Bigg Boss Kannada: ಇದು ಬಿಗ್ ಬಾಸ್ ಸ್ನೇಹಿತರ ಸಮ್ಮಿಲನ ; ಸಪ್ಪೆ ಹೋಟೆಲ್ ಗ್ಯಾಂಗ್ ಎಂದ ಅನುಪಮಾ! Yashaswi Devadiga 1 year ago ಬಿಗ್ ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ, ಅಮೂಲ್ಯ, ದಿವ್ಯಾ ಉರುಡುಗ , ನೇಹಾ ಗೌಡ ಮತ್ತು ಅನುಪಮಾ ಗೌಡ ಭೇಟಿ ಮಾಡಿ, ಒಂದಷ್ಟು ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ನೇಹಾ ಗೌಡ ತಮ್ಮ ಇನ್ಸ್ಟಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸ್ನೇಹಿತೆಯರ ಜತೆ ಸಂಭ್ರಮ ಹಂಚಿಕೊಂಡ ರಾಕೇಶ್ ಅಡಿಗ. ದಿವ್ಯಾ ಉರುಡುಗ ಅಪ್ಪಿಕೊಂಡ ಕ್ಷಣ!ದಿವ್ಯಾ ಉರುಡುಗ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಮಯದಲ್ಲಿ ತಗೆದಿರುವ ಫೋಟೊಗಳು ಇದಾಗಿರಬಹುದೆಂದು ಹೇಳಲಾಗುತ್ತಿದೆ.ಅನುಪಮಾ ಗೌಡ ಅವರು ದಿವ್ಯಾ ಉರುಡುಗ ಅವರಿಗೆ ಮುತ್ತಿಟ್ಟ ಕ್ಷಣ!ಗೊಂಬೆ ಎಂತಲೇ ಖ್ಯಾತಿ ಪಡೆದಿರುವ ನೇಹಾ ಗೌಡ ಅವರು ದಿವ್ಯಾ ಉರುಡುಗ ಅವರಿಗೆ ಕೇಕ್ ತಿನ್ನಿಸಿ, ಮುತ್ತಿಟ್ಟಿದ್ದಾರೆ. ಆಚೆ ಬಂದ ನಂತರವೂ ಎಲ್ಲರೂ ತಮ್ಮ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.ಅನುಪಮಾ ಗೌಡ ಫೋಟೊಗಳನ್ನು ಶೇರ್ ಮಾಡಿಕೊಂಡು ʻʻನಿಮ್ಮ ಪ್ರೀತಿಯ, ಬಿಸಿ ನೀರು ಕೊಡದ, ಪ್ರೀತಿ, ಸ್ನೇಹಾ, ಖುಷಿ ಬಡಿಸಿದಸಪ್ಪೆ ಹೋಟೆಲ್ಲು ಗ್ಯಾಂಗ್ʼʼ ಎಂದು ಕ್ಯಾಪ್ಷನ್ ನೀಡಿದ್ದಾರೆ.