Site icon Vistara News

Budget 2024: ಹೊಸ ತೆರಿಗೆ ಪದ್ಧತಿಗೆ 80ಡಿ ವಿಸ್ತರಣೆ; ತೆರಿಗೆ ಕಡಿತದ ಮಿತಿ ಹೆಚ್ಚಳ ಸಾಧ್ಯತೆ!

Section 80D may enter to new tax Regime in budget 2024

ನವದೆಹಲಿ: ಕೇಂದ್ರ ಸರ್ಕಾರವು (Central Government) ಫೆಬ್ರವರಿ 1ರಂದು ಮಧ್ಯಂತರ ಬಜೆಟ್ (interim budget) ಮಂಡಿಸಲಿದೆ. ಇದು ಮಧ್ಯಂತರ ಬಜೆಟ್ ಆಗಿದ್ದರೂ ಅನೇಕ ನಿರೀಕ್ಷೆಗಳು ಗರಿ ಗೆದರಿವೆ. ವಿಶೇಷವಾಗಿ 80ಡಿ ಸೆಕ್ಷನ್ ಹೊಸ ತೆರಿಗೆ ಪದ್ಧತಿಗೆ ಸೇರ್ಪಡೆ ಮತ್ತು ತೆರಿಗೆ ಕಡಿತ ಮಿತಿ ಹೆಚ್ಚಳ ಸೇರಿದಂತೆ ಅನೇಕ ನಿರೀಕ್ಷೆಗಳಿವೆ. ಆರೋಗ್ಯ (Health care) ಮತ್ತು ವಿಮಗೆ (Health Insurance) ಸಂಬಂಧಿಸಿದಂತೆ ಗುಡ್ ನ್ಯೂಸ್ ಸಿಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ(Budget 2024).

ವೈದ್ಯಕೀಯ ವಿಮಾ ಕಂತುಗಳಿಗೆ ಸೆಕ್ಷನ್ 80ಡಿ ಅಡಿಯಲ್ಲಿ ಕಡಿತದ ಮಿತಿಯನ್ನು 25,000 ರೂ.ರಿಂದ 50,000 ರೂ.ಗೆ ಮತ್ತು ಹಿರಿಯ ನಾಗರಿಕರಿಗೆ 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸುವ ನಿರೀಕ್ಷೆಗಳಿವೆ. ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳ ಹಿನ್ನೆಲೆಯಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳಬಹುದು ಎನ್ನಲಾಗುತ್ತಿದೆ. ಹೆಚ್ಚುವರಿಯಾಗಿ, ಹೊಸ ತೆರಿಗೆ ಆಡಳಿತಕ್ಕೆ ಸೆಕ್ಷನ್ 80ಡಿ ಲಾಭಗಳನ್ನು ವಿಸ್ತರಿಸುವ ಸಾಧ್ಯತೆಗಳೂ ಉಂಟು. ಆ ಮೂಲಕ ಆರೋಗ್ಯ ರಕ್ಷಣೆಗೆ ಸಮಾನ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದ ತೆರಿಗೆ ಪದ್ಧತಿಯಲ್ಲಿ ವೈದ್ಯಕೀಯ ವಿಮೆ ಪ್ರೀಮಿಯಂ ಮೇಲೆ ಯಾವುದೇ ತೆರಿಗೆ ಕಡಿತವನ್ನು ನೀಡುತ್ತಿಲ್ಲ. ಹಾಗಾಗಿ, ತೆರಿಗೆ ಕಡಿತವನ್ನು ವಿಸ್ತರಿಸುವುದರಿಂದ ಆರೋಗ್ಯ ಲಾಭವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಆರೋಗ್ಯ ವಲಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡುವ ಸಾಧ್ಯತೆಗಳಿವೆ. ಸಾಮಾನ್ಯ ಆರೋಗ್ಯ, ಅಗತ್ಯ ಔಷಧಗಳನ್ನು ನೀಡುವುದು, ತಾಯಂದಿರು ಮತ್ತು ಮಕ್ಕಳ ಆರೈಕೆ, ರೋಗನಿರೋಧಕ ಮತ್ತು ಇತರ ರೋಗ ತಡೆಗಟ್ಟುವ ಕ್ರಮಗಳು ಭಾರತೀಯ ಆರೋಗ್ಯ ವ್ಯವಸ್ಥೆಯ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಕುರಿತು ಬಜೆಟ್‌ನಲ್ಲಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್‌ನಲ್ಲಿ ಒಂದಿಷ್ಟು ಜನ ಕಲ್ಯಾಣ ಕಾರ್ಯಕ್ರಮಗಳ ಘೋಷಣೆಯನ್ನು ನಿರೀಕ್ಷಿಸಬಹುದಾಗಿದೆ. ಹಾಗೆಯೇ, ಮುಂಬರುವ ಆರ್ಥಿಕಾಭಿವೃದ್ಧಿಗೆ ದಾರಿಯಲ್ಲಿ ಎದುರಾಗುವ ಸವಾಲುಗಳ ಕುರಿತು ರೋಡ್ ಮ್ಯಾಪ್‌ ಕೂಡ ಹಾಕಿಕೊಡಬಹುದು.

ಈ ಸುದ್ದಿಯನ್ನೂ ಓದಿ: 14 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯಗೆ ಆರ್ಥಿಕ ಸಲಹೆಗಾರ ಬೇಕಾ? ಇದೇನು ಗಂಜಿ ಕೇಂದ್ರವೇ?: ಎಚ್‌ಡಿಕೆ ವಾಗ್ದಾಳಿ

Exit mobile version