BBK Season 10: ರಕ್ತ ಬಂದ್ರೂ ಜಗ್ಗಲ್ಲ; ಸಂಗೀತಾ-ತನಿಷಾ ಜಗಳ ಮುಗಿಯಲ್ಲ! Vistara News

ಬಿಗ್ ಬಾಸ್

BBK Season 10: ರಕ್ತ ಬಂದ್ರೂ ಜಗ್ಗಲ್ಲ; ಸಂಗೀತಾ-ತನಿಷಾ ಜಗಳ ಮುಗಿಯಲ್ಲ!

BBK Season 10: ಕ್ಯಾಪ್ಟನ್ ಆದ ಕಾರ್ತಿಕ್ ಹಾಗೂ ನೇರವಾಗಿ ನಾಮಿನೇಟ್ ಆದಂತಹ ನೀತೂ ಬಿಟ್ಟು ಮನೆಯವರಿಂದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಇಬ್ಬರನ್ನು ಮೊದಲೇ ಸೇವ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ.

VISTARANEWS.COM


on

Sangeetha-Tanisha fight is not over
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌10ರ (BBK Season 10) ಏಳನೇ ವಾರ ವಿಭಿನ್ನವಾಗಿ ನಾಮಿನೇಶನ್ ಪ್ರಕ್ರಿಯ ನಡೆದಿದೆ. ಕುಚಿಕು ಫ್ರೆಂಡ್ಸ್‌ ಆಗಿದ್ದ ಸಂಗೀತಾ ಹಾಗೂ ತನಿಷಾ ಜಗಳ ತಾರಕಕ್ಕೇರಿದೆ. ರಕ್ತ ಬರಿಸಿಕೊಂಡು ಕೂಗಾಡಿದ್ದಾರೆ. ಹಾಗಾದ್ರೆ ಆ ಟಾಸ್ಕ್‌ ಏನು? ಆಗಿದ್ದೇನು?

ಸ್ತ್ರೀ ಹಾಗೂ ಪುರುಷ ಸದಸ್ಯರು ಪ್ರತ್ಯೇಕವಾಗಿ ವಿಭಜನೆ ಆಗಬೇಕು. ಮೊದಲ ಸುತ್ತಿನಲ್ಲಿ ಎಲ್ಲ ಸದಸ್ಯರು ಬಾಗಿಲ ಮೂಲಕ ಹೊರಗಡೆ ಬರಬೇಕು. ದೂರದಲ್ಲಿ ಇಟ್ಟಿರುವ ಕೀಯನ್ನು ಬಜರ್ ಆದಕೂಡಲೇ ಹೋಗಿ ತಗೋಬೇಕಿತ್ತು. ಬಜರ್ ಆದಕೂಡಲೇ ಹೆಣ್ಣು ಮಕ್ಕಳೆಲ್ಲ ಓಡಿ ಹೋಗಿ ಕೀ ತಗೊಳ್ಳಲು ಪ್ರಯತ್ನಿಸುತ್ತಿದ್ದರು. ಬೇರೆಯವರಿಗೆ ಕೀ ಸಿಕ್ಕಿದರೂ ಅದನ್ನು ಕಿತ್ತುಕೊಳ್ಳಬಹುದಿತ್ತು. ಆ ನಂತರ ಅದನ್ನು ಹುಡುಗರಲ್ಲಿ ಒಬ್ಬರಿಗೆ ನೀಡಬೇಕಿತ್ತು. ಆ ಪುರುಷ ಸ್ಪರ್ಧಿ ತನ್ನ ಮನಸ್ಸಿಗೆ ಅನಿಸಿದ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಿತ್ತು. ಈ ವೇಳೆ ಸಂಗೀತಾ ಹಾಗೂ ತನಿಷಾ ನಡುವೆ ವಾರ್‌ ಆಗಿದೆ.

ಕ್ಯಾಪ್ಟನ್ ಆದ ಕಾರ್ತಿಕ್ ಹಾಗೂ ನೇರವಾಗಿ ನಾಮಿನೇಟ್ ಆದಂತಹ ನೀತೂ ಬಿಟ್ಟು ಮನೆಯವರಿಂದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಇಬ್ಬರನ್ನು ಮೊದಲೇ ಸೇವ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ.

ಬಜರ್ ಆಗಿ ಓಡುವಾಗ ತನಿಷಾರಿಂದ ಸಂಗೀತಾ ಕೈ ಬೆರಳಿಗೆ ಗಾಯ ಆಗಿದೆ. ತನಿಷಾರ ಉಂಗುರ ಸಂಗೀತಾಗೆ ತಾಗಿ ರಕ್ತ ಬಂದಿತು. ಹೀಗಾಗಿ ಸಂಗೀತಾ ಮೊದಲಿಗೆ ಕಿರುಚಾಡಿದ್ದಾರೆ. ಮಾತ್ರವಲ್ಲ ರಕ್ತ ಬರಿಸಿ ಆಟ ಆಡೋದಲ್ಲ ಅಂತ ಸಂಗೀತಾ ಹೇಳಿದರು. ಹಾಗೇಯೇ ನನಗೂ ಗಾಯ ಆಯ್ತು ಅಂತ ತನಿಷಾ ಹೇಳಿದರು.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಯಲ್ಲಿ ಯಾರೂ ಮುಗ್ಧರಿಲ್ಲ!; ಇಶಾನಿ ಮನದಾಳ

ಒಬ್ಬರಿಗೊಬ್ಬರು ನಾಮಿನೇಟ್‌

ಸಂಗೀತಾ ಅವರು ತನಿಷಾಗೆ, ಹಾಗೂ ತನಿಷಾ ಅವರು ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದರು. ʻʻತನಿಷಾ ಅವರು ವೀಕೆಂಡ್‌ನಲ್ಲಿ, ವೀಕ್ ಡೇಸ್‌ನಲ್ಲಿ ಮಾತನಾಡುವ ರೀತಿ ಬದಲಾಗಿದೆ. ನಾನು ಹೇಳೋದನ್ನು ಅರ್ಥ ಮಾಡಿಕೊಳ್ಳದೆ ಅವರ ನಿರ್ಧಾರವನ್ನು ತಗೆದುಕೊಳ್ಳುತ್ತಾರೆ. ತುಂಬ ಕೂಗಾಡುತ್ತಾರೆ ಎಂದು ಸಂಗೀತಾ ಕಾರಣ ಕೊಟ್ಟರು. ಅದೇ ರೀತಿ ತನಿಷಾ ಅವರು ʻʻಮೊದಲು ಯಾರನ್ನು ಬೈಕೊಂಡಿದ್ದರೋ ಈಗ ಅವರ ಜತೆಯೇ ಓಡಾಡುತ್ತ ಗಾಸಿಪ್ ಮಾಡುತ್ತಿದ್ದಾರೆ, ಎರಡು ಮುಖʼʼ ಎಂದು ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದರು.

ಸಂಗೀತಾ-ಕಾರ್ತಿಕ್‌ ನಡುವೆ ಮತ್ತೆ ಮನಸ್ತಾಪವಾಗುತ್ತಾ?

ಕಾರ್ತಿಕ್, ಸಂಗೀತಾ ಹಾಗೂ ತನಿಷಾ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ ಇರುವುದು ಗೊತ್ತೇ ಇದೆ. ಕಾರ್ತಿಕ್ ಮತ್ತು ಸಂಗೀತಾ ನಡುವೆ ಎಷ್ಟೋ ಬಾರಿ ಜಗಳವಾಗಿದೆ. ಅದರಲ್ಲೂ ನಾಮಿನೇಷನ್ ವಿಚಾರದಲ್ಲಿ. ಈ ಬಾರಿ ಕಾರ್ತಿಕ್‌ಗೆ ಒಂದು ಅವಕಾಶ ನೀಡಲಾಗಿತ್ತು. ಅದರಲ್ಲಿ ಸಂಗೀತಾ ಸೇವ್ ಮಾಡಬಹುದಾಗಿತ್ತು ಕಾರ್ತಿಕ್ ಮತ್ತೆ ಸಿಕ್ಕ ಅವಕಾಶದಲ್ಲೂ ಸಂಗೀತಾರನ್ನು ಬಿಟ್ಟು ಮೈಕೆಲ್‌ನ ಸೇವ್ ಮಾಡಿದ್ದಾರೆ.

ವಿನಯ್‌ ತಂಡಕ್ಕೆ ಎಂಟ್ರಿ ಕೊಡ್ತಾರಾ ಸಂಗೀತಾ?

ಸಂಗೀತಾ ಆಟದಲ್ಲಿ ಹೆಚ್ಚಾಗಿ ವಿನಯ್ ತಂಡದಲ್ಲಿಯೇ ಕಾಣಿಸಿಕೊಂಡರು ನಮ್ರತಾ ಜತೆಗೆ ಹೆಚ್ಚು ಕ್ಲೋಸ್ ಆಗಿದ್ದರು. ನಮ್ರತಾ ಆಗಾಗ ತನಿಷಾ ಬಗ್ಗೆ ನೆಗೆಟಿವ್ ಆಗಿ ಯೋಚನೆ ಬರುವಂತಹ ಮಾತುಗಳನ್ನೇ ಆಡುತ್ತಿದ್ದರು. ಇದು ಅವರಿಬ್ಬರ ನಡುವೆ ಬಿಟ್ಟಿರುವ ಬಿರುಕು ದೊಡ್ಡದಾಗುವುದಕ್ಕೆ ಕಾರಣವಾಯಿತು. ಈ ವಾರ ನಮ್ರತಾ, ನೀತು, ಪ್ರತಾಪ್‌, ಸಿರಿ, ವಿನಯ್‌, ಸಂಗೀತಾ, ಸ್ನೇಹಿತ್‌, ತನಿಷಾ, ತುಕಾಲಿ ಸಂತೋಷ್‌, ನಾಮಿನೇಟ್‌ ಆಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

BBK SEASON 10: ನೀನು ಯಾರಿಗೆ ʻಚೇಲಾʼ ಅಂತ ಗೊತ್ತು ʻಹೋಗೋಲೋʼ ಎಂದು ಸ್ನೇಹಿತ್‌ ಮೇಲೆ ರೊಚ್ಚಿಗೆದ್ದ ಸಂಗೀತಾ!

BBK SEASON 10: ಈ ವಾರ ನಾಮಿನೇಷನ್ ಮಾಡುವ ಸಂಪೂರ್ಣ ಅಧಿಕಾರ ಸ್ನೇಹಿತ್​ಗೆ ಇತ್ತು. ಹೀಗಾಗಿ ಅವರು ತಮ್ಮ ತಂಡದವರನ್ನು ಸೇವ್ ಮಾಡಿದ್ದಾರೆ. ವಿನಯ್, ನಮ್ರತಾ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್​​ಗೆ ನೀಡಿದ್ದರು, ಇದರಲ್ಲಿಯೂ ಸ್ನೇಹಿತ್‌ ತಗೊಂಡ ನಿರ್ಧಾರಗಳು ಬಯಾಸ್ಡ್‌ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ರೊಚ್ಚಿಗೆದ್ದರು.

VISTARANEWS.COM


on

war Between Sangeetha And Captain Snehith Gowda
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಈ ವಾರ ಸ್ನೇಹಿತ್‌ ಕ್ಯಾಪ್ಟನ್‌ ಆಗಿರುವುದು ಗೊತ್ತೇ ಇದೆ. ಹಾಗೆಯೇ ವಿನಯ್‌ ಅವರ ʻಚೇಲಾʼ ಎಂದು ಅದೆಷ್ಟೋ ಬಾರಿ ಸ್ನೇಹಿತ್‌ ಕರೆಸಿಕೊಂಡಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಸ್ನೇಹಿತ್‌ಗೆ ವಿಶೇಷ ಅಧಿಕಾರವನ್ನು ನೀಡಿತ್ತು. ಈ ಬಾರಿ ಕೂಡ ಸ್ನೇಹಿತ್‌ ಬಕೇಟ್‌ ರಾಜ ಎಂಬುದು ಸಾಬೀತಾದಂತಿದೆ. ಈ ವಾರ ನಾಮಿನೇಷನ್ ಮಾಡುವ ಸಂಪೂರ್ಣ ಅಧಿಕಾರ ಸ್ನೇಹಿತ್​ಗೆ ಇತ್ತು. ಹೀಗಾಗಿ ಅವರು ತಮ್ಮ ತಂಡದವರನ್ನು ಸೇವ್ ಮಾಡಿದ್ದಾರೆ. ವಿನಯ್, ನಮ್ರತಾ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್​​ಗೆ ನೀಡಿದ್ದರು, ಇದರಲ್ಲಿಯೂ ಸ್ನೇಹಿತ್‌ ತಗೊಂಡ ನಿರ್ಧಾರಗಳು ಬಯಾಸ್ಡ್‌ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ರೊಚ್ಚಿಗೆದ್ದರು.

ಬಿಗ್‌ ಬಾಸ್‌ ಹೊಸ ಲೋಕ

ಕಾಲ್ಪನಿಕ ಲೋಕದಲ್ಲಿ ಸಂಗೀತಾ ತಂಡ ರಾಕ್ಷಸರಾಗಿದ್ದರೆ, ವರ್ತೂರು ಸಂತೋಷ್ ತಂಡ ಗಂಧರ್ವರಾದರು. ಕ್ಯಾಪ್ಟನ್ ಸ್ನೇಹಿತ್ ಈ ಲೋಕದ ಒಡೆಯ. ಈ ವಾರದ ಉಸ್ತುವಾರಿಯನ್ನು ಸ್ನೇಹಿತ್‌ ವಹಿಸಿದ್ದರು. ಟಾಸ್ಕ್ ಮುಗಿಯುವವರೆಗೂ, ತಮ್ಮ ತಮ್ಮ ಪಾತ್ರಗಳಲ್ಲಿಯೇ ಇದ್ದು, ತಮ್ಮ ಗುಂಪಿನ ನಿಯಮ ಪಾಲಿಸುವ ತಂಡ ಗೆದ್ದ ಹಾಗೆ. ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್​​ಗೆ ನೀಡಿದ್ದರು. ವಿನಯ್, ನಮ್ರತಾ ಹಾಗೂ ಮೈಕಲ್​ನ ಒಂದೇ ತಂಡದಲ್ಲಿ ಇಟ್ಟರು. ಇದು ಇಂಬ್ಯಾಲೆನ್ಸ್ ಆಗುತ್ತದೆ ಎಂದು ಸಂಗೀತಾ ಹೇಳಿದರೂ ಆ ಮಾತನ್ನು ಸ್ನೇಹಿತ್ ಕೇಳಲೇ ಇಲ್ಲ.‘ನನಗೆ ಅಧಿಕಾರ ಇದೆ’ ಎಂದು ಹಕ್ಕು ಚಲಾಯಿಸಿದರು. ಈ ಮಧ್ಯೆ ಸಂಗೀತಾ ಹಾಗೂ ಸ್ನೇಹಿತ್‌ ನಡುವೆ ಮಾತಿನ ಚಕಮಕಿ ನಡೆದೇ ಹೋಯ್ತು. ‘’ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ’’ ಎಂದು ಸ್ನೇಹಿತ್‌ಗೆ ಸಂಗೀತಾ ಕೂಗಿದರೆ. ಸಂಗೀತಾಗೆ ‘’ಹೋಗೇ’’ ಎಂದಿದ್ದಾರೆ ಸ್ನೇಹಿತ್. ಪ್ರತಿಯಾಗಿ ಸಂಗೀತಾ ಕೂಡ ‘’ಹೋಗೋಲೋ’’ ಎಂದಿದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

ಏಕವಚನದಲ್ಲಿ ಕೂಗಾಟ

ರೂಲ್ಸ್‌ ವಿಚಾರದಲ್ಲಿ ಸ್ನೇಹಿತ್‌ ಹಾಗೂ ಸಂಗೀತಾ ನಡುವೆ ಮಾತು ಶುರುವಾಗಿದ್ದು, ʻʻನೀನೇ ಕ್ಯಾಪ್ಟನ್ ಆಗಿಲ್ಲ. ನನ್ನ ಏನು ಕ್ಯಾಪ್ಟನ್ ಮಾಡ್ತೀಯಾ? ಹೋಗೇಲೇ..ʼʼ ಎಂದಿದ್ದಾರೆ ಸಂಗೀತಾ. ʻʻನನ್ನ ಶಕ್ತಿ ಮೇಲೆ ನಾನು ಕ್ಯಾಪ್ಟನ್ ಆಗಿರೋದು. ನೀವಲ್ಲ ನನ್ನನ್ನ ಕ್ಯಾಪ್ಟನ್ ಮಾಡಿರೋದು. ನೀನೇ ಕ್ಯಾಪ್ಟನ್ ಆಗಿಲ್ಲ. ನನ್ನ ಏನು ಕ್ಯಾಪ್ಟನ್ ಮಾಡ್ತೀಯಾ? ಹೋಗೇಲೇʼʼ ಎಂದಿದ್ದಾರೆ ಸ್ನೇಹಿತ್‌. ಇದಕ್ಕೆ ಪ್ರತಿಯಾಗಿ ʻʻಹೋಗೊಲೋʼʼ ಎಂದಿದ್ದಾರೆ ಸಂಗಿತಾ. ಅಷ್ಟಕ್ಕೆ ಸಂಗೀತಾ ಮುಗಿಸಿಲ್ಲ. ʻʻನೀನು ಹೇಗೆ ಕ್ಯಾಪ್ಟನ್ ಆಗಿದ್ಯಾ ಅಂತಲೂ ಎಲ್ಲರಿಗೂ ಗೊತ್ತು. ಭಿಕ್ಷೆ ಅದು…ನೀನು ಯಾರಿಗೆ ಚೇಲಾ ಅಂತ ಎಲ್ಲರಿಗೂ ಗೊತ್ತು ಇಲ್ಲಿʼʼ ಎಂದಿದ್ದಾರೆ. ಸ್ನೇಹಿತ್‌ ಈ ಮಾತಿಗೆ ʻʻನೀನು ಏನಾದರೂ ಅಂದುಕೋ. ನೀನು ನಿನ್ನ ಶಕ್ತಿಯಿಂದ ಏನು ಗೆದ್ದಿದ್ದೀಯಾ? ಏನೂ ಗೆದ್ದಿಲ್ಲ!” ಎಂದಿದ್ದಾರೆ. “ಹಿಂದಿನ ವಾರ ನಾನು ಹೋಗಬೇಕಿತ್ತು ಅಂತ ಡಿಸೈಡ್ ಮಾಡೋಕೆ ನೀನು ಯಾರು?” ಎಂದು ಕೂಗಾಡಿದ್ದಾರೆ.

ಸಿರಿ ಕೂಡ ‘’ಆ ರೀತಿ ಮಾತನಾಡಬಾರದು’’ ಎಂದು ಇಬ್ಬರಿಗೂ ಸಮಾಧಾನ ಮಾಡಿದ್ದಾರೆ. ಈ ಮೊದಲು ಅನೇಕ ಬಾರಿ ಸ್ನೇಹಿತ್ ಗೌಡ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೂ ಕೂಡ ವಿನಯ್‌ ಟೀಂನಿಂದ ಹೊರಗೆ ಬರುತ್ತಿಲ್ಲ. ಈ ವಾರ ಮತ್ತೆ ಕಿಚ್ಚ ಅವರು ಸ್ನೇಹಿತ್‌ಗೆ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ಪ್ರೇಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಿಗ್ ಬಾಸ್

BBK SEASON 10: ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಯಾವ ಸೀಮೆ ಕ್ಯಾಪ್ಟನ್ ಸ್ನೇಹಿತ್‌ ನೀನು?

BBK SEASON 10: ಯಾವ ಸೀಮೆ ಉಸ್ತುವಾರಿ ನೀವು? ಎಂದು ಕಾರ್ತಿಕ್‌ ಅವರು ಜೋರಾಗಿಯೇ ಸ್ನೇಹಿತ್‌ಗೆ ಅವಾಜ್‌ ಹಾಕಿದ್ದಾರೆ. ತನಿಷಾ ಕೂಡ ಸ್ನೇಹಿತ್‌ಗೆ ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ ಎಂದಿದ್ದಾರೆ.

VISTARANEWS.COM


on

Captain Snehith Gowda Not Bother To Stop Physical Fight Between vinay and Karthik
Koo

ಬೆಂಗಳೂರು; ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) 9ನೇ ವಾರ ಮನೆಯಲ್ಲಿ ಕಾಲ್ಪನಿಕ ಜಗತ್ತಾಗಿ ಬದಲಾಗಿದೆ. ಈ ಲೋಕದಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ. ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದಾರೆ. ವರ್ತೂರು ಸಂತೋಷ್‌ ನೇತೃತ್ವದ ತಂಡ ಗಂಧರ್ವರಾಗಿದ್ದಾರೆ. ಇದಕ್ಕೆಲ್ಲ ಒಡೆಯ ಎಂದರೆ ಸ್ನೇಹಿತ್‌. ಆದರೆ ಸ್ನೇಹಿತ್‌ ಅವರು ವಿನಯ್‌ – ಕಾರ್ತಿಕ್‌ ಮಧ್ಯೆ ತಳ್ಳಾಟಗಳಾದರೂ ಸ್ನೇಹಿತ್‌ ಸುಮ್ಮನೆ ನೋಡಿಕೊಂಡು ನಿಂತಿದ್ದರು. ಜಗಳ ನಿಲ್ಲಿಸಲು ಸ್ನೇಹಿತ್ ಪ್ರಯತ್ನಿಸಲೇ ಇಲ್ಲ. ಇದು ಸ್ಪರ್ಧಿಗಳಿಗೆ ಕೋಪ ತರಿಸಿದೆ. ಯಾವ ಸೀಮೆ ಉಸ್ತುವಾರಿ ನೀವು? ಎಂದು ಕಾರ್ತಿಕ್‌ ಅವರು ಜೋರಾಗಿಯೇ ಸ್ನೇಹಿತ್‌ಗೆ ಅವಾಜ್‌ ಹಾಕಿದ್ದಾರೆ. ತನಿಷಾ ಕೂಡ ಸ್ನೇಹಿತ್‌ ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ ಎಂದಿದ್ದಾರೆ.

ಏನದು ಟಾಸ್ಕ್‌?

ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ರಾಕ್ಷಸರು. ಇನ್ನೊಂದು ಗಂಧರ್ವರು. ಈ ಕಾಲ್ಪನಿಕ ‘ಬಿಗ್ ಬಾಸ್‌’ ಲೋಕಕ್ಕೆ ಕ್ಯಾಪ್ಟನ್ ಸ್ನೇಹಿತ್ ಒಡೆಯ. ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದಾರೆ. ವರ್ತೂರು ಸಂತೋಷ್‌ ನೇತೃತ್ವದ ತಂಡ ಗಂಧರ್ವರಾಗಿದ್ದಾರೆ. ಸಂಗೀತಾ ತಂಡವನ್ನು ರಾಕ್ಷಸರ ತಂಡವೆಂದು, ವರ್ತೂರು ತಂಡವನ್ನು ಗಂಧರ್ವರ ತಂಡವೆಂದು ಕರೆಯಲಾಗಿದ್ದು, ಎರಡೂ ತಂಡಗಳ ನಡುವೆ ಟಾಸ್ಕ್ ಆಡಿಸಲಾಗುತ್ತಿದೆ. ವರ್ತೂರು ತಂಡದಲ್ಲಿ ವಿನಯ್ ಇದ್ದರೆ, ಸಂಗೀತಾ ತಂಡದಲ್ಲಿ ಕಾರ್ತಿಕ್ ಇದ್ದಾರೆ.

ರಾಕ್ಷಸರು ಹಾಗೂ ಗಂಧರ್ವರಿಗೆ ಬಾವುಟದ ಚಟುವಟಿಕೆಯನ್ನ ‘ಬಿಗ್ ಬಾಸ್‌’ ನೀಡಿದ್ದರು. ಟಾಸ್ಕ್ ಮುಗಿಯುವ ಹೊತ್ತಿಗೆ ಯಾರ ಬಾವುಟ ಹೆಚ್ಚು ಇರುತ್ತದೆಯೋ ಅವರು ವಿನ್‌ ಆದಂತೆ. ರಾಕ್ಷಸರ ಗುಂಪಿನವರು ಕೆಂಪು ಧ್ವಜ ನೆಡಬೇಕು, ಗಂಧರ್ವರು ಬಿಳಿ ಧ್ವಜ ನೆಟ್ಟು ಅದನ್ನು ಎದುರಾಳಿಗಳ ಕೈಗೆ ಸಿಗದಂತೆ ಬಾವುಟಗಳನ್ನು ಕಾಪಾಡಿಕೊಳ್ಳಬೇಕು. ಈ ವೇಳೆ ವಿನಯ್‌ ಹಾಗೂ ಕಾರ್ತಿಕ್‌ ನಡುವೆ ಮಾರಾಮಾರಿಯಾಗಿದೆ.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

ಈ ಟಾಸ್ಕ್​ ಆಡುವಾಗ ವಿನಯ್ ಹಾಗೂ ಕಾರ್ತಿಕ್ ಪರಸ್ಪರ ಮೈ ಮೇಲೆ ಏರಗಿಕೊಂಡರು. ತಳ್ಳಾಡಿಕೊಂಡರು, ಎಳೆದಾಡಿದರು. ಕಾರ್ತಿಕ್ ಒಮ್ಮೆಯಂತೂ ವಿನಯ್ ಅನ್ನು ಎತ್ತಿಕೊಂಡು ಹೋಗಿ ದೂರ ಒಗೆದರು, ವಿನಯ್ ಸಹ ಕಾರ್ತಿಕ್ ಅವರನ್ನು ಎಳೆದಾಡಿದರು. ಈ ಹಂತದಲ್ಲಿ ಇಬ್ಬರಿಗೂ ಏಟು ತಗುಲಿತು. ‘’ಕಾಲುಗಳನ್ನ ಲಾಕ್‌ ಮಾಡಿಟ್ಟುಕೋ.. ಉಸಿರಾಡೋಕೆ ಆಗಬಾರದು. ಎಷ್ಟು ಗಟ್ಟಿಯಾಗುತ್ತೋ, ಅಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೋ 30 ಸೆಕೆಂಡ್ಸ್‌’’ ಎಂದು ನಮ್ರತಾಗೆ ವಿನಯ್ ಹೇಳಿಕೊಟ್ಟರು. ಇದು ವಿನಯ್‌ ಅವರ ಸ್ಟ್ರ್ಯಾಟಜಿ. ಅತ್ತ ನಮ್ರತಾ – ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು.

ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ!

‘’ಉಸ್ತುವಾರಿಯಾಗಿ ನೀವು ಏನಾದರೂ ನಿರ್ಧಾರ ತಗೊಳ್ಳಿ..’’ ಎಂದು ತನಿಷಾ ಹೇಳುತ್ತಲೇ ಇದ್ದರು. ಆಗ, ‘’ಕುಸ್ತಿ ಮಾಡಬೇಡಿ. ಬಾವುಟಗಳನ್ನ ಕಿತ್ತುಕೊಳ್ಳಿ’’ ಎಂದರು ಸ್ನೇಹಿತ್. ಕಾರ್ತಿಕ್‌ ಹಾಗೂ ವಿನಯ್‌ ಅವರ ಕುಸ್ತಿ ತಾರರಕ್ಕೇರಿದಾಗ ʻʻಏನಾದರೂ ನಿರ್ಧಾರ ಮಾಡಿ ಇಲ್ಲಾಂದರೆ ಇದು ದೊಡ್ಡದಾಗುತ್ತೆ’’ ಎಂದು ತನಿಷಾ ಹೇಳಿದಾಗ ಸ್ನೇಹಿತ್‌ ಸುಮ್ಮನೆ ಇದ್ದರು. ತನಿಷಾ, ಸಿರಿ ಅವರುಗಳು ಬೇಡ, ಇಷ್ಟೊಂದು ದೈಹಿಕವಾಗಿ ಆಡುವುದು ಬೇಡ ಎಂದು ಕಿರುಚಿ, ಕ್ಯಾಪ್ಟನ್ ಸ್ನೇಹಿತ್​ರನ್ನು ಆಟ ನಿಲ್ಲಿಸುವಂತೆ ಹೇಳುವಂತೆ ಬೇಡಿದರೂ ಸ್ನೇಹಿತ್ ಆಟ ನಿಲ್ಲಿಸಲಿಲ್ಲ. ಬಳಿಕ ಬಿಗ್‌ ಬಾಸ್‌ ಮಧ್ಯ ಪ್ರವೇಶಿಸಿ ಆಟ ನಿಲ್ಲಿಸಿ ಎಂದು ಘೋಷಿಸಿದರು.

ಇತ್ತ ಕಾರ್ತಿಕ್‌ ಕೂಡ ಸ್ನೇಹಿತ್‌ಗೆ ʻʻನನ್ನ ಕುತ್ತಿಗೆ ಹಿಡಿದಿದ್ದ. ಉಸ್ತುವಾರಿಯಾಗಿ ಏನ್ಮಾಡ್ತಿದ್ದೀರಾ? ಯಾವ ಸೀಮೆ ಉಸ್ತುವಾರಿ ನೀವು?” ಎಂದು ಜೋರಾಗಿಯೇ ಕೂಗಿದರು.

ಅತ್ತ ತನಿಷಾ ಕೂಡ ಸ್ನೇಹಿತ್‌ಗೆ “ಫಿಸಿಕಲ್ ಅಟ್ಯಾಕ್ ಆಗ್ತಿರೋವಾಗ ನಿಲ್ಲಿಸಬೇಕಿತ್ತು. ಒಬ್ಬರಿಗೆ ನೋವು ಆಗ್ತಿರೋವಾಗ ಹೇಗೆ ನೋಡಿಕೊಂಡು ಸುಮ್ಮನೆ ಇರ್ತೀರಾ? ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ.!ʼʼ ಎಂದರು. ಸ್ನೇಹಿತ್‌ ಕೂಡ ʻʻಇಬ್ಬರೂ ಅಗ್ರೆಸ್ಸಿವ್ ಆಗಿ ಆಡಿದ್ರಿ. ಒಬ್ಬರು ಮಾತ್ರ ಅಲ್ಲʼʼ ಎಂದಿದ್ದಾರೆ.

ಇದನ್ನೂ ಓದಿ: BBK SEASON 10: ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ; ಇವರ ಜಗಳ ಮುಗಿಯೋದೇ ಇಲ್ವಾ?

ರಕ್ಕಸರ ತೆಕ್ಕೆಗೆ ಸಿಕ್ಕ ಗಂಧರ್ವರ ಪಾಡೇನು? ಅವರು ಹೇಗೆ ಪಾರಾಗುತ್ತಾರೆ? ಈ ಆಟಕ್ಕೆ ಇನ್ನೊಂದು ಆಯಾಮವೂ ಇದೆಯಾ? ಈ ಎಲ್ಲ ಪ್ರಶ್ನೆಗೆ ಉತ್ತರ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

BBK SEASON 10: ಬಿಗ್‌ ಬಾಸ್‌ ಮನೆ ಬಿಗ್‌ ಬಾಸ್ ಲೋಕ ಎಂಬ ಕಾಲ್ಪನಿಕ ಜಗತ್ತಾಗಿ ಬದಲಾಗಿದೆ. ಇಲ್ಲಿಗೆ ಗಂಧರ್ವರು ಮತ್ತು ರಾಕ್ಷಸರು ಎಂಟ್ರಿ ಕೊಟ್ಟಿದ್ದಾರೆ. ಅರೆ ಏನಿದು ಅಚ್ಚರಿ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

bigg boss
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಗ್‌ ಬಾಸ್‌ ಮನೆಯೊಳಗೆ ವಿಶಿಷ್ಟ ಟಾಸ್ಕ್‌ಗಳು ನಡೆಯುತ್ತಿದ್ದು, ಗಮನ ಸೆಳೆಯುತ್ತಿದೆ. ಕಣ್ಣಿನ ಸುತ್ತ ಕೆಂಪು ಬಣ್ಣ…. ಕಡುಗಪ್ಪು ದಪ್ಪ ಹುಬ್ಬುಗಳು, ಕತ್ತಲೇ ಬಟ್ಟೆಯಾದಂಥ ನಿಲುವಂಗಿ, ಕೆಂಪು ಚೂಪು ಕೋಡುಗಳು.. ಒಂದೆಡೆ ಇಷ್ಟು ಭೀಕರ ರೂಪದ ರಕ್ಕಸರ ಗುಂಪು…. ಇನ್ನೊಂದೆಡೆ ಶಾಂತ ಭಾವವನ್ನು ಸೂಸುವ, ಬಿಳಿಯುಡುಗೆಯಲ್ಲಿ ನಗುನಗುತ್ತ ನಿಂತಿರುವ, ನೆತ್ತಿಯ ಮೇಲೂ ಬಿಳಿಯಾದ ಹೂತೊಟ್ಟ ಗಂಧರ್ವರು…ಯಾವುದಿದು ಗಂಧರ್ವ-ರಕ್ಕಸರ ಮುಖಾಮುಖಿ? ಈ ಪ್ರಶ್ನೆಗೆ ಹೊಸ ಪ್ರೋಮೊದಲ್ಲಿದೆ ಉತ್ತರ.

‘ಬಿಗ್‌ ಬಾಸ್ʼ ಮನೆ ಈ ಕ್ಷಣದಿಂದ ಬಿಗ್‌ ಬಾಸ್ ಲೋಕ ಎಂಬ ಕಾಲ್ಪನಿಕ ಜಗತ್ತಾಗಿ ಬದಲಾಗುತ್ತದೆ. ಈ ಲೋಕದಲ್ಲಿ ಗಂದರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ’ ಎಂದು ಬಿಗ್‌ಬಾಸ್ ಘೋಷಿಸಿದಾಗ ಎಲ್ಲ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ.

ಕಾರ್ತಿಕ್‌, ಸಂಗೀತಾ, ತನಿಷಾ, ಅವಿನಾಶ್‌ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು-ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾದರೆ, ವಿನಯ್, ನಮ್ರತಾ, ವರ್ತೂರು, ತುಕಾಲಿ ಸಂತೋಷ್‌ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ.

ಕಾರ್ತಿಕ್, ಅಡುಗೆ ಮನೆಯಲ್ಲಿ ನೀರು ಚೆಲ್ಲಿ, ಬೆಡ್‌ರೂಮ್‌ನಲ್ಲಿ ಬಟ್ಟೆಗಳನ್ನೆಲ್ಲ ಚೆಲ್ಲಿ ಕಿರುಚಾಡುತ್ತ ಕುಣಿದಾಡಿದ್ದಾರೆ. ಸಂಗೀತಾ, ವಿನಯ್ ತಮ್ಮ ಹಿಂದೆ ಕುಪ್ಪಳಿಸಿಕೊಂಡು ಬರುತ್ತಿರಬೇಕು ಎಂದು ಅಪ್ಪಣೆ ಹೊರಡಿಸಿದ್ದಾರೆ. ನಮ್ರತಾ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ. ರಕ್ಕಸ ಗುಂಪು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ತಣ್ಣಗಿದೆ ಗಂಧರ್ವರ ತಂಡ. ಹಾಗಂತ ಅವರ ಮನಸ್ಸೇನೂ ತಣ್ಣಗಿಲ್ಲ. ಅದರ ಸೂಚಕವಾಗಿ, ‘ನಾನು ನನ್ನ ಪಾತ್ರದಿಂದ ಹೊರಗೆ ಬಂದರೆ ವಿಷಯವೇ ಬೇರೆ. ಪಾಪ ಅವರು, ಬೇಜಾರಗುತ್ತಿದೆ ಅವರನ್ನು ನೆನಪಿಸಿಕೊಂಡರೆ…’ ಎಂದು ವಿನಯ್ ಹೇಳುತ್ತಿದ್ದಾರೆ.

ಈ ವಿಚಿತ್ರ ಪ್ರಪಂಚವನ್ನು ಕ್ಯಾಪ್ಟನ್ ಸ್ನೇಹಿತ್‌ ಉಸ್ತುವಾರಿ ಮಾಡುತ್ತಿದ್ದಾರೆ. ರಕ್ಕಸರ ತೆಕ್ಕೆಗೆ ಸಿಕ್ಕ ಗಂಧರ್ವರ ಪಾಡೇನು? ಅವರು ಹೇಗೆ ಪಾರಾಗುತ್ತಾರೆ? ಈ ಆಟಕ್ಕೆ ಇನ್ನೊಂದು ಆಯಾಮವೂ ಇದೆಯಾ? ಇದ್ದರೆ ಅದು ಹೇಗಿರುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್‌ಬಾಸ್ ನೋಡಬೇಕು.

ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ

ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವೆ ಮತ್ತೆ ಜಗಳ ಆರಂಭವಾಗಿದೆ. ಕೆಲವು ದಿನಗಳಿಂದ ಹಿಂದೆ ಅವರು ಸ್ನೇಹಿತರಾಗಿದ್ದರು. ಅವರ ಸ್ನೇಹ ಎಲ್ಲರಿಗೂ ಅಚ್ಚರಿ ತಂದಿತ್ತು. ಆದರೆ ಈ ಸ್ನೇಹ ಹೆಚ್ಚು ದಿನ ಉಳಿಯಲಿಲ್ಲ. ಇದೀಗ ಹಿಂದಿನಂತೆ ಮತ್ತೆ ಕಿತ್ತಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: BBK SEASON 10: ಯಾರ ಕಣ್ಣು ಬಿತ್ತಮ್ಮ ತನಿಷಾ-ವರ್ತೂರ್ ಸ್ನೇಹದ ಮ್ಯಾಲೆ?

ಬಿಗ್‌ ಬಾಸ್‌ನ ಹೊಸ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ವಿನಯ್‌ ಮತ್ತು ಸಂಗೀತಾ ನಡುವೆ ವಾಗ್ವಾದ ನಡೆಯುತ್ತಿರುವುದು ಕಂಡು ಬಂದಿದೆ. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯತನ ಇದೆ ಎಂಬುದನ್ನು ಹೇಳಲು ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಆದೇಶಿಸಿದ್ದರು. ಈ ವೇಳೆ ವಿನಯ್‌-ಸಂಗೀತಾ ನಡುವೆ ಕಿಡಿ ಹೊತ್ತಿಕೊಂಡಿದೆ. ʼʼವಿನಯ್ ಕೆಟ್ಟ ಗುಣಗಳ ಬೇರುʼʼ ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಕೂಡ ಮಾಡಿದ್ದಾರೆ. ಕೊನೆಗೆ ಸಂಗೀತಾಗೆ ʼʼಶಟ್​ ಅಪ್ʼʼ​ ಎಂದು ವಿನಯ್‌ ಬೈದಿದ್ದಾರೆ. ಸಂಗೀತಾ ಕೂಡ ಸುಮ್ಮನಿರದೆ, ʼʼಮೈಂಡ್ ಯುವರ್ ಲ್ಯಾಂಗ್ವೇಜ್ʼʼ ಎಂದು ಮಾರುತ್ತರ ಕೊಟ್ಟಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆ ಮತ್ತೆ ಬಿಸಿಯೇರಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಿಗ್ ಬಾಸ್

BBK SEASON 10: ಯಾರ ಕಣ್ಣು ಬಿತ್ತಮ್ಮ ತನಿಷಾ-ವರ್ತೂರ್ ಸ್ನೇಹದ ಮ್ಯಾಲೆ?

BBK SEASON 10: ತನಿಷಾ ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

VISTARANEWS.COM


on

Varthur Santhosh and tanisha bigg boss Kannada
Koo

ಬೆಂಗಳೂರು: ಬೆಳಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ಬಿಗ್‌ಬಾಸ್ (BBK SEASON 10) ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ ಹೀಟ್ ಎದ್ದು ಕಾಣುತ್ತಿದೆ. ‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆʼ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ತನಿಷಾ ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ.

9ನೇ ವಾರದಲ್ಲೂ ಹಾಗೆಯೇ ಆಗಿದೆ. ಅದರಲ್ಲೂ ವರ್ತೂರು ಸಂತೋಷ್​ ಅವರು ತನಿಷಾ ಕುಪ್ಪಂಡ ವಿರುದ್ಧವೇ ತಿರುಗಿ ಬಿದ್ದಿರುವುದು ಅಚ್ಚರಿಗೆ ಕಾರಣ ಆಗಿದೆ. 8ನೇ ವಾರದಲ್ಲಿ ತನಿಷಾಗೆ ಪೆಟ್ಟಾಗಿತ್ತು. ಆದರೂ ಕೂಡ ನಾಮಿನೇಷನ್​ ವಿಚಾರದಲ್ಲಿ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಹೇಳಿದ್ದಾರೆ.

ಸ್ನೇಹಿತ್‌ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

ಮಿಸ್‌ ಮಾಡಿಕೊಂಡಿದ್ದ ವರ್ತೂರ್‌

ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿತ್ತು. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದರು. ತನಿಷಾ ಮನೆಯಲ್ಲಿ ಇಲ್ಲದ ಕಾರಣ ವರ್ತೂರ್‌ ಕೂಡ ತುಂಬಾ ಮಿಸ್‌ ಮಾಡಿಕೊಂಡಿದ್ದರು.. ನಮ್ರತಾ ವರ್ತೂರ್‌ ಅವರನ್ನು ಕಂಡು ʻʻ ʻʻಬೆಂಕಿ ಯೋಚನೆಯಲ್ಲಿ ಮುಳುಗಿ ಹೋಗಿದ್ದಾರೆ ವರ್ತೂರ್‌ʼʼಎಂದ್ದಿದ್ದರು. ತುಕಾಲಿ ಮಾತನಾಡಿ ʻʻಈ ರೀತಿ ಒಬ್ಬರಿಗೋಸ್ಕರ ಕನವರಿಸಿಕೊಂಡವರನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ಎಷ್ಟು ಸಲ ಬೆಂಕಿ ಹೆಸರು ಹೇಳಿದ್ರು ಗೊತ್ತಾ? ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಬೆಂಕಿ ಕರೆದುಕೊಂಡು ಬಂದು ಇವರಿಗೆ ಒಪ್ಪಿಸಬೇಕು ಅಂತ ಅನಿಸಿಬಿಡ್ತು. ಅವರಿಗೆ ಆಗ್ತಾನೇ ಇಲ್ಲ, ದಿಢೀರ್ ಅಂತ ಯಾರಿಗೋ ಹೊಡೆಯೋಕೆ ಹೋಗ್ತಾರೆ, ಕಚ್ಚುತ್ತಾರೆ, ನನ್ನ ಜತೆಯೂ ಜಗಳ ಆಡಿದ್ರುʼʼ ಎಂದಿದ್ದರು. ವರ್ತೂರ್‌ ಕೂಡ ತನಿಷಾ ವಾಪಸ್ ಬಂದ್ರೆ ಸಾಕು ಎಂದಿದ್ದರು. ಆದರೆ ಈಗ ವರ್ತೂರ್‌ ಅವರ ವರ್ತನೆ ನೋಡುಗರಿಗೆ ಅಚ್ಚರಿ ಮೂಡಿಸಿದೆ.

ನಮ್ರತಾ ಕೂಡ ತನಿಷಾ ಪರವಾಗಿ ಹಿಂದಿನ ವಾರ ಆಟವಾಡಿ ಕಿಚ್ಚ ಸುದೀಪ್‌ ಅವರಿಂದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

Continue Reading
Advertisement
war Between Sangeetha And Captain Snehith Gowda
ಬಿಗ್ ಬಾಸ್24 mins ago

BBK SEASON 10: ನೀನು ಯಾರಿಗೆ ʻಚೇಲಾʼ ಅಂತ ಗೊತ್ತು ʻಹೋಗೋಲೋʼ ಎಂದು ಸ್ನೇಹಿತ್‌ ಮೇಲೆ ರೊಚ್ಚಿಗೆದ್ದ ಸಂಗೀತಾ!

Captain Snehith Gowda Not Bother To Stop Physical Fight Between vinay and Karthik
ಬಿಗ್ ಬಾಸ್26 mins ago

BBK SEASON 10: ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಯಾವ ಸೀಮೆ ಕ್ಯಾಪ್ಟನ್ ಸ್ನೇಹಿತ್‌ ನೀನು?

woman eating
ಆರೋಗ್ಯ59 mins ago

Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

viral video pak military officer
ದೇಶ1 hour ago

Viral video: ಭಾರತ ವಶಕ್ಕೆ, ಮೋದಿಗೆ ಸರಪಳಿಯ ಬಂಧನ! ಜೋಕ್‌ ಆದ ಪಾಕ್‌ ಸೇನಾಧಿಕಾರಿ!

Sonia Gandhi Will not choose me to pm post; Book on Pranab Mukherjee
ದೇಶ1 hour ago

ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

IPL Auction 1
ಕ್ರಿಕೆಟ್1 hour ago

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

RCB Team
ಕ್ರಿಕೆಟ್2 hours ago

IPL 2024 : ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಆಯ್ಕೆಮಾಡಿದ ಅತ್ಯುತ್ತಮ ಆಟಗಾರರ ವಿವರ ಇಲ್ಲಿದೆ

arun murderd
ಕ್ರೈಂ2 hours ago

Murder Case: ಮುಂದಿನ ತಿಂಗಳು ಮದುವೆಯಾಗಲಿ‌ದ್ದ ಆಟೋ ಚಾಲಕನ ಬರ್ಬರ ಹತ್ಯೆ

dry fruits
ಆರೋಗ್ಯ2 hours ago

Dry Fruits Benefits: ಒಣಹಣ್ಣುಗಳನ್ನೂ, ಬೀಜಗಳನ್ನೂ ತಿನ್ನಿ: ಕ್ಯಾನ್ಸರ್‌ ನಿರೋಧಕತೆ ಬೆಳೆಸಿಕೊಳ್ಳಿ!

Sachin Pilot movements monitored, phone tracked Say OSD for Ashok Gehlot
ದೇಶ2 hours ago

ಸಚಿನ್ ಪೈಲಟ್ ಮೇಲೆ ನಿಗಾ, ಫೋನ್ ಕದ್ದಾಲಿಕೆ! ಸಿಎಂ ವಿಶೇಷ ಅಧಿಕಾರಿ ಹೇಳಿಕೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

read your daily horoscope predictions for december 6 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ13 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ13 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ13 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

ಟ್ರೆಂಡಿಂಗ್‌