Site icon Vistara News

Varthur Santhosh : ವರ್ತೂರು ಸಂತೋಷ್‌ ಈಸ್‌ ಬ್ಯಾಕ್‌; ಬಿಗ್‌ ಬಾಸ್‌ ಮನೆಗೆ ರೀಎಂಟ್ರಿ

Varthur santhosh Back in BBK 10

ಬೆಂಗಳೂರು: ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್‌ (Varthur Santhosh) ಬಿಗ್‌ ಬಾಸ್‌ ಸೀಸನ್‌ 10ಗೆ (BBK Season 10) ಮರಳಿದ್ದಾರೆ. ಅವರು ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಿ ಇತರ ಸ್ಪರ್ಧಿಗಳ ಜತೆ ಇರುವ ಮತ್ತು ಹಬ್ಬದ ದಿರಸು ಧರಿಸಿ ಓಡಾಡುತ್ತಿರುವ ದೃಶ್ಯಗಳನ್ನು ಆಯೋಜಕರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ವರ್ತೂರು ಸಂತೋಷ್‌ ಬಿಗ್‌ ಬಾಸ್‌ಗೆ ಮರಳಬೇಕು ಎಂಬ ಪ್ರೇಕ್ಷಕರ ಬೇಡಿಕೆ ಈಡೇರಿದಂತಾಗಿದೆ.

ಹಳ್ಳಿಕಾರ್‌ ತಳಿಗಳ ಸಂರಕ್ಷಕನಾಗಿ, ಪ್ರಗತಿಪರ ರೈತನಾಗಿ ಗಮನ ಸೆಳೆದು ಹಳ್ಳಿಕಾರ್‌ ಒಡೆಯ ಎಂದೇ ಹೆಸರಾಗಿದ್ದ ಶ್ರೀಮಂತ ರೈತರ ವರ್ತೂರು ಸಂತೋಷ್‌ ಅವರು ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಆಡುತ್ತಾ ಎಲ್ಲರ ಗಮನ ಸೆಳೆದಿದ್ದರು. ಅವರದ್ದೇ ಆದ ಅಭಿಮಾನಿ ವರ್ಗವೂ ಸೃಷ್ಟಿಯಾಗಿತ್ತು.

ಈ ನಡುವೆ, ಅವರು ಹುಲಿಯ ಉಗುರು ಇರುವ ಪೆಂಡೆಂಟ್‌ ಧರಿಸಿದ್ದನ್ನು ಟೀವಿಯಲ್ಲಿ ಗಮನಿಸಿದ್ದ ಅರಣ್ಯಾಧಿಕಾರಿಗಳು ಅವರ ಮೇಲೆ ಕ್ರಮಕ್ಕೆ ಮುಂದಾಗಿದ್ದರು. ಕಳೆದ ಭಾನುವಾರ (ಅಕ್ಟೋಬರ್‌ 22) ಅರಣ್ಯಾಧಿಕಾರಿಗಳು ಬಿಗ್‌ ಬಾಸ್‌ ಮನೆಗೇ ದಾಳಿ ಮಾಡಿ ಅವರನ್ನು ಬಂಧಿಸಿ ಕರೆದೊಯ್ದಿದ್ದರು. ಸೋಮವಾರ ಅವರನ್ನು ವಿಚಾರಣೆ ನಡೆಸಿ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದಾಗ ಕೋರ್ಟ್‌ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ (ನವೆಂಬರ್‌ 16ರವರೆಗೆ ವರೆಗೆ) ವಿಧಿಸಿತ್ತು.

ಈ ನಡುವೆ ವರ್ತೂರು ಸಂತೋಷ್‌ ಪರ ವಕೀಲರು ಸಂತೋಷ್‌ ವಿಚಾರದಲ್ಲಿ ಅಧಿಕಾರಿಗಳು ನಿಯಮ ಪಾಲನೆ ಮಾಡಿಲ್ಲ ಎಂಬುದೇ ಮೊದಲಾದ ಅಂಶವನ್ನು ಇಟ್ಟುಕೊಂಡು ಜಾಮೀನು ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಕೋರ್ಟ್‌ ಕಳೆದ ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು ಮಾಡಿತ್ತು.

ವರ್ತೂರು ಸಂತೋಷ್‌ ಪರ ಜನಾಭಿಪ್ರಾಯ

ವರ್ತೂರು ಸಂತೋಷ್‌ ಅವರನ್ನು ಹುಲಿಯುಗುರಿನ ಕಾರಣಕ್ಕೆ ಬಿಗ್‌ ಬಾಸ್‌ ಮನೆಯಿಂದ ಬಂಧಿಸಿದ್ದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಸಂತೋಷ್‌ ಅವರಂತೆಯೇ ಇನ್ನೂ ಹಲವು ಸೆಲೆಬ್ರಿಟಿಗಳು ಹುಲಿಯ ಉಗುರು ಧರಿಸಿದ್ದಾರೆ, ಅವರನ್ನೂ ಬಂಧಿಸಿ ಎಂದು ಸಾರ್ವಜನಿಕರ ಒತ್ತಾಯ ಹೆಚ್ಚಾಗಿತ್ತು. ಇದಕ್ಕೆ ಮಣಿದ ಸರ್ಕಾರ ಬಂಧನ, ಕ್ರಮದ ಬದಲು ಹುಲಿಯುಗುರಿನ ವಿಚಾರದಲ್ಲಿ ಜನರಿಗೆ ಮಾಹಿತಿ ನೀಡಲು ಮುಂದಾಗಿದೆ.

ಹುಲಿಯುಗುರು ಪ್ರಕರಣದಲ್ಲಿ ಬಂಧಿತರಾಗಿದ್ದ ಸಂತೋಷ್‌

ಬಿಗ್‌ ಬಾಸ್‌ಗೆ ಮರಳಲು ಒತ್ತಡ

ಈ ನಡುವೆ ವರ್ತೂರು ಸಂತೋಷ್‌ ಅವರ ಅಭಿಮಾನಿಗಳು ಅವರನ್ನು ಮತ್ತೆ ಬಿಗ್‌ ಬಾಸ್‌ ಮನೆಯಲ್ಲಿ ನೋಡಬೇಕು ಎಂದು ಒತ್ತಾಯಿಸಿದ್ದರು. ಕಳೆದ ಶುಕ್ರವಾರ ಜೈಲಿನಿಂದ ಬಿಡುಗಡೆಯಾದ ಸಂತೋಷ್‌ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ಶನಿವಾರ ಅವರನ್ನು ದೊಡ್ಡ ಚಕ್ಕಡಿ ಗಾಡಿ ಮೆರವಣಿಗೆ ಮೂಲಕ ಸ್ವಾಗತ ಮಾಡಲಾಗಿತ್ತು.

ಮನೆ ಮತ್ತು ಆಪ್ತರ ಜತೆ ಮಾತುಕತೆ ನಡೆಸಿದ ಸಂತೋಷ್‌ ಅವರು ಬಿಗ್‌ ಬಾಸ್‌ಗೆ ಮರಳಲು ನಿರ್ಧರಿಸಿದರು. ಬಿಗ್‌ ಬಾಸ್‌ ತಂಡವೂ ಅವರನ್ನು ಮರಳಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Varthur Santhosh Arrest : ಕೃತಕ ಸೆರೆಮನೆಯಿಂದ ಒರಿಜಿನಲ್‌ ಜೈಲಿಗೆ ಹಳ್ಳಿಕಾರ್‌ ಒಡೆಯ!

ಬಿಗ್‌ ಬಾಸ್‌ ಮನೆಯಲ್ಲಿ ಸಂತೋಷ್‌ ಈಗ ಹೇಗಿದ್ದಾರೆ?

ವರ್ತೂರ್ ಸಂತೋಷ್ ಅವರನ್ನು ಬಿಗ್‌ಬಾಸ್‌ ಮನೆಯಲ್ಲಿ ವೀಕ್ಷಿಸಲು ಈಗಲೇ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಉಚಿತ ನೇರಪ್ರಸಾರವನ್ನು ವೀಕ್ಷಿಸಿ.
https://www.jiocinema.com/videos/bigg-boss-kannada-24-hrs-live-channel/3831324
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

Exit mobile version