ಬೆಂಗಳೂರು: ಪ್ಯಾನ್ ಇಂಡಿಯಾ ಮೂವಿ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಯಾವುದೇ ಹೊಸ ಪ್ರಯೋಗವನ್ನು ಮಾಡುವಲ್ಲಿ ಹಿಂದೇಟು ಹಾಕುವುದಿಲ್ಲ. ಇಡೀ ಸಿನಿಮಾ ಜಗತ್ತಿನ ಅಭಿಮಾನಿಗಳು ಕಾತರಿದಿಂದ ಕಾಯುತ್ತಿರುವ ಬಿಗ್ ಬಜೆಟ್ ಸಿನಿಮಾ ಕೆಜಿಎಫ್. ಈ ಚಿತ್ರವನ್ನು ಎಡಿಟ್ ಮಾಡುವ ಜವಾಬ್ಧಾರಿಯನ್ನು 18 ವರ್ಷದ ಯುವಕನ ಕೈಗೆ ನೀಡಿದ ಘಟನೆಯೇ ಸಾಕ್ಷಿ. ಹೌದು, ಕೆಜಿಎಫ್ ಚಿತ್ರವನ್ನು ಎಡಿಟ್ ಮಾಡುವ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದು ಉಜ್ವಲ್ ಕುಲಕರ್ಣಿ ಎಂಬ 18 ವರ್ಷದ ಯುವಕ.
ಕೆಜಿಎಫ್ 2 ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಮಾತನಾಡಿದ ರಾಕಿ ಭಾಯ್ ಚಿತ್ರದ ಎಡಿಟಿಂಗ್ ಮಾಡಿದ್ದು ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಕೆಜಿಎಫ್ ಚಾಪ್ಟರ್1 ಚಿತ್ರದ ವಿಡಿಯೋ ಎಡಿಟಿಂಗ್ ಮಾಡಿದ ಶ್ರೀಕಾಂತ್ ಗೌಡ ತೆರೆಯ ಹಿಂದೆ ಅದ್ಭುತ ಕೆಲಸವನ್ನು ಮಾಡಿ ತಮ್ಮ ಸಾಮರ್ಥ್ಯವನ್ನು ತೋರಿದ್ದರು. ಕೆಜಿಎಫ್ 2 ಚಿತ್ರದಲ್ಲಿ ಕೂಡ ವಿಶುವಲ್ ಎಫೆಕ್ಟ್ಸ್ ಅಭಿಮಾನಿಗಳ ಗಮನ ಸೆಳೆಯುವ ಅಂಶವಾಗಿದೆ. ಈ ಚಿತ್ರದ ವಿಡಿಯೋ ಎಡಿಟಿಂಗ್ ತಂಡದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು 18 ವರ್ಷದ ಯುವಕ ಉಜ್ವಲ್ ಎಂದು ನಟ ಯಶ್ ತಿಳಿಸಿದ್ದಾರೆ.
ಯಾಕೆ ಈ ನಿರ್ಧಾರ?
ಕೆಜಿಎಫ್ ಚಿತ್ರ ಬಿಡುಗಡೆಯಾದಾಗ ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಡೈಲಾಗ್ ಹೆಳುವ ಮೂಲಕ, ಯಶ್ ಅಭಿನಯವನ್ನು ಅನುಕರಣೆ ಮಾಡುವ ಮೂಲಕ ವೈರಲ್ ಆಗಿದ್ದರು. ಹೀಗೆ ಹಲವು ರೀತಿಯಲ್ಲಿ ಯಶ್ ಫ್ಯಾನ್ಸ್ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಅದೇ ರೀತಿ, ರಾಕಿಂಗ್ ಸ್ಟಾರ್ ಅಭಿಮಾನಿಯಾದ ಉಜ್ವಲ್ ಕುಲಕರ್ಣಿ ವಿಶಿಷ್ಟವಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಉಜ್ವಲ್ ಕೆಜಿಎಫ್ ಚಿತ್ರದ ಆಯ್ದ ಭಾಗವನ್ನು ತಮ್ಮದೇ ಶೈಲಿಯಲ್ಲಿ ಎಡಿಟ್ ಮಾಡಿ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹರಿಬಿಟ್ಟಿದ್ದರು. ಆಗ ಆ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು.
ನಿರ್ದೇಶಕ ಪ್ರಶಾಂತ್ ನೀಲ್ ಪತ್ನಿ ಮೊದಲು ಆ ವಿಡಿಯೋ ಗಮನಿಸಿದ್ದರು. ನಂತರ ನಿರ್ದೇಶಕ ಪ್ರಶಾಂತ್ ನೀಲ್ ಆ ಉಜ್ವಲ್‌ನ ಪ್ರತಿಭೆಯನ್ನು ನೋಡಿ ಆಶ್ಚರ್ಯಪಟ್ಟರು. ಹಾಗೆಯೆ, ತಮ್ಮ ಜತೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಮೂರು ವರ್ಷಗಳ ಸತತ ಟ್ರೇನಿಂಗ್ ಬಳಿಕ ಉಜ್ವಲ್ ಈಗ ಪ್ರತಿಭಾವಂತ ಎಡಿಟರ್ ಆಗಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್ ಸಂತಸಟ್ಟರು. ಸಕ್ಸೆಸ್‌ಫುಲ್ ಸಿನಿಮಾ ಮಾಡುವುದಷ್ಟೆ ಅಲ್ಲ, ಸಕ್ಸೆಸ್‌ಫುಲ್ ವ್ಯಕ್ತಿಗಳನ್ನೂ ನಿರ್ಮಿಸುವುದು ನಿಜವಾದ ಯಶಸ್ಸಲ್ಲವೇ !