Site icon Vistara News

Puneeth Rajkumar: ಮೌಂಟ್ ಎವರೆಸ್ಟ್​​ ಮೇಲೆ ಪುನೀತ್ ಜನ್ಮದಿನ ಆಚರಣೆ! ಜೇಮ್ಸ್ ಜಾತ್ರೆಯಲ್ಲಿ ಮಿಂದೆದ್ದ ಅಪ್ಪು ಅಭಿಮಾನಿಗಳು

ರಾಜ್ಯಾದ್ಯಂತ ಜೇಮ್ಸ್ ಅಬ್ಬರ ಜೋರಾಗಿದ್ದು, ಅಭಿಮಾನಿಗಳು ಅಪ್ಪು ಅವರ ಕೊನೆಯ ಚಿತ್ರವನ್ನು ಒಂದು ಹಬ್ಬದಂತೆ ಆಚರಿಸುತ್ತಿದ್ದಾರೆ. ಈ ನಡುವೆ ಪುನೀತ್ ಅಭಿಮಾನಿಗಳಾದ ಸಾಹಸೀ ಯುವಕರು ಕೆಲವರು ಮೌಂಟ್ ಎವರೆಸ್ಟ್​​ನಲ್ಲಿ (Mount Everest) ಅಪ್ಪು ಜನ್ಮದಿನವನ್ನು ಆಚರಿಸಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರ (Puneeth Rajkumar) ಬಹು ನಿರೀಕ್ಷಿತ ಚಿತ್ರ ಜೇಮ್ಸ್ (James) ಚಿತ್ರವು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಜೊತೆಗೆ ಪುನೀತ್ ರಾಜ್​ಕುಮಾರ್​ ಅವರ ಜನ್ಮದಿನವಾದ (Puneeth Rajkumar Birthday) ಇಂದೇ ಅವರ ಜೇಮ್ಸ್ ಸಿನಿಮಾ ಬಿಡುಗಡೆ ಆಗಿರುವುದು ಅವರ ಅಭಿಮಾನಿಗಳಿಗೆ ಬೇಸರದ ನಡುವೆ ಕೊಂಚ ನೆಮ್ಮದಿ ತಂದಂತಾಗಿದೆ. ರಾಜ್ಯಾದ್ಯಂತ ಜೇಮ್ಸ್ ಅಬ್ಬರ ಜೋರಾಗಿದ್ದು, ಅಭಿಮಾನಿಗಳು ಅಪ್ಪು ಅವರ ಕೊನೆಯ ಚಿತ್ರವನ್ನು ಒಂದು ಹಬ್ಬದಂತೆ ಆಚರಿಸುತ್ತಿದ್ದಾರೆ. ಈ ನಡುವೆ ಪುನೀತ್ ಅಭಿಮಾನಿಗಳಾದ ಸಾಹಸೀ ಯುವಕರು ಕೆಲವರು ಮೌಂಟ್ ಎವರೆಸ್ಟ್​​ನಲ್ಲಿ (Mount Everest) ಅಪ್ಪು ಜನ್ಮದಿನವನ್ನು ಆಚರಿಸಿದ್ದಾರೆ.

ಇಂದು ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವಾಗಿರುವ ಹಿನ್ನಲೆ ಬೆಂಗಳೂರಿನ ಮೂವರು ಪುನೀತ್ ಅಭಿಮಾನಿಗಳು ಮೌಂಟ್ ಎವರೆಸ್ಟ್​ನ ಬೇಸ್​ ಕ್ಯಾಂಪ್ ಬಳಿ ಅಪ್ಪು ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮೌಂಟ್ ಎವರೆಸ್ಟ್​​ ಕೇಕ್​ ಕತ್ತರಿಸಿ ಅಪ್ಪುಗೆ ಜೈಕಾರ್ ಕೂಗಿ ವಿಶೇಷವಾಗಿ ಜನ್ಮದಿನವನ್ನು ಆಚರಿಸಿದ್ದಾರೆ. ಅಲ್ಲದೇ ಇಂದು ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದ್ದು, ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾವನ್ನು ನೋಡಿ ಹಬ್ಬದಂತೆ ಆಚರಿಸಿ ಎಂದು ಅಪ್ಪು ಅಭಿಮಾನಿಗಳಿಗೆ ಸಂದೇಶವನ್ನೂ ಕಳುಹಿಸಿದ್ದಾರೆ.

ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ ಜೇಮ್ಸ್ ಅಬ್ಬರ:

ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ಬರೀ ಬೆಂಗಳೂರು ಅಥವಾ ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ರಿಲೀಸ್ ಆಗಿದೆ. ವಿಶ್ವದಾದ್ಯಂತ ಇಂದು ಸುಮಾರು 4000 ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ತೆರ ಮೇಲೆ ಪುನೀತ್​ ಅವರನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ.

ನಿಂತುಕೊಂಡೇ ಸಿನಿಮಾ ವೀಕ್ಷಣೆ:

ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್ ಫಸ್ಟ್ ಶೋ ಹೌಸ್ ಫುಲ್ ಆಗಿದೆ. ಹೀಗಾಗಿ ಅಪ್ಪು ಅಭಿಮಾನಿಗಳು ಕುಳಿತುಕೊಳ್ಳು ಜಾಗವಿಲ್ಲದೇ ಥಿಯೇಟರ್ ನಲ್ಲಿ ನಿಂತುಕೊಂಡೇ ಸಿನಿಮಾವನ್ನು ನೋಡಿದ್ದಾರೆ. ಇದಲ್ಲದೇ ರಾಯಚೂರಿನ ನೀಲಕಂಠೇಶ್ವರ ಥಿಯೇಟರ್ ನಲ್ಲಿ ಮುಂಜಾನೆಯೇ ಶೋ ಆರಂಭವಾಗುತ್ತಿದ್ದಂತೆ ಹೌಸ್ ಫುಲ್ ಆಗಿದೆ. ಇದರಿಂದ ಕೆಲವರು ಕುರ್ಚಿ ಇಲ್ಲದೇ ನೆಲದ ಮೇಲೆಯೂ ಕುಳಿತು ಜೇಮ್ಸ್ ಮೂಲಕ ಅಪ್ಪು ಅವರ ದರ್ಶನ ಪಡೆದಿದ್ದಾರೆ. ಅಲ್ಲದೇ ಹಲವೆಡೆ ಬೆಳ್ಳಿ ಪರದೆಗೆ ಆರತಿ ಬೆಳಗಿ ಜೇಮ್ಸ್ ಉತ್ಸವವನ್ನು ಆಚರಿಸುತ್ತಿದ್ದಾರೆ.

ಅಭಿಮಾನಿಗಳಿಗೆ ಅನ್ನ ಸಂತರ್ಪಣೆ:

ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನ ರಾಕ್ ಲೈನ್ ಚಿತ್ರ ಮಂದಿರದ ಬಳಿ ಸಿನಿಮಾ ವೀಕ್ಷಣೆಗೆ ಬಂದ  ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು ಎರಡು ಸಾವಿರ ಜನಕ್ಕೆ ಅನ್ನ ಸಂತರ್ಪಣೆ ಮಾಡಲು ಅಪ್ಪು  ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ದಾಖಲೆಯ ಮೊತ್ತಕ್ಕೆ ‘ಜೇಮ್ಸ್‘ ಸ್ಯಾಟಲೈಟ್ ಹಕ್ಕು ಮಾರಾಟ:

ಜೇಮ್ಸ್ ಸ್ಯಾಟಲೈಟ್ ಹಕ್ಕು ಸೋನಿ ಡಿಜಿಟಲ್​ಗೆ 40 ಕೋಟಿ, ಕನ್ನಡ ಸುವರ್ಣಕ್ಕೆ 13.80 ಕೋಟಿ ಹಾಗೂ ತೆಲುಗು ಮಾ ಟಿವಿಗೆ ಸುಮಾರು 5.70 ಕೋಟಿಗೆ ಮಾರಾಟವಾಗಿದೆ. ಉಳಿದಂತೆ ತಮಿಳಿನಲ್ಲಿ ಸನ್ ನೆಟ್ ವರ್ಕ್​ಗೆ 5.17 ಕೋಟಿ, ಮಲೆಯಾಳಂ 1.2 ಕೋಟಿ, ಭೋಜಪುರಿ  5.50 ಕೋಟಿ, ಹಿಂದಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದ್ದು ಒಟ್ಟು 80 ಕೋಟಿಗೆ ಮಾರಾಟವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Exit mobile version