ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ (Drone Prathap) ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ. ಆದರೆ ದೂರಿನ ಸಂಬಂಧ ಯಾವುದೇ ಎಫ್‌ಐಆರ್ ಮತ್ತು ಹೇಳಿಕೆಯನ್ನು ಪೊಲೀಸರು (Police) ದಾಖಲಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈಗಾಗಲೇ ಪ್ರತಾಪ್ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು. ಇದಾದ ಮೇಲೆ ಬನಶಂಕರಿಯ ಪರಮೇಶ್ವರ್ ಎಂಬುವವರು ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಿಸಿದ್ದರು. ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ ವಂಚಿಸುತ್ತಿದ್ದಾರೆ ಎಂದಿದ್ದರು.
ಇಷ್ಟೆಲ್ಲ ದೂರುಗಳು ಡ್ರೋನ್ ಪ್ರತಾಪ್ ವಿರುದ್ಧ ಇದ್ದರೂ ದಾಖಲಾಗಿರುವ ದೂರುಗಳ ಪ್ರಕರಣದಲ್ಲಿ ಪ್ರತಾಪ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣ ಸಂಬಂಧ ಯಾವುದೇ ನೋಟಿಸ್ ಸಹ ಕೊಟ್ಟಿಲ್ಲ. ಒಮ್ಮೆಯೂ ಪ್ರತಾಪ್ ಹೇಳಿಕೆಯನ್ನು ದಾಖಲಿಸಿಲ್ಲ. ಈ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ.
ಇದನ್ನೂ ಓದಿ: Gicchi Gili Gili season 3: ಡ್ರೋನ್ ಪ್ರತಾಪ್ ಮೇಕಪ್ ನೋಡಿ ಬೆಚ್ಚಿಬಿದ್ದ ತುಕಾಲಿ; ಗಂಡನನ್ನು ಚಚ್ಚಿ ಕೆಡವಿದ ಮಾನಸಾ!
ಯಾವೆಲ್ಲ ದೂರುಗಳು ಅವು?
ದಾಖಲಾಗಿರುವ ದೂರುಗಳ ಪ್ರಕರಣದಲ್ಲಿ ಪ್ರತಾಪ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣ ಸಂಬಂಧ ಯಾವುದೇ ನೋಟಿಸ್ ಸಹ ಕೊಟ್ಟಿಲ್ಲ ಮತ್ತೆ ಒಮ್ಮೆ ಕೂಡ ಪ್ರತಾಪ್ ಹೇಳಿಕೆಯನ್ನು ದಾಖಲಿಸಿಲ್ಲ. ಈ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರತಾಪ್ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟ್‌ನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು. ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ ವಂಚಿಸುತ್ತಿದ್ದಾರೆ ಎಂದು ಬನಶಂಕರಿಯ ಪರಮೇಶ್ವರ್ ಎಂಬುವವರು ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಿಸಿದರು. ಮಂಡ್ಯ ಮೂಲದ ಚಂದನ್ ಕುಮಾರ್ ಗೌಡ ಜೆಡಿಎಸ್‌ಯಿಂದ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡದ್ದರು.