ನವದೆಹಲಿ: ಭಾರತೀಯ ಆರ್ಥಿಕತೆಯು (Indian Economy) ಮುಂಬರುವ ವರ್ಷಗಳಲ್ಲಿ ಅದರ ಆರ್ಥಿಕ ವಲಯ ಮತ್ತು ಇತರ ಇತ್ತೀಚಿನ ಮತ್ತು ಭವಿಷ್ಯದ ರಚನಾತ್ಮಕ ಸುಧಾರಣೆಗಳ ಬಲದಿಂದ 7% ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಅಲ್ಲದೇ, 2023ರ ವೇಳೆ ಭಾರತದ ಆರ್ಥಿಕತೆಯ 7 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲಿದೆ (7 trillion dollar economy) ಎಂದು ಕೇಂದ್ರ ಹಣಕಾಸು ಸಚಿವಾಲಯವು ವರದಿಯಲ್ಲಿ ತಿಳಿಸಿದೆ(Finance Ministry Report). ಗುರುವಾರ ಸಂಸತ್ತಿನಲ್ಲಿ 2024-25 ರ ಮಧ್ಯಂತರ ಬಜೆಟ್ ಮಂಡಿಸುವ ಮೊದಲು, ಸೋಮವಾರ ಬಿಡುಗಡೆ ಮಾಡಲಾದ ‘ಭಾರತೀಯ ಆರ್ಥಿಕತೆ ಒಂದು ವಿಮರ್ಶೆ’ ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ, ಭಾರತವು 5 ಲಕ್ಷ ಕೋಟಿ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಸರ್ಕಾರವು 2047ರ ವೇಳೆಗೆ ‘ಅಭಿವೃದ್ಧಿ ಹೊಂದಿದ ದೇಶ’ವಾಗುವ ಉನ್ನತ ಗುರಿಯನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ವರದಿಯು ಆರ್ಥಿಕ ಸಮೀಕ್ಷೆಯನ್ನು ಬದಲಿಸುವುದಿಲ್ಲ ಎಂದು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಹೇಳಿದ್ದಾರೆ. ಆರ್ಥಿಕ ಸಮೀಕ್ಷಾ ವರದಿಯು ಅದು ಸಾರ್ವತ್ರಿಕ ಚುನಾವಣೆಯ ನಂತರ ಪೂರ್ಣ ಬಜೆಟ್‌ಗೆ ಮೊದಲು ಪ್ರಕಟವಾಗಲಿದೆ ಎಂದು ಅವರು ತಿಳಿಸಿದ್ದಾರೆ. 2025ರ ಆರ್ಥಿಕ ವರ್ಷಕ್ಕಾಗಿ ಪೂರ್ಣ ಬಜೆಟ್ ಅನ್ನು ಜುಲೈನಲ್ಲಿ, ಸಾರ್ವತ್ರಿಕ ಚುನಾವಣೆಯ ನಂತರ ಮಂಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಮಧ್ಯಂತರ ಬಜೆಟ್ ಕೇವಲ ಲೇಖಾನುದಾನವಾಗಿದ್ದು, ಸರ್ಕಾರ ಕಾರ್ಯನಿರ್ವಹಿಸಲು ಸಂಕ್ಷಿಪ್ತ ಅವಧಿಗೆ ವೆಚ್ಚವನ್ನು ಸರಿದೂಗಿಸಲು ಚುನಾವಣಾ ವರ್ಷದಲ್ಲಿ ಮಂಡಿಸಲಾಗುತ್ತದೆ.
ಮೋದಿ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಆರ್ಥಿಕ ಸುಧಾರಣೆಗಳ ನಿರಂತರತೆಯನ್ನು ವರದಿ ಸೂಚಿಸುತ್ತದೆ. ಮೋದಿ ಸರ್ಕಾರದ ಎರಡು ಅವಧಿಗಳ ಲೆಕ್ಕಪರಿಶೋಧನೆ ಪ್ರಕಾರ, ಈ 10 ವರ್ಷಗಳ ಪ್ರಯಾಣವು ಹಲವಾರು ಸುಧಾರಣೆಗಳಿಂದ ಗುರುತಿಸಲ್ಪಟ್ಟಿದೆ. ಗಣನೀಯ ಮತ್ತು ಹೆಚ್ಚುತ್ತಿರುವ ಎರಡೂ ಸುಧಾರಣೆಗಳು ದೇಶವು ನಿರೀಕ್ಷಿತ ಜಾಗತಿಕ ಆಘಾತಗಳನ್ನು ಎದುರಿಸಲು ಅಗತ್ಯವಿರುವ ಆರ್ಥಿಕ ಶಕ್ತಿಯನ್ನೂ ಸಹ ನೀಡಿವೆ. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ 1.9 ಲಕ್ಷ ಕೋಟಿ ಡಾಲರ್‌ನೊಂದಿಗೆ ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಭಾರತವು ಈಗ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಮತ್ತು ಅದು 3.7 ಲಕ್ಷ ಕೋಟಿ ಡಾಲರ್ ಜಿಡಿಪಿಯೊಂದಿಗೆ ಯೊಂದಿಗೆ 5 ನೇ ದೊಡ್ಡ ರಾಷ್ಟ್ರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Budget 2024: ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ; ಬಜೆಟ್‌ನಲ್ಲಿ ಏನಿದೆ ನಿರ್ಮಲಾ ಕೊಡುಗೆ?