Site icon Vistara News

Central Budget 2024: ಬಜೆಟ್‌ ಮಂಡನೆಗೂ ಮುನ್ನ ವಿತ್ತ ಸಚಿವೆಗೆ ಸಿಹಿ ತಿನ್ನಿಸಿದ ರಾಷ್ಟ್ರಪತಿ

dahi

dahi

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್‌ (Budget 2024) ಮಂಡಿಸಿದ್ದಾರೆ. ಎರಡನೇ ಅವಧಿಯ ಮೋದಿ ಸರ್ಕಾರದ ಕೊನೆಯ ಬಜೆಟ್‌ ಇದಾಗಿದ್ದು, ನಿರ್ಮಲಾ ಸೀತಾರಾಮನ್‌ ಮಂಡಿಸಿದ 6ನೇ ಬಜೆಟ್‌ ಎನಿಸಿಕೊಂಡಿದೆ. ಬಜೆಟ್‌ ಮಂಡನೆಗೆ ಮುನ್ನ ರಾಷ್ಟ್ರಪತಿ ಭವನಕ್ಕೆ ನಿರ್ಮಲಾ ಸೀತಾರಾಮನ್‌ ಭೇಟಿ ನೀಡಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸಂಪ್ರದಾಯದಂತೆ ದಹಿ ಚೀನಿ(ಸಿಹಿ ಮೊಸರು)ಯನ್ನು ವಿತ್ತ ಸಚಿವೆಗೆ ತಿನ್ನಿಸಿದರು.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ ರಾಜ್ಯ ಸಚಿವರಾದ ಡಾ. ಭಗವತ್ ಕಿಶನ್ ರಾವ್ ಕರದ್, ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಕೇಂದ್ರ ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದರು ಎಂದು ರಾಷ್ಟ್ರಪತಿ ಭವನ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

ಏನಿದು ದಹಿ ಚೀನಿ?

ದಹಿ ಚೀನಿ ಆಶೀರ್ವಾದವು ಸಿಹಿ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಯಾವುದೇ ಪ್ರಮುಖ ಕೆಲಸಗಳಿಗೆ ತೆರಳುವ ಮೊದಲು ವ್ಯಕ್ತಿಗೆ ಆ ಮನೆಯ ಹಿರಿಯರು ಸಿಹಿ ತಿನ್ನಿಸಿ ಕಳುಹಿಸಿಕೊಡುವ ಸಂಪ್ರದಾಯ ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಂತೆ ನಿರ್ಮಲಾ ಸೀತಾರಾಮನ್‌ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ್ದರು.

ಮಧ್ಯಂತರ ಬಜೆಟ್ ಎಂದರೇನು?

ಮಧ್ಯಂತರ ಬಜೆಟ್ ಸಾಮಾನ್ಯವಾಗಿ ಆರ್ಥಿಕತೆಯ ಪ್ರಸ್ತುತ ಸ್ಥಿತಿ, ಯೋಜನೆ ಮತ್ತು ಯೋಜನೇತರ ವೆಚ್ಚಗಳು ಮತ್ತು ರಸೀದಿಗಳು, ತೆರಿಗೆ ದರಗಳಲ್ಲಿನ ಬದಲಾವಣೆಗಳು, ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಅಂದಾಜುಗಳು ಮತ್ತು ಮುಂಬರುವ ಹಣಕಾಸು ವರ್ಷದ ಅಂದಾಜುಗಳಿರುತ್ತವೆ. ಈ ಬಜೆಟ್ ಮಂಡಿಸಿದ ಬಳಿಕ ಸಂಸತ್ತಿನಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಮಧ್ಯಂತರ ಬಜೆಟ್‌ ಮಂಡಿಸಲಾಗಿದೆ.

ಇದನ್ನೂ ಓದಿ: Budget 2024 : ಆದಾಯ ತೆರಿಗೆಯಲ್ಲಿ ಬದಲಾವಣೆ ಇದೆಯೇ? ಇಲ್ಲಿದೆ ಟ್ಯಾಕ್ಸ್​ ಸ್ಲ್ಯಾಬ್​

Exit mobile version