BBK SEASON 10: ಇದೆಂತಾ ಫ್ಯಾಮಿಲಿ ಶೋ? ಏನಿದು ಸುದೀಪ್‌ ಸರ್‌? ಸಂಗೀತಾ ಸಹೋದರ ಬೇಸರ! - Vistara News

ಬಿಗ್ ಬಾಸ್

BBK SEASON 10: ಇದೆಂತಾ ಫ್ಯಾಮಿಲಿ ಶೋ? ಏನಿದು ಸುದೀಪ್‌ ಸರ್‌? ಸಂಗೀತಾ ಸಹೋದರ ಬೇಸರ!

BBK SEASON 10: ʻಸುದೀಪ್ ಸರ್ ಈ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರುವುದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Is this a family show Sangeetha brother questioned to sudeep bigg boss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ಬಾರಿ ಬಿಗ್‌ ಬಾಸ್ (BBK SEASON 10) ಸ್ಪರ್ಧಿಗಳಾಗಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ನಟಿ ಸಂಗೀತಾ (Sangita) ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಿನಯ್‌ ತಂಡ ಅಗ್ರೆಸಿವ್‌ ಆಗಿ ಆಟ ಆಡಿದ್ದು, ಸಂಗೀತಾ ಹಾಗೂ ಡ್ರೋನ್‌ ತಾಪ್ ಗಾಯಗೊಂಡಿದ್ದರು. ಈಗಾಗಲೇ ಸಂಗೀತಾ ಹಾಗೂ ಪ್ರತಾಪ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್‌ ಅವರಿಗೆ ಬಿಗ್‌ಬಾಸ್ ಮನೆ ಎಷ್ಟು ಸುರಕ್ಷಿತ? ಎಂದು ಪ್ರಶ್ನೆ ಇಟ್ಟಿದ್ದಾರೆ.

ಸಂಗೀತಾ ಸಹೋದರ ಸಂತೋಷ್‌ ಕುಮಾರ್‌ ಅವರು ಪೋಸ್ಟ್‌ನಲ್ಲಿ “ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ ಎಂದು. ಏನು ಆಗುವುದಿಲ್ಲ ಎಂದು. ಆದರೆ ಈಗ ನೋಡಿದರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಎಂದು ಕಾಣಲ್ಲ. ಕೇವಲ ಹಿಂಸೆಯೇ ಕಾಣುತ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ” ಎಂದು ಪ್ರಶ್ನಿಸಿದ್ದಾರೆ.

ʻʻಸುದೀಪ್ ಸರ್ ಈ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರುವುದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: BBK SEASON 10: ಸ್ನೇಹಿತ್‌ ಕಚಡಾ, ಪುಟಗೋಸಿ ಫ್ರೆಂಡ್‌; ಕಣ್ಣೀರಿಟ್ಟ ನಮ್ರತಾ!

ಪರ್ಸನಲ್‌ ಅಟ್ಯಾಕ್‌!

ಮೊದಲ ಹಂತದಲ್ಲಿ ಗಂಧರ್ವರಾಗಿದ್ದವರು ವರ್ತೂರು ಸಂತೋಷ್‌ ಮತ್ತು ತಂಡ, ರಾಕ್ಷಸರಾಗಿದ್ದವರು ಕಾರ್ತಿಕ್ ಮತ್ತು ತಂಡ. ಎರಡನೇ ಹಂತದಲ್ಲಿ ರೋಲ್ ರಿವರ್ಸ್ ಆಯ್ತು. ವರ್ತೂರು ಸಂತೋಷ್‌ ಮತ್ತು ತಂಡ ರಾಕ್ಷಸರಾದ್ಮೇಲೆ ರಿವೆಂಜ್ ಗೇಮ್‌ ಶುರುವಾಯಿತು. ಇದಾದ ಮೇಲೆ ಪರ್ಸನಲ್‌ ಅಟ್ಯಾಕ್‌ ಕೂಡ ಆಯ್ತು.

ʻಚೇರ್ ಆಫ್‌ ಥಾರ್ನ್ಸ್‌’ ಎಂಬ ಚಟುವಟಿಕೆಯನ್ನು ‘ಬಿಗ್ ಬಾಸ್‌’ ನೀಡಿದರು. ಇದರಲ್ಲಿ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಈ ಟಾಸ್ಕ್‌ನಲ್ಲಿ ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್‌ ಅವರು ವರ್ತೂರ್‌ ಮತ್ತು ಪವಿ ಅವರನ್ನು ಟಾರ್ಗೆಟ್‌ ಮಾಡಿದರು. ಸಂಗೀತಾ ಅವರು ಪವಿ ಮುಖಕ್ಕೆ ನೀರು ಎರಚುವ ಫೋರ್ಸ್‌ ನೋಡಿ ವಿನಯ್‌ ತಂಡವನ್ನು ಇನ್ನಷ್ಟು ಕೆರಳಿಸಿತು.

ಇದೇ ʻಚೇರ್ ಆಫ್‌ ಥಾರ್ನ್ಸ್‌’ ಚಟುವಟಿಕೆಯಲ್ಲಿ ಸಂಗೀತಾ ಅವರ ಸರದಿ ಬಂದು, ಚೇರ್‌ನಲ್ಲಿ ಕೂತಾಗ ವಿನಯ್‌ ಟೀಂ ಕೆಮಿಕಲ್‌ ಇರುವಂತಹ ನೀರನ್ನು ಸಂಗೀತಾ ಅವರ ಮುಖಕ್ಕೆ ರಾಚಿದ್ದಾರೆ. ಸಂಗೀತಾ ಅವರಿಗೆ ಉರಿ ತಾಳಲಾರದೇ ಆ ಕೂಡಲೇ ಸಂಗೀತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು.

ಇದನ್ನೂ ಓದಿ: BBK SEASON 10: ಪವಿ, ಅವಿನಾಶ್‌ ಉತ್ತಮ, ಕಾರ್ತಿಕ್‌ ಕಳಪೆ; ಮನೆಯ ಕ್ಯಾಪ್ಟನ್‌ ಯಾರು?

ಬಿಗ್‌ಬಾಸ್ ಕನ್ನಡ ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಬಹಳ ರೋಚಕವಾಗಿ ಮೂಡಿ ಬರುತ್ತಿದೆ. ಅದಕ್ಕೆ ಕಾರಣ ಕೊಡುತ್ತಿರುವ ಟಾಸ್ಕ್‌ಗಳು. ಇನ್ನು ಸ್ಪರ್ಧಿಗಳು ಕೂಡ ಈ ಬಾರಿ ಬಹಳ ಅಗ್ರೆಸ್ಸಿವ್ ಆಗಿ ಆಡಲು ಆರಂಭಿಸಿದ್ದಾರೆ. ವಿನಯ್, ಕಾರ್ತಿಕ್, ತನಿಷಾ, ನಮ್ರತಾ ಹೆಚ್ಚು ಈ ವಾರ ಅಗ್ರೆಸ್ಸಿವ್ ಆಗಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
5 Comments

5 Comments

  1. ಕಲ್ಲಯ್ಯ ಹಿರೇಮಠ್

    9 December 2023, 3:07 PM at 3:07 pm

    ಸಂಗೀತಾ ಅವರಿಗೆ ಇಂಜ್ಯೂರಿ ಆಗಿದೆ ಅವರು ಬೇಗಾ ಗುಣಮುಖರಾಗಿ ಬರಲಿ. ಮತ್ತು ಈ ಟಾಸ್ಕ್ ಅನ್ನಾ ಅಗ್ರೆಸ್ಸಿವ್ ಆಗಿ ಆಡಲು ಶುರು ಮಾಡಿದ್ದು ತನಿಷಾ, ಕಾರ್ತಿಕ್ ಮತ್ತು ಸಂಗೀತಾ ಅವರು ನೋಡ್ಕೊಂಡು ಆಡಿದ್ರೆ ಇತರಾ ಆಗ್ತಿರ್ಲಿಲ್ಲ ಅಂತ ನನ್ನ ಅನಿಸಿಕೆ.

  2. Lakshmi

    9 December 2023, 9:12 PM at 9:12 pm

    ಸರ್ ವಿನಯ್ ಅವರನ್ನ ಮೊದ್ಲು ವರ ಕಳ್ಸಿ ಸರ್ ಅವರಿಗೆ ಮಾನವೀಯತೆ ಅನ್ನೋದೇ ಇಲ್ಲ . ಅಲ್ಲಿ ಅವರು ವಿಲ್ಲನ್ ತರ ಕಾಣಿಸಿದರೆ ನನಗೆ ಮುಂದೆ ವಿಲ್ಲನ್ ಪಾತ್ರ ಪಿಚ್ಚರ್ ಸಿಗುತ್ತೆ ಅನ್ನೋ ಫೀಲ್ ಅಲ್ಲಿ ಆಟ ಆಡ್ತಾ ಇದ್ದಾರೆ. ದಯವಿಟ್ಟು ಆ ಕ್ರೂರತೆ ಇಂದ ಸ್ನೇಹ ಹಾಳಾಗ್ತಿದೆ ಕುಟುಂಬದಲ್ಲಿ ಅ ಶೋ ನೋಡಕ್ಕೆ ಆಗ್ತಾ ಇಲ್ಲ ಅನ್ನೋ ರೇಂಜಿಗೆ ಹೋಗ್ತಾ ಇದೆ.

  3. BBK

    9 December 2023, 9:50 PM at 9:50 pm

    BBK10 All the participants lost their humanity and really shown their real ghost nature BBK10 Controling inspecting authority should take action and punish the culprits

  4. Creator

    10 December 2023, 7:58 AM at 7:58 am

    ‌ಮಾಡಿದುಣ್ಣೋ ಮಾರಾಯಾ ಗಾದೆ ಮಾತು ಸರಿ ಇದೆ.

  5. A p Ajith

    10 December 2023, 11:00 AM at 11:00 am

    ಮೊದಲು ಯಾರು ಆಟವನ್ನು ಶುರು ಮಾಡುತ್ತಾರೋ ಅವರು ಆಡುವ ರೀತಿ ಹಾಗೂ ಅವರ ವರ್ತನೆ ಹೇಗಿರುತ್ತದೆ ಅನ್ನೋದರ ಮೇಲೆ ಬಿಗ್ ಬಾಸ್ ಟಾಸ್ ಆಗಿರುತ್ತದೆ ಮತ್ತೆ ಇನ್ನೊಂದು ವಿಚಾರ ಹೇಳಬೇಕು ಅಂದ್ರೆ ಬಿಗ್ ಬಾಸ್ ನೀವು ಕಾರದಪುಡಿ ಮತ್ತೆ ಸೋಪಿನ ಪುಡಿ ಮತ್ತೆ ಮನೆಯ ಅವರಿಗೆ ಸಂಬಂಧ ಪಟ್ಟ ವಸ್ತುಗಳನ್ನ ಹಾಳು ಮಾಡಿ ಅಂತ ಎಲ್ಲೂ ರೂಲ್ ಬುಕ್ ಅಲ್ಲಿ ಹೇಳಿಲ್ಲ ಆಟವನ್ನು ಆಡುವ ರೀತಿಯಲ್ಲಿ ಆಡುವುದು ಬಿಟ್ಟು ತಮಗೆ ಇಷ್ಟ ಬಂದ ಹಾಗೆ ಆಟಾವಾಡಿದರೆ ಮತ್ತೆ ಕರ್ಮ is ಬ್ಯಾಕ್ ಅಂತಾರಲ್ಲ ಮತ್ತೆ ಅನುಭವಿಸುವ ಪರಿಸ್ಥಿತಿ ಅವರಿಗೆ ಬಂತು ಮೊದಲು ಆಡುವ ತಂಡದ ಮೇಲೆ ನಿಂತಿರುತ್ತದೆ ಟಾಸ್ಕ್ ಅವರು ಆಡುವ ರೀತಿ ನೋಡಿ ಎದುರಾಳಿಯ ತಂಡದವರು ಮತ್ತೆ ಇನ್ನು ಅಗ್ರಿಸೀವ್ ಆಗಿ ಆಡಲು ಶುರು ಮಾಡುತ್ತಾರೆ ಹಾಗಾಗಿ ಇದರಲ್ಲಿ ಬಿಗ್ ಬಾಸ್ ಆಗಲಿ ಸುದೀಪ್ ಸರ್ ಆಗಲಿ ಹೊಣೆ ಆಗುವುದಿಲ್ಲ ದಯವಿಟ್ಟು ಅಲ್ಲಿ ಇರುವವರು ಎಲ್ಲರೂ ಮನುಷ್ಯರೇ ಮಾನವೀಯತೆ ಮರೆತು ಆಟವಾಡಬೇಡಿ ಗೆಲ್ಲಲೇ ಬೇಕೆಂದು ಆಡಿ ಆದರೇ ಒಬ್ಬರ ಮನಸ್ಸಿಗೆ ನೋವು ಉಂಟು ಮಾಡಿ ಆಟವಾಡಬೇಡಿ ಮತ್ತೆ ಅವರಿಗೆ ಆ chance ಸಿಕ್ಕಾಗ ನಿಮಗೆ ಕರ್ಮ ಕೈ ಬಿಸಿ ಕರೆಯುವಂತೆ ಮಾಡಿಕೊಳ್ಳಬೇಡಿ ಧನ್ಯವಾದಗಳು ಬಿಗ್ ಬಾಸ್ ಲವ್ ಯು ಕಿಚ್ಚ ಸುದೀಪ್ ಸರ್ ಥಾಂಕ್ ಯು ಕಲರ್ಸ್ ಕನ್ನಡ ❤️

Leave a Reply

Your email address will not be published. Required fields are marked *

ಬಿಗ್ ಬಾಸ್

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

Sangeetha Sringeri: ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರು ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು.

VISTARANEWS.COM


on

Sangeetha Sringeri Wore Lioness Logo On Her Belt
Koo
ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ (Sangeetha Sringeri) ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಲವು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಅವರ ಡ್ರೆಸ್ ಹಾಗೂ ಬೆಲ್ಟ್ ಪ್ರಮುಖ ಹೈಲೈಟ್‌.

ಸಂಗೀತಾ ಶೃಂಗೇರಿ ಅವರ ಬೆಲ್ಟ್​ ಮೇಲೆ ಸಿಂಹಿಣಿಯ ಲೋಗೊ ಇದೆ. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರ ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು. ಹೀಗಾಗಿ ಈ ರೀತಿ ಪೋಸ್‌ ಕೊಟ್ಟಿದ್ದಾರೆ ಸಂಗೀತಾ. ʼ

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​. ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದರು.
Continue Reading

ಕಿರುತೆರೆ

Drone Prathap: ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

Drone Prathap: ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

VISTARANEWS.COM


on

Drone Prathap Special Gift For sangeetha sringeri Birthday
Koo

ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​.ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಗೀತಾ ಅವರು ಪ್ರತಾಪ್‌ ಅವರಿಗೆ ಆರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದಾರೆ. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Elvish Yadav: ಐಷಾರಾಮಿ ದುಬಾರಿ ಕಾರು ಖರೀದಿಸಿದ  ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌!

Elvish Yadav: ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

VISTARANEWS.COM


on

Elvish Yadav
Koo

ಬೆಂಗಳೂರು: ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಹೊಂದಿದ್ದಾರೆ. ಬಿಗ್‌ ಬಾಸ್‌ (Bigg Boss OTT 2) ಮೂಲಕವೇ ಜನಪ್ರೀಯತೆ ಪಡೆದ ಎಲ್ವಿಶ್ ಯಾದವ್ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ . ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿಯಲ್ಲಿ ಇವೆ. ಇದೀಗ ಎಲ್ವಿಶ್‌ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮರ್ಸಿಡಿಸ್‌ ಗ್ವ್ಯಾಗನ್‌ G350 D (Mercedes G Wagon) ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂ. ಮರ್ಸಿಡಿಸ್‌ ಗ್ವ್ಯಾಗನ್‌ G350 D ಬಾಕ್ಸಿ ಸ್ಟೈಲಿಂಗ್‌ನಿಂದ ಕೂಡಿದೆ.

ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

ಏನಿದು ಪ್ರಕರಣ?

ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿತ್ತು. ನಂತರ ಎಲ್ವಿಶ್‌ಗೆ ಗೌತಮ್ ಬುದ್ ನಗರ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನೀಡಿತು. ಮಾರ್ಚ್ 17 ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆ ಬಳಿಕ ಗುರುಗ್ರಾಮ್ ನ್ಯಾಯಾಲಯದಿಂದ ಜಾಮೀನು ಪಡೆದರು. ಎರಡು ಜಾಮೀನು ಪಡೆದ ಬಳಿಕ ಇದೀಗ ರಿಲ್ಯಾಕ್ಸ್‌ ಆಗಿದ್ದಾರೆ ಎಲ್ವಿಶ್‌.

ಇದನ್ನೂ ಓದಿ: Elvish Yadav: ಎರಡು ಜಾಮೀನು ಪಡೆದ ಬಳಿಕ ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ ಟೆಂಪಲ್ ರನ್‌!

ಜಾಮೀನು ಪಡೆದ ನಂತರ, ಎಲ್ವಿಶ್ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದರು, “ಒಂದು ವಾರ ನಿಸ್ಸಂದೇಹವಾಗಿ ಕಳೆದುಹೋಯಿತು. ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು. ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ. ನನ್ನನ್ನು ಬೆಂಬಲಿಸಿದವರೆಲ್ಲರೂ ನನ್ನನ್ನು ಬೆಂಬಲಿಸಲಿಲ್ಲ, ನನ್ನ ಬಗ್ಗೆ ಕೆಟ್ಟದಾಗಿ ಹಾಗೂ ಚೆನ್ನಾಗಿ ಮಾತನಾಡಿದವರೆಲ್ಲರಿಗೂ, ಧನ್ಯವಾದಗಳು. ನಾನು ಎಲ್ಲರಿಗೂ ಧನ್ಯವಾದ ಮಾತ್ರ ಹೇಳಬಲ್ಲೆ. ನಾನು ನನ್ನ ಕೆಲಸಕ್ಕೆ ಮತ್ತೆ ಮರಳಿದ್ದೇನೆʼʼ ಎಂದು ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Tanisha Kuppanda: ತನಿಷಾಳ ಕನಸು ನನಸಾಗಿದೆ, ಹೊಸ ಬ್ಯುಸಿನೆಸ್‌ ಸಕ್ಸೆಸ್‌ ಆಗಲಿ ಎಂದು ಆಶಿಸಿದ ಕಾರ್ತಿಕ್‌!

Tanisha Kuppanda: ʻಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

VISTARANEWS.COM


on

Tanisha Kuppanda with karthik
Koo

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಅವರು ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್​ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಆದರೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.

ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

ಇದು ಮಾ. 29ರಂದು ಉದ್ಘಾಟನೆಯಾಗಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾಗೇ ಸೀಸನ್‌ 10ರ ವಿನ್ನರ್‌, ತನಿಷಾ ಅವರ ಬೆಸ್ಟ್‌ ಫ್ರೆಂಡ್‌ ಕಾರ್ತಿಕ್‌ ಮಹೇಶ್‌ ಸಹ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ!

ಕಾರ್ತಿಕ್‌ ಮಹೇಶ್‌ ಈ ಬಗ್ಗೆ ಇನ್‌ಸ್ಟಾ ಪೋಸ್ಟ್‌ ಮಾಡಿ ʻʻಬಿಗ್ ಬಾಸ್ ಮನೆಯಲ್ಲಿ ತನಿಶಾ ತನ್ನ ಕನಸಿನ ಬಗ್ಗೆ ಬಹಳ ಉತ್ಸುಕಳಾಗಿ ಹೇಳುತ್ತಿದ್ದಾಗ ಆಲಿಸಿದ್ದೆ. ಇಂದು ಗೆಳತಿ ತನಿಷಾಳ ಕನಸು ನನಸಾಗಿದೆ. ನಿನ್ನ ಮುಂದಿನ ಎಲ್ಲಾ ಕೆಲಸಗಳು ಯಶಸ್ವಿಯಾಗಲಿ ಎಂದು ಪ್ರೀತಿಯಿಂದ ಆಶಿಸುವೆʼʼಎಂದು ಬರೆದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

Continue Reading
Advertisement
Narendra Modi
ದೇಶ17 mins ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ18 mins ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು42 mins ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

SRH vs RR
ಕ್ರೀಡೆ1 hour ago

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

Electric Shock
ಕ್ರೈಂ1 hour ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ1 hour ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ2 hours ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ2 hours ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ2 hours ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್3 hours ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌