ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದಾಖಲೆಯ ಏಳನೇ ಬಾರಿಗೆ ಬಜೆಟ್ (Union Budget 2024) ಮಂಡನೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ಸಾಲದ ನೆರವು, ಇಂಟರ್ನ್ಶಿಪ್ ಮಾಡುವವರಿಗೆ ಆರ್ಥಿಕ ನೆರವು, ಮಹಿಳೆಯರಿಗೆ ಕೌಶಲ ತರಬೇತಿ ಸೇರಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಹಾಗಾದರೆ, ಕೇಂದ್ರದ ಬಜೆಟ್ನ ಇಡೀ ಸಾರಾಂಶ ಏನು? ಸಂಕ್ಷಿಪ್ತವಾಗಿ ಬಜೆಟ್ಅನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿರುವ 50 ಪಾಯಿಂಟ್ಸ್ ಓದಿ ಸಾಕು.
ಕೇಂದ್ರ ಬಜೆಟ್ನ ಪ್ರಮುಖಾಂಶಗಳು
- ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48ಲಕ್ಷ ಕೋಟಿ ಮೀಸಲು
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ
- ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ
- 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆ
- 1000 ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ
- ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಆದ್ಯತೆ
- ಉನ್ನತ ಶಿಕ್ಷಣಕ್ಕೆ ಲೋನ್: 10 ಲಕ್ಷದವರೆಗೆ ಅವಕಾಶ
- ಕೌಶಲ್ಯಾಭಿವೃದ್ಧಿ ತರಬೇತಿಗೆ ಸಾಲ 7.5 ಲಕ್ಷಕ್ಕೆ ಹೆಚ್ಚಳ
- 1ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್ ನೀಡುವ ಯೋಜನೆ
- 30 ಲಕ್ಷ ಯುವಕರಿಗೆ ಉದ್ಯೋಗ
- ಯುವಕರಿಗೆ 4 ವರ್ಷ ಆರ್ಥಿಕ ನೆರವು
- ಬಿಹಾರಕ್ಕೆ ಹೆದ್ದಾರಿ ಎಕ್ಸ್ಪ್ರೆಸ್ ರಸ್ತೆ ಯೋಜನೆ ಘೋಷಣೆ
. ಆಂಧ್ರಪ್ರದೇಶಕ್ಕೆ ಪುನರ್ನಿರ್ಮಾಣಕ್ಕೆ ಅಸ್ತು - ಅಮೃತ್ಸರ್ – ಗಯಾ ಆರ್ಥಿಕ ಕಾರಿಡಾರ್ ಘೋಷಣೆ
- ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
- ಹೈದರಾಬಾದ್ -ಬೆಂಗಳೂರು ಕಾರಿಡಾರ್ ಘೋಷಣೆ
- ಬಿಹಾರಕ್ಕೆ ವಿಮಾನ ನಿಲ್ದಾಣ ಮತ್ತು ಮೆಡಿಕಲ್ ಕಾಲೇಜು
- ಆಂಧ್ರ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
- ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಮೀಸಲು
- ಮಹಿಳಾ ಅಭಿವೃದ್ಧಿಗೆ 3 ಲಕ್ಷ ಕೋಟಿ ಮೀಸಲು
- ಬಿಹಾರಕ್ಕೆ 26 ಸಾವಿರ ಕೋಟಿ ವಿಶೇಷ ಅನುದಾನ
- ಮುದ್ರಾ ಲೋನ್ ಮಿತಿ 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಳ
- 12 ಕೈಗಾರಿಕಾ ಪಾರ್ಕ್ಗಳ ಸ್ಥಾಪನೆ.
- 1 ಕೋಟಿ ಯುವಕರಿಗೆ ಹೊಸ ಇಂಟರ್ನ್ ಶಿಪ್ ಯೋಜನೆ
- ಯುವಕರಿಗೆ 12 ತಿಂಗಳು ತರಬೇತಿ ಮತ್ತು 6 ಸಾವಿರ ರೂ. ನೆರವು
- ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ
- 500 ಸಂಸ್ಥೆಗಳಿಗೆ ಯುವಕರಿಗೆ ಇಂಟರ್ನ್ ಶಿಪ್
- ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳ ನಿರ್ಮಾಣ
- 1 ಕೋಟಿ ನಗರದ ಬಡವರಿಗೆ ಮನೆ ಕಟ್ಟಲು ನೆರವು
- ಸ್ಟ್ಯಾಂಪ್ ಡ್ಯೂಟಿ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಮನವಿ
- ಮೂಲಸೌಕರ್ಯಕ್ಕೆ 11,11,111 ಕೋಟಿ ರೂ. ಮೀಸಲು
- ಬಿಹಾರ ಪ್ರವಾಹ ಪರಿಸ್ಥಿತಿ ನಿಭಾಯಿಸಲು 11,500 ಕೋಟಿ ರೂ. ನೆರವು ಘೋಷಣೆ
- ಗಯಾ, ಬುದ್ಧಗಯಾ ಕಾಶಿ ಮಾಡೆಲ್ನಲ್ಲಿ ಅಭಿವೃದ್ಧಿ
- ನಳಂದ ವಿಶ್ವವಿದ್ಯಾನಿಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ನೆರವು
- ರಾಜ್ಯಗಳಿಗೆ 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ
- ವಿತ್ತೀಯ ಕೊರತೆ ಜಿಡಿಪಿಯ 4.9% ರಷ್ಟು ಮಾತ್ರ ಇದೆ
- ಬಜೆಟ್ನ ಒಟ್ಟು ಗಾತ್ರ 32.07 ಲಕ್ಷ ಕೋಟಿ
- 3 ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ರದ್ದು
- ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ ಡ್ಯೂಟಿಯಿಂದ ವಿನಾಯಿತಿ
- 6 ವರ್ಷದಲ್ಲಿ ಮೊಬೈಲ್ ಉತ್ಪಾದನೆ 3 ಪಟ್ಟು ಹೆಚ್ಚಳ
- ಮೊಬೈಲ್ ಪೋನ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ
- ಮೊಬೈಲ್ ಪೋನ್ಗಳ ಮೇಲಿನ ತೆರಿಗೆ ಇಳಿಕೆ
- ಚಿನ್ನ, ಬೆಳ್ಳಿ ಮೇಲೆ 6% ಕಸ್ಟಮ್ ಡ್ಯೂಟಿ ಇಳಿಕೆ
- ಪ್ಲಾಟಿನಂ ಮೇಲೆ 6.4% ಕಸ್ಟಮ್ ಡ್ಯೂಟಿ ಇಳಿಕೆ
- ಆನ್ಲೈನ್ ವ್ಯವಹಾರಗಳ ಮೇಲಿನ TDS ಶೇ.9% ಇಳಿಕೆ
- ಮೊಬೈಲ್ ಬಿಡಿಭಾಗಗಳ ತೆರಿಗೆ ಶೇ.15% ರಷ್ಟು ಇಳಿಕೆ
- ಬಾಹ್ಯಾಕಾಶ ವಲಯಕ್ಕೆ 1 ಸಾವಿರ ಕೋಟಿ
- ಟಿಡಿಎಸ್ ಕಟ್ಟುವುದು ತಡವಾದರೆ ದಂಡ ಇಲ್ಲ
- 0-3 ಲಕ್ಷ ಆದಾಯಕ್ಕೆ ಯಾವ ತೆರಿಗೆ ಇಲ್ಲ
- ತೆರಿಗೆ ಪಾವತಿ ಮಿತಿ 50 ಸಾವಿರದಿಂದ 75 ಸಾವಿರಕ್ಕೆ ಏರಿಕೆ
ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್ ಬಳಿಕ ಯಾವುದೆಲ್ಲ ಅಗ್ಗ, ಯಾವುದೆಲ್ಲ ದುಬಾರಿ?