Site icon Vistara News

BBK Season 10: ರಕ್ತ ಬಂದ್ರೂ ಜಗ್ಗಲ್ಲ; ಸಂಗೀತಾ-ತನಿಷಾ ಜಗಳ ಮುಗಿಯಲ್ಲ!

Sangeetha-Tanisha fight is not over

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌10ರ (BBK Season 10) ಏಳನೇ ವಾರ ವಿಭಿನ್ನವಾಗಿ ನಾಮಿನೇಶನ್ ಪ್ರಕ್ರಿಯ ನಡೆದಿದೆ. ಕುಚಿಕು ಫ್ರೆಂಡ್ಸ್‌ ಆಗಿದ್ದ ಸಂಗೀತಾ ಹಾಗೂ ತನಿಷಾ ಜಗಳ ತಾರಕಕ್ಕೇರಿದೆ. ರಕ್ತ ಬರಿಸಿಕೊಂಡು ಕೂಗಾಡಿದ್ದಾರೆ. ಹಾಗಾದ್ರೆ ಆ ಟಾಸ್ಕ್‌ ಏನು? ಆಗಿದ್ದೇನು?

ಸ್ತ್ರೀ ಹಾಗೂ ಪುರುಷ ಸದಸ್ಯರು ಪ್ರತ್ಯೇಕವಾಗಿ ವಿಭಜನೆ ಆಗಬೇಕು. ಮೊದಲ ಸುತ್ತಿನಲ್ಲಿ ಎಲ್ಲ ಸದಸ್ಯರು ಬಾಗಿಲ ಮೂಲಕ ಹೊರಗಡೆ ಬರಬೇಕು. ದೂರದಲ್ಲಿ ಇಟ್ಟಿರುವ ಕೀಯನ್ನು ಬಜರ್ ಆದಕೂಡಲೇ ಹೋಗಿ ತಗೋಬೇಕಿತ್ತು. ಬಜರ್ ಆದಕೂಡಲೇ ಹೆಣ್ಣು ಮಕ್ಕಳೆಲ್ಲ ಓಡಿ ಹೋಗಿ ಕೀ ತಗೊಳ್ಳಲು ಪ್ರಯತ್ನಿಸುತ್ತಿದ್ದರು. ಬೇರೆಯವರಿಗೆ ಕೀ ಸಿಕ್ಕಿದರೂ ಅದನ್ನು ಕಿತ್ತುಕೊಳ್ಳಬಹುದಿತ್ತು. ಆ ನಂತರ ಅದನ್ನು ಹುಡುಗರಲ್ಲಿ ಒಬ್ಬರಿಗೆ ನೀಡಬೇಕಿತ್ತು. ಆ ಪುರುಷ ಸ್ಪರ್ಧಿ ತನ್ನ ಮನಸ್ಸಿಗೆ ಅನಿಸಿದ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಿತ್ತು. ಈ ವೇಳೆ ಸಂಗೀತಾ ಹಾಗೂ ತನಿಷಾ ನಡುವೆ ವಾರ್‌ ಆಗಿದೆ.

ಕ್ಯಾಪ್ಟನ್ ಆದ ಕಾರ್ತಿಕ್ ಹಾಗೂ ನೇರವಾಗಿ ನಾಮಿನೇಟ್ ಆದಂತಹ ನೀತೂ ಬಿಟ್ಟು ಮನೆಯವರಿಂದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಇಬ್ಬರನ್ನು ಮೊದಲೇ ಸೇವ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ.

ಬಜರ್ ಆಗಿ ಓಡುವಾಗ ತನಿಷಾರಿಂದ ಸಂಗೀತಾ ಕೈ ಬೆರಳಿಗೆ ಗಾಯ ಆಗಿದೆ. ತನಿಷಾರ ಉಂಗುರ ಸಂಗೀತಾಗೆ ತಾಗಿ ರಕ್ತ ಬಂದಿತು. ಹೀಗಾಗಿ ಸಂಗೀತಾ ಮೊದಲಿಗೆ ಕಿರುಚಾಡಿದ್ದಾರೆ. ಮಾತ್ರವಲ್ಲ ರಕ್ತ ಬರಿಸಿ ಆಟ ಆಡೋದಲ್ಲ ಅಂತ ಸಂಗೀತಾ ಹೇಳಿದರು. ಹಾಗೇಯೇ ನನಗೂ ಗಾಯ ಆಯ್ತು ಅಂತ ತನಿಷಾ ಹೇಳಿದರು.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಯಲ್ಲಿ ಯಾರೂ ಮುಗ್ಧರಿಲ್ಲ!; ಇಶಾನಿ ಮನದಾಳ

ಒಬ್ಬರಿಗೊಬ್ಬರು ನಾಮಿನೇಟ್‌

ಸಂಗೀತಾ ಅವರು ತನಿಷಾಗೆ, ಹಾಗೂ ತನಿಷಾ ಅವರು ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದರು. ʻʻತನಿಷಾ ಅವರು ವೀಕೆಂಡ್‌ನಲ್ಲಿ, ವೀಕ್ ಡೇಸ್‌ನಲ್ಲಿ ಮಾತನಾಡುವ ರೀತಿ ಬದಲಾಗಿದೆ. ನಾನು ಹೇಳೋದನ್ನು ಅರ್ಥ ಮಾಡಿಕೊಳ್ಳದೆ ಅವರ ನಿರ್ಧಾರವನ್ನು ತಗೆದುಕೊಳ್ಳುತ್ತಾರೆ. ತುಂಬ ಕೂಗಾಡುತ್ತಾರೆ ಎಂದು ಸಂಗೀತಾ ಕಾರಣ ಕೊಟ್ಟರು. ಅದೇ ರೀತಿ ತನಿಷಾ ಅವರು ʻʻಮೊದಲು ಯಾರನ್ನು ಬೈಕೊಂಡಿದ್ದರೋ ಈಗ ಅವರ ಜತೆಯೇ ಓಡಾಡುತ್ತ ಗಾಸಿಪ್ ಮಾಡುತ್ತಿದ್ದಾರೆ, ಎರಡು ಮುಖʼʼ ಎಂದು ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದರು.

ಸಂಗೀತಾ-ಕಾರ್ತಿಕ್‌ ನಡುವೆ ಮತ್ತೆ ಮನಸ್ತಾಪವಾಗುತ್ತಾ?

ಕಾರ್ತಿಕ್, ಸಂಗೀತಾ ಹಾಗೂ ತನಿಷಾ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ ಇರುವುದು ಗೊತ್ತೇ ಇದೆ. ಕಾರ್ತಿಕ್ ಮತ್ತು ಸಂಗೀತಾ ನಡುವೆ ಎಷ್ಟೋ ಬಾರಿ ಜಗಳವಾಗಿದೆ. ಅದರಲ್ಲೂ ನಾಮಿನೇಷನ್ ವಿಚಾರದಲ್ಲಿ. ಈ ಬಾರಿ ಕಾರ್ತಿಕ್‌ಗೆ ಒಂದು ಅವಕಾಶ ನೀಡಲಾಗಿತ್ತು. ಅದರಲ್ಲಿ ಸಂಗೀತಾ ಸೇವ್ ಮಾಡಬಹುದಾಗಿತ್ತು ಕಾರ್ತಿಕ್ ಮತ್ತೆ ಸಿಕ್ಕ ಅವಕಾಶದಲ್ಲೂ ಸಂಗೀತಾರನ್ನು ಬಿಟ್ಟು ಮೈಕೆಲ್‌ನ ಸೇವ್ ಮಾಡಿದ್ದಾರೆ.

ವಿನಯ್‌ ತಂಡಕ್ಕೆ ಎಂಟ್ರಿ ಕೊಡ್ತಾರಾ ಸಂಗೀತಾ?

ಸಂಗೀತಾ ಆಟದಲ್ಲಿ ಹೆಚ್ಚಾಗಿ ವಿನಯ್ ತಂಡದಲ್ಲಿಯೇ ಕಾಣಿಸಿಕೊಂಡರು ನಮ್ರತಾ ಜತೆಗೆ ಹೆಚ್ಚು ಕ್ಲೋಸ್ ಆಗಿದ್ದರು. ನಮ್ರತಾ ಆಗಾಗ ತನಿಷಾ ಬಗ್ಗೆ ನೆಗೆಟಿವ್ ಆಗಿ ಯೋಚನೆ ಬರುವಂತಹ ಮಾತುಗಳನ್ನೇ ಆಡುತ್ತಿದ್ದರು. ಇದು ಅವರಿಬ್ಬರ ನಡುವೆ ಬಿಟ್ಟಿರುವ ಬಿರುಕು ದೊಡ್ಡದಾಗುವುದಕ್ಕೆ ಕಾರಣವಾಯಿತು. ಈ ವಾರ ನಮ್ರತಾ, ನೀತು, ಪ್ರತಾಪ್‌, ಸಿರಿ, ವಿನಯ್‌, ಸಂಗೀತಾ, ಸ್ನೇಹಿತ್‌, ತನಿಷಾ, ತುಕಾಲಿ ಸಂತೋಷ್‌, ನಾಮಿನೇಟ್‌ ಆಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version