಿದರು. ಸಂಗೀತಾ ಅವರು ಪವಿ ಮುಖಕ್ಕೆ ನೀರು ಎರಚುವ ಫೋರ್ಸ್‌ ನೋಡಿ ವಿನಯ್‌ ತಂಡವನ್ನು ಇನ್ನಷ್ಟು ಕೆರಳಿಸಿತು.

ಇದೇ ʻಚೇರ್ ಆಫ್‌ ಥಾರ್ನ್ಸ್‌’ ಚಟುವಟಿಕೆಯಲ್ಲಿ ಸಂಗೀತಾ ಅವರ ಸರದಿ ಬಂದು, ಚೇರ್‌ನಲ್ಲಿ ಕೂತಾಗ ವಿನಯ್‌ ಟೀಂ ಕೆಮಿಕಲ್‌ ಇರುವಂತಹ ನೀರನ್ನು ಸಂಗೀತಾ ಅವರ ಮುಖಕ್ಕೆ ರಾಚಿದ್ದಾರೆ. ಸಂಗೀತಾ ಅವರಿಗೆ ಉರಿ ತಾಳಲಾರದೇ ಆ ಕೂಡಲೇ ಸಂಗೀತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು.

ಇದನ್ನೂ ಓದಿ: BBK SEASON 10: ಪವಿ, ಅವಿನಾಶ್‌ ಉತ್ತಮ, ಕಾರ್ತಿಕ್‌ ಕಳಪೆ; ಮನೆಯ ಕ್ಯಾಪ್ಟನ್‌ ಯಾರು?

ಬಿಗ್‌ಬಾಸ್ ಕನ್ನಡ ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಬಹಳ ರೋಚಕವಾಗಿ ಮೂಡಿ ಬರುತ್ತಿದೆ. ಅದಕ್ಕೆ ಕಾರಣ ಕೊಡುತ್ತಿರುವ ಟಾಸ್ಕ್‌ಗಳು. ಇನ್ನು ಸ್ಪರ್ಧಿಗಳು ಕೂಡ ಈ ಬಾರಿ ಬಹಳ ಅಗ್ರೆಸ್ಸಿವ್ ಆಗಿ ಆಡಲು ಆರಂಭಿಸಿದ್ದಾರೆ. ವಿನಯ್, ಕಾರ್ತಿಕ್, ತನಿಷಾ, ನಮ್ರತಾ ಹೆಚ್ಚು ಈ ವಾರ ಅಗ್ರೆಸ್ಸಿವ್ ಆಗಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version