ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಹನ್ನಂದನೇ ವಾರ ಮನೆಯೊಳಗೆ ಬಿಡ್ಡಿಂಗ್ ಭರಾಟೆ ಜೋರಾಗಿಯೇ ಸಾಗಿದೆ. ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರಿಗೆ ಬಿಗ್‌ಬಾಸ್ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಮಾಡಲು ಸೂಚಿಸಿದ್ದರು. ಇದಕ್ಕೂ ಮುಂಚೆ ಬಿಗ್ ಬಾಸ್ ಎರಡು ತಂಡಗಳ ಮಾಲೀಕರನ್ನಾಗಿ ಸಂಗೀತಾ ಹಾಗೂ ತನಿಷಾ ಅವರನ್ನ ಬಿಗ್ ಬಾಸ್ ನೇಮಿಸಿದ್ದರು. ಮೈಕಲ್, ಅವಿನಾಶ್ ಶೆಟ್ಟಿ, ಡ್ರೋನ್ ಪ್ರತಾಪ್ ಹಾಗೂ ನಮ್ರತಾರನ್ನ ಸಂಗೀತಾ ಖರೀದಿಸಿದ್ದರು. ವಿನಯ್, ತುಕಾಲಿ ಸಂತು, ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಅವರನ್ನ ತನಿಷಾ ಖರೀದಿ ಮಾಡಿದ್ದರು. ಪಾಯಿಂಟ್ಸ್ ಹಂಚಿಕೆ ಬಗ್ಗೆ ಎರಡೂ ತಂಡಗಳಲ್ಲಿ ಅಸಮಾಧಾನ ಇತ್ತು. ಹೀಗಾಗಿ ಇನ್ನೊಂದು ಚಾನ್ಸ್ ಬಿಗ್ ಬಾಸ್ ನೀಡಿದ್ದಾರೆ. ರೀ ಬಿಡ್ದಿಂಗ್ ಘೋಷಿಸಿದರು ‘ಬಿಗ್ ಬಾಸ್’.
ಕಳೆದ ಸಂಚಿಕೆಯಲ್ಲಿ ಬಿಗ್ ಬಾಸ್ ಎರಡೂ ತಂಡಗಳನ್ನು ಹೊಸದಾಗಿ ರಚಿಸಲು ಆದೇಶ ನೀಡಿದರು. ಇದಕ್ಕೂ ಮುಂಚೆ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ, ಬಿಗ್ ಬಾಸ್’ ಕಳುಹಿಸಿಕೊಡುವ ಹೆಚ್ಚುವರಿ ಪಾಯಿಂಟ್‌ಗಳನ್ನು ಅವರಿಬ್ಬರಿಗೆ ನೀಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ, ಬಿಗ್ ಬಾಸ್ ಕಳುಹಿಸಿಕೊಟ್ಟ ಹೆಚ್ಚುವರಿ ಪಾಯಿಂಟ್‌ಗಳನ್ನ ನಮ್ರತಾಗೆ ಸಂಗೀತಾ ನೀಡಿದರು. ವಿನಯ್‌ಗೆ ತನಿಷಾ ಕೊಟ್ಟರು. ಹೀಗಾಗಿ ಎರಡೂ ತಂಡಗಳ ಮಾಲೀಕರ ಅನುಸಾರ, ತಮ್ಮ ತಂಡದ ಉತ್ತಮ ಆಟಗಾರರಾದ ವಿನಯ್ ಹಾಗೂ ನಮ್ರತಾ ಅವರನ್ನು ಹೊರತುಪಡಿಸಿ, ಉಳಿದ ಎಲ್ಲಾ ಆಟಗಾರರು ಎರಡೂ ತಂಡಗಳಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: BBK SEASON 10: ಆಟದಲ್ಲಿ ಸಂಗೀತಾ, ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್?
ರಿ ಬಿಡ್ಡಿಂಗ್ ಪ್ರಕ್ರಿಯೆ ಏನು?
ಈ ಪ್ರಕ್ರಿಯೆಗೆ ಬಿಗ್ ಬಾಸ್ 8 ಸಾವಿರ ಪಾಯಿಂಟ್ಸ್‌ವನ್ನು ತನಿಷಾ ಹಾಗೂ ಸಂಗೀತಾಗೆ ನೀಡಿದ್ದರು. ಹೀಗಾಗಿ ಇದನ್ನು ಉಪಯೋಗಿಸಿ ಮೂರು ಜನರನ್ನು ಖರೀದಿಸಬೇಕಿತ್ತು. ಪ್ರತಿ ಆಟಗಾರರಿಗೆ ಆರಂಭಿಕ ಮೊತ್ತ 100 ಪಾಯಿಂಟ್ಸ್. ಅತೀ ಹೆಚ್ಚು ಬಿಡ್ ಮಾಡುವ ತಂಡಕ್ಕೆ ಆಟಗಾರರು ಸೇಲ್ ಆದಂತೆ. ಕೊನೆಯಲ್ಲಿ ಉಳಿದ ಪಾಯಿಂಟ್ಸ್ ಆಯಾ ತಂಡದ ಮಾಲೀಕರ ಪಾಲಾಗುತ್ತದೆ.
ಡ್ರೋನ್ ಪ್ರತಾಪ್‌ಗೆ ತನಿಷಾ ಬಿಡ್ ಮಾಡಿಲ್ಲ. ಸಂಗೀತಾ 100 ಪಾಯಿಂಟ್ಸ್ ಬಿಡ್ ಮಾಡಿದರು. ಸಂಗೀತಾ ಟೀಂ ಸೇರಿಕೊಂಡರು ಪ್ರತಾಪ್. ತುಕಾಲಿ ಸಂತುಗೆ ತನಿಷಾ ಹಾಗೂ ಸಂಗೀತಾ ತಲಾ 100 ಪಾಯಿಂಟ್ಸ್ ನೀಡಿದರು. ಬಳಿಕ ಅದನ್ನು ಸಂಗೀತಾ 150ಕ್ಕೆ ಏರಿಸಿದರು. ತುಕಾಲಿ, ಸಂಗೀತಾ ತಂಡ ಸೇರಿದರು. ಬಳಿಕ ಬಂದ ಕಾರ್ತಿಕ್‌ಗೆ ತನಿಷಾ ಹಾಗೂ ಸಂಗೀತಾ ಇಬ್ಬರೂ ಹರಾಜು ಕರೆಯಲಿಲ್ಲ. ಅವಿನಾಶ್ ಅವರನ್ನು ತನಿಷಾ ಬಿಡ್ ಮಾಡಿ ಕರೆಸಿಕೊಂಡರು. ಮೈಕಲ್‌ಗೆ ಸಂಗೀತಾ ಬಿಡ್ ಮಾಡಲಿಲ್ಲ. ಮೈಕಲ್ ಅವರನ್ನ ತನಿಷಾ 100 ಪಾಯಿಂಟ್ಸ್‌ಗೆ ಖರೀದಿಸಿದರು. ಸಿರಿಗಾಗಿ ಸಂಗೀತಾ ಹಾಗೂ ತನಿಷಾ ಮಧ್ಯೆ ಪೈಪೋಟಿ ನಡೆಯಿತು. ಕೊನೆಗೆ 800 ಪಾಯಿಂಟ್ಸ್ ಬಿಡ್ ಮಾಡಿ ಸಿರಿ ಅವರನ್ನ ಸಂಗೀತಾ ಖರೀದಿಸಿದರು.100 ಪಾಯಿಂಟ್ಸ್‌ಗೆ ವರ್ತೂರು ಸಂತೋಷ್ ಅವರನ್ನ ತನಿಷಾ ಖರೀದಿ ಮಾಡಿದರು.
ವಿಚಿತ್ರವಾದರೂ ಸತ್ಯ
ಮೊದಲ ದಿನ ಕಾರ್ತಿಕ್ ಅವರಿಗಾಗಿ ತನಿಷಾ ಹಾಗೂ ಸಂಗೀತಾ ನಡುವೆ ಪೈಪೋಟಿ ಇತ್ತು. ಸಂಗೀತಾ 3500 ಪಾಯಿಂಟ್ಸ್ ಕೊಟ್ಟಿದ್ದರು. ಆನಂತರ ತನಿಷಾ 4300 ಡಿಮ್ಯಾಂಡ್ ಮಾಡಿದ್ದರು. ಹೀಗಾಗಿ, ಸಂಗೀತಾ ತಂಡವನ್ನ ತೊರೆದು ತನಿಷಾ ತಂಡವನ್ನ ಕಾರ್ತಿಕ್ ಸೇರಿದ್ದರು. ಸಿರಿ ಅವರನ್ನು ಯಾರು ಕರೆಸಿಕೊಂಡಿಲ್ಲ. ಯಾವಾಗ ಕಾರ್ತಿಕ್ ಅವರಿಗೆ ಟಾಸ್ಕ್‌ನಲ್ಲಿ ಪೆಟ್ಟು ಆಗಿ ಬೆನ್ನು ನೋವು ಬಂತೋ ಎರಡನೇ ಬಾರಿ ಎರಡೂ ಮಾಲೀಕರು ಖರೀದಿಸಲಿಲ್ಲ.
ಇದರ ಮೇಲೆ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್ ಅವರು’ ಎಂದು ಬೇರೆ ಹೇಳಿದ್ದಾರೆ! ಇದನ್ನು ನೋಡಿ ತುಕಾಲಿ ಸಂತೋಷ್ ಅವರು ವರ್ತೂರ್ ಜತೆಗೆ, ‘ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು ಅವನನ್ನೇ ಹತ್ ರೂಪಾಯಿಗೂ ಕೇಳಿಲ್ವಲ್ಲ ಅವನ್ನ’ ಎಂದು ಮಾತಾಡಿಕೊಂಡಿದ್ದರು. ಕಳೆದ ಸಲ ಸಂಗೀತಾ ಅವರಿಂದ ಹಣ ತೆಗೆದುಕೊಂಡು ನಂತರ ಪಕ್ಷ ಬದಲಾಯಿಸಿ ತನಿಷಾ ಹೆಚ್ಚು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಅವರ ತಂಡ ಸೇರಿಕೊಂಡಿದ್ದರು ಕಾರ್ತಿಕ್. ಆಗ ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್‌ಗೆ ಮುಳುವಾದಂತಿದೆ.
ಇದನ್ನೂ ಓದಿ: BBK SEASON 10: ವಿನಯ್- ಅವಿನಾಶ್ ಕಾಳಗ; ಆಟದಿಂದ ಹೊರಗುಳಿದ ʻಆನೆʼ!
ಆಟಗಾರರ ಖರೀದಿಯಲ್ಲಿ ಸಂಗೀತಾ ತೋರಿದ್ದು ಜಿಪುಣತನನಾ? ಜಾಣ್ಮೆನಾ?
ಇದಾದ ಬಳಿಕ ವರ್ತೂರ್ ಹಾಗೂ ತುಕಾಲಿ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದಾರೆ. ʻʻ’ಇದು ಬಿಡ್ಡಿಂಗ್ ತರಹ ಇರಲಿಲ್ಲ. ಜಿಪುಣತನದಿಂದ ಮಾಡಿದ ಹಾಗಿತ್ತು. 100 ಪಾಯಿಂಟ್ಸ್ ಕೊಟ್ಟುಬಿಟ್ಟು ಸುಮ್ಮನಾದರು. ಹೀಗೆ ಬಿಡ್ಡಿಂಗ್ ಮಾಡ್ತಾರಾ? ಇರುವ ಪಾಯಿಂಟ್ಸ್‌ನ ರೈಸ್ ಮಾಡಬೇಕು. ಸಿರಿಗೆ ಮಾಡಿದ್ರಲ್ಲ ಹಾಗೇ. ಅದು ಬಿಡ್ಡಿಂಗ್” ಎಂದು ಪ್ರಕ್ರಿಯೆ ಮುಗಿದ ಮೇಲೆ ತುಕಾಲಿ ಸಂತು ಮಾತನಾಡಿದ್ದಾರೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ