Site icon Vistara News

BBK SEASON 10: ಪ್ರತಾಪ್‌ ʻಔಟ್‌ʼ ಆಗಿಲ್ಲ; ಗ್ರ್ಯಾಂಡ್‌ ಫಿನಾಲೆ ತಲುಪಲಿದ್ದಾರೆ ಟಾಪ್‌ 6 ಸ್ಪರ್ಧಿಗಳು!

Prathap not out Top 6 contestants will reach the grand finale bigg boss

ಬೆಂಗಳೂರು: `ಬಿಗ್‌ ಬಾಸ್‌ ಸೀಸನ್‌ 10ರ’ (BBK SEASON 10) ಫಿನಾಲೆ ಸಜ್ಜಾಗುತ್ತಿದೆ. ಹೀಗಿರುವಾಗ ಮಿಡ್‌ ವೀಕ್‌ ಎಲಿಮಿನೇಷನ್‌ ನಡೆಯಬೇಕಿತ್ತು. ಇದೆ ಮೊದಲ ಸಲ ಡ್ರೋನ್ ಪ್ರತಾಪ್ ಅವರನ್ನು ʻಪ್ರಾಂಕ್ ಎಲಿಮಿನೇಷನ್ ಮಾಡಿ ‘ಬಿಗ್ ಬಾಸ್‌ʼ ಸರ್‌ಪ್ರೈಸ್‌ ನೀಡಿದ್ದಾರೆ. ಅಷ್ಟೇ ಅಲ್ಲದೇ ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫಿನಾಲೆಗೆ ಆರು ಮಂದಿ ಹೊಗುತ್ತಿದ್ದಾರೆ. ಈ ಅಚ್ಚರಿಗೆ ಕಿಚ್ಚ ಸುದೀಪ್​ (Kichcha Sudeep) ಅವರೇ ಕಾರಣ. ಫಿನಾಲೆ ವಾರದಲ್ಲಿ ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಡ್ರೋನ್​ ಪ್ರತಾಪ್​ ಇದ್ದಾರೆ.

ಎಲಿಮಿನೇಷನ್‌ ಹೇಗಿತ್ತು?

ಪ್ರತಿ ಬಾರಿ ಫಿನಾಲೆ 5 ಸದಸ್ಯರು ಹೋಗುತ್ತಾರೆ. ಈ ಮನೆಯಲ್ಲಿ ನಿಮ್ಮ ಪೈಕಿ ಒಬ್ಬರ ಪಯಣ ಕೆಲವೇ ಕ್ಷಣಗಳಲ್ಲಿ ಅಂತ್ಯಗೊಳ್ಳಲಿದೆ. ಕಳೆದ 15 ವಾರಗಳಿಂದ ಈ ಮನೆಯಿಂದ ಎಲಿಮಿನೇಟ್ ಆಗಿ ಹೋದ ಸ್ಪರ್ಧಿಗಳು ವೀಕ್ಷಕರ ವೋಟ್‌ನ ಆಧಾರದ ಮೇಲೆ ಔಟ್ ಆಗಿದ್ದಾರೆ. ಆದರೆ, ಈಗ ಮೊಟ್ಟಮೊದಲ ಬಾರಿಗೆ ಮನೆಯ ಸ್ಪರ್ಧಿಗಳ ವೋಟ್‌ನ ಆಧಾರದ ಮೇಲೆ ನಿಮ್ಮ ಪೈಕಿ ಒಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ. ಫಿನಾಲೆ ದಿನಕ್ಕೆ ಕಾಲಿಡಲು ಅರ್ಹತೆ ಇಲ್ಲದ ಯಾವ ಒಬ್ಬ ಸ್ಪರ್ಧಿ ಈ ಮನೆಯಿಂದ ಹೊರಗೆ ಹೋಗಬೇಕು ಎಂದು ಸೂಕ್ತ ಕಾರಣಗಳೊಂದಿಗೆ ತಿಳಿಸಿʼʼಎಂದು ಬಿಗ್‌ ಬಾಸ್‌ ಸೂಚಿಸಿದ್ದರು.

ಇದರಿಂದಾಗಿ ತುಕಾಲಿ ಸಂತೋಷ್​, ಕಾರ್ತಿಕ್​ ಮಹೇಶ್​, ವಿನಯ್​ ಗೌಡ ಅವರು ಡ್ರೋನ್​ ಪ್ರತಾಪ್​ ಹೆಸರನ್ನು ಸೂಚಿಸಿದರು. 6 ವೋಟ್​ಗಳಲ್ಲಿ 3 ವೋಟ್​ ಡ್ರೋನ್​ ಪ್ರತಾಪ್​ಗೆ ಬಂದಿದ್ದರಿಂದ ಅವರು ಎಲಿಮಿನೇಟ್​ ಆಗಬೇಕಾಯಿತು. ಬಹು ಮತದ ಅನುಸಾರ ಡ್ರೋನ್‌ ಪ್ರತಾಪ್‌ ಅವರ ಪಯಣ ಇಲ್ಲಿಗೆ ಮುಕ್ತಾಯ ಎಂದು ಬಿಗ್‌ ಬಾಸ್‌ ಸೂಚಿಸಿದ್ದರು.

ಸಂಗೀತಾ ಆಗ ‘’ನೋ ‘ಬಿಗ್ ಬಾಸ್‌’. ದಿಸ್‌ ಈಸ್ ನಾಟ್ ಫೇರ್‌ ‘ಬಿಗ್ ಬಾಸ್‌’’ ಎಂದು ಕಣ್ಣೀರಿಟ್ಟರು. ‘’ಪ್ರತಾಪ್.. ನೀವು ಮುಖ್ಯದ್ವಾರದಿಂದ ಹೊರಗೆ ಬರಲು ನಿಮಗೆ 5 ನಿಮಿಷಗಳ ಕಾಲಾವಕಾಶ ಇದೆ’’ ಎಂದು ‘ಬಿಗ್ ಬಾಸ್‌’ ಹೇಳಿದಾಗ ಡ್ರೋನ್ ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತರು. ಹೊರಡುವ ಮುನ್ನ ಪ್ರತಾಪ್‌ ಅವರು ʻʻಇಲ್ಲಿಯ ತನಕ ಬರೋದಕ್ಕೆ ಜನರ ಪ್ರೀತಿ ಸಿಕ್ಕಿದೆ.ನನಗೆ ಯಾರ ಮೇಲೂ ಬೇಜಾರಿಲ್ಲ.ನನ್ನ ಊರಿನ ಜನತೆ, ನಾಡಿನ ಜನತೆಯ ಪ್ರೀತಿ ಸಿಕ್ಕಿದೆ. ನನಗೆ ಖುಷಿ ಇದೆ. ಸುದೀಪ್‌ ಸರ್‌ಗೆ ತುಂಬಾ ಥ್ಯಾಂಕ್ಸ್ʼʼಎಂದು ಭಾವುಕರಾದರು. ಇದಾದ ಮೇಲೆ ಬಿಗ್‌ ಬಾಸ್‌ ಟ್ವಿಸ್ಟ್‌ ಒಂದನ್ನು ನೀಡಿದರು.

‘’ಹೊರಡುವ ಮುನ್ನ ಇಟ್ಟಿರುವ ಲಕೋಟೆಯನ್ನ ತೆರೆದು ಜೋರಾಗಿ ಓದಿ’’ ಎಂದು ಡ್ರೋನ್ ಪ್ರತಾಪ್‌ಗೆ ‘ಬಿಗ್ ಬಾಸ್’ ಸೂಚಿಸಿದರು. ಲಕೋಟೆಯಲ್ಲಿ ‘’ಈ ವಾರ ಮಿಡ್‌ ವೀಕ್ ಎಲಿಮಿನೇಷನ್ ಇಲ್ಲ’’ ಎಂದು ಲಕೋಟೆಯಲ್ಲಿ ಬರೆಯಲಾಗಿತ್ತು. ಅದನ್ನ ಕಂಡು ಡ್ರೋನ್ ಪ್ರತಾಪ್‌ ನಕ್ಕರು.

ಇದನ್ನೂ ಓದಿ: BBK SEASON 10: ತುಕಾಲಿ ಅವರಿಗೆ ‘ಬೆಸ್ಟ್ ಜಾಕಿ’ ಅವಾರ್ಡ್ ಸಿಗಬಹುದಾ?

ಈ ಸೀಸನ್‌ನಲ್ಲಿ ಟಾಪ್‌ 5 ಬದಲಿಗೆ, ವೀಕ್ಷಕರ ಅಪಾರ ಪ್ರೀತಿ ಹಾಗೂ ಹೆಗ್ಗಳಿಕೆಗೆ ಪಾತ್ರರಾಗಿರುವ ಟಾಪ್ 6 ಸ್ಪರ್ಧಿಗಳು ಫಿನಾಲೆಗೆ ತಲುಪಲಿದ್ದಾರೆ. ಇದು ಸುದೀಪ್ ಅವರ ಉಡುಗೊರೆ’’ ಎಂದು ‘ಬಿಗ್ ಬಾಸ್‌’ ತಿಳಿಸಿದರು.ಇನ್ನು ತುಕಾಲಿ ಅವರು ಪ್ರತಾಪ್‌ ಕಳಿಹಿಸುವ ಮುನ್ನ ʻಪ್ರತಾಪ್‌ ಎಕ್ಸ್ಟ್ರಾಡಿನರಿ, ವಾವ್ ಎನಿಸುವ ಮಟ್ಟಿಗೆ ಕಂಡಿಲ್ಲ. ಗೆಲುವಿನ ಕಿರೀಟ ಧರಿಸಲು ಪ್ರತಾಪ್‌ಗೆ ಅರ್ಹತೆ ಇಲ್ಲʼಎಂದು ಕಾರಣ ಕೊಟ್ಟಿದ್ದರು. ಪ್ರತಾಪ್ ಒಳ್ಳೆಯ ಹುಡುಗ. ಆದರೆ, ‘ಬಿಗ್ ಬಾಸ್‌’ಗೆ ಬೇಕಾಗಿರುವ ಗೇಮ್ ಅವನಲ್ಲಿ ಇಲ್ಲ. ಮೊದಲ ದಿನದಿಂದ 80 ದಿನಗಳವರೆಗೂ ನನ್ನ ಕಣ್ಣಿಗಂತೂ ಎಲ್ಲೂ ಕಂಡಿಲ್ಲ ಎಂದು ವಿನಯ್‌ ಹೇಳಿದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version