Site icon Vistara News

varthur santhosh arrest : ನಾಯಿಗೆ ಹೊಡ್ದಂಗ್‌ ಹೊಡೀತಾರೆ; ಅರೆಸ್ಟ್‌ ಆಗೋ ಮುನ್ನ ಭವಿಷ್ಯ ಹೇಳಿದ್ದ ಸಂತೋಷ್‌

BBK season 10 Varthur Santhosh arrested

ಬೆಂಗಳೂರು: ಹುಲಿಯುಗುರಿನ ಲಾಕೆಟ್‌ ಧರಿಸಿದ್ದ ಕಾರಣಕ್ಕೆ ಬಿಗ್‌ ಬಾಸ್‌ ಸೀಸನ್‌ 10 (BBK Season 10) ಮನೆಯಿಂದಲೇ ಬಂಧಿತರಾಗಿರುವ ಸ್ಪರ್ಧಿ, ಕೃಷಿಕ ವರ್ತೂರು ಸಂತೋಷ್‌ (varthur santhosh arrest) ಅದಕ್ಕಿಂತ ಮೊದಲು ಕುತೂಹಲಕಾರಿ ಭವಿಷ್ಯ ನುಡಿದಿದ್ದರು! ತುಕಾಲಿ ಸಂತೋಷ್‌ ಮನೆ ಬಿಟ್ಟು ಹೊರಗೆ ಹೋದ ಮೇಲೆ ಏನಾಗುತ್ತದೆ ಎಂಬ ವಿಚಾರ ಚರ್ಚೆಗೆ ಬಂದಾಗ ʻನಮ್ಮನ್ನು ಕರೆದು ಎಡೆ ಇಡ್ತಾರೆʼʼ ಎಂದು ಹೇಳಿದ್ದಾರೆ! ಅದರ ನಡುವೆ ಹೊರಗೆ ಹೋದ ಮೇಲೆ ನಾಯಿಗೆ ಹೊಡ್ದ ಹಾಗೆ ಹೊಡೆಯುತ್ತಾರೆ ಎಂಬ ಧ್ವನಿಯೂ ಕೇಳಿಬರುತ್ತದೆ. ಇದೆಲ್ಲ ವಿದ್ಯಮಾನಗಳು ನಡೆದು ಸ್ವಲ್ಪವೇ ಹೊತ್ತಿನಲ್ಲಿ ಸಂತೋಷ್‌ ಅರೆಸ್ಟ್‌ ಆಗುತ್ತಾರೆ.

ಬಿಗ್‌ ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್‌, ತುಕಾಲಿ ಸಂತೋಷ್‌, ಸ್ನೇಹಿತ್‌ ಗೌಡ, ವಿನಯ್‌ ಗೌಡ, ರಕ್ಷಕ್‌ ಬುಲೆಟ್‌, ಸಿರಿ, ನೀತು, ನಮ್ರತಾ ಗೌಡ ಅವರು ಜತೆಗೆ ಕುಳಿತುಕೊಂಡು ತಮಾಷೆ ಮಾಡುತ್ತಿದ್ದರು.

ಆಗ ತುಕಾಲಿ ಸಂತೋಷ್‌ ಅವರು ʻಗುರುಗಳೇʼ ಎಂದು ವರ್ತೂರು ಸಂತೋಷ್‌ ಅವರನ್ನು ಕರೆಯುತ್ತಾರೆ. ಆಗ ವರ್ತೂರು ಸಂತೋಷ್‌ ಅವರು ʻನೋಡು ಮಗೂʼ ಎನ್ನುತ್ತಾರೆ. ಆಗ ತುಕಾಲಿ, ʻನಾನು ನೋಡ್ತಾನೇ ಇದೀನಿ.. ಹೇಳಿʼ ಅಂತಾರೆ.

ತುಕಾಲಿ ಸಂತೋಷ್‌ ಅವರು, ಮುಂದೆ ಇವನು ಏನಾಗ್ತಾನೆ ಎಂದು ಸ್ನೇಹಿತ್‌ನನ್ನು ಉಲ್ಲೇಖಿಸಿ ಕೇಳುತ್ತಾನೆ. ಆಗ ವರ್ತೂರು ಸಂತೋಷ್‌: ಒಳ್ಳೆಯ ಮನುಷ್ಯನಾಗುತ್ತಾನೆ ಎನ್ನುತ್ತಾರೆ.

ಆಗ ತುಕಾಲಿ ಸಂತೋಷ್‌, ನಂದ್ಹೇಳಿ ಅಂತಾರೆ! ಆಗ ವರ್ತೂರು ಸಂತೋಷ್‌, ಮನೆಯಿಂದ ಹೊರಗಡೆ ಹೋದ ಮೇಲೆ.. ಎಂದು ಹೇಳುತ್ತಿದ್ದಂತೆಯೇ ಪಕ್ಕದಲ್ಲಿದ್ದ ವಿನಯ್‌ ಗೌಡ ʻನಾಯಿಗೆ ಹೊಡೆದಂತೆ ಹೊಡೀತಾರೆ ಎಂದು ಹೇಳುತ್ತಾರೆ.

ಆಗ ತುಕಾಲಿ: ಮುಂದಕ್ಕೇಳಿ ಅಂತಾರೆ.

ಆಗ ವರ್ತೂರು ಸಂತೋಷ್‌: ಮುಂದಕ್ಕೇಳಬೇಕು ಅಂದರೆ.. ನಮ್ಮನ್ನು ಕರೆದು ಎಡೆ ಇಡ್ತಾರೆ! (ಅಂದ್ರೆ ತಿಥಿ ಮಾಡ್ತಾರೆ) ಅಂತಾರೆ. ಆಗ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗುತ್ತಾರೆ!

ಬಂಧನಕ್ಕೆ ಒಳಗಾದ ವರ್ತೂರು ಸಂತೋಷ್‌

ಕೃಷಿಕರಾಗಿರುವ ವರ್ತೂರು ಸಂತೋಷ್‌ ಅವರಿಗೆ ಆಭರಣಗಳ ಖಯಾಲಿ ಜೋರಾಗಿದೆ. ಕೃಷಿಕರೂ ಹೀಗಿರಬಹುದೇ ಎಂಬುದಕ್ಕೆ ಸಾಕ್ಷಿಯಂತಿರುವ ಅವರು ಆಭರಣಗಳ ಜತೆಗೆ ಹಾಕಿಕೊಂಡಿರುವ ಹುಲಿ ಉಗುರಿನ ಲಾಕೆಟ್‌ ಅವರಿಗೆ ಮುಳುವಾಗಿದೆ. ಅವರ ಮೇಲೆ ಕೇಸು ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಬಿಗ್‌ ಬಾಸ್‌ ಮನೆಗೇ ಹೋಗಿ ಅವರನ್ನು ಬಂಧಿಸಿದ್ದಾರೆ. ವನ್ಯಜೀವಿ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಜಾಮೀನು ಸಿಗುವುದೇ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: BBK Season 10 : ಬಿಗ್‌ ಬಾಸ್‌ನಿಂದ ಹೊರಬಿದ್ದ ಗೌರೀಶ್‌ ಅಕ್ಕಿ; ಇದು ಸ್ಕ್ರಿಪ್ಟೆಡಾ?

Exit mobile version