Site icon Vistara News

BBK SEASON 10:  ಈ ವಾರ ಆರು ಮಂದಿ ನಾಮಿನೇಟ್‌; ʻತುಕಾಲಿʼ ಸಂತು ಸೇಫ್‌!

tukali santhosh safe

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) 15ನೇ ವಾರಕ್ಕೆ ಕಾಲಿಟ್ಟಿದೆ. ಮುಂದಿನ ವಾರ ಫಿನಾಲೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆಗೆ ಸಂಗೀತಾ ಅವರು ನೇರವಾಗಿ ಟಿಕೆಟ್‌ ಪಡೆದುಕೊಂಡಿದ್ದಾರೆ. ಉಳಿದ 7 ಸ್ಪರ್ಧಿಗಳ ಪೈಕಿ ಟಾಪ್‌ 5 ಹಂತಕ್ಕೆ ಯಾರು ಹೋಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. 15ನೇ ವಾರ ನಾಮಿನೇಷನ್‌ ಪ್ರಕ್ರಿಯೆ ನಡೆದಿದ್ದು, ಡ್ರೋನ್ ಪ್ರತಾಪ್‌, ವರ್ತೂರು ಸಂತೋಷ್, ತನಿಷಾ, ವಿನಯ್, ನಮ್ರತಾ ಹಾಗೂ ಕಾರ್ತಿಕ್‌ ನಾಮಿನೇಟ್ ಆಗಿದ್ದಾರೆ. ತುಕಾಲಿ ಸಂತೋಷ್‌ ಸೇಫ್‌ ಆಗಿದ್ದಾರೆ.

ಮಂಗಳವಾರದ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಪ್ರಸಾರವಾಗಿದೆ. ಆದರೆ, ವೋಟಿಂಗ್ ಲೈನ್ಸ್ ತೆರೆದಿಲ್ಲ. ಹೀಗಾಗಿ ನಾಮಿನೇಷನ್ ಹಾಗೂ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್‌ ಇರಲಿದೆ ಎನ್ನಲಾಗುತ್ತಿದೆ. ಈ ವಾರ ಬಿಗ್‌ ಬಾಸ್‌ ಮನೆಯ ಸದಸ್ಯರಿಗೆ ʻಆಟದ ಅಂತಿಮ ಘಟ್ಟ ಸಮೀಪಿಸುತ್ತಿದ್ದಂತೆಯೇ ನಿಮ್ಮೊಳಗಿನ ಈ ಕಿಚ್ಚು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಈ ಗೆಲುವಿನ ಕಿಚ್ಚಿಗೆ ಇಬ್ಬರು ಬಲಿಯಾಗಬೇಕು. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ನಿರ್ಧಾರದ ಅನುಸಾರ ಫಿನಾಲೆ ವೇದಿಕೆ ತಲುಪಲು ಅರ್ಹತೆ ಇಲ್ಲದ ಇಬ್ಬರ ಭಾವಚಿತ್ರಗಳನ್ನು ಬೆಂಕಿಗೆ ಆಹುತಿ ನೀಡುವ ಮೂಲಕ ನಾಮಿನೇಟ್ ಮಾಡಬೇಕುʼʼಎಂದಿದ್ದರು. ಅದರಂತೆ ಈ ವಾರ ಡ್ರೋನ್ ಪ್ರತಾಪ್‌, ವರ್ತೂರು ಸಂತೋಷ್, ತನಿಷಾ, ವಿನಯ್, ನಮ್ರತಾ ಹಾಗೂ ಕಾರ್ತಿಕ್‌ ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಗೆ ಬಂದ ವಿಶೇಷ ಅತಿಥಿಗಳು

ನಮ್ರತಾ ಅವರು ತನಿಷಾ ಹಾಗೂ ವರ್ತೂರ್‌ ಅವರನ್ನು ನಾಮಿನೇಟ್‌ ಮಾಡಿದರು. ʻಕಾಲಿಗೆ ಏಟು ಬಿದ್ಮೇಲೆ ಅಟ ತುಂಬಾ ಸ್ಲೋ ಆಗಿದೆʼ ಎಂದು ತನಿಷಾ ಬಗ್ಗೆ ಹೇಳಿದರು. ʻಆಟದಲ್ಲಿ ಇನ್‌ವಾಲ್ಮೆಂಟ್‌ ಕಾಣಿಸುತ್ತಿಲ್ಲʼ ಎಂದು ವರ್ತೂರು ಸಂತೋಷ್ ಬಗ್ಗೆ ಕಾರಣ ಕೊಟ್ಟರು. ಡ್ರೋನ್ ಪ್ರತಾಪ್ ಅವರು ವಿನಯ್ ಅವರನ್ನ ನಾಮಿನೇಟ್‌ ಮಾಡಿದರು. ವರ್ತೂರು ಸಂತೋಷ್‌ ಅವರು ನಮ್ರತಾ, ಕಾರ್ತಿಕ್‌ ಅವರು ವರ್ತೂರ್‌, ಡ್ರೋನ್‌ ಪ್ರತಾಪ್‌ ಹಾಗೇ ತುಕಾಲಿ ಅವರು ಕಾರ್ತಿಕ್‌ ಮತ್ತು ಡ್ರೋನ್‌ ಪ್ರತಾಪ್‌ ಅವರನ್ನು ನಾಮಿನೇಟ್‌ ಮಾಡಿದರು. ವಿನಯ್ ಅವರು ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್‌ ಅವರನ್ನ ನಾಮಿನೇಟ್ ಮಾಡಿದರು. ತನಿಷಾ ಅವರು ಕಾರ್ತಿಕ್‌ ಮತ್ತು ನಮ್ರತಾ ಅವರನ್ನು ನಾಮಿನೇಟ್‌ ಮಾಡಿದರು. ಸಂಗೀತಾ ಅವರು ಪ್ರತಾಪ್‌ ಅವರನ್ನು ನಾಮಿನೇಟ್‌ ಮಾಡಿದರು.

ಸ್ಪರ್ಧಿಗಳ ಆಯ್ಕೆಯ ಅನುಸಾರ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತನಿಷಾ, ವಿನಯ್, ನಮ್ರತಾ, ಕಾರ್ತಿಕ್‌ ನಾಮಿನೇಟ್‌ ಆದರು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಂದು ವೋಟ್‌ ಪಡೆದಿದ್ದ ತುಕಾಲಿ ಸಂತು ನಾಮಿನೇಟ್ ಆಗಲಿಲ್ಲ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version