BBK Season 10: ಬಿಗ್‌ಬಾಸ್‌ ಮನೆಗೆ ಬಂದ ವಿಶೇಷ ಅತಿಥಿಗಳು - Vistara News

ಬಿಗ್ ಬಾಸ್

BBK Season 10: ಬಿಗ್‌ಬಾಸ್‌ ಮನೆಗೆ ಬಂದ ವಿಶೇಷ ಅತಿಥಿಗಳು

BBK Season 10: ಬಿಗ್‌ಬಾಸ್‌ ಮನೆಗೆ ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಭೇಟಿ ನೀಡಿ ತಮ್ಮ ಸ್ನೇಹಿತರಿಗೆ ಧೈರ್ಯ ತುಂಬಿದ್ದಾರೆ. ಸದ್ಯ ಈ ಕುರಿತಾದ ಪ್ರೋಮೊ ಹೊರ ಬಿದ್ದಿದೆ.

VISTARANEWS.COM


on

bigg boss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK Season 10)ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಚಾಂಪಿಯನ್‌ ಯಾರಾಗುತ್ತಾರೆ, ಯಾರಾಗಬೇಕು ಎನ್ನುವ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಬಹು ದೊಡ್ಡ ಸರ್ಪ್ರೈಸ್‌ ಕೊಟ್ಟಿದ್ದಾರೆ. ಸದ್ಯ ಹೊರಬಂದಿರುವ ಪ್ರೋಮೊದಲ್ಲಿ ಇದು ರಿವೀಲ್‌ ಆಗಿದೆ. ಆ ಕುರಿತಾದ ವಿವರ ಇಲ್ಲಿದೆ.

ಹಳೆ ಸ್ಪರ್ಧಿಗಳ ಭೇಟಿ

ಬಿಗ್‌ಬಾಸ್‌ ಮನೆಗೆ ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಭೇಟಿ ನೀಡಿ ತಮ್ಮ ಸ್ನೇಹಿತರಿಗೆ ಧೈರ್ಯ ತುಂಬಿದ್ದಾರೆ. ಭಾಗ್ಯಶ್ರೀ, ಸ್ನೇಹಿತ್‌, ರಕ್ಷಕ್‌, ಮೈಕಲ್‌, ಸಿರಿ, ಇಶಾನಿ, ನೀತು ಮತ್ತಿತರರು ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿಯಾಗಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಸ್ನೇಹಿತರಿಗೆ ಸ್ಫೂರ್ತಿ ತುಂಬಿದ್ದಾರೆ.

ಡ್ರೋನ್‌ ಪ್ರತಾಪ್‌ ಜತೆ ಮಾತನಾಡಿದ ನೀತು, ʼʼಈ ಮನೆಯಲ್ಲಿ ನಿಂಗೆ ಸಪೋರ್ಟ್‌ ಮಾಡೋದು ಸಂಗೀತಾ ಮಾತ್ರ. ಅವರ ಜತೆ ಮನಸ್ತಾಪ ಮಾಡಿಕೊಳ್ಳಬೇಡʼʼ ಎಂದು ಕಿವಿ ಮಾತು ಹೇಳಿದ್ದಾರೆ. ಇನ್ನು ನಮ್ರತಾ ಜತೆ ಮಾತನಾಡಿದ ಇಶಾನಿ, ʼʼಬೇರೆ ಏನನ್ನೂ ಯೋಚನೆ ಮಾಡಬೇಡ. ನಿನ್ನ ಬಗ್ಗೆಯೇ ಆಲೋಚನೆ ಮಾಡು. ಆಟದ ಬಗ್ಗೆ ಗಮನ ಹರಿಸುʼʼ ಎಂದು ಸಲಹೆ ನೀಡಿದ್ದಾರೆ.

ಈ ಮಧ್ಯೆ ನಮ್ರತಾ ಹಾಗೂ ಕಾರ್ತಿಕ್ ಮಧ್ಯೆ ಆಪ್ತತೆ ಬೆಳೆದಿದೆ. ಬಹುಶಃ ಇದರಿಂದ ಸ್ನೇಹಿತ್ ಉರಿದುಕೊಂಡಿರಬಹುದು ಎಂಬುದು ನಮ್ರತಾ ಆಲೋಚನೆ. ಈ ಬಗ್ಗೆ ಇಶಾನಿ ಜತೆ ಪ್ರಸ್ತಾವಿಸಿದ್ದಾರೆ. ಅವರನ್ನು ನೋಡಿ ಸ್ನೇಹಿತ್‌ ಕೈ ಮುಗಿದಿದ್ದಾರೆ.

ಸ್ನೇಹ ಹಸ್ತ ಚಾಚಿದ ಸ್ಪರ್ಧಿಗಳು

ಈ ಹಿಂದೆ ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್‌ ಹಾಗೂ ಸಂಗೀತಾ ಉತ್ತಮ ಗೆಳೆಯರಾಗಿದ್ದರು. ಆದರೆ ಕೆಲವು ದಿನಗಳಿಂದ ಕಾರಣಾಂತರಗಳಿಂದ ಈ ಸ್ನೇಹ ಮುರಿದು ಬಿದ್ದಿದೆ. ಆದರೆ ಸಂಕ್ರಾಂತಿ ಸಂಭ್ರಮದಲ್ಲಿ ಅಚ್ಚರಿಯೊಂದು ಪ್ರೇಕ್ಷಕರಿಗೆ ಎದುರಾಗಿದೆ. ಮತ್ತೆ ವಿನಯ್-ಸಂಗೀತಾ ಹಾಗೂ ಕಾರ್ತಿಕ್‌-ಸಂಗೀತಾ ಮಧ್ಯೆ ಸ್ನೇಹ ಚಿಗುರಿದೆ. ಸಂಕ್ರಾಂತಿ ಪ್ರಯುಕ್ತ ಎಳ್ಳು-ಬೆಲ್ಲ ತಿಂದು ಇವರೆಲ್ಲ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಸಂಕ್ರಾಂತಿ ಹಬ್ಬದಂದು ತಮ್ಮೊಳಗಿರುವ ವೈಮನಸ್ಸು, ದ್ವೇಷ, ಮನಸ್ತಾಪಗಳನ್ನು ತ್ಯಜಿಸಿ ಸ್ನೇಹ ಬೆಳೆಸಲು ಬಿಗ್‌ಬಾಸ್‌ ಎಲ್ಲ ಸ್ಪರ್ಧಿಗಳಿಗೂ ಸೂಚಿಸಿದ್ದರು. ಅದರಂತೆ ಪ್ರತಿಯೊಬ್ಬರೂ ವೇದಿಕೆಗೆ ಬಂದು ತಮ್ಮೊಳಗಿರುವ ಯಾವ ನಕಾರಾತ್ಮಕ ಅಂಶವನ್ನು ತ್ಯಜಿಸಲು ಇಚ್ಛಿಸುತ್ತಾರೆ ಹಾಗೂ ಯಾವ ಸಕಾರಾತ್ಮಕ ಅಂಶವನ್ನು ಬೆಳೆಸಲು ಇಚ್ಛಿಸುತ್ತಾರೆ ಎಂಬುದನ್ನು ವಿವರಿಸಬೇಕಿತ್ತು. ಜತೆಗೆ ಯಾರೊಂದಿಗಿನ ತಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಇಚ್ಛಿಸುತ್ತಾರೆ ಎನ್ನುವುದನ್ನೂ ತಿಳಿಸಿ ಅವರಿಗೆ ಎಳ್ಳು-ಬೆಲ್ಲ ತಿನ್ನಿಸಬೇಕಿತ್ತು.

ಅದರಂತೆ ಸಂಗೀತಾ ಅವರು ಕಾರ್ತಿಕ್‌ಗೆ ಸಂಗೀತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ. ನಮ್ರತಾ ಅವರಿಗೆ ವರ್ತೂರು ಸಂತೋಷ್ ಎಳ್ಳು-ಬೆಲ್ಲ ನೀಡಿದ್ದಾರೆ. ಸಂಗೀತಾ ಅವರಿಗೆ ವಿನಯ್‌, ಕಾರ್ತಿಕ್‌ ಅವರಿಗೆ ತನಿಷಾ, ನಮ್ರತಾ ಅವರಿಗೆ ತನಿಷಾ ಎಳ್ಳು ಬೆಲ್ಲ ಕೊಟ್ಟಿದ್ದಾರೆ. ತುಕಾಲಿ ಸಂತು ಅವರಿಗೆ ನಮ್ರತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ. ಡ್ರೋನ್‌ ಪ್ರತಾಪ್‌ ಬಳಿ ತುಕಾಲಿ ಸಂತು ಕ್ಷಮೆ ಕೇಳಿದ್ದಾರೆ. ಒಟ್ಟಿನಲ್ಲಿ ಎಲ್ಲ ಸ್ಪರ್ಧಿಗಳು ಪರಸ್ಪರ ದ್ವೇಷ ಮರೆತು, ಕ್ಷಮೆ ಕೇಳಿ ಒಂದಾಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Bigg Boss OTT 3: ‘ಅತ್ತಿಗೆ, ನೋಡಲು ಬ್ಯೂಟಿಫುಲ್‌’ ಅಂದಿದ್ದೇ ತಡ ಕೆನ್ನೆಗೆ ಬಾರಿಸಿಯೇ ಬಿಟ್ಟ ಇಬ್ಬರು ಹೆಂಡತಿಯರ ಮುದ್ದಿನ ಗಂಡ!

Bigg Boss OTT 3: ಅರ್ಮಾನ್ ಮಲ್ಲಿಕ್ ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಮನೆಯಾಚೆ ಬಂದಿದ್ದಾರೆ. ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡಿದ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನ್ನ ಪತ್ನಿಯ ಸೌಂದರ್ಯದ ಬಗ್ಗೆ ಮಾತನಾಡಿದ್ದಕ್ಕೆ ಅರ್ಮಾನ್ ಅವರಿಗೆ ಸಿಟ್ಟು ಬಂದಿದೆ. ಹಾಗಾಗಿ ಅವರು ವಿಶಾಲ್ ಪಾಂಡೆ ಜತೆ ಜಗಳ ಮಾಡಿದ್ದಲ್ಲದೆ ಹೊಡೆದಿದ್ದಾರೆ. ಈ ವಿಚಾರವಾಗಿ ಬಾಲಿವುಡ್‌ನಲ್ಲಿ ಚರ್ಚೆ ನಡೆದಿದೆ. 

VISTARANEWS.COM


on

Bigg Boss OTT 3 Armaan Malik slaps Vishal Pandey in
Koo

ಬೆಂಗಳೂರು: ಬಿಗ್ ಬಾಸ್ OTT ಸೀಸನ್‌ನಲ್ಲಿ (Bigg Boss OTT 3) ಅರ್ಮಾನ್ ಮಲಿಕ್ (Arman Malik) ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಭಾಗವಹಿಸಿರುವುದು ಗೊತ್ತೇ ಇದೆ. ಇದೀಗ ಬಿಗ್‌ ಬಾಸ್‌ ಮನೆಯೊಳಗಿನ ಸ್ಪರ್ಧಿಗಳ ಡ್ರಾಮ ಮತ್ತೊಂದು ಹಂತವನ್ನು ತಲುಪಿದೆ. ಅರ್ಮಾನ್ ಮಲಿಕ್ ಪತ್ನಿ ಕೃತಿಕಾ ಮಲಿಕ್ ಬಗ್ಗೆ ವಿಶಾಲ್ ಪಾಂಡೆ ಮಾಡಿದ ಕಮೆಂಟ್‌ಗಾಗಿ ಕಪಾಳಮೋಕ್ಷ ಮಾಡಿದ್ದಾರೆ. ಇದು ಅನೇಕರ ಆಕ್ರೋಶಕ್ಕೆ ಗುರಿಯಾಗಿದೆ. ತನ್ನ ಪತ್ನಿಯ ಸೌಂದರ್ಯದ ಬಗ್ಗೆ ಮಾತನಾಡಿದ್ದಕ್ಕೆ ಅರ್ಮಾನ್ ಅವರಿಗೆ ಸಿಟ್ಟು ಬಂದಿದೆ. ಹಾಗಾಗಿ ಅವರು ವಿಶಾಲ್ ಪಾಂಡೆ ಜತೆ ಜಗಳ ಮಾಡಿದ್ದಲ್ಲದೆ ಹೊಡೆದಿದ್ದಾರೆ. ಈ ವಿಚಾರವಾಗಿ ಬಾಲಿವುಡ್‌ನಲ್ಲಿ ಚರ್ಚೆ ನಡೆದಿದೆ. 

ಅರ್ಮಾನ್ ಮಲ್ಲಿಕ್ ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಮನೆಯಾಚೆ ಬಂದಿದ್ದಾರೆ. ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡಿದ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನೇಕರು ಶೋನಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದಕ್ಕಾಗಿ ಅರ್ಮಾನ್ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಕೈ ಮಾಡುವವರು, ದೈಹಿಕವಾಗಿ ಹಲ್ಲೆ ಮಾಡುವವರು ದೊಡ್ಮನೆಯಿಂದ ಹೊರಗಡೆ ಹೋಗಬೇಕು. ಆದರೆ ಅರ್ಮಾನ್ ಇನ್ನೂ ಅಲ್ಲಿಯೇ ಇದ್ದಾರೆ.

ಮಾರಾ ಮಾರಿಯಾಗಿದ್ದೇಕೆ?

ಸ್ಪರ್ಧಿಗಳಾದ ಅರ್ಮಾನ್ ಮತ್ತು ವಿಶಾಲ್ ಇತ್ತೀಚೆಗೆ ಜಗಳವಾಡಿದರು. ವಿಶಾಲ್ “ಅರ್ಮಾನ್ ಅವರ ಪತ್ನಿ ಕೃತಿಕಾ ಮಲಿಕ್ ಅವರನ್ನು ಸುಂದರವಾಗಿ ಕಾಣುತ್ತಾರೆ” ಎಂದು ಹೇಳಿದಾಗ ಅಲ್ಲಿಂದ ಜಗಳ ಆರಂಭವಾಗಿದೆ.

ಲವಕೇಶ್ ಕಟಾರಿಯಾ ಜೊತೆ ಮಾತನಾಡುತ್ತಿರುವ ಸಮಯದಲ್ಲಿ ಅರ್ಮಾನ್‌ ಮಲಿಕ್‌ ಪತ್ನಿ ಕೃತಿಕಾ ಅವರ ಬಗ್ಗೆ ವಿಶಾಲ್ ಪಾಂಡೆ ಮಾತನಾಡಿದ್ದಾರೆ. ಅತ್ತಿಗೆ ಕೃತಿಕಾ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಈ ವಿಚಾರವನ್ನು ಪಾಯಲ್ ಪ್ರಸ್ತಾಪಿಸಿದ್ದಾರೆ. ಈ ವಿಷ್ಯ ಕಿವಿಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದ ಅರ್ಮಾನ್ ಮಲ್ಲಿಕ್, ಆರಂಭದಲ್ಲಿ ವಿಶಾಲ್ ಪಾಂಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಮೊದಲಿಂದ ಹೀಗೆ ನಾ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಇದಕ್ಕೆ ವಿಶಾಲ್‌ “ನಾನು ಆ ಅರ್ಥದಲ್ಲಿ ಹೇಳಿಲ್ಲ” ಎಂದಿದ್ದಾರೆ. ಇದರಿಂದ ಇನ್ನೂ ಕೆರಳಿದ ಅರ್ಮಾನ್ ಮಲ್ಲಿಕ್, ʻನೀನೇನು ಹೇಳಲೇ ಇಲ್ಲ, ನೀನು ಏನು ಅರಿಯದ ಮುಗ್ಧʼ ಎಂದಿದ್ದಾರೆ. ಆ ನಂತರ ಮಾತಿಗೆ ಮಾತು ಬೆಳೆದು ವಿಶಾಲ್ ಪಾಂಡೆ ಅವರ ಕಪಾಳಕ್ಕೆ ಅರ್ಮಾನ್ ಮಲ್ಲಿಕ್ ಬಾರಿಸಿದ್ದಾರೆ.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ನಡೆದ ಈ ಹೊಡೆದಾಟದ ಬಗ್ಗೆ ಬಾಲಿವುಡ್‌ನಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಬಿಗ್ ಬಾಸ್ ಸ್ಫರ್ಧಿಗಳು ಕೂಡ ಈ ಘಟನೆಯನ್ನೂ ಖಂಡಿಸಿದ್ದಾರೆ.

ʻಮದುವೆಯಾದವರನ್ನು ಸುಂದರವಾಗಿದ್ದಾಳೆ ಅಂತ ಹೇಳೋ ಹಾಗಿಲ್ಲವೇ? ದೈಹಿಕವಾಗಿ ಕೈ ಮಾಡಿದವರು ಹೊರಗಡೆ ಹೋಗಬೇಕು ಅಥವಾ ಎಲ್ಲರೂ ಎಲ್ಲರಿಗೂ ಹೊಡೆಯಬೇಕು” ಎಂದು ನಟ ಕುಶಾಲ್ ಟಂಡನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss OTT 3: ಬಿಗ್‌ ಬಾಸ್‌ ಒಟಿಟಿಯಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡ; ಗೋಳೋ ಎಂದು ಅತ್ತ ಮೊದಲ ಪತ್ನಿ!

ಇದೀಗ ವಿಶಾಲ್ ಸಹೋದರಿ ನೇಹಾ ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ “ನನ್ನ ಸಹೋದರ ಯಾವುದೇ ತಪ್ಪು ಮಾಡಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಅವರು ಯಾರನ್ನೂ ಅವಮಾನಿಸಿಲ್ಲ, ಅಥವಾ ಅವರು ಅನುಚಿತವಾಗಿ ಏನನ್ನೂ ಹೇಳಿಲ್ಲ. ಯಾವುದೇ ಕೆಟ್ಟ ಉದ್ದೇಶಗಳನ್ನು ಹೊಂದಿಲ್ಲ. ಅರ್ಮಾನ್ ತಪ್ಪಾಗಿ ಅರ್ಥೈಸಿಕೊಂಡರು. ನಾವು ವಿಶಾಲ್ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ನಾವು ಅವನನ್ನು ನಂಬುತ್ತೇವೆʼʼಎಂದು ಬರೆದುಕೊಂಡಿದ್ದಾರೆ.

Continue Reading

ಟಾಲಿವುಡ್

Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

Bigg Boss Telugu 8: ರಶ್ಮಿಕಾ, ಸಮಂತಾ, ನಯನತಾರಾ ಹೀಗೆ ಹಲವು ಟಾಪ್‌ ನಟಿಯರ ಭವಿಷ್ಯ ನುಡಿದು ಫೇಮಸ್‌ ಆದವರು ವೇಣುಸ್ವಾಮಿ. ಕೆಲವು ದಿನಗಳ ಹಿಂದೆ ನಟಿ ಶ್ರೀಲೀಲಾ ಬಗ್ಗೆ ಭವಿಷ್ಯ ನುಡಿದಿದ್ದರು. ಟಾಲಿವುಡ್ ಟಾಪ್ ನಟಿಯರಾಗಿ ಗುರುತಿಸಿಕೊಂಡಿರುವ ಸಮಂತಾ, ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅವರಂತೆ ಶ್ರೀಲೀಲಾ ಅವರಿಗೂ ಒಳ್ಳೆಯ ಹೆಸರು ಬರಲಿದೆ. ಆದರೆ ಸೌತ್ ಸಿನಿಮಾಗಳಲ್ಲಿ ಶ್ರೀಲೀಲಾ ನಂಬರ್ 1 ನಟಿಯಾಗುತ್ತಾರೆ ಎಂದು ವೇಣುಸ್ವಾಮಿ ಜ್ಯೋತಿಷ್ಯ ಹೇಳಿದ್ದರು. ವೇಣುಸ್ವಾಮಿ, ಟಾಲಿವುಡ್​ನ ಹಲವು ಸ್ಟಾರ್ ನಟ-ನಟಿಯರ ಭವಿಷ್ಯ ಹೇಳಿದ್ದರು. ಸಮಂತಾ-ನಾಗಚೈತನ್ಯ ಬೇರೆಯಾಗುತ್ತಾರೆ ಎಂದು ಸಹ ಭವಿಷ್ಯ ನುಡಿದಿದ್ದರು.

VISTARANEWS.COM


on

Bigg Boss Telugu 8 Astrologer Venu Swamy A Contestant
Koo

ಬೆಂಗಳೂರು: ಬಿಗ್​ಬಾಸ್ ತೆಲುಗು (Bigg Boss Telugu 8) ಮತ್ತೆ ಪ್ರಾರಂಭವಾಗುತ್ತಿದೆ.ಆಗಸ್ಟ್ 4 ರಂದು ಬಿಗ್​ಬಾಸ್ ತೆಲುಗು ಸೀಸನ್ 8 ಪ್ರಾರಂಭ ಆಗಲಿದೆ ಎಂದು ವರದಿಯಾಗಿದೆ. ಈ ಬಾರಿ ಬಿಗ್​ಬಾಸ್​ನಲ್ಲಿ ಭಾಗಿಯಾಗಲಿರುವ ಸ್ಪರ್ಧಿಗಳ ಬಗ್ಗೆ ವದಂತಿಗಳು ಹಬ್ಬಿವೆ. ತೆಲುಗಿನಲ್ಲಿ, ಬಿಗ್ ಬಾಸ್ ಶೋ (Bigg Boss Telugu Season 8 Starting Date) ದೊಡ್ಡ ಕ್ರೇಜ್‌ ಗಳಿಸಿದೆ. ಹಿಂದಿನ ಸೀಸನ್‌ಗಳಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳು ಆರ್ಥಿಕವಾಗಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಮತ್ತು ಮನರಂಜನಾ ಉದ್ಯಮದಲ್ಲಿ ಹೊಸ ಇಮೇಜ್ ಗಳಿಸಿದ್ದಾರೆ (bigg boss telugu contestants). ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶಕ್ಕಾಗಿ ಸಣ್ಣ-ಪರದೆಯ ಸೆಲೆಬ್ರಿಟಿಗಳು ಕಾಯುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಇದೀಗ ಬಿಗ್‌ ಬಾಸ್‌ ಮನೆಗೆ (Venu swamy) ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವೇಣು ಸ್ವಾಮಿ ಜನಪ್ರಿಯ ಜ್ಯೋತಿಷಿಯಾಗಿದ್ದು, ಅವರು ಟಾಲಿವುಡ್ ಉದ್ಯಮದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಬಹುತೇಕ ಸರಿಯಾದ ಭವಿಷ್ಯವಾಣಿಯೊಂದಿಗೆ ಸಂಚಲನ ಮೂಡಿಸಿದ್ದಾರೆ. ಟಾಲಿವುಡ್ ಸೆಲೆಬ್ರಿಟಿಗಳ ಪ್ರೀತಿ, ಮದುವೆ ಮತ್ತು ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದ ನಂತರ ಅವರು ವ್ಯಾಪಕವಾದ ಮೆಚ್ಚುಗೆಯನ್ನು ಗಳಿಸಿದರು. ಅನೇಕ ಬಾರಿ, ಅವರ ಭವಿಷ್ಯವಾಣಿಗಳು ನಿಜವಾಗಿದ್ದವು.

ಇದನ್ನೂ ಓದಿ: Bigg Boss Telugu 8: ಶುರುವಾಗ್ತಿದೆ ಬಿಗ್​ಬಾಸ್ ತೆಲುಗು ಸೀಸನ್ 8; ಸ್ಪರ್ಧಿಗಳು ಯಾರೆಲ್ಲ?

ರಶ್ಮಿಕಾ, ಸಮಂತಾ, ನಯನತಾರಾ ಹೀಗೆ ಹಲವು ಟಾಪ್‌ ನಟಿಯರ ಭವಿಷ್ಯ ನುಡಿದು ಫೇಮಸ್‌ ಆದವರು ವೇಣುಸ್ವಾಮಿ. ಕೆಲವು ದಿನಗಳ ಹಿಂದೆ ನಟಿ ಶ್ರೀಲೀಲಾ ಬಗ್ಗೆ ಭವಿಷ್ಯ ನುಡಿದಿದ್ದರು. ಟಾಲಿವುಡ್ ಟಾಪ್ ನಟಿಯರಾಗಿ ಗುರುತಿಸಿಕೊಂಡಿರುವ ಸಮಂತಾ, ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅವರಂತೆ ಶ್ರೀಲೀಲಾ ಅವರಿಗೂ ಒಳ್ಳೆಯ ಹೆಸರು ಬರಲಿದೆ. ಆದರೆ ಸೌತ್ ಸಿನಿಮಾಗಳಲ್ಲಿ ಶ್ರೀಲೀಲಾ ನಂಬರ್ 1 ನಟಿಯಾಗುತ್ತಾರೆ ಎಂದು ವೇಣುಸ್ವಾಮಿ ಜ್ಯೋತಿಷ್ಯ ಹೇಳಿದ್ದರು. ವೇಣುಸ್ವಾಮಿ, ಟಾಲಿವುಡ್​ನ ಹಲವು ಸ್ಟಾರ್ ನಟ-ನಟಿಯರ ಭವಿಷ್ಯ ಹೇಳಿದ್ದರು. ಸಮಂತಾ-ನಾಗಚೈತನ್ಯ ಬೇರೆಯಾಗುತ್ತಾರೆ ಎಂದು ಸಹ ಭವಿಷ್ಯ ನುಡಿದಿದ್ದರು.

ಜ್ಯೋತಿಷಿ ವೇಣುಸ್ವಾಮಿ (Venu Swamy) ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್​ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿತ್ತು. ಆ ಬಳಿಕ ಜ್ಯೋತಿಷಿ ವೇಣುಸ್ವಾಮಿ ವಿಡಿಯೊ ಮೂಲಕ ಕ್ಷಮೆ ಕೇಳಿದ್ದರು. ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ವೈಯಕ್ತಿಕ ಜೀವನದ ಬಗ್ಗೆ ಇನ್ನು ಮುಂದೆ ಭವಿಷ್ಯ ಹೇಳುವುದಿಲ್ಲ ಎಂದು ಜ್ಯೋತಿಷಿ ವೇಣು ಸ್ವಾಮಿ ವಿಡಿಯೊ ಮೂಲಕ ಹೇಳಿಕೊಂಡಿದ್ದರು.

ತೆಲುಗು ವರದಿಯ ಪ್ರಕಾರ ವೇಣು ಸ್ವಾಮಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.ಈ ಸುದ್ದಿ ನಿಜವೇ ಆಗಿದ್ದರೆ ವೇಣು ಸ್ವಾಮಿ ಅವರ ಸಂಭಾವನೆ ಬಿಗ್ ಬಾಸ್ ತೆಲುಗು ಇತಿಹಾಸದಲ್ಲಿ ಇದುವರೆಗಿನ ಅತಿ ಹೆಚ್ಚು ಸಂಭಾವನೆಯಾಗಲಿದೆ.

ಸೀಸನ್‌ 7ರ ವರೆಗೆ ನಾಗಾರ್ಜುನ ಅವರೇ ನಿಭಾಯಿಸುತ್ತಿದ್ದಾರೆ. ನಾಗುರ್ಜನ ಅವರ ವಿಶಿಷ್ಟ ವರ್ಚಸ್ಸು ಮತ್ತು ಮಾತನಾಡುವ ಶೈಲಿಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಮಾಹಿತಿ ಪ್ರಕಾರ ಈ ಸೀಸನ್‌ನಲ್ಲಿ ನಟರು, ಯೂಟ್ಯೂಬರ್‌ಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಸಮ್ಮಿಶ್ರಣ ಇರಲಿದೆ ಎಂದು ವರದಿಯಾಗಿದೆ. . ಪ್ರತಿಬಾರಿಯಂತೆ ನಟ ನಾಗಾರ್ಜುನ ಅವರೇ ಈ ಬಾರಿಯೂ ಶೋ ನಡೆಸಿಕೊಡಲಿದ್ದಾರೆ.

ಸಂಭಾವ್ಯ ಪಟ್ಟಿ ಹೀಗಿದೆ!

ಬಾಂಚಿಕ್ ಬಬ್ಲು: ಜನಪ್ರಿಯ ಯೂಟ್ಯೂಬರ್. ರಾಜ್ ತರುಣ್: ಟಾಲಿವುಡ್‌ನ ಪ್ರಸಿದ್ಧ ನಟ. ಸೋನಿಯಾ ಸಿಂಗ್: ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಬಳಗ ಹೊಂದಿರುವ ನಟಿ, ಡ್ರಗ್ಸ್ ಪ್ರಕರಣದ ಆರೋಪಿ ಹೇಮಾ ಸಹ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಮರ್ಯಾದಾ ಹತ್ಯೆಯ ಸಂತ್ರಸ್ತೆ ಅಮೃತಾ ಪ್ರಣಯ್ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ. ಭಾರಿ ದುಬಾರಿ ಬೆಲೆಗೆ ಆಹಾರ ಮಾರಾಟ ಮಾಡುತ್ತಾ ಜನಪ್ರಿಯವಾಗಿರುವ ಕುಮಾರಿ ಆಂಟಿ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಜನಪ್ರಿಯ ಯೂಟ್ಯೂಬ್ ಕಪಲ್ ಆಗಿರುವ ನೇತ್ರಾ ಮತ್ತು ವಂಶಿ ಸಹ ಈ ಬಾರಿ ಬಿಗ್​ಬಾಸ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

Continue Reading

ಬಿಗ್ ಬಾಸ್

Bigg Boss Telugu 8: ಶುರುವಾಗ್ತಿದೆ ಬಿಗ್​ಬಾಸ್ ತೆಲುಗು ಸೀಸನ್ 8; ಸ್ಪರ್ಧಿಗಳು ಯಾರೆಲ್ಲ?

Bigg Boss Telugu 8: ಸೀಸನ್‌ 7ರ ವರೆಗೆ ನಾಗಾರ್ಜುನ ಅವರೇ ನಿಭಾಯಿಸುತ್ತಿದ್ದಾರೆ. ನಾಗುರ್ಜನ ಅವರ ವಿಶಿಷ್ಟ ವರ್ಚಸ್ಸು ಮತ್ತು ಮಾತನಾಡುವ ಶೈಲಿಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಮಾಹಿತಿ ಪ್ರಕಾರ ಈ ಸೀಸನ್‌ನಲ್ಲಿ ನಟರು, ಯೂಟ್ಯೂಬರ್‌ಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಸಮ್ಮಿಶ್ರಣ ಇರಲಿದೆ ಎಂದು ವರದಿಯಾಗಿದೆ.

VISTARANEWS.COM


on

Bigg Boss Telugu 8 Contestants List Leaked
Koo

ಬೆಂಗಳೂರು:ಬಿಗ್ ಬಾಸ್ ತೆಲುಗು ಸೀಸನ್-7 ಮುಗಿದ ಬಳಿಕ ಸೀಸನ್‌ 8 (Bigg Boss Telugu 8) ಶುರು ಯಾವಾಗ ಎಂದು ಪ್ರೇಕ್ಷಕರು ಕಾಯುತ್ತಿದ್ದರು. TRP ರೇಟಿಂಗ್‌ಗಳಿಗೆ ಸಂಬಂಧಿಸಿದಂತೆ ಕಳೆದ ಸೀಸನ್ ಭರ್ಜರಿ ಹಿಟ್ ಆಗಿತ್ತು. ಮಾತ್ರವಲ್ಲ ಬಿಗ್ ಬಾಸ್ ತೆಲುಗು ಸೀಸನ್-7 (Bigg Boss Telugu 7) ವಿಜೇತ ಪಲ್ಲವಿ ಪ್ರಶಾಂತ್ ಅರೆಸ್ಟ್‌ ಆಗಿ ಸಖತ್‌ ಸುದ್ದಿಯಲ್ಲಿದ್ದರು. ಇದೀಗ ಬಿಗ್​ಬಾಸ್ ತೆಲುಗು ಮತ್ತೆ ಪ್ರಾರಂಭವಾಗುತ್ತಿದೆ.ಆಗಸ್ಟ್ 4 ರಂದು ಬಿಗ್​ಬಾಸ್ ತೆಲುಗು ಸೀಸನ್ 8 ಪ್ರಾರಂಭ ಆಗಲಿದೆ. ಈ ಬಾರಿ ಬಿಗ್​ಬಾಸ್​ನಲ್ಲಿ ಭಾಗಿಯಾಗಲಿರುವ ಸ್ಪರ್ಧಿಗಳು ಈಗಾಗಲೇ ಖಾತ್ರಿ ಆಗಿದ್ದಾರೆ ಎನ್ನಲಾಗುತ್ತಿದೆ.

ಜೂನಿಯರ್ ಎನ್‌ಟಿಆರ್ ಮೊದಲ ಆವೃತ್ತಿಯನ್ನು ಹೋಸ್ಟ್ ಮಾಡಿದ್ದರೆ, ನಾನಿ ಎರಡನೇ ಆವೃತ್ತಿಯನ್ನು ಹೋಸ್ಟ್ ಮಾಡಿದ್ದರು. ಆ ಬಳಿಕ ನಾಗಾರ್ಜುನ ಅವರು ಹೋಸ್ಟ್‌ ಮಾಡುತ್ತ ಬಂದಿದ್ದಾರೆ. ಸೀಸನ್‌ 7ರ ವರೆಗೆ ನಾಗಾರ್ಜುನ ಅವರೇ ನಿಭಾಯಿಸುತ್ತಿದ್ದಾರೆ. ನಾಗುರ್ಜನ ಅವರ ವಿಶಿಷ್ಟ ವರ್ಚಸ್ಸು ಮತ್ತು ಮಾತನಾಡುವ ಶೈಲಿಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಮಾಹಿತಿ ಪ್ರಕಾರ ಈ ಸೀಸನ್‌ನಲ್ಲಿ ನಟರು, ಯೂಟ್ಯೂಬರ್‌ಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಸಮ್ಮಿಶ್ರಣ ಇರಲಿದೆ ಎಂದು ವರದಿಯಾಗಿದೆ. . ಪ್ರತಿಬಾರಿಯಂತೆ ನಟ ನಾಗಾರ್ಜುನ ಅವರೇ ಈ ಬಾರಿಯೂ ಶೋ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: Bigg Boss Telugu 7: ಬಿಗ್ ಬಾಸ್ ತೆಲುಗು ಸೀಸನ್-7 ವಿಜೇತ ಪಲ್ಲವಿ ಪ್ರಶಾಂತ್ ಅರೆಸ್ಟ್‌!

ಸಂಭಾವ್ಯ ಪಟ್ಟಿ ಹೀಗಿದೆ!

ಬಾಂಚಿಕ್ ಬಬ್ಲು: ಜನಪ್ರಿಯ ಯೂಟ್ಯೂಬರ್. ರಾಜ್ ತರುಣ್: ಟಾಲಿವುಡ್‌ನ ಪ್ರಸಿದ್ಧ ನಟ. ಸೋನಿಯಾ ಸಿಂಗ್: ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಬಳಗ ಹೊಂದಿರುವ ನಟಿ, ಡ್ರಗ್ಸ್ ಪ್ರಕರಣದ ಆರೋಪಿ ಹೇಮಾ ಸಹ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಮರ್ಯಾದಾ ಹತ್ಯೆಯ ಸಂತ್ರಸ್ತೆ ಅಮೃತಾ ಪ್ರಣಯ್ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ. ಭಾರಿ ದುಬಾರಿ ಬೆಲೆಗೆ ಆಹಾರ ಮಾರಾಟ ಮಾಡುತ್ತಾ ಜನಪ್ರಿಯವಾಗಿರುವ ಕುಮಾರಿ ಆಂಟಿ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಜನಪ್ರಿಯ ಯೂಟ್ಯೂಬ್ ಕಪಲ್ ಆಗಿರುವ ನೇತ್ರಾ ಮತ್ತು ವಂಶಿ ಸಹ ಈ ಬಾರಿ ಬಿಗ್​ಬಾಸ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 3 ರಂದು ತೆಲುಗು ಬಿಗ್​ಬಾಸ್ ಸೀಸನ್ 7 ಆರಂಭವಾಗಿತ್ತು. 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರುಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿತ್ತು. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿತ್ತು.

Continue Reading

ಬಿಗ್ ಬಾಸ್

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Actress Siri: ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Actress Siri marriage to actor prabhakar
Koo

ಬೆಂಗಳೂರು: ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿದ್ದಾರೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದಾರೆ. ಮೂಲಗಳ ಪ್ರಕಾರ ಸಿರಿ ಮದುವೆಯಾದ ಹುಡುಗನ ಹೆಸರು ಪ್ರಭಾಕರ್. ಮಂಡ್ಯ ಮೂಲದವರಾದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರೂ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಿಮ್ಮಲ್ಲರ ಸಪೋರ್ಟ್‌ಗೆ ವಂದನೆಗಳು’ ಎಂದು ಪ್ರಭಾಕರ್ ಬರೆದುಕೊಂಡಿದ್ದರು.

ಇವರಿಬ್ಬರ ಪರಿಚಯ ಆಗಿದ್ದು ಹೇಗೆ? ಲವ್ ಮ್ಯಾರೇಜ್ ಆಗಿರಬಹುದಾ? ಬಿಗ್ ಬಾಸ್‌ ನಂತರ ಅರಳಿದ ಪ್ರೀತಿನಾ ಎಂದು ಜನರು ಕಮೆಂಟ್‌ ಮೂಲಕ ಪ್ರಶ್ನೆ ಇಡುತ್ತಿದ್ದಾರೆ.

ಇದನ್ನೂ ಓದಿ: Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗ ಯಾರು ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಹಾಗೇ ಸಿರಿ ಕೂಡ ಎಲ್ಲಿಯೂ ಪೋಸ್ಟ್‌ ಶೇರ್‌ ಮಾಡಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಈ ಬಗ್ಗೆ ಸಿರಿ ಮಾತನಾಡಿದ್ದು ಇದೆ. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು.

ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

Continue Reading
Advertisement
Copa America Final
ಕ್ರೀಡೆ9 mins ago

Copa America Final: ದಾಖಲೆಯ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ

World Record
ದೇಶ10 mins ago

World Record: ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡ ನೆಟ್ಟು ವಿಶ್ವ ದಾಖಲೆ ಬರೆದ ಇಂದೋರ್‌; ದೇಶದ ಸ್ವಚ್ಛ ನಗರಕ್ಕೆ ಇನ್ನೊಂದು ಗರಿ

karnataka Rain
ಮಳೆ12 mins ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

Anant Ambani Wedding AR Rahman Shreya Ghoshal sings wedding reception
ಬಾಲಿವುಡ್19 mins ago

Anant Ambani Wedding: ರಾಧಿಕಾ-ಅನಂತ್ ಅಂಬಾನಿ ಆರತಕ್ಷತೆ; ಮನಸೂರೆಗೊಂಡ ಗಾಯಕಿ ಶ್ರೇಯಾ ಘೋಷಾಲ್, ಎಆರ್ ರೆಹಮಾನ್ ಗಾಯನ!

karnataka assembly live CM Siddaramaiah and Vidhanasoudha
ಪ್ರಮುಖ ಸುದ್ದಿ28 mins ago

Karnataka Assembly Live: ವಿಧಾನ ಮಂಡಲ ಮಳೆಗಾಲದ ಅಧಿವೇಶನ ಆರಂಭ; ಇಲ್ಲಿದೆ ‌ಕ್ಷಣಕ್ಷಣದ ಲೈವ್‌

assault case udupi
ಕ್ರೈಂ41 mins ago

Assault Case: ಆಪದ್ಬಾಂಧವನಲ್ಲ ವಿಕೃತ! ಮಗಳ ಅಶ್ಲೀಲ ವಿಡಿಯೋ ಮಾಡಿದ ಆಸೀಫ್‌ನ ಇನ್ನೊಂದು ವಿಕೃತಿ ಬಯಲು

SBI
ದೇಶ50 mins ago

SBI: ದುಬಾರಿಯಾಗಲಿದೆ ಎಸ್‌ಬಿಐ ಸಾಲ; ಲೆಂಡಿಂಗ್‌ ದರದಲ್ಲಿ ಭಾರೀ ಏರಿಕೆ

Sanju Samson
ಕ್ರೀಡೆ1 hour ago

Sanju Samson: ‘ಔಟ್​ ಆಫ್​ ದಿ ಪಾರ್ಕ್​’​ ಸಿಕ್ಸರ್​ ಬಾರಿಸಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್

Job Alert
ಉದ್ಯೋಗ1 hour ago

Job Alert: ಅಂಚೆ ಇಲಾಖೆಯಿಂದ ಗುಡ್‌ನ್ಯೂಸ್‌: 44,228 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

Rakshit Shetty copy right issue Bachelor Party File a complaint
ಸ್ಯಾಂಡಲ್ ವುಡ್2 hours ago

Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ12 mins ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ18 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ19 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ22 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ24 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

ಟ್ರೆಂಡಿಂಗ್‌